ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸುವುದಾದರೇ, ಅಂಗವಿಕಲರ, ವೃದ್ಧರ ಪಿಂಚಣಿ ಏರಿಸಿ


ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪ ಹಿನ್ನಡೆಯಿಂದಾಗಿ ಕೆಲ ಪಕ್ಷದ ಕಾರ್ಯಕರ್ತರು, ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಕೆಲ ವಿರೋಧ ಪಕ್ಷದ ಕಾರ್ಯಕರ್ತರು, ನಾಯಕರು ಕಾಂಗ್ರೆಸ್ ಗ್ಯಾರಂಟಿಯಿಂದ ಅಭಿವೃದ್ಧಿಗಳು ಕುಂಠಿತವಾಗಿದೆ ಎಂದು ಆರೋಪಿಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಅರ್ಹರಿಗೆ ಅಂದರೇ ಬಿಪಿಎಲ್ ಕಾರ್ಡ್ ಗಳ ಫಲಾನುಭವಿಗಳ ಅರ್ಹರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ತಲುಪಿಸುವುದಾದರೇ, ಇನ್ನುಳಿದ ಉಳಿತಾಯದ ಹಣವನ್ನು ಅಂಗವಿಕಲರಿಗೆ, ವೃದ್ಧರಿಗೆ ಪಿಂಚಣಿ ರೂಪದಲ್ಲಿ ನೀಡಬೇಕು ಏಕೆಂದರೆ ಸುಮಾರು ವರ್ಷಗಳ ಕಾಲ ಅಂಗವಿಕಲರ, ವೃದ್ಧರ ಪಿಂಚಣಿ ಮಾಸಿಕ 800 ರೂಪಾಯಿ ಇದ್ದು, ಮತ್ತೇ ಏರಿಕೆಯಾಗಿರುವುದಿಲ್ಲ.

ಈಗಿನ ದಿನಮಾನಗಳಲ್ಲಿ ಸರ್ಕಾರಿ ನೌಕರರ ಸಂಬಳ ಸೇರಿದಂತೆ ಇನ್ನಿತರ ಸಂಬಳ ಏರಿಕೆ ಮಾಡಲು ಸಿದ್ಧತೆ ನಡೆಸುತ್ತಿರುವಾಗ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಅಂಗವಿಕಲರು, ವೃದ್ಧರಿಗೆ ಈಗ ಸರ್ಕಾರ ನೀಡುತ್ತಿರುವ ಪಿಂಚಣಿ ಸಾಕಾಗುತ್ತಿಲ್ಲ. ಒಂದುವೇಳೆ 2000 ರೂ. ಗೃಹಲಕ್ಷ್ಮೀ ಹಣ, ಉಚಿತ ವಿದ್ಯುತ್, ಉಚಿತ ಬಸ್, 3000 ರೂ. ಮತ್ತು 1500 ರೂ. ನಿರುದ್ಯೋಗಿಗಳಿಗೆ ಹಣ ಸೇರಿದಂತೆ ಉಚಿತ ಅಕ್ಕಿ ಹಣವನ್ನು ಸರ್ಕಾರ ಅರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ನೀಡುವುದಾದರೇ, ಇದರಿಂದ ಉಳಿತಾಯವಾದ ಹಣವನ್ನು ಅಂಗವಿಕಲರು, ವೃದ್ಧರಿಗೆ ಮಾಸಿಕ 2000 ರೂ. ನೀಡಿ ಅಂಗವಿಕಲರಿಗೆ, ವೃದ್ಧರಿಗೆ ಆಶ್ರಯವಾಗಬೇಕು. ಶ್ರೀಮಂತರು ಬಸ್ ನಲ್ಲಿ ಪ್ರಯಾಣ ಮಾಡುವುದು ತಪ್ಪುತ್ತದೆ.

ಶ್ರೀಮಂತರು 2000 ರೂ. ಹಣ, ಉಚಿತ ವಿದ್ಯುತ್, ಉಚಿತ ಅಕ್ಕಿ, ಉಚಿತ ಗ್ಯಾರಂಟಿ ಯೋಜನೆಗಳು ಶ್ರೀಮಂತರಿಗೆ ತಪ್ಪಿ, ನಿಜವಾದ ಅರ್ಹ ಬಿಪಿಎಲ್ ಕಾರ್ಡ್ ದಾರರ ಫಲಾನುಭವಿಗಳಾದ ಬಡವರು, ಮಧ್ಯಮ ವರ್ಗದವರಿಗೆ ಉಚಿತ ಗ್ಯಾರಂಟಿ ಯೋಜನೆ ತಲುಪಿಸುವುದರಿಂದ ವಿರೋಧಿಸುವರ ಮನಸ್ಸು ಸಹ ಬದಲಾವಣೆಯಾಗಲಿದೆ. ಆದ್ದರಿಂದ ಅರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆ ತಲುಪಿಸಿ, ಇನ್ನುಳಿದ ಹಣವನ್ನು ಅಂಗವಿಕಲರಿಗೆ, ವೃದ್ಧರಿಗೆ ಮಾಸಿಕ 2000 ರೂ. ನೀಡುವ ಮೂಲಕ ಅಂಗವಿಕಲರಿಗೆ, ವೃದ್ಧರಿಗೆ ರಾಜ್ಯ ಸರ್ಕಾರ ಆಶ್ರಯವಾಗಬೇಕು ಅಲ್ಲದೇ ಎಲ್ಲ ಅಂಗವಿಕಲರು, ವೃದ್ಧರಿಗೆ 2000 ರೂ. ಪಿಂಚಣಿ ನೀಡಿ,

ಒಂದುವೇಳೆ ಇದರಲ್ಲೂ ಹಣ ಉಳಿದರೇ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ಬಳಕೆ ಮಾಡಿ, ಅರ್ಹ ಬಿಪಿಎಲ್ ಕಾರ್ಡ್ ದಾರರ ಕುಟುಂಬಗಳಿಗೆ ಪಂಚ ಗ್ಯಾರಂಟಿ ತಲುಪಿಸಬೇಕಿದೆ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords