ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಸಾರಿಗೆಗೆ ಪ್ರಥಮ ಹಕ್ಕು












ಹುಬ್ಬಳ್ಳಿ: ಹಳೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಇನ್ನು ಕೆಲ ಕಾಮಗಾರಿ ಬಾಕಿ ಇರುವ ಕಾರಣ ಹಸ್ತಾಂತರಿಸಿಲ್ಲ. ಹಸ್ತಾಂತರಿಸಿದ ಬಳಿಕ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ ಆದರೆ ಬಸ್ ನಿಲ್ದಾಣಕ್ಕೆ ನಗರ ಮತ್ತು ಉಪನಗರ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ. ಅತಿ ಹೆಚ್ಚು ಜನ ಬರುವುದು ಹಳ್ಳಿ ಭಾಗದಿಂದ ಮೊದಲಿನಿಂದಲೂ ಹಳೆ ಬಸ್ ನಿಲ್ದಾಣದಲ್ಲಿ ಉಪನಗರ, ಗ್ರಾಮೀಣ ಭಾಗದ ಬಸ್ ನಿಲ್ದಾಣವಾಗಿತ್ತು. ನಗರ ಬಸ್ ನಿಲ್ದಾಣ ಈಗಾಗಲೇ ದುರ್ಗದಬೈಲ್‌ನಲ್ಲಿರುವ ಸಿಬಿಟಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ ನಗರ ಬಸ್ ನಿಲ್ದಾಣಕ್ಕೆ ಎರಡೇ ಎರಡು ಬಸ್ ನಿಲ್ದಾಣ ಏಕೆ? ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ಬಸ್ ನಿಲ್ದಾಣದಲ್ಲಿ ತಾಲೂಕು, ಜಿಲ್ಲಾ ಕೇಂದ್ರ ಸಂಪರ್ಕಿಸುವ ವೇಗದೂತ ಬಸ್ ಸಂಚಾರ ಮಾಡುತ್ತವೆ.

ಇವುಗಳು ಎಂದಿನಂತೆ ಸಂಚಾರ ಇರಲಿ. ನೂತನವಾಗಿ ಉದ್ಘಾಟನೆಗೊಂಡ ಹಳೆ ಬಸ್ ನಿಲ್ದಾಣದಲ್ಲಿ ಉಪನಗರ ಮತ್ತು ಗ್ರಾಮೀಣ ಬಸ್‌ಗಳಿಗೆ ಮಾತ್ರ ಅವಕಾಶ ನೀಡಬೇಕು. ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಕಂಪನಿ ಬಸ್ ನಿಲ್ದಾಣ ಹಸ್ತಾಂತರ ಮಾಡಿದ ಬಳಿಕ ಉಪನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಎಂದು ಹೆಸರಿಟ್ಟು ಸಂಚರಿಸಲು ಅವಕಾಶ ನೀಡಬೇಕು. ನಗರ ಬಸ್‌ಗಳು ಯಥಾಪ್ರಕಾರ ಸಿಬಿಟಿ ಬಸ್ ನಿಲ್ದಾಣದಿಂದ ಬಂದು ಹಳೆ ಬಸ್ ನಿಲ್ದಾಣದಲ್ಲಿ ಹಾಗೆಯೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡಲಿ. ವೇಗದೂತ ಬಸ್ ಸೇರಿದಂತೆ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರದ ಬಸ್‌ಗಳು ಗೋಕುಲ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣದಿಂದ ಸಂಚಾರಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮವಹಿಸಬೇಕು. ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ಉಪನಗರ ಮತ್ತು ಗ್ರಾಮೀಣ ಬಸ್‌ಗಳಿಗೆ ಮೀಸಲಿಟ್ಟು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಬೇಕಿದೆ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords