ವಾಯುವ್ಯ ಸಾರಿಗೆ ಸಂಸ್ಥೆ ಮರುನಾಮಕರಣ ಪ್ರಕ್ರಿಯೆ ಕೈಬಿಡಿ

ವಾಯುವ್ಯ ಸಾರಿಗೆ ಸಂಸ್ಥೆ ಮರುನಾಮಕರಣ ಪ್ರಕ್ರಿಯೆ ಕೈಬಿಡಿ

ಕರ್ನಾಟಕ ಎಂಬ ಪದ ತೆಗೆದುಹಾಕಿ ರಾಜ್ಯ ಸರ್ಕಾರ ಏನು ಸಾಧನೆ ಮಾಡಲು ಹೊರಟಿದೆ ಎಂಬುದೇ ತಿಳಿಯುತ್ತಿಲ್ಲ. ಬೆಳಗಾವಿ ಮೂಲದ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೇಡಿಕೆ ಕೊಟ್ಟಿದೆ ಎಂದ ತಕ್ಷಣ ಮರುನಾಮಕರಣಕ್ಕೆ ಕೈ ಹಾಕಬಾರದು. ಮೊದಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಬೇಕು. ರಾಜ್ಯ ಸರ್ಕಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಲ್ಲ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ. ಕಿತ್ತೂರು, ಬೈಲಹೊಂಗಲ ಸೇರಿ 283 ಹಳ್ಳಿಗಳು ಮಾತ್ರ ಕಿತ್ತೂರು ಸಂಸ್ಥಾನದ ಭಾಗವಾಗಿದ್ದವು. ಇನ್ನುಳಿದ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೊಟೆ ಜಿಲ್ಲೆಗಳು ಕಿತ್ತೂರು ಸಂಸ್ಥಾನದ ಭಾಗವಲ್ಲ. ಹೀಗಿರುವಾಗ ಕಿತ್ತೂರು ಕರ್ನಾಟಕ ಅಂತ ಹೇಗಾಗುತ್ತದೆ. ಇದರ ಸಾರಿಗೆ ಸಂಸ್ಥೆಯ ಮರುನಾಮಕರಣವು ಅಗತ್ಯವಿಲ್ಲ. ಯಾರನ್ನೂ ಮೆಚ್ಚಿಸಲು ಹೋಗಿ, ಕರ್ನಾಟಕ ಪದವೇ ಇಲ್ಲದ ಮರುನಾಮಕರಣ ಬೇಕೆ?. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಹಾನಿಯುಂಟು ಮಾಡಬಹುದು ವಿನಃ ಯಾವುದೇ ಲಾಭವಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರ ನಾಯಕರಾದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಪ್ರವೇಶಿಸಿ ಮರುನಾಮಕರಣ ಪ್ರಕ್ರಿಯೆ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮರುನಾಮಕರಣಕ್ಕೆ 10 ಕೋಟಿಗೂ ಅಧಿಕ ಹಣ‌ ಖರ್ಚಾಗುತ್ತದೆ. ಇದೇ ಹಣವನ್ನು ಬರಗಾಲದಿಂದ ಕಂಗಾಲಾದ್ದ ರೈತರಿಗೆ ಖಾತೆಗೆ ಹಾಕಿ ಅದನ್ನು ಬಿಟ್ಟು ಮೊದಲೇ ಸಾರಿಗೆ ಸಂಸ್ಥೆ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯ ಖಜಾನೆಯಿಂದ ಹಣ ಬಳಕೆಗೆ, ಇಷ್ಟೊಂದು ಖರ್ಚು ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜನರ ವಿರೋಧ ದಿನದಿನಕ್ಕೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗಲ್ಲ. ರಾಜ್ಯ ಸರ್ಕಾರ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮರುನಾಮಕರಣ ಕೈಬಿಡುವುದು ಸೂಕ್ತ.

ವೀರೇಶ ಧೂಪದಮಠ
Related High CPC Keywords