ಜಾತಿಗಣತಿ ಸೇರಿದಂತೆ ಸರ್ಕಾರ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳೆಲ್ಲ ಕಾಯ್ದೆ-ಕಾನೂನಿನ ಪ್ರಕಾರ ಜಾರಿ ಮಾಡಲು ಬಂದ್ರೇ ಮಾಡಿ ಬಿಡಿ, ಸಮಯವನ್ನು ವ್ಯರ್ಥ ಮಾಡುವುದು ಬೇಡ. ಜಾತಿಗಣತಿ ವಿರೋಧ ಮಾಡುವರ ಪ್ರಶ್ನೆ ಏನಂದರೆ ತಮ್ಮ ಪಂಥದಲ್ಲಿ ಬರುವ ಜಾತಿ, ಸಮುದಾಯದ ಜನಸಂಖ್ಯೆ ಅಂಕಿ ಸಂಖ್ಯೆಯಲ್ಲಿ ಕಡಿಮೆ ತೋರಿಸುತ್ತಿದೆ ಮತ್ತು ಆಯಾ ಪಂಥದಲ್ಲಿ ಬರುವ ಜಾತಿಗಳನ್ನು ಬೇರೆ ಪಂಥದ ಕಡೆ ಸ್ಥಳಾಂತರ ಅಥವಾ ಪ್ರತ್ಯೇಕವಾಗಿ ಮಾಡಲಾಗಿದೆ ಎಂಬ ವಾದ. ಸದ್ಯದ ಮಟ್ಟಿಗೆ ಈಗಿರುವ ಜಾತಿ ಗಣತಿ ಜಾರಿಗೆ ತಂದು ಮುಂದಿನ ದಿನಮಾನಗಳಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸಬೇಕು. ಈಗಿರುವ ಹಳೆ ಜಾತಿಗಣತಿ ಶಾಲಾ ಶಿಕ್ಷಕರಿಂದ ತಯಾರಿಸಲಾಗಿದೆ.
ಸ್ಥಳೀಯರಲ್ಲದ ಶಾಲಾ ಶಿಕ್ಷಕರು ಜನಸಂಖ್ಯೆ ಗಣತಿ ಮಾಡಬಹುದು ಹೊರತು ಜಾತಿಗಣತಿ ಮಾಡಲು ಯೋಗ್ಯರಲ್ಲ. ಸದ್ಯದ ಮಟ್ಟಿಗೆ ಈಗ ಇರುವ ಜಾತಿಗಣತಿ ಜಾರಿಗೆ ತಂದು ಕೆಲವು ತಿಂಗಳು ಬಳಿಕ ಮತ್ತೊಮ್ಮೆ ಸ್ಥಳೀಯರಾದ ಆಶಾ ಕಾರ್ಯಕರ್ತೆಯರಿಂದ ಜಾತಿ ಗಣತಿ ತಯಾರಿಸಿದರೇ ಸರ್ಕಾರಕ್ಕೆ ಸರಿಯಾದ ಮಾಹಿತಿ ಲಭ್ಯವಾಗಲಿದೆ. ಆಶಾ ಕಾರ್ಯಕರ್ತೆಯರು ಸ್ಥಳೀಯರು ಆಗಿರುವುದರಿಂದ ಆಶಾ ಕಾರ್ಯಕರ್ತೆಯರಿಗೆ ಸ್ಥಳೀಯರ ಮಾಹಿತಿ ಸರಿಯಾಗಿ ಗೊತ್ತಿರುವುದರಿಂದ ಮತ್ತು ಈಗಾಗಲೇ ಹಲವು ಬಾರಿ ಸರ್ವೇ ಮಾಡಿದ ಅನುಭವ ಆಶಾ ಕಾರ್ಯಕರ್ತೆಯರಿಗೆ ಇರುತ್ತದೆ. ಇದು ಬೇಡವೆಂದರೇ, ಕೇಂದ್ರ ಸರ್ಕಾರ ಆಧಾರದ ಕಾಡ್‌ನಲ್ಲಿ ಜಾತಿ ಕಾಲಂ ಸೃಷ್ಟಿಸಿ,
ಜನರಿಗೆ ಸ್ವಯಂ ಪ್ರೇರಿತ ಜಾತಿ ಸೇರಿಸಲು ಅವಕಾಶವನ್ನು ನೀಡಬಹುದು. ಒಟ್ಟು ಆಧಾರ ಕಾರ್ಡ್ನಲ್ಲಿ ಒಟ್ಟು ಜಾತಿಯ ಅಂಕಿ ಅಂಶಗಳು ಸೃಷ್ಟವಾಗಿ ತಿಳಿಯಲಿದೆ. ಆದ್ದರಿಂದ ಈಗಿರುವ ಜಾತಿಗಣತಿ ಸರ್ಕಾರ ಕಾಯ್ದೆ-ಕಾನೂನಿನ ಪ್ರಕಾರ ಜಾರಿ ಮಾಡಲು ಅವಕಾಶ ಇದ್ದರೇ ಮಾಡಿ ಬಿಡಿ ಸಮಯ ವ್ಯರ್ಥ ಮಾಡುವುದು ಬೇಡ. ಜನಪ್ರತಿನಿಧಿ, ಅಧಿಕಾರಿ ಸೇರಿದಂತೆ ಯಾರು ಗೋಳಾಡುವುದು ಬೇಡ.
ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಬೇಕಾದ ಅಂಶ
ಬಹುದಿನದ ಬೇಡಿಕೆಯಾದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ, ಬೆಳಗಾವಿ ಜಿಲ್ಲಾ ವಿಭಜಿಸಿ ಹೊಸ ಜಿಲ್ಲಾ ರಚನೆ, ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ, ಪ.ಜಾ ಒಳಮಿಸಲಾತಿ, ಜಾತಿ ಗಣತಿ ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಬಗೆಹರಿಸಬಹುದಾದ ಕೆಲವು ಸಮಸ್ಯೆಯನ್ನು ಬಾಕಿ ಇಡುವ ಬದಲು ಕಾಯ್ದೆ-ಕಾನೂನಿನ ಪ್ರಕಾರ ನ್ಯಾಯಸಮ್ಮತ, ನಿಯಮಾನುಸಾರ ಮಾಡಲು ಬಂದ್ರೇ, ಮಾಡಿಬಿಡಿ ಸಮಯ ವ್ಯರ್ಥ ಪ್ರಯತ್ನ ಮಾಡುವುದು ಬೇಡವೇ ಬೇಡ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಉಪಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಸರ್ಕಾರ ತನ್ನ ನಿರ್ಧಾರ ಕೈಗೊಳ್ಳಬೇಕಾಗಿದೆ.
ವೀರೇಶ ಧೂಪದಮಠ
