ಮಳೆ ಎಂಬ ಹನಿ ಹನಿ ನೀರಿಗಾಗಿ ಪ್ರತಿಯೊಬ್ಬರು ಹಂಬಲ



ಮಳೆಯೆಂಬ ಚಿಂಚನ ಮೂಡುವಂತಾಗಲಿ. ಬಿಸಿಲಿನ ಝಳಕ್ಕೆ ಅಕ್ಷರಶಃ ಜನರು ಹೈರಾಣರಾಗಿದ್ದಾರೆ, ಅಂತ ಹೇಳಬಹುದು. ಮಳೆ ಎಂಬ ಹನಿ ಹನಿ ನೀರಿಗಾಗಿ ಪ್ರತಿಯೊಬ್ಬರು ಹಂಬಲಿಸಿದ್ದಾರೆ. ಒಂದು ವರ್ಷಕ್ಕೆ ಸುರಿಯಬೇಕಿದ್ದ ಮಳೆ. ಒಂದೇ ದಿನದಲ್ಲಿ ಸುರಿದು ಬಿಡುತ್ತಂತೆ. ಆದರೆ ಮಳೆಯ ಆಗಮಾನ ನಿರ್ಗಮನ ಬಗ್ಗೆ ವಿಜ್ಞಾನಿಗಳಿಗೂ ಮಂಡೆ ಬಿಸಿಯಾಗಿದೆ. ಎಲ್ಲೆಲ್ಲೂ ಮಳೆ ಮಾಪನ ಸ್ಯಾಟಲೈಟ್ ಅಳವಡಿಸಿದ್ದಾರೆ. ಆ ಎಲ್ಲ ಮಳೆ ಮುನ್ಸೂಚನೆ ಹುಸಿಯಾಗಿದೆ. ಆದರೆ ಒಂದು ಮಾತ್ರ ನಿಜ ಮಳೆ ಬಂದೇ ಬರುತ್ತದೆ. ಮನುಷ್ಯನ ಮನಸ್ಥಿತಿ ಈಗ ಬಿಸಿಲಿನ ಬೇಗೆ ಸಾಕು ಮಳೆ ಬೇಕು ಎಂಬಂತಿದೆ. ಪ್ರಕೃತಿ ಕಾಲಕಾಲಕ್ಕೆ ಅಂದ್ರೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲಿ ಏನೋ ಪ್ರಭಾವ ಬೀರಬೇಕು. ಅದನ್ನು ಖಂಡಿತ ಬಿರುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ತಡವಾಗಿ ಬೀರಬಹುದು.

ಪ್ರಕೃತಿ ಮತ್ತು ಧಾರ್ಮಿಕ ನಂಬಿಕೆಗೆ ಸ್ಪಷ್ಟವಾದ ಸಂಪರ್ಕ ಕೊಂಡಿಯಿದೆ. ಮಳೆ ತಡವಾಗಿದ್ದರೂ ತನ್ನ ಪ್ರಭಾವ ಬೀರುವುದು ಖಚಿತ. ಹೀಗೆ ಸುಮಾರು 4-5 ತಿಂಗಳಿಂದ ಬಿಸಿಲಿನ ಝಳಕ್ಕೆ ಅಕ್ಷರಶಃ ಬಸವಳಿದಿರುವ ಜನರ ಕೂಗಿಗೆ ವರುಣ ಕೃಪೆ ತೋರುವಂತಾಗಲಿ. ಭೂಮಿ, ಅಗ್ನಿ, ವಾಯು, ಜಲ, ಆಕಾಶ ಎಂಬ ಐದು ಪಂಚಭೂತಗಳು ದೇವರೆಂದು ಪೂಜಿಸುತ್ತಾರೆ. ಜ್ಯೋತಿಷ್ಯದಲ್ಲಿ ನವಗ್ರಹಗಳಿಗೆ ಎಷ್ಟು ಮಹತ್ವವಿದೆ. ಅಷ್ಟೇ ಮಹತ್ವ ಪಂಚಭೂತಗಳಿಗೂ ಇದೆ. ಬಿಸಿಲಿನ ಝಳಕ್ಕೆ ಬಸವಳಿದ ನಾಡಿನ ಜನಕ್ಕೆ ಮಳೆಯೆಂಬ ಚಿಂಚನ ಮೂಡುವಂತಾಗಲಿ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords