11 Jan 2026

// //

ಹುಲಕೋಟಿ ಹುಲಿಗಳ ಕನಸು ನನಸಾಯಿತು: ಗದಗದ ಮೊದಲ ಸಹಕಾರಿ ರೇಡಿಯೋ ಕೇಂದ್ರ ಉದ್ಘಾಟನೆ!

Thumbnail for [Post Title]


1.5 ಸಹಕಾರ ಬಾನುಲಿ ಕೇಂದ್ರ ಪ್ರಾರಂಭ

(ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ)


ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಪ್ರಾರಂಭಿಸಲಾಯಿತು. ಗದಗ ತಾಲೂಕಿನ ಹುಲಕೋಟಿ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 16 ಮಾರ್ಚ್ 2022 ರಂದು ಬೆಳಗ್ಗೆ 11 ಗಂಟೆಗೆ ಸ್ಥಾಪಿಸಲಾಯಿತು. ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ವೀರಪ್ಪ ಮೊಯ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಎಚ್.ಕೆ ಪಾಟೀಲ, ಮಾಜಿ ಸಚಿವರು ಎ. ಎಂ ಹಿಂಡಸಗೇರಿ ಭಾಗಿಯಾಗಿದ್ದರು.

ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಎ. ಎಸ್. ಎಫ್, ಕೆ. ಎಚ್. ಪಿ, ಕೆವಿಕೆ ಹುಲಕೋಟಿ ಅಧ್ಯಕ್ಷರು ಡಿ. ಆರ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಸ್ಥಾಪಿಸಬೇಕು ಎನ್ನುವುದು ಹುಲಕೋಟಿ ಹುಲಿ ಎಂದೇ ಖ್ಯಾತರಾದ್ದ ಎಚ್. ಕೆ ಪಾಟೀಲ ಹಾಗೂ ಡಿ. ಆರ್ ಪಾಟೀಲ ಅವರ ಕನಸು ಅಗಿತ್ತು. ಸ್ವಾತಂತ್ರ‍್ಯ ಭಾರತದಲ್ಲಿ ಮತ್ತು ಸ್ವಾತಂತ್ರ‍್ಯ ಪೂರ್ವದಲ್ಲಿ ಬಾನುಲಿ ಕೇಂದ್ರಗಳ ಸಾಧನೆ ಅನನ್ಯ. ಈ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ 16 ಮಾರ್ಚ್ 2022 ರಂದು ಗದಗ ಸಮೀಪದ ಹುಲಕೋಟಿಯ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರಾರಂಭಸಲಾಯಿತು.

ಸಹಕಾರ ಬಾನುಲಿ ಕೇಂದ್ರದ ನಿರ್ವಹಣೆಯನ್ನು ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಗದಗ-ಹುಲಕೋಟಿ ಪಡೆದುಕೊಂಡಿದೆ. ಎಫ್.ಎA 89.6 ಸಹಕಾರ ರೇಡಿಯೋ ನಮ್ಮ ಧ್ವನಿ ನಿಮಗಾಗಿ ಎಂಬ ಅಡಿಯಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳುವ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸುತ್ತದೆ. ಅದರಲ್ಲಿ ಪ್ರಮುಖವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಹಾಗೂ ಸಹಕಾರ ಕ್ಷೇತ್ರದಲ್ಲಿ ತೊಡಗಿರುವ ಉದ್ಯಮಿಗಳಿಗೆ ಸಹಕಾರ ಬಾನುಲಿ ಕೇಂದ್ರ ಪ್ರಯೋಜನಕರವಾಗಿದೆ. ಸುಮಾರು 30 ಕಿ.ಮೀ ವ್ಯಾಪ್ತಿ ಹೊಂದಿರುವ ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಗದಗ ನಗರ ಸೇರಿದಂತೆ ಹುಲಕೋಟಿ ಗ್ರಾಮ ಸುತ್ತಮುತ್ತಲಿನ ಸುಮಾರು 158 ಕ್ಕೂ ಅಧಿಕ ಗ್ರಾಮಗಳಿಗೆ ಸಹಕಾರ ರೇಡಿಯೋ ಕೇಳುಗರ ಧ್ವನಿಯಾಗಿ ಪ್ರಸಿದ್ಧಿ ಪಡೆದಿದೆ.

ಪ್ರತಿನಿತ್ಯ ಪ್ರಸಾರವಾಗುವ 25 ಕ್ಕೂ ಅಧಿಕ ಕಾರ್ಯಕ್ರಮಗಳು ಜನ ಮೆಚ್ಚಿಗೆಯನ್ನು ಪಡೆದಿದೆ. ಕೃಷಿ ಸಂಬAಧಿಸಿದ ಭೂ ಸುಧಾರಣೆ, ಮದ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ, ಬೆಳೆ ಪರಿಹಾರ, ಕೃಷಿ ಬೆಂಬಲ ಬೆಲೆ, ಸುಸ್ಥಿರ ಕೃಷಿ, ಆಹಾರ, ಬಿಕ್ಕಟ್ಟು, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ರೈತರ ಆತ್ಮಹತ್ಯೆ, ರೈತರು ವಲಸೆ ಹೋಗುವುದು, ರಾಸಾಯನಿಕ ಕೃಷಿ, ಕೃಷಿ ಕ್ರಿಮಿನಾಶಕ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸೀಮಿತ ಭೂಮಿ ಕೃಷಿ, ಕೃಷಿ ಬೆಳೆ ನಷ್ಟ ಪರಿಹಾರ, ನೈಸರ್ಗಿಕ ಕೃಷಿ, ತೋಟಗಾರಿಕೆ ಕೃಷಿ, ಕೃಷಿ ಬೆಳೆ ಫಲಿತಾಂಶ, ತಿಪ್ಪೆ ಗೊಬ್ಬರ, ರಾಸಾಯನಿಕ ಗೊಬ್ಬರ, ಕೀಟನಾಶಕ, ಎರೆಹುಳು ಗೊಬ್ಬರ, ಪಂಚಗವ್ಯ, ಸಣ್ಣ ಪ್ರಮಾಣ ಉಳುಮೆ,

ಅಲ್ಪಾವಧಿ, ಕೃಷಿ ಬೆಳೆಗಳು, ಉತ್ಪಾದನೆ ವೆಚ್ಚ, ಸಗಣಿ ಗೊಬ್ಬರ ಇನ್ನಿತರ ವಿಷಯ ಬಗ್ಗೆ ದೀರ್ಘ ಕಾಲ ಮಾಹಿತಿ ನೀಡುತ್ತದೆ. ಸಹಕಾರ ವಿಷಯಕ್ಕೆ ಸಂಬAಧಿಸಿದ ವ್ಯವಸಾಯ, ಹೈನುಗಾರಿಕೆ, ಕೋಳಿ ಸಾಗಾಣಿಕೆ, ಮೀನುಗಾರಿಗೆ, ಕೃಷಿ ತೋಟಗಾರಿಕೆ ಸಾಲ, ಬ್ಯಾಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುತ್ತಿಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗಗಳು, ಗ್ರಾಹಕವರ್ಗ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪಾರ, ರಫ್ತು, ಕೃಷಿ ವ್ಯಾಪಾರ, ಮಾನವ ಸಂಪನ್ಮೂಲ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಲೇವಾದೇವಿಗಾರ ಕರ್ತವ್ಯ ಇನ್ನಿತರ ವಿಷಯ ಬಗ್ಗೆ ದೀರ್ಘ ಕಾಲ ಮಾಹಿತಿ ನೀಡುತ್ತದೆ.

ಕೃಷಿ ವಿಷಯಕ್ಕೆ ಸಂಬAಧಿಸಿದAತೆ ಎಲ್ಲ ರೀತಿಯ ಸಲಹೆ ಸೂಚನೆಗಳು ನೀಡಲಾಗುತ್ತದೆ. ಪ್ರತಿಯೊಂದು ಕೃಷಿ ಚಟುವಟಿಕೆಗಳ ಬಗ್ಗೆ ಸಹಕಾರ ಬಾನುಲಿ ಕೇಂದ್ರ ಪ್ರಸರಿಸುತ್ತದೆ. ಇನ್ನು ಸಹಕಾರ ಕ್ಷೇತ್ರದ ವಿಷಯಕ್ಕೆ ಸಂಬAಧಿಸಿದAತೆ ಸಲಹೆ-ಸೂಚನೆ ಬಾನುಲಿ ಕೇಂದ್ರ ನೀಡುತ್ತಿದೆ. ಸಹಕಾರ ಬಾನುಲಿ ಕೇಂದ್ರವೂ ಕೃಷಿ, ಸಹಕಾರ, ಶಿಕ್ಷಣ, ಮಹಿಳಾ ಸಬಲೀಕರಣ, ತರಬೇತಿ ಸೇರಿದಂತೆ ಇತರೆ ವಿಷಯಗಳನ್ನು ಸೇರಿದಂತೆ ಅನೇಕ ವಿಷಯಗಳ ಆಧಾರದ ಮೇಲೆ ಬಾನುಲಿ ಕೇಂದ್ರ ತನ್ನ ಸಾಮರ್ಥ್ಯವನ್ನು ನಿರ್ವಹಿಸುತ್ತದೆ. ಗದಗ ವಿಧಾನಸಭಾ ಕ್ಷೇತ್ರ ಶಾಸಕರು ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಎಚ್.ಕೆ ಪಾಟೀಲ ಮತ್ತು

ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಎ. ಎಸ್. ಎಫ್, ಕೆ. ಎಚ್. ಪಿ, ಕೆವಿಕೆ ಹುಲಕೋಟಿ ಅಧ್ಯಕ್ಷರು ಡಿ. ಆರ್ ಪಾಟೀಲ ಅವರ ಸಹಕಾರ, ಸಲಹೆ ಮೇರೆಗೆ ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗದಗ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಹಕಾರ ಬಾನುಲಿ ಉತ್ತಮ ಕೇಳುಗರ ಧ್ವನಿಯಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ.

ಬಾನುಲಿ ಕೇಂದ್ರದ ಗುರಿ ಮತ್ತು ಉದ್ದೇಶ

ಎಫ್. ಎಂ 89.6 ಸಹಕಾರ ಬಾನುಲಿ ಕೇಂದ್ರವು ಪ್ರಮುಖವಾಗಿ ಕೃಷಿ, ಸಹಕಾರ, ಶಿಕ್ಷಣ, ಮಹಿಳಾ ಸಬಲೀಕರಣ, ತರಬೇತಿ ಸೇರಿದಂತೆ ಇತರ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಸಹಕಾರ ಬಾನುಲಿ ಕೇಂದ್ರ ಕೇಳುಗರಿಗೆ ಪ್ರತಿ ನಿತ್ಯ ಮಾಹಿತಿ ನೀಡುತ್ತದೆ.

ಕೃಷಿ ಚಟುವಟಿಕೆಗಳಿಗೆ ಸಂಬAಧಿಸಿದ ವಿಷಯಗಳನ್ನು ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಲಹೆಯೊಂದಿಗೆ ಬಾನುಲಿ ಕೇಂದ್ರದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಸಹಕಾರ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳು, ಸಲಹೆ-ಸೂಚನೆಗಳನ್ನು ಯಾವ ರೀತಿಯಾಗಿ ಪಾಲಿಸಬೇಕು ಎಂಬ ವಿಷÀÀಯಗಳೊಂದಿಗೆ ಸಹಕಾರ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಸಹಕಾರ ಬಾನುಲಿ ಪ್ರಸಾರಗೊಳ್ಳಲಿದೆ.

ಸಹೋದ್ಯೋಗ ವಿಷಯಕ್ಕೆ ಯುವ ಜನತೆಗೆ ಉದ್ಯೋಗವನ್ನು ಯಾವ ರೀತಿಯಾಗಿ ಗಿಟ್ಟಿಸಿಕೊಳ್ಳಬೇಕು, ಸ್ವ ಉದ್ಯೋಗ ತರಬೇತಿ-ಸಲಹೆ ಸೂಚನೆಗಳನ್ನು ಸಹಕಾರ ಬಾನುಲಿ ಕೇಂದ್ರದಲ್ಲಿ ಪ್ರತಿನಿತ್ಯ ನೀಡಲಾಗುತ್ತದೆ.

ಮಹಿಳಾ ಸಬಲೀಕರಣ ವಿಷಯಕ್ಕೆ ಸಂಬAಧಿಸಿದAತೆ ಮಹಿಳೆಯರಿಗೆ ವಿವಿಧ ಇಲಾಖೆಗಳ ಮಾಹಿತಿ, ಮಹಿಳೆಯರ ಉದ್ಯೋಗ, ತರಬೇತಿ, ಇನ್ನಿತರ ಯೋಜನೆಗಳ ಸಹಕಾರ ಬಾನುಲಿ ಕೇಂದ್ರದಲ್ಲಿ ತಿಳಿಸಿಕೊಡಲಾಗುತ್ತಿದೆ.

ಸಹಕಾರ ಬಾನುಲಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಕಂಪ್ಯೂಟರ್ ತರಬೇತಿ, ಕೃಷಿ ಚಟುವಟಿಕೆಗಳು ತರಬೇತಿ ಸೇರಿದಂತೆ ಇನ್ನಿತರ ತರಬೇತಿಗಳನ್ನು ಸಹಕಾರ ಬಾನುಲಿ ಕೇಂದ್ರದ ಕೇಳುಗರಿಗೆ ನೀಡಲಾಗುತ್ತಿದೆ. ಪ್ರಕಟನೆ ಹೊರಡಿಸಲಾಗುತ್ತದೆ.

ಹುಲಕೋಟಿ-ಗದಗ ಸಹಕಾರ ಬಾನುಲಿ ಕೇಂದ್ರವು ಕೃಷಿ, ಸಹಕಾರ, ಶಿಕ್ಷಣ, ಸಹೋದ್ಯೋಗ, ಮಹಿಳಾ ಸಬಲೀಕರಣ, ತರಬೇತಿ, ಇನ್ನಿತರ ವಿಷಯಕ್ಕೆ ಸುದೀರ್ಘವಾಗಿ ಮಾಹಿತಿ ಒದಗಿಸಿ, ಸಹಕಾರ ಬಾನುಲಿ ಕೇಂದ್ರ ಜನರ ಧ್ವನಿಯಾಗಿ ಜನ ಮೆಚ್ಚುವಂತಹ ಕಾರ್ಯಕ್ರಮ ನೀಡಿ, ಜನಮನ್ನಣೆ ಗಳಿಸಿದೆ.

1.6 ಸಹಕಾರ ಬಾನುಲಿ ಕೇಂದ್ರ, ಹುಲಕೋಟಿ-ಗದಗ ಸ್ಥಾಪನೆ


ಗದಗ ತಾಲೂಕಿನ ಹುಲಕೋಟಿ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 16 ಮಾರ್ಚ್ 2022 ರಂದು ಬೆಳಗ್ಗೆ 11 ಗಂಟೆಗೆ ಸ್ಥಾಪಿಸಲಾಯಿತು. ಎಫ್.ಎಂ 89.6 ಸಹಕಾರ ಬಾನುಲಿ ಕೇಂದ್ರ ಸ್ಥಾಪಿಸಬೇಕು ಎನ್ನುವುದು ಹುಲಕೋಟಿ ಹುಲಿ ಎಂದೇ ಖ್ಯಾತರಾದ್ದ ಎಚ್. ಕೆ ಪಾಟೀಲ ಹಾಗೂ ಡಿ. ಆರ್ ಪಾಟೀಲ ಅವರ ಕನಸು ಅಗಿತ್ತು. ಸ್ವಾತಂತ್ರ‍್ಯ ಭಾರತದಲ್ಲಿ ಮತ್ತು ಸ್ವಾತಂತ್ರ‍್ಯ ಪೂರ್ವದಲ್ಲಿ ಬಾನುಲಿ ಕೇಂದ್ರಗಳ ಸಾಧನೆ ಅನನ್ಯವಾಗಿದ್ದು. ಈ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ 16 ಮಾರ್ಚ್ 2022 ಗದಗ ಸಮೀಪದ ಹುಲಕೋಟಿಯ ಕೆ.ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಪ್ರಾರಂಭಸಲಾಯಿತು.