ಚಿಗರಿ ಬಸ್ ಸ್ಟಾಂಡ್ ಜಾಗ ಇರಂಗ್ ಇರಲಿ, ಉಳಿದಿದ್ದ ಕರೆಕ್ಟ್ ನಟ್ ನಡುವ ಎರ್ಡ ಬಸ್ ಹೋಗಂಗ ರೋಡ್ ಬರಲಿ : ಹು-ಧಾ ಮಂದಿ

ಹುಬ್ಬಳ್ಳಿ-ಧಾರವಾಡ ನಡುವ ಓಡಾಡುವ ಚಿಗರಿ ಬಸ್‌ಗೆ ನಾಲ್ಕುರಿಂದ ಐದು ಬಸ್ ಹೋಗುವಷ್ಟು ರೋಡ್ ಮಾಡ್ಯಾರ ಅಲ್ರಿ ರೋಡ್‌ನ್ಯಾಗ ಬರೇ ಚಿಗ್ರಿ ಬಸ್ ಓಡ್ಸಕತ್ರ ಸಾರ್ವಜನಿಕ ವಾಹನಗಳು ಎಲ್ಲಿ ಓಡ್ಯಾಡಬೇಕು ಅವು ಅಂತ ಹುಬ್ಬಳ್ಳಿ-ಧಾರವಾಡ ಮಂದಿ ಸಿಟ್ಟಿಗೆದ್ದರ. ಚಿಗರಿ ಬಸ್ ಆಡ್ಯಾಡುವ ಬಾಜು ಇಕ್ಕಟಾದ ರಸ್ತೆದಾಗ ಫುಲ್ ಟ್ರಾಫಿಕ್ ಇರತೈತಿ, ಅದರಾಗ ಪಾಸ್ ಆಗಬೇಕಂದ್ರ ಹತ್ತಹನ್ನೆಡು ಅಕತಿ ಮತ್ತ ದೊಡ್ಡ ದೊಡ್ಡ ಅನಿ ಗಾತ್ರದ ಗಾಡಿ ಅಡ್ಯಾಡತವು ಈ ಮಧ್ಯ ಪ್ರ ವೇಟ್ ಬಸ್, ಗವರ್ನಮೆಂಟ್ ಆರ್ಡಿನರಿ ಬಸ್ ಅಡ್ಯಾತವು ಇಕ್ಕಟಾದ ರಸ್ತೆದಾಗ.
ಹಿಂಗ್ ಎಲ್ಲವು ಒಂದ್ ದಾರಿಗ ಹೊದ್ರ ಟ್ರಾಫಿಕ್ ಆಕತಿ ರೀ ಅಂತ ಹು-ಧಾ ಮಂದಿ ಪ್ರತಿಭಟನೆ ಮಾಡಿದ್ದ ಸುದ್ದಿ ಬೇಸ್ಯಾ ಆಗಿತ್ ಅದಕ್ಕ ಚಿಗರಿ ಬಸ್ ಸ್ಟಾಂಡ್ ಜಾಗ ಇರಂಗ್ ಇರಲಿ ಬಸ್ಟ್ ಸ್ಟಾಂಡ್ ಬಿಟ್ಟ ಉಳಿದಿದ್ದ ಜಾಗ 9-10 ಮೀಟರ್ ಅಂದ್ರ ಒಂದ ರಸ್ತೆದಾಗ ಎರಡು ಬಸ್ ಹೋಗಂಗ ರಸ್ತೆ ಮಾಡ್ರಿ, ಕರೆಕ್ಟ್ ರಸ್ತೆ ನಟ್ ನಡುವ ಮಾಡಿ, ಬ್ಯಾರಿಕೇಡ್ ಅಜುಬಾಜು ಅಳವಡಿಸಿ ಚಿಗರಿ ಬಸ್ ಓಡಿಸ್ರಿ, ಆಗದ್ರು ನಮ್ಮ ಟ್ರಾಫಿಕ್ ಸಮಸ್ಯೆ ಬಗೆಹರಿತನು ಅಂತ, ಸುಮ್ ಸುಮನ್ ಟ್ರಾಫಿಕ್ ಜಾಮ್ ಮಾಡಿ, ನಮ್ ತಲಿ ಹಾಫ್ ಮಾಡಬೇಡ್ರಿ ನಮ್ದ. ಮೊದ್ಲ ನಾವು ಹುಬ್ಬಳ್ಳಿ-ಧಾರವಾಡ ಮಂದಿ ಅದಿವಿ ಅಂತ ಸಾರ್ವಜನಿಕರು, ವಾಹನ ಸವಾರರು ನಿತ್ಯ ಅಧಿಕಾರಿಗಳಿಗೆ ಸಿಟ್ಟಿಗೆದ್ದ ಬೇಜಾರ ವ್ಯಕ್ತಪಡಿಸ್ತಾರ.
ಆದ್ರೂ ಅಧಿಕಾರಿಗಳ ಸರಿಬಿಡ್ರಿ ಮಾಡೋನು ಅನ್ನುವ ಮಾತ ಬರವಲ್ದು. ನಮ್ ಚಿಗ್ರಿ ಬಸ್ ಡ್ರೈವರ್ ಬಸ್ ಓಡಿಸಾಕ್ ಎಕ್ಸಪರ್ಟ್ ಅದರ 1-2 ಇಂಚಿನ್ಯಾಗ ಬಸ್ ಪಾಸ್ ಮಾಡದು ಗೊತೈತಿ. ಚಿಗ್ರಿ ಬಸಿಂದ ದೌಡಿ ಧಾರವಾಡ-ಹುಬ್ಲಿ ಮುಟ್ಟುತಿವಿ, ಸ್ಪೀಡ್‌ಕಿನಾ ಆರಾಮ ಬಸ್ ಹೊಡಕೊಂಡು ಬರಲಿ. ಈ ಬಸ್ ಹತಿದ್ರ ಜೋಕಾಲಿಗ ಹೊಂಟಿವಿ ಬಿಡು ಆನ್ನಂಗ ಆಕತಿ. ದಿನ 100-90 ಚಿಗರಿ ಬಸ್ ಅಡ್ಯಾಡತವು ಅದಕ್ಕ ಚಿಗ್ರಿ ಬಸ್ ಮಸ್ತ ಐತಿ, ಚಿಗ್ರಿ ಬಸ್‌ಗೆ 9-10 ಮೀಟರ್, ಎರಡು ಬಸ್ ಹೋಗುವಷ್ಪು ದಾರಿ ಸಾಕ್ರಿ. ಬಸ್ ಸ್ಟಾಂಡ್ ಜಾಗ ಎಲೈತಿ ಅಲ್ಲಿ ಇರಲಿ. ಉಳಿದಿದ್ದ ಕರೆಕ್ಟ್ ನಟ್ ನಡುವ 9-10 ಮೀಟರ್ ರಸ್ತೆ ಆಗಲ್ ಮಾಡಿ ಅಜುಬಾಜು ಬ್ಯಾರಿಕೇಡ್ ಅಳವಡಿಸಿ, ಎರ್ಡ ಬಸ್ ಹೋಗುವಷ್ಟು ದಾರಿ ಮಾಡ್ರಿ ಸಾಕ್,
ನಾಲ್ಕು-ಐದು ಬಸ್ ಹೋಗುವಷ್ಟು ದಾರಿ ಬ್ಯಾಡ ಅಂತ ಕೆಲ ಮಂದಿ ಸಾರ್ವಜನಿಕ ಸ್ಥಳದಾಗ ಅಭಿಪ್ರಾಯ ವ್ಯಕ್ತಪಡಿಸಿದ್ದ ಗಮನಕ್ಕ ಬಂತ ಅಧಿಕಾರಿಗಳು-ಜನಪ್ರತಿನಿಧಿಗಳು ಸಭೆ ಮಾಡಿ ಒಂದ್ ನಿರ್ಣಯಕ ಬರ್ರಿ ಅಲ್ಲ ಅಂತ ಹುಬ್ಬಳ್ಳಿ-ಧಾರವಾಡ ಮಂದಿ ಕೇಳಕತ್ತರ. ಚಿಗ್ರಿ ಬಸ್ ರಸ್ತೆ ರಗಿಳಿ, ಟ್ರಾಫಿಕ್ ಸಮಸ್ಯೆ ಬಗೆಹರಿದ್ರ ಸಾಕ್ ಪಾ ಅನ್ನುವುದು ಹುಬ್ಬಳ್ಳಿ-ಧಾರವಾಡ ಮಂದಿ ಮನದಾಳ ಮಾತ ಆಗೇತಿ. ಮತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಂಗ ಮಾಡ್ತಿರಿ ಬಗೆಹರಿಸ್ತಿರೋ, ಹಿಂಗ ಹೋಗ್ತಿರೋ ನಿಮಗ ಬಿಟೈತ್ರಿ.

ವೀರೇಶ ಧೂಪದಮಠ