11 Jan 2026

// //

ವೀರಶೈವ ಲಿಂಗಾಯತ ಪೂಜೆ ವಿಧಾನ ಒಂದೇ ಅಂದಮೇಲೆ ಒಂದೇ



ಇಷ್ಟಲಿಂಗ ಪೂಜೆ ಎನ್ನುವುದು ಶಿವನನ್ನು ಪೂಜಿಸುವ ಪದ್ಧತಿಯಾಗಿದೆ. ವೀರಶೈವರು ಇಷ್ಟಲಿಂಗ ಪೂಜಾ ಮಾಡುತ್ತಾರೆ. ಲಿಂಗಾಯತರು ಇಷ್ಟಲಿಂಗ ಪೂಜೆ ಮಾಡುತ್ತಾರೆ. ಅಂದರೆ ವೀರಶೈವರು ಮತ್ತು ಲಿಂಗಾಯತರು ಪೂಜೆ ವಿಧಾನ ಇಷ್ಟಲಿಂಗವಾಗಿದೆ. ಲಿಂಗ ಎಂಬುದು ದೇವರಲ್ಲ, ಬದಲಿಗೆ ಪರಮಾತ್ಮ ಶಿವನ ಸಂಕೇತ.

ಇಷ್ಟಲಿಂಗ ಪೂಜೆ ಎಂಬುದು ಇಷ್ಟಲಿಂಗವು ಸೃಷ್ಟಿಕರ್ತನಾದ ಪರಶಿವನ ಸಾಕಾರ ರೂಪವಾಗಿದ್ದು, ವಿಶ್ವದ ಆಕಾರವನ್ನು ಹೊಂದಿದೆ. ಇದು ನಿರಾಕಾರ ಪರಮಾತ್ಮನ ಸಾಕಾರ ರೂಪವಾಗಿದೆ ಎಂಬುದರ ಅರ್ಥವಾಗಿದೆ. ವೀರಶೈವ ಲಿಂಗಾಯತ ದೇವಸ್ಥಾನಗಳು ಉದಾಹರಣೆಗಾಗಿ ತಪ್ಪು ಅಪಾರ್ಥ ಬೇಡ: ವೀರಭದ್ರೇಶ್ವರ, ಸೋಮೇಶ್ವರ, ಬಸವೇಶ್ವರ, ಕೊನೆಯದಾಗಿ ಬಂದ ಪದ ಶ್ವರ (ಈಶ್ವರ) ಎನ್ನುವ ದೇವಾಲಯವಾಗಳಿವೆ.

ಲಿಂಗಾಯತ ಮಠಗಳು ವ್ಯಕ್ತಿಯನ್ನು ದೇವರ ರೂಪದಲ್ಲಿ ಕಾಣುವುದು ಉದಾಹರಣೆಗಾಗಿ ತಪ್ಪು ಅಪಾರ್ಥ ಬೇಡ: ತೋಂಟದಾರ್ಯ ಮಠ, ಮೃತ್ಯುಂಜಯ ಮಠ, ಸಿದ್ದಗಂಗಾ ಮಠ ಹೀಗೆ ಕಂಡು ಬರುತ್ತದೆ. ಆದರೆ ವೀರಶೈವ-ಲಿಂಗಾಯತರ ಪೂಜೆ ವಿಧಾನ ಇಷ್ಟಲಿಂಗ ಪೂಜೆ ಆಗಿದೆ. ಒಂದರ್ಥದಲ್ಲಿ ಎರಡು ಒಂದೇ. ವೀರಶೈವರು ಲಿಂಗಾಯತರು ಬೇರೆ ಬೇರೆ ಎಂಬ ಅರ್ಥದಲ್ಲಿ ಜನರಿಗೆ ಸಂದೇಶ ಸಾರುವುದು ಬೇಡ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಗಾದೆ ಮಾತು ಅನುಸರಿಸಬೇಕು.

ವೀರಶೈವ ಲಿಂಗಾಯತ ಒಂದು ಧರ್ಮವು ಅಲ್ಲ ಜಾತಿವು ಅಲ್ಲ. ಒಂದು ಪಂಥವಾಗಿದೆ. ವೀರಶೈವ ಲಿಂಗಾಯತ ಪಂಥಕ್ಕೆ ಒಳಪಡುವ ಜಾತಿಗಳ ಪಟ್ಟಿಯನ್ನು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಸರ್ಕಾರಕ್ಕೆ ನೀಡಿದ್ದಾರೆ. ಸರ್ಕಾರ ವೀರಶೈವ ಲಿಂಗಾಯತ ಪಂಥದ ಜಾತಿಗಳನ್ನು ಒಂದು ಕಡೆ ಸೇರಿಸುವ ಮೂಲಕ ಸಕಲ ಸೇವೆ ಸೌಲಭ್ಯ ಸವಲತ್ತುಗಳನ್ನು ಮೀಸಲಾತಿ ಒದಗಿಸುವ ವ್ಯವಸ್ಥೆ ಮಾಡುತ್ತದೆ. ಮೊದಲಿನಿಂದಲೂ ಜಾತಿ ಪ್ರಮಾಣ ಪತ್ರದಲ್ಲಿ ಕೂಡಿ ಬಂದಿರುವಾಗ ಬೇರೆ ಬೇರೆ ಮಾಡುವುದು ಸರಿಯಲ್ಲ.

ಸುಮ್ನೆ ಕಿತ್ತಾಡಿಕೊಳ್ಳುವುದರಿಂದ ಯಾವುದೇ ಸರ್ಕಾರಿ ಯೋಜನೆಗಳು ತಪ್ಪುವ ಸಾಧ್ಯತೆ ದಟ್ಟವಾಗುತ್ತದೆ. ವೀರಶೈವ ಲಿಂಗಾಯತ ಪಂಥಕ್ಕೆ ಸೇರುವ ಒಳಪಂಗಡಧ ಜಾತಿಗಳ ಪಟ್ಟಿ ಸರ್ಕಾರಕ್ಕೆ ನೀಡಿ, ಒಂದೇ ಕಡೆ ಸೇರಿಸುವಂತೆ ಒತ್ತಾಯಿಸಬೇಕು. ಸರ್ಕಾರದ ಸಕಲ ಸವಲತ್ತು ಒಂದಾಗಿಸುವುದು ಜಾತಿ ಆಧಾರಿತವಾಗಿ ಹಾಗಾಗಿ ಒಂದು ಕಡೆ ಸೇರಿಸುವ ಮೂಲಕ ಸಕಲ ಸವಲತ್ತು ಪಡೆಯಬೇಕು ಅಷ್ಟೇ ಕೆಲಸ. ಇಲ್ಲಸಲ್ಲದ ಮಾಡಲು ಹೋದರೆ ಈಗಿರುವ ಸವಲತ್ತುಗಳು ಕಣ್ಣಾರೆಯಾಗಲಿದೆ.


ಹಾಗೇ ಆಗಬಾರದು ಒಗ್ಗಟ್ಟಿನಲ್ಲಿ ಬಲವಿದೆ ಅಂಶ ಇಲ್ಲಿ ಕಂಡು ಬರಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಆನ್ ಲೈನ್ ಮಾಡಿದ್ದರಿಂದ ಸ್ಪಷ್ಟ ಚಿತ್ರಣ ಹೊರಬರಲಿದೆ.‌ ಕಳೆದ ಬಾರಿ ಸಮೀಕ್ಷೆ ಕೈಬರಹ ಬೋಗಸ್ ವರದಿ ಅಂತ ಗದ್ದಲವಾಗಿತ್ತು. ಈಗ ಅನ್ ಲೈನ್ ಆಗಿದ್ದು ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ. ಆದ್ದರಿಂದ ವೀರಶೈವ ಲಿಂಗಾಯತ ಪೂಜೆ ವಿಧಾನ ಒಂದೇ ಆಗಿರುವುದರಿಂದ ವೀರಶೈವ ಲಿಂಗಾಯತ ಒಂದೇ ಬೇರೆ ಬೇರೆ ಅಲ್ಲ‌ ಎಂಬ ತಿಳಿವಳಿಕೆ ಮೂಲಕ ಕಂಡು ಬರುತ್ತಿದೆ.

ವೀರೇಶ ಧೂಪದಮಠ