ಹುಬ್ಬಳ್ಳಿ ಮತ್ತು ಧಾರವಾಡ ಬೇರೆ-ಬೇರೆ ಮಹಾನಗರ ಪಾಲಿಕೆ ಅಗತ್ಯ ಸರ್ಕಾರ ಕ್ರಮ ತಗೊಳ್ಳಲಿ
ಧಾರವಾಡ ಮತ್ತು ಹುಬ್ಬಳ್ಳಿ ಪ್ರತ್ಯೇಕವಾಗಿ ಮಹಾನಗರ ಪಾಲಿಕೆಯಾಗಿ ಕಾರ್ಯನಿರ್ವಸುವುದರಿಂದ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದಾಗಿದೆ ಎಂದು ಹುಬ್ಬಳ್ಳಿ ಮತ್ತು ಧಾರವಾಡ ಸಾರ್ವಜನಿಕರು ದಿನನಿತ್ಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸರ್ಕಾರದ ನಿಯಮಾನುಸಾರ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗಿ ಆಗಲು ಎಲ್ಲ ಅರ್ಹತೆ ಪಡೆದುಕೊಂಡಿದೆ. ಒಂದುವೇಳೆ ಅರ್ಹತೆಗೆ ಮಾನದಂಡಗಳು ಕಡಿಮೆ ಇದ್ದರೆ ಸದ್ಯದ ಮಟ್ಟಿಗೆ ನಗರಸಭೆಯನ್ನಾಗಿ ಮಾಡಲು ಬಹುತೇಕ ಅರ್ಹತೆ ಪಡೆದಿದ್ದು, ಮುಂದೊಂದು ದಿನ ಕೆಲವು ವರ್ಷಗಳ ನಂತರ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಇವು ಎರಡರಲ್ಲಿ ಒಂದು ನಿರ್ಣಯ ಸರ್ಕಾರ ತೆಗೆದುಕೊಳ್ಳಬೇಕು.
ಒಂದುವೇಳೆ ಸರ್ಕಾರ ಎರಡರಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡರು ನಮ್ಮ ಹುಬ್ಬಳ್ಳಿ ಮತ್ತು ಧಾರವಾಡ ಭಾಗದ ಜನರು ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ಮಾಡಿದ್ದರು ತಕರಾರು, ಅಕ್ಷೇಪಣೆ ಸಲ್ಲಿಸುವುದಿಲ್ಲ. ಪ್ರತ್ಯೇಕ ಮಹಾನಗರ ಪಾಲಿಕೆ ಆಗಲ್ಲ ಅಂತಿದ್ರು ಮಾಡಿದ್ರು ನೋಡು ಅಂತ ಖುಷಿ ಆಗ್ತಾರೆ ಅಷ್ಟೇ. ಹೀಗಾಗಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸಚಿವ ಸಂಪುಟ ಸದಸ್ಯರು ಅಧಿಕಾರಿಗಳು ಬಹುದಿನದ ಬೇಡಿಕೆಯಾದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯವಶ್ಯಕವಾಗಿದ್ದು ಹುಬ್ಬಳ್ಳಿ ಮತ್ತು ಧಾರವಾಡ ಜನರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಒಕ್ಕೊರಲ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕಿದೆ.
ವೀರೇಶ ಧೂಪದಮಠ
