ನಿಗಮ ಮಂಡಳಿ ಕೇಂದ್ರದ ರಾಜ್ಯ ಮಂತ್ರಿ ಖಾತೆ ಇದ್ದಂತೆ ನಿಯಮ ಎಲ್ಲ ಒಂದೇ

ಕೆಲವು ನೀತಿ ನಿಯಮಗಳು ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಶೇ.15 ರಷ್ಟು ಮಾತ್ರ ಮಂತ್ರಿ ಮಂಡಲ ರಚಿಸಬೇಕು ಎಂಬ ನಿಯಮವಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ 34 ಜನ ಮಂತ್ರಿಯಾಗಬಹುದು. ಕರ್ನಾಟಕ ರಾಜ್ಯದ ಉತ್ತರ ಭಾಗ 97 ವಿಧಾನಸಭಾ ಕ್ಷೇತ್ರಗಳಿಗೆ 14 ಜನ. ದಕ್ಷಿಣ ಭಾಗದ 127 ವಿಧಾನಸಭಾ ಕ್ಷೇತ್ರಗಳಿಗೆ 19 ಜನ. ಬೆಂಗಳೂರಿನ 28 ಕ್ಷೇತ್ರಗಳಿಗೆ 4 ಜನ ಮಾತ್ರ ಮಂತ್ರಿಯಾಗಬಹುದು. ಕನಿಷ್ಠ 7 ವಿಧಾನಸಭಾ ಕ್ಷೇತ್ರ ಇರುವ ಜಿಲ್ಲೆಗಳು ಒಬ್ಬರು ಮಾತ್ರ ಮಂತ್ರಿಯಾಗಬಹುದು. ರೂಲ್ಸ್ ಎಲ್ಲಾ ಕಡೆ ಒಂದೇ. ಕೇಂದ್ರದಲ್ಲಿ ಕೇಂದ್ರ ಖಾತೆ ರಾಜ್ಯ ಖಾತೆ ಮಂತ್ರಿ ಅಂತ ಇದೆ. ರಾಜ್ಯದಲ್ಲಿ ರಾಜ್ಯ ಮಂತ್ರಿ, ನಿಗಮ ಮಂಡಳಿ ಅಂತ ಇದೆ. ಅಸಮಾಧಾತರನ್ನು ನಿಗಮ ಮಂಡಳಿಗೆ ಸೀಮಿತಗೊಳಿಸಬೇಕು. ಇದರಿಂದ ಎಲ್ಲರಿಗೂ ಮಂತ್ರಿ ಸ್ಥಾನ ಲಭ್ಯವಿರುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಿಗಮ ಮಂಡಳಿ ಆಯಾ ಇಲಾಖೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ನಿಗಮ ಮಂಡಳಿ ಹೆಸರು ಜಿಲ್ಲಾ ಮಂತ್ರಿ ಎಂದಾದರೆ ಚೆಂದ.
ಹೊಸ ಸಚಿವರು ಕಾರ್ಯಪ್ರವೃತ್ತರಾಗಲಿ
ಒಂದು ಸ್ಪಷ್ಟವಾಗಿರಲಿ ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯಲ್ಲ. ಇಡೀ ರಾಜ್ಯ ಮಂತ್ರಿ ಎಂದು. ಕೆಲವರು ತಮ್ಮ ಉಸ್ತುವಾರಿ ಜಿಲ್ಲೆ ಬಿಟ್ಟು ಎಲ್ಲೆಲಿಯೋ ಓಡಾಡುವುದಿಲ್ಲ. ಎಲ್ಲ ಕಡೆ ಓಡಾಡಬೇಕು. ತಿಂಗಳಲ್ಲಿ ಕನಿಷ್ಠ 3 ಜಿಲ್ಲೆಯಾದರೂ ಓಡಾಡಬೇಕು. ಉತ್ತರ ಭಾಗದ ಸಚಿವರು ದಕ್ಷಿಣದಲ್ಲಿ ಒಂದು ದಿನ ಮೊದಲೇ ವಾಸ್ತವ್ಯ ಹೂಡಿ ಪ್ರವಾಸ ಕೈಗೊಳ್ಳಬೇಕು. ದಕ್ಷಿಣ ಭಾಗದ ಸಚಿವರು ಉತ್ತರದಲ್ಲಿ ಒಂದು ದಿನ ಮೊದಲೇ ವಾಸ್ತವ್ಯ ಹೂಡಿ ಪ್ರವಾಸ ಕೈಗೊಳ್ಳಬೇಕು. ಇದರಿಂದ ಗಡಿಬಿಡಿಯಾಗುವುದಿಲ್ಲ. ಆಗ ಬಂದು ಆಗ ಹೋಗೋಕೆ ಸ್ಥಳಗಳು 200-300 ಕಿ.ಮೀ ಅಂತರವಿಲ್ಲ. 400-800 ಕಿ.ಮೀ ದೂರವಿದೆ. ಒಟ್ಟಿನಲ್ಲಿ ಹೊಸ ಸಚಿವರಿಗೆ ಅಭಿನಂದನೆಗಳು.
ವೀರೇಶ ಧೂಪದಮಠ