ಕೆಲವರ ಆಕ್ರೋಶ ಭರಿತ ಹೇಳಿಕೆಯನ್ನು ಸಮಾಧಾನಕರ ಹೇಳಿಕೆಯನ್ನಾಗಿ ತಿದ್ದಿ, ತಿಡಿ ಪತ್ರಿಕೆ ಸಂಪಾದಕರು ಸರಿಪಡಿಸುತ್ತಾರೆ. ಆದರೆ ದೃಶ್ಯ ಮಾಧ್ಯಮದಲ್ಲಿ ಮಾತ್ರ ನೇರವಾಗಿ ಮಾತನಾಡಿದು ಪ್ರಸಾರವಾಗುವುದರಿಂದ ಕೆಲವು ಆಕ್ರೋಶ ಭರಿತ ಹೇಳಿಕೆ ನೀಡಿದ ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಕರಣಗಳು ಸಾಕಷ್ಟಿವೇ. ಮಾನನಷ್ಟ ಮೊಕದ್ದಮೆ ನ್ಯಾಯಾಲಯಕ್ಕೆ ಹೋಗಿ, ದಂಡ ಕಟ್ಟಿಯೋ, ಕ್ಷೇಮಾಪಣೆ ಕೇಳಿಯೋ ಮುಗಿದು ಬಿಡುತ್ತದೆ. ಆದರೆ ಮಾನನಷ್ಟ ಮೊಕದ್ದಮೆ ಹೂಡಿದ ತಕ್ಷಣ ಯಾರ ಯಾರ ಸಂವಹನ, ವಾಕ್ ಸ್ವಾತಂತ್ರ‍್ಯ ನಿಲ್ಲುವುದಿಲ್ಲ ಅವರ ಅವರ ಜೊತೆ ಸಂವಹನ ಮೂಲಕ ದೈನಂದಿನ ಚಟುವಟಿಕೆಯಲ್ಲಿ ತೊಡಗುತ್ತಾರೆ. ಒಂದುವೇಳೆ ಸಂವಹನವನ್ನು ನಿಲ್ಲಿಸಿದರೇ, ಯಾವುದೇ ಕಾರ್ಯಚಟುವಟಿಕೆಗಳು ನಡೆಯುವುದೇ ಇಲ್ಲ.
ಯಾರೇ ಆದರೂ ಹೇಳಿಕೆ ನೀಡುವುದು ತಪ್ಪಲ್ಲ ಅದು ಸತ್ಯವೋ ಸುಳ್ಳೋ ಎಂಬುವುದನ್ನು ಕೂಲಂಕುಶವಾಗಿ ಪರಿಶೀಲಿಸಿ ಹೇಳಿಕೆ ನೀಡುವುದು ಸಂವಹನದ ಮೂಲ ಉದ್ದೇಶವಾಗಿದೆ.
ಸಾಮಾನ್ಯ ವ್ಯಕ್ತಿ ಹೇಳಿಕೆಗೆ ಇಲ್ಲ ಮನ್ನಣೆ
ಸಾಮಾನ್ಯ ವ್ಯಕ್ತಿ ಹೇಳಿಕೆಗಿಂತ ಪ್ರಧಾನಮಂತ್ರಿಗಳು ಹೇಳಿಕೆ ಹೆಚ್ಚು ಪ್ರಭಾವ ಬಿಳುತ್ತದೆ. ಪ್ರಧಾನಮಂತ್ರಿಗಳು ನಿಮ್ಮ ನಿಮ್ಮ ಊರನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಿ ಎಂದರೇ, ಜನ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡುತ್ತಾರೆ. ಇದೇ ಮಾತು ಸಾಮಾನ್ಯ ವ್ಯಕ್ತಿ ಹೇಳಿದ್ರೇ, ತಲೆ ಸರಿ ಇಲ್ವಾ ನಿನಗೆ ಎಂಬ ಪ್ರಶ್ನೆ ಜನ ಮಾಡ್ತಾರೆ. ಅದೇ ರೀತಿ ಪ್ರಧಾನಮಂತ್ರಿಗಳು ಯಾರು ಹೆಸರನ್ನು ಹೇಳದೇ, ಲೇವಡಿ ಮಾಡಿದ್ರೂ ಪ್ರಧಾನಮಂತ್ರಿಗಳು ಇವರನ್ನೇ ಟೀಕಿಸಿದರು ಎಂದು ವರದಿ ಪ್ರಸಾರವಾಗುವುದುಂಟು, ಈ ತರ ಪ್ರಧಾನಮಂತ್ರಿಗಳು ಯಾರ ಹೆಸರನ್ನು ನೇರವಾಗಿ ಹೇಳದೇ, ಈ ತರ ಹೇಳಿಕೆಯ ಉದಾಹರಣೆ ಎಂದರೇ ಬೆಂಗಳೂರು ಗ್ರಾಮಾಂತರ ಮಾಜಿ ಸಂಸದರ ಸೋಲಿಗೂ ಒಂದು ಕಾರಣವಾಯಿತು.
ಈಗ ಸಂಸದನಾಗಿ ಸೋತರು ಮನಸ್ಸು ಮಾಡಿ ಮುಂದೆ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಗೆ ಸ್ಪರ್ಧಿಸಿ, ಗೆದ್ದು ಶಾಸಕರಾಗಬಹುದು ಅದು ಬೇರೆ ವಿಷ್ಯ. ವ್ಯಕ್ತಿಗಿಂತ ಪ್ರಧಾನಮಂತ್ರಿ ಎಂಬ ಗೌರವದ ಹುದ್ದೆಗೆ ಬಹಳ ಬಹುಮುಖ್ಯ ಪ್ರಾಮುಖ್ಯತೆ ಸಿಗುತ್ತದೆ. ಗೌರವನ್ವಿತ ಹುದ್ದೆ ಸಹ ಸಂವಹನ ಬಯಸುತ್ತದೆ. ಯಾವುದೇ ಗೌರವನ್ವಿತ ಹುದ್ದೆಯಿಂದ ಮಾಜಿಯಾದ ವ್ಯಕ್ತಿ ಹೇಳಿಕೆ ಪ್ರಾಮುಖ್ಯತೆ ಕ್ಷೀಣಿಸುತ್ತದೆ. ಆದ್ದರಿಂದ ಯಾವುದೇ ಕೆಲಸ, ಕಾರ್ಯಗಳು ಸ್ಥಗಿತಗೊಳ್ಳಬಹುದು ಆದರೆ ಸಂವಹನ ತಡೆರಹಿತವಾಗಿರುತ್ತದೆ ಸ್ಥಗಿತಗೊಳ್ಳುವುದಿಲ್ಲ. ಇದು ರಾಜಕಾರಣಿಗಳಿಗೆ ಮನವರಿಕೆಯಾಗಲಿ ಎಂಬ ಸದುದ್ದೇಶವಾಗಿದೆ.
ವೀರೇಶ ಧೂಪದಮಠ
