ಬ್ರೈನ್ ಹೆಲ್ತ್ ಸೀಕ್ರೆಟ್: ಯಂಗ್ ಏಜ್ನಲ್ಲೇ ಮರವು ಬರ್ತಿದ್ಯಾ?

ನಮಸ್ಕಾರ ಸ್ನೇಹಿತರೆ. ನಾವೆಲ್ಲ ಮುಖಕ್ಕೆ ಪ್ಯಾಕ್ ಹಚ್ಕೊತೀವಿ, ಜಿಮ್ಗೆ ಹೋಗಿ ಬಾಡಿ ಫಿಟ್ ಮಾಡ್ತೀವಿ. ಆದರೆ ಇಡೀ ದೇಹವನ್ನ ಕಂಟ್ರೋಲ್ ಮಾಡೋ "ಕಂಟ್ರೋಲ್ ಸೆಂಟರ್" ಅಂದ್ರೆ ನಮ್ಮ ಬ್ರೈನ್ ಬಗ್ಗೆ ಯಾರು ಯೋಚ್ನೆ ಮಾಡ್ತೀವಿ? 99% ಜನ ಬ್ರೈನ್ ಫಿಟ್ನೆಸ್ ಬಗ್ಗೆ ಎಫರ್ಟ್ ಹಾಕೋದೇ ಇಲ್ಲ. ಇದರ ಪರಿಣಾಮ ಯಂಗ್ ಏಜ್ನಲ್ಲೇ ಮೆಮೊರಿ ಕಮ್ಮಿ, ಫೋಕಸ್ ಇಲ್ಲ, ಜೋಶ್ ಇಲ್ಲ. ಕೇವಲ ಮೋಟಿವೇಷನ್ ವಿಡಿಯೋ ನೋಡಿದ್ರೆ ಬ್ರೈನ್ ಶಾರ್ಪ್ ಆಗಲ್ಲ. ಅದಕ್ಕೆ ಎಕ್ಸರ್ಸೈಸ್ ಬೇಕು. ಇವತ್ತು ನಿಮ್ಮ ಮೆದುಳನ್ನ ಸೈಲೆಂಟಾಗಿ ಡ್ಯಾಮೇಜ್ ಮಾಡ್ತಿರೋ 5 ಕೆಟ್ಟ ಅಭ್ಯಾಸಗಳು ಯಾವುದು? ಅದನ್ನ ಹೇಗೆ ಸರಿಪಡಿಸೋದು? ಸೈನ್ಸ್ ಹೇಳೋ 7 ಬ್ರೈನ್ ಬೂಸ್ಟ್ ಟಿಪ್ಸ್ ಏನು? ಎಲ್ಲವನ್ನೂ ಡೀಟೇಲ್ ಆಗಿ ನೋಡೋಣ.

ನಿಮ್ಮ ಬ್ರೈನ್ ನ ಕೊಲ್ಲುತ್ತಿರೋ 5 ಕೆಟ್ಟ ಅಭ್ಯಾಸಗಳು

ನಿಮಗೆ ಗೊತ್ತಿಲ್ಲದೆ ಪ್ರತಿದಿನ ನೀವು ಮಾಡ್ತಿರೋ ಈ ಕೆಲಸಗಳು ನಿಮ್ಮ ಮೆದುಳನ್ನ ನಿಧಾನವಾಗಿ ಹಾಳು ಮಾಡ್ತಿವೆ.

ಕೆಟ್ಟ ಅಭ್ಯಾಸ ಬ್ರೈನ್ ಮೇಲೆ ಪರಿಣಾಮ
1. Doom Scrolling + ಮೊಬೈಲ್ ಜಾಸ್ತಿ ದಿನಕ್ಕೆ 6-10 ಗಂಟೆ ಸ್ಕ್ರೀನ್ ಟೈಮ್. ಮೆಲಟೋನಿನ್ ನಿಂತು ನಿದ್ದೆ ಹಾಳು. Pre-Frontal Cortex overload ಆಗಿ ಫೋಕಸ್ ಶಕ್ತಿ ಹೋಗುತ್ತೆ.
2. ಅತಿಯಾದ ಸಕ್ಕರೆ + ಜಂಕ್ ಫುಡ್ ರಕ್ತದಲ್ಲಿ ಇನ್ಸುಲಿನ್ spike. ಮೆದುಳಿನ ಹಿಪ್ಪೋಕ್ಯಾಂಪಸ್ ಭಾಗದಲ್ಲಿ inflammation ಆಗುತ್ತೆ. ಇದೇ ನಮ್ಮ ನೆನಪಿನ ಕೇಂದ್ರ.
3. ದೈಹಿಕ ಚಟುವಟಿಕೆ ಇಲ್ಲದಿರುವುದು ಬ್ರೈನ್ ದೇಹದ 2% ತೂಕ ಇದ್ರೂ 20% ಆಕ್ಸಿಜನ್ use ಮಾಡುತ್ತೆ. ಆಕ್ಟಿವ್ ಇಲ್ಲದಿದ್ರೆ ಬ್ರೈನ್ ಗೆ ರಕ್ತ-ಆಕ್ಸಿಜನ್ ಕಮ್ಮಿ.
4. ನಿರಂತರ ಟೆನ್ಶನ್ ಮತ್ತು ಸ್ಟ್ರೆಸ್ ಕಾರ್ಟಿಸೋಲ್ ಜಾಸ್ತಿ ಆದಾಗ ಮೆದುಳಿನ ನರಗಳ ಸೈಜ್ ಚಿಕ್ಕದಾಗುತ್ತೆ. 25-30 ವರ್ಷಕ್ಕೆನೆ ಅರುಳು ಮರುಳು ಬರೋ ಚಾನ್ಸ್.
5. ಧೂಮಪಾನ + ಮದ್ಯಪಾನ ಸ್ಮೋಕಿಂಗ್ ನಲ್ಲಿ 7000 ಕೆಮಿಕಲ್. ಆಲ್ಕೋಹಾಲ್ ನ್ಯೂರೋಜೆನೆಸಿಸ್ ನಿಲ್ಲಿಸಿ ಬ್ರೈನ್ ಕುಗ್ಗಿಸುತ್ತೆ. Cerebral Atrophy ಆಗುತ್ತೆ.

ಸೈನ್ಸ್ ಏನ್ ಹೇಳುತ್ತೆ? ನ್ಯೂರೋಪ್ಲಾಸ್ಟಿಸಿಟಿ

ಬ್ರೈನ್ ಗೆ ವಯಸ್ಸಾಗೋದನ್ನ ತಡೆಯೋಕೆ ಸಾಧ್ಯ. ಇದನ್ನ Neuroplasticity ಅಂತೀವಿ. ಮೆದುಳು ಪ್ಲಾಸ್ಟಿಕ್ ತರ. ನೀವು ಹೊಸದನ್ನ ಕಲಿತಾಗ ಬ್ರೈನ್ ನಲ್ಲಿ ಹೊಸ "ರಸ್ತೆ" build ಆಗುತ್ತೆ. ಅದನ್ನ ಪದೇ ಪದೇ ಪ್ರಾಕ್ಟೀಸ್ ಮಾಡಿದಾಗ ಅದು "ಹೈವೆ" ಆಗುತ್ತೆ. ಇದನ್ನೇ Cognitive Reserve ಅಂತಾರೆ. 35 ವರ್ಷದ ನಂತರ ಪ್ರತಿ ವರ್ಷ 2% ಬ್ರೈನ್ ಗಾತ್ರ ಕುಗ್ಗೋದು natural. ಆದರೆ ಇದನ್ನ ನಾವು ಮುಂದೂಡಬಹುದು.

ಬ್ರೈನ್ ಶಾರ್ಪ್ ಮಾಡೋ 7 ಸೈಂಟಿಫಿಕ್ ಟಿಪ್ಸ್ - ಬ್ರೈನ್ ಜಿಮ್

1. ಬೆವರು ಹರಿಸಿ - Physical Exercise

ವಾಕಿಂಗ್, ರನ್ನಿಂಗ್, ಜಿಮ್ ಏನಾದ್ರೂ ಮಾಡಿ. ಹಾರ್ಟ್ ಫಾಸ್ಟ್ ಪಂಪ್ ಮಾಡಿದಾಗ BDNF - Brain Derived Neurotrophic Factor ರಿಲೀಸ್ ಆಗುತ್ತೆ. ಇದನ್ನ ಬ್ರೈನ್ ನ "Miracle Growth Factor" ಅಂತಾರೆ. Heavy weight ಬೇಡ. Systematic ವಾಕಿಂಗ್ ಸಾಕು.

2. BP, Sugar, Cholesterol ಕಂಟ್ರೋಲ್ ಮಾಡಿ

ಹೈ BP ಇದ್ರೆ Vascular Dementia ಬರುತ್ತೆ. Sugar ಜಾಸ್ತಿ ಇದ್ರೆ ರಕ್ತನಾಳ ಡ್ಯಾಮೇಜ್. LDL ಜಾಸ್ತಿ ಇದ್ರೆ ಬ್ರೈನ್ ಸ್ಟ್ರೋಕ್ ರಿಸ್ಕ್.

3. ಮೆಡಿಟರೇನಿಯನ್ ಡಯಟ್ ಫಾಲೋ ಮಾಡಿ

  • ಪ್ಲಾಂಟ್ ಬೇಸ್ಡ್: ಫ್ರೆಶ್ ತರಕಾರಿ, ಹಣ್ಣು, ಕಾಳು, ಸಿರಿಧಾನ್ಯ
  • ಒಮೆಗಾ-3: ಮೀನು, ವಾಲ್ನಟ್, ಚಿಯಾ ಸೀಡ್ಸ್
  • ಆಂಟಿ-ಆಕ್ಸಿಡೆಂಟ್: ಬೆರಿ ಹಣ್ಣು, ಪಾಲಕ್, ಬ್ರೋಕೋಲಿ

4. ಬ್ರೈನ್ ಗೆ ವರ್ಕೌಟ್ ಕೊಡಿ

ಸುಡೋಕು, ಚೆಸ್, ಹೊಸ ಭಾಷೆ, ಪುಸ್ತಕ ಓದೋದು. Non-fiction ಜಾಸ್ತಿ ಓದಿ. ಡೌಟ್ ಬಂದ್ರೆ Research ಮಾಡಿ.

5. Social Connection ಇಟ್ಕೊಳ್ಳಿ

ಒಂಟಿಯಾಗಿ ಇದ್ರೆ ಕಾರ್ಟಿಸೋಲ್ ಹೆಚ್ಚಾಗುತ್ತೆ. ಫ್ರೆಂಡ್ಸ್ ಜೊತೆ ನಕ್ಕಾಗ Oxytocin + Endorphins ನರಗಳಿಗೆ ರಿಪೇರಿ ಮಾಡುತ್ತೆ.

6. ಸರಿಯಾದ ನಿದ್ದೆ - ಟಾಕ್ಸಿನ್ ಕ್ಲೀನಿಂಗ್

ಗಾಢ ನಿದ್ದೆಯಲ್ಲಿದ್ದಾಗ Glymphatic System ಆಕ್ಟಿವ್ ಆಗಿ ಟಾಕ್ಸಿನ್ ಮತ್ತು Amyloid Beta wash ಮಾಡುತ್ತೆ. 7-8 ಗಂಟೆ ನಿದ್ದೆ ಕಡ್ಡಾಯ.

7. ಹೆಲ್ಮೆಟ್ + ಸೀಟ್ ಬೆಲ್ಟ್

ತಲೆಗೆ ಸಣ್ಣ ಪೆಟ್ಟಾದ್ರೂ Alzheimer risk. ಬೈಕ್ ಗೆ ಹೆಲ್ಮೆಟ್, ಕಾರಿಗೆ ಸೀಟ್ ಬೆಲ್ಟ್ must.

ನಿಮ್ಮ ಮೆದುಳು ಮತ್ತು ಆರ್ಥಿಕ ಸುರಕ್ಷತೆ

ಟರ್ಮ್ ಇನ್ಶೂರೆನ್ಸ್: ತಿಂಗಳಿಗೆ ₹400-₹600 ರಲ್ಲಿ ₹1 ಕೋಟಿ ಕವರೇಜ್. ದುಡಿಯೋ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಹೋದ್ರೆ ಫ್ಯಾಮಿಲಿಗೆ Lumpsum Amount.
ಹೆಲ್ತ್ ಇನ್ಶೂರೆನ್ಸ್: ತಿಂಗಳಿಗೆ ₹600-₹700 ರಲ್ಲಿ ₹10 ಲಕ್ಷ ಕವರೇಜ್. Hospital ಹೋದಾಗ Savings ಹೋಗೋ ಭಯ ಇರಲ್ಲ.

FAQ - ಸಾಮಾನ್ಯ ಪ್ರಶ್ನೆಗಳು

Q1. ದಿನಕ್ಕೆ ಎಷ್ಟು ಗಂಟೆ ಮೊಬೈಲ್ use ಮಾಡಿದ್ರೆ ಬ್ರೈನ್ ಗೆ ಹಾನಿ?
A: 2 ಗಂಟೆಗಿಂತ ಜಾಸ್ತಿ ಆದ್ರೆ ಹಾನಿ ಶುರುವಾಗುತ್ತೆ. Night 2 ಗಂಟೆ ಮುಂಚೆ screen off ಮಾಡಿ.

Q2. ಬ್ರೈನ್ ಗೆ ಬೆಸ್ಟ್ ಫುಡ್ ಯಾವುದು?
A: ಮೆಡಿಟರೇನಿಯನ್ ಡಯಟ್. ವಾಲ್ನಟ್, ಮೀನು, ಬೆರಿ ಹಣ್ಣು, ಪಾಲಕ್. ಜಂಕ್ ಫುಡ್ ಕಡಿಮೆ ಮಾಡಿ.

Q3. ಯಂಗ್ ಏಜ್ನಲ್ಲೇ ಮೆಮೊರಿ ಕಮ್ಮಿ ಆಗೋಕೆ ಕಾರಣ ಏನು?
A: ಸ್ಟ್ರೆಸ್, ನಿದ್ದೆ ಇಲ್ಲದಿರುವುದು, Doom Scrolling ಮತ್ತು Physical Activity ಇಲ್ಲದಿರುವುದು.

Q4. BDNF ಅಂದ್ರೆ ಏನು?
A: BDNF ಎನ್ನುವುದು ಬ್ರೈನ್ ನ Growth Hormone. Exercise ಮಾಡಿದಾಗ ಇದು ಹೆಚ್ಚಾಗುತ್ತೆ.

Q5. ಎಷ್ಟು ಹೊತ್ತಿಗೆ ಮಲಗಿದ್ರೆ ಬ್ರೈನ್ ಚೆನ್ನಾಗಿ clean ಆಗುತ್ತೆ?
A: ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ. ಈ ಸಮಯದಲ್ಲಿ Glymphatic System ಅತಿ ಆಕ್ಟಿವ್.

ನಿಮ್ಮ Screen Time ಎಷ್ಟಿದೆ?

👇 ಕೆಳಗೆ Comment ಮಾಡಿ ತಿಳಿಸಿ. ದಿನಕ್ಕೆ 10-12 ಗಂಟೆ use ಮಾಡೋ ಮಹಾನುಭಾವರು ಇದ್ರೆ ಹೇಳಿ.

Share ಮಾಡಿ: ಈ ಮಾಹಿತಿಯನ್ನ ನಿಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಗೆ Share ಮಾಡಿ.
Follow ಮಾಡಿ: ಇಂತಹ Health Tips ಗಾಗಿ ಮಸ್ತ್ ಮಗ ಚಾನೆಲ್ Subscribe ಮಾಡಿ.

ಇದನ್ನೂ ಓದಿ:

ನಿದ್ದೆ ಇಲ್ಲದಿದ್ರೆ ಬ್ರೈನ್ ಗೆ ಏನಾಗುತ್ತೆ? - Glymphatic System ಬಗ್ಗೆ ಸಂಪೂರ್ಣ ಮಾಹಿತಿ

Disclaimer: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಆರೋಗ್ಯ ಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳ ಆಧಾರದ ಮೇಲೆ ನೀಡಲಾಗಿದೆ. ಇದು ಯಾವುದೇ ವೈದ್ಯರ ಸಲಹೆಗೆ ಪರ್ಯಾಯವಲ್ಲ. ಇನ್ಶೂರೆನ್ಸ್ ಮಾಹಿತಿಯು ಮಾರುಕಟ್ಟೆ ಆಧಾರಿತವಾಗಿದ್ದು, Policy ತೆಗೆದುಕೊಳ್ಳುವ ಮೊದಲು ಎಲ್ಲಾ Terms & Conditions ಓದಿ.