
ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಯನ್ನು ಕೆಲ ಜಿಲ್ಲೆ ಪ್ರವೇಶದಂತೆ ನಿರ್ಬಂಧ ಹೇರಿರುವುದು ಸರಿಯದ ಕ್ರಮವಲ್ಲ. ಮೊದಲಿನಿಂದಲೂ ಸ್ವಾಮಿಗಳು ಬುದ್ಧಿವಾದ ಹೇಳ್ತಾ ಬಂದಿದ್ದಾರೆ. ವೀರಶೈವ ಲಿಂಗಾಯತ ಬೇರೆ ಬೇರೆ ಮಾಡಬೇಡಿ, ಹೊಂದಿಕೊಂಡು ಹೋಗೋಣ ಅಂತ ಹೇಳಿ. ಆದರೂ ಕೆಲವರು ತಮ್ಮ ಹಠ ಬಿಡದೆ ಮುಂದುವರಿಸಿದರು ಇದೇ ಕಾರಣಕ್ಕೆ ಸ್ವಾಮಿಜಿಗಳು ಆಕ್ರೋಶ ಭರಿತವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದೇ ಕಾರಣ ಇಟ್ಟಿಕೊಂಡು ನಿರ್ಬಂಧ ಹೇರುವುದು ಸರಿಯಾದ ಕ್ರಮವಲ್ಲ. ಕೆಲ ಸ್ವಾಮೀಜಿಯ ಹಳೆ ಹೇಳಿಕೆ ವಿಡಿಯೋ ನೋಡಿದರೆ, ಜನ ಆಕ್ರೋಶಕೊಳ್ಳಬೇಕು ಆದರೂ ಸುಮ್ಮನೇ ಇದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾ ನಿರ್ಬಂಧದ ನಿರ್ಣಯವನ್ನು ಹಿಂತೆಗೆದುಕೊಳ್ಳುವುದು ಸೂಕ್ತ
ಪಥಸಂಚಲನ ವರ್ಷಕ್ಕೊಮ್ಮೆ ಅಥವಾ ಎರಡು ಸಲ
ವಿವಾದಗಳನ್ನು ದೊಡ್ಡವು ಮಾಡುವ ಬದಲು ಒಂದೇ ಏಟಿಗೆ ಅಂತ್ಯ ಹಾಡಿ ಬಿಡುವುದು ಒಳ್ಳೆಯದು. ದಿನಕ್ಕೊಂದು ಹೇಳಿಕೆ ದಿನಕ್ಕೊಂದು ಹೊಸ ಕಥೆ, ಚರ್ಚೆ ಒಂದು ರೀತಿ ಏನು ಆಗುತ್ತೆ ಅಂದ್ರೆ ಆರು ತಿಂಗಳಾದರೂ ರಟ್ಟು ರಾಮಾಯಣ ಮುಗಿಯಲ್ಲ. ಇದರಿಂದ ಜನ ಬೇಸತ್ತು ಬಿಡ್ತಾರೆ ಆದ್ದರಿಂದ ವರ್ಷಕ್ಕೊಮ್ಮೆ ಅಥವಾ ಎರಡು ಸಲ ಹೆಚ್ಚು ಕಡಿಮೆ ಪಥಸಂಚಲನ ಮಾಡಬಹುದು. ಇದನ್ನು ದೊಡ್ಡ ದೊಡ್ಡ ಪ್ರಚಾರ ಮಾಡುವುದು ಅವಶ್ಯಕತೆ ಇರುವುದಿಲ್ಲ. ಅನುಮತಿ ನೀಡಿ, ಒಂದೇ ಏಟಿಗೆ ಸಮಸ್ಯೆ ಬಗೆಹರಿಸುವುದು ಸೂಕ್ತ. ಬಿಕ್ಕಟ್ಟು, ವಿವಾದಗಳನ್ನು ಬೆಳೆಸುವುದು ಸೂಕ್ತ ಅಲ್ಲ. ಪಥಸಂಚಲನ ಅವಕಾಶ ನೀಡಿ, ಸಮಸ್ಯೆ ಬಗೆಹರಿಸುವುದು ಸೂಕ್ತ.
ವೀರೇಶ ಧೂಪದಮಠ