ಬಸ್ ರೇಟ್, ಡೀಸೆಲ್, ಪೆಟ್ರೋಲ್ ರೇಟ್ ವ್ಯತ್ಯಾಸದ ಪರಿಣಾಮ ಬೆಲೆ ಏರಿಕೆ


ರಾಜ್ಯ ಸರ್ಕಾರ ಬಸ್ ದರ 15% ಹೆಚ್ಚಿಗೆ ಮಾಡಿದ್ದೆ ತಡ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ರೀತಿ ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿದಾಗ ಆಗ ಏಕೆ ಅಸಮಾಧಾನ ವ್ಯಕ್ತಪಡಿಸಲಿಲ್ಲ ಎಂಬ ಪ್ರಶ್ನೆ ಸಹಜವಾಗಿ ಜನರಲ್ಲಿ ಮೂಡುತ್ತದೆ. ಬೈಕ್‌ಗಳು 50-60 ಕಿ.ಮೀಗೆ ಒಂದು ಲೀಟರ್ ಪೆಟ್ರೋಲ್ ಮೈಲೇಜ್ ಕೊಡುವ ಹಾಗೇ ಬಸ್‌ಗಳು ಕೊಡುವುದಿಲ್ಲ. ಬಸ್‌ಗಳು ಒಂದು ಲೀಟರ್ ಡೀಸೆಲ್‌ಗೆ ಕೇವಲ 4 ಕಿ.ಮೀ ಮಾತ್ರ ಮೈಲೇಜ್ ನೀಡುತ್ತದೆ. ಅದು ಹೊಸ ಬಸ್‌ಗಳಾದರೆ, ಹಳೆ ಬಸ್‌ಗಳಾದರೆ 2-3 ಕಿ.ಮೀ ಅಷ್ಟೇ ಮೈಲೇಜ್ ನೀಡುತ್ತದೆ. ಜನವಸತಿ ಕಡಿಮೆ ಇರುವ ಪ್ರದೇಶಗಳಿಗೆ ಬಸ್ ಸಂಚಾರವಿದೆ. ಜನ ಇಲ್ಲ ಅಂದ್ರು ಖಾಲಿ ಬಸ್ ಆದ್ರು ಓಡಿಸಬೇಕು.

ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ಸೇವಾ ಮನೋಭಾವ ಆಧಾರದ ಮೇಲೆ ಬಸ್ ಓಡುತ್ತಿದೆ. ಇದು ಬೇರೆ ವಿಷ್ಯ ಸರ್ಕಾರ ಮಹಿಳೆಯರಿಗೆ ಪ್ರೀ ನೀಡುವುದರ ಬದಲಾಗಿ ಅರ್ಧ ಬಸ್ ಚಾರ್ಜ್ ಎಲ್ಲ ಮಹಿಳೆಯರಿಗೆ ತಗೊಳ್ಳುವ ವ್ಯವಸ್ಥೆ ಮಾಡಿದ್ರೇ ಒಳ್ಳೆಯದು ಇಲ್ಲವೇ ಬಿಪಿಎಲ್ ಕಾರ್ಡುದಾರರ ಮಹಿಳೆಯರಿಗೆ ಪ್ರಿ ಬಸ್ ಸೀಮಿತಗೊಳಿಸಿದರು ಒಳ್ಳೆಯದೇ. ಇವೆರಡರಲ್ಲಿ ಒಂದು ನಿರ್ಣಯ ರಾಜ್ಯ ಸರ್ಕಾರ ತೆಗೆದುಕೊಂಡರೇ, ಅದಕ್ಕೂ ವಿರೋಧ ಪಕ್ಷಗಳು ಗೋಳಾಡುವುದು, ಅಳುವುದು ನೋಡಿ ಆಡಳಿತ ಪಕ್ಷ ಹಲ್ಲು ಕಿಸಿದು ನಗುವ ಸನ್ನಿವೇಶ ಕಾಮನ್ ಆಗಿದೆ. ಸಮಸ್ಯೆಗಳು ಶಾಶ್ವತ ಅಲ್ಲ ಕೆಲವು ದಿವಸಗಳು ಮಾತ್ರ. ಬೆಲೆ ಏರಿಕೆ ಆದಾಗ ಸಂಬಳವನ್ನು ಏರಿಕೆ ಮಾಡುವತ್ತ ರಾಜ್ಯ-ಕೇಂದ್ರ ಸರ್ಕಾರಗಳು ಚಿತ್ತ ಹರಿಸಬೇಕು ಇಲ್ಲವೇ ಬೆಲೆ ಏರಿಕೆ ನಿಯಂತ್ರಣ ಮಾಡಲು ಶ್ರಮಿಸಬೇಕು.

ಸಚಿವರನ್ನು 20 ತಿಂಗಳಗೊಮ್ಮೆ ಬದಲಾಯಿಸಿ
ರಾಜ್ಯ ಸರ್ಕಾರ ರಚನೆಯಾಗಿ ಹೆಚ್ಚು-ಕಡಿಮೆ 20 ತಿಂಗಳು ಸನಿಹವೇ ಬಂದಿದೆ. 4-5 ಬಾರಿ ಆಯ್ಕೆಯಾಗಿರುವ ಶಾಸಕರಲ್ಲಿ 50-60 ಶಾಸಕರು ಇರುವುದರಿಂದ ಹೊಸಬರಿಗೆ ಅವಕಾಶ ನೀಡುವುದು ಆಗತ್ಯವಿರುತ್ತದೆ. 15-20 ಸಚಿವರು ಬದಲಾವಣೆಯಾದರೇ ಸೂಕ್ತವಾಗಿದ್ದು, ಬಸವರಾಜ ರಾಯರಡ್ಡಿ, ಲಕ್ಷ್ಮಣ ಸವದಿ ಸೇರಿದಂತೆ 4-5 ಬಾರಿ ಆಯ್ಕೆಯಾಗಿರುವ ಶಾಸಕರಿಗೆ ಮಂತ್ರಸ್ಥಾನ ನೀಡುವುದು ಅಗತ್ಯವಾಗಿದೆ. ಇದರಿಂದ ಆಡಳಿತ ಯಂತ್ರ ಚುರುಕುಗೊಳಿಸಲು ಸಾಧ್ಯವಾಗುತ್ತದೆ.

ಧಾರವಾಡ ಮಹಾನಗರ ಪಾಲಿಕೆ ಜನ ಫುಲ್ ಖುಷ್
ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆಯನ್ನಾಗಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ, ಒಪ್ಪಿಗೆ ನೀಡುವ ಮೂಲಕ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ಸಚಿವ ಸಂಪುಟ ಸದಸ್ಯರಿಗೆ ರಾಜ್ಯ ಸರ್ಕಾರಕ್ಕೆ ಧನ್ಯವಾದ. ಧಾರವಾಡ ಜನರ ಸಂಭ್ರಮ ಸಡಗರಕ್ಕೆ ಸಾಕ್ಷಿಯಾಗಿದೆ. ಬಹುದಿನದ ಬೇಡಿಕೆಯನ್ನು ಧಾರವಾಡ ಜನರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords