ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲಾ ಡ್ಯಾಂ ಭರ್ತಿ

ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲಾ ಡ್ಯಾಂ ಭರ್ತಿ

ಪ್ರತಿವರ್ಷ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲಾ ಡ್ಯಾಂ ಭರ್ತಿಯಾದರೆ ಮಳೆಗಾಲ ಇಲ್ಲದಿದ್ದರೆ ಬರಗಾಲ ಎಂದು ತಿಳಿದುಕೊಳ್ಳಬೇಕು. ಪ್ರತಿವರ್ಷ ಆಗಸ್ಟ್ 15 ರೊಳಗೆ ರಾಜ್ಯದ ಡ್ಯಾಂಗಳು ತುಂಬಿ ಹರಿಯುತ್ತದೆ. ಆದರೆ ಈ ವರ್ಷ ಆಗಸ್ಟ್ 15 ರೊಳಗೆ ಡ್ಯಾಂ ತುಂಬಿ ತುಳುಕಿದ್ದರೆ ಮಾತ್ರ ಮಳೆಗಾಲ ಎನ್ನಬಹುದು ಇಲ್ಲದಿದ್ದರೆ ಬರಗಾಲ ಎನ್ನುವುದು ಸ್ಪಷ್ಟವಾಗುತ್ತದೆ. ಮುಂಗಾರು ಬೆಳೆ ಕೈಕೊಟ್ಟಿದೆ. ಹಿಂಗಾರು ಬೆಳೆಯಾದರೂ ವರುಣ ಕೃಪೆ ತೋರಿ ರೈತನನ್ನು ಕೈ ಹಿಡಿಯುವಂತಾಗಬೇಕು. ಈ ವರ್ಷ ಅಗಸ್ಟ್ 15 ರೊಳಗೆ ದೊಡ್ಡ ಮಳೆಯಾಗಿ ಕರ್ನಾಟಕ ರಾಜ್ಯದ ಎಲ್ಲಾ ಡ್ಯಾಂಗಳು ಭರ್ತಿಯಾಗಲಿ ಗಂಗಾ ಮಾತೆ ನಮೋ ಸ್ತುತಿ.

ಫಸಲು ಬೀಮಾ ಯೋಜನೆ ಪರಿಹಾರ

ಪ್ರತಿವರ್ಷ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದಾಗಿ ರೈತರ ಬೆಳೆಗಳು ನಾಶವಾಗುತ್ತದೆ. ಆದರೆ ಒಂದು ವಿಚಾರ ನೆನಪು ಇರಲಿ. ಕೇವಲ ಒಂದು ಗ್ರಾಮ ಅಥವಾ ಒಬ್ಬನೇ ರೈತನಿಗೆ ನಷ್ಟ ಪರಿಹಾರ ನೀಡಲು ಸಾಕಷ್ಟು ಬಾರಿ ಅನ್ವಯಿಸಲ್ಲ. ಇಡೀ ತಾಲ್ಲೂಕು ಅಥವಾ ವಿಧಾನಸಭಾ ಕ್ಷೇತ್ರಕ್ಕೆ ಅನ್ವಯಿಸುತ್ತದೆ. ಹಾಗಾಗಿ ಆಯಾ ಸ್ಥಳೀಯ ಶಾಸಕರು, ಸಂಸದರು ವಿಮಾ ಕಂಪನಿ ಅಥವಾ ಕೇಂದ್ರ/ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು. ನಮ್ಮ ಕ್ಷೇತ್ರ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಇಡೀ ತಾಲ್ಲೂಕು ಅಥವಾ ವಿಧಾನಸಭಾ ಕ್ಷೇತ್ರಕ್ಕೆ ಹಾನಿ ಸಂಭವಿಸಿದೆ. ಎಂಬುದನ್ನು ಮನವರಿಕೆ ಮಾಡಬೇಕು. ಇಲ್ಲದಿದ್ದರೆ ಒಬ್ಬನೇ ರೈತ ಅಥವಾ ಒಂದೇ ಗ್ರಾಮ ಪರಿಗಣಿಸುವುದು ಅಪರೂಪ. ರೈತರಿಗೆ ಪರಿಹಾರ ಸಿಗಲು ಶಾಸಕರು ಅಥವಾ ಸಂಸದರು ಶತಪ್ರಯತ್ನ ಮಾಡಿದರೆ ಒಳ್ಳೆಯದು.

ಜಿರಳೆ ಹೋರಾಟಕ್ಕೆ ಶರಣಾಗಲಿ

ಜಿರಳೆ ಅಥವಾ ಜೂಂಡಿಗ ಹೋರಾಟ ಕೇಂದ್ರ ಸರ್ಕಾರವನ್ನೇ ಅಲ್ಲಾಡಿಸಿದೆ. ಇದಕ್ಕೊಂದೇ ಪರಿಹಾರ ಅವರ ಬೇಡಿಕೆ ಪರಿಗಣಿಸುವುದು ಇಲ್ಲದಿದ್ದರೆ ದೀರ್ಘಕಾಲ ಈ ಸಮಸ್ಯೆಗೆ ಅಂತ್ಯ ಹಾಡಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ದಟ್ಟವಾಗಿದೆ. ಇಡೀ ದೇಶಾದ್ಯಂತ ಭಾರಿ ಸದ್ದು ಜಿರಳೆ ಅಥವಾ ಜೂಂಡಿಗ ಹೋರಾಟ ಇದೆ. ಅವರ ಹೋರಾಟ ನ್ಯಾಯ ಸಮ್ಮತವಿದೆ. ಅದರಲ್ಲೇನು ತಪ್ಪು ಕಂಡು ಬರುತ್ತಿಲ್ಲ. ಜಿರಳೆ ಅಥವಾ ಜೂಂಡಿಗ ಹೋರಾಟಕ್ಕೆ ಕೇಂದ್ರ ಸರ್ಕಾರ ತಲೆಬಾಗಿ ಅವರ ಬೇಡಿಕೆ ಪರಿಗಣಿಸುವತ್ತ ಕೇಂದ್ರ ಚಿತ್ತ ಹರಿಸಬೇಕು.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords
Sponsored