11 Jan 2026

// //

ಪಕ್ಷ ಅವನತಿಗೆ ಜಾತಿ, ಧರ್ಮದ ವ್ಯವಸ್ಥೆ ಕಾರಣ


ಇತ್ತೀಚಿನ ದಿನಗಳಲ್ಲಿ ಪಕ್ಷದ ಸಿದ್ಧಾಂತಗಳು ಜಾತಿ, ಧರ್ಮದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿರುವುದು ನೋಡಿದ್ರೆ ಪಕ್ಷ ಅವನತಿ ಕಡೆ ಮುಳುಗಲಿದೆ ಎನಿಸುತ್ತಿದೆ. ಕುಟುಂಬಗಳಲ್ಲಿ ಅಣ್ಣ-ತಮ್ಮ ಸಂಬಂಧ ಮದುವೆಯಾದ ಬಳಿಕ ಬೇರೆ-ಬೇರೆಯಾಗುವ ಭಾವನೆ ಸೃಷ್ಟಿಯಾಗಿ ಅಣ್ಣ-ತಮ್ಮ ರಸ್ತೆ ಬದಿ ಎದುರುಬದರು ಬಂದರು ಮಾತು ಇಲ್ಲ ಕಥೆ ಇಲ್ಲ ಮುಖ ತಿರುಗಿಸಿಕೊಂಡು ಸಂಬಂಧವೇ ಇಲ್ಲದ ರೀತಿಯಲ್ಲಿ ವರ್ತನೆ ತೋರುತ್ತಾರೆ. ಇದೇ ರೀತಿ ಕುಟುಂಬಗಳ ಸದಸ್ಯರಲ್ಲಿ ಸಂಬಂಧಗಳ ಮದ್ಯ ಮನಸ್ತಾಪ ಬಗೆಹರಿಸುವಲ್ಲಿ ಹಿರಿ ಜೀವಿಗಳು ವಿಫಲರಾಗುತ್ತಾರೆ. ಇನ್ನು ಇಡೀ ಜಾತಿ ಅಥವಾ ಇಡೀ ಧರ್ಮವನ್ನು ಒಗ್ಗೂಡಿಸುವ ಕೆಲಸವನ್ನು ಪಕ್ಷಗಳು ಮಾಡುತ್ತಿರುವುದು ನೋಡಿದ್ರೆ, ಇದು ಕೇವಲ ಓಟಿಗಾಗಿ, ಅಧಿಕಾರಕ್ಕಾಗಿ ಬಿಟ್ಟರೆ ಬೇರೇನೂ ಅಲ್ಲ.

ಇದರಿಂದ ಪಕ್ಷದ ಎಜೆಂಟರು, ದಲ್ಲಾಳಿಗಳಿಗೆ ಲಾಭವಾಗಬಹುದೇ ಹೊರತು ಜಾತಿ, ಧರ್ಮ ಒಗ್ಗೂಡಿಸುವ ಕೆಲಸ ರಾಜಕೀಯ ಪಕ್ಷಗಳಿಂದ ಸಾಧ್ಯವಾಗುವುದಿಲ್ಲ. ಪಕ್ಷದ ಏಜೆಂಟರು, ದಲ್ಲಾಳಿಗಳು ಐಷಾರಮಿ ಜೀವನ ನಡೆಸಬಹುದು ಹೊರತಾಗಿ ಯಾರೋ ಒಬ್ಬರು ಮಾಡಿದ ತಪ್ಪನ್ನು ಇಡೀ ಜಾತಿ, ಇಡೀ ಧರ್ಮವೇ ತಪ್ಪು ಮಾಡಿದೆ ಎಂದು ರಾಜಕೀಯ ಪಕ್ಷಗಳು ಬಿಂಬಿಸುವುದು ತಪ್ಪು. ಇಂತಹ ಪಕ್ಷದ ಸಿದ್ಧಾಂತಗಳಿಗೆ ಇಂತಹ ಪಕ್ಷಗಳಿಗೆ ಮತದಾರ ಮನ್ನಣೆ ಕೊಡುವುದಿಲ್ಲ. ಈ ವ್ಯವಸ್ಥೆ ಪಕ್ಷ ಅವನತಿಗೆ ಕಾರಣವಾಗುತ್ತದೆ. ಕೆಲವೇ ವರ್ಷಗಳಲ್ಲಿ ಒಂದು ರಾಜಕೀಯ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿ ಪಕ್ಷ ಅವನತಿಯತ್ತ ಮುಳುಗಲಿದೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಂಡು ಸರ್ವಧರ್ಮದ,

ಸರ್ವ ಜನಾಂಗದ ಶಾಂತಿಯ ತೋಟ ಎಂಬ ಅಂಶ ಅಳವಡಿಸಿಕೊಳ್ಳಬೇಕು. ಪ್ರತಿ ಮನೆಯ ಯುವಕರಿಗೆ ಉದ್ಯೋಗ ದೊರಕಿಸಿಕೊಡುವಂತಹ, ಬಡವರನ್ನು ಬಡತನದಿಂದ ಮುಕ್ತಗೊಳಿಸುವಂತಹ ವ್ಯವಸ್ಥೆಯನ್ನು ರಾಜಕೀಯ ಪಕ್ಷಗಳು, ಪಕ್ಷದ ಸಿದ್ಧಾಂತಗಳಲ್ಲಿ ಅಳವಡಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕಿದೆ.

ವೀರೇಶ ಧೂಪದಮಠ