ಬ್ಯಾಕಿಂಗ್ ಪರೀಕ್ಷೆ ಸೇರಿದಂತೆ ಇನ್ನಿತರ ನಾನಾ ರೀತಿಯ ಹುದ್ದೆಗಳಿಗೆ ಕಂಪ್ಯೂಟರ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆದರೆ 100 ಪ್ರಶ್ನೆಗಳಿಗೆ 60 ನಿಮಿಷಗಳಲ್ಲಿ ಉತ್ತರಿಸುವುದು ರೋಬೋಟ್‌ಗೆ ಮಾತ್ರ ಸಾಧ್ಯ. ಕೇಂದ್ರ ಸರ್ಕಾರ, ಅಯಾ ರಾಜ್ಯದ ಸರ್ಕಾರಗಳು ವ್ಯಕ್ತಿಗಳು ಬದಲಾಗಿ ರೋಬೋಟ್‌ಗಳನ್ನು ತರಿಸಿ, ಕಂಪ್ಯೂಟರ್ ಪರೀಕ್ಷೆಗಳನ್ನು ನಡೆಸುವುದು ಸೂಕ್ತ. ಆ ಪರೀಕ್ಷೆಗಳಲ್ಲಿ ಬಹುತೇಕ ಪರೀಕ್ಷೆಗಳು ಹಿಂದಿ, ಇಂಗ್ಲೀಷನಲ್ಲಿ ನಡೆಸಲಾಗುತ್ತದೆ. ಕೆಲ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡಲಾದರೂ ಪ್ರಶ್ನೆಯನ್ನು ಕರಗತ ಮಾಡಿಕೊಂಡು ಉತ್ತರಿಸುವುದು ಬಲು ಕಷ್ಟದ ಕೆಲಸ ಏಕೆಂದರೆ ಆ ಪ್ರಶ್ನೆ ಪ್ರಶ್ನೆಯೋ ಅಲ್ಲ. 100 ಪ್ರಶ್ನೆಗಳಿಗೆ 60 ನಿಮಿಷಗಳಲ್ಲಿ ಉತ್ತರಿಸಬೇಕು.
ಕೇಂದ್ರ ಸರ್ಕಾರ, ಆಯಾ ರಾಜ್ಯದ ಸರಕಾರಗಳು ವ್ಯಕ್ತಿಯನ್ನು ಮನುಷ್ಯನೋ? ಅಥವಾ ರೋಬೋಟ್‌ಯೋ? ಮಾಡಿದೇಯಾ ಎಂಬ ಯಕ್ಷಪ್ರಶ್ನೆಯಾಗಿದೆ. ಬ್ಯಾಕಿಂಗ್ ಕ್ಲರ್ಕ್ ಪರೀಕ್ಷೆಗಳಲ್ಲಿ ತಾರ್ಕಿಕ ಸಾಮರ್ಥ್ಯ 35 ಮಾರ್ಕ್ಸ್ 35 ಪ್ರಶ್ನೆಗಳು, ಸಮಯ 20 ನಿಮಿಷಗಳು. ಆಂಗ್ಲ ಭಾಷೆ 30 ಮಾರ್ಕ್ಸ್ 30 ಪ್ರಶ್ನೆ, ಸಮಯ 20 ನಿಮಿಷಗಳು. ಸಂಖ್ಯಾತ್ಮಕ ಸಾಮರ್ಥ್ಯ 35 ಮಾರ್ಕ್ಸ್ 35 ಪ್ರಶ್ನೆ ಸಮಯ 20 ನಿಮಿಷಗಳು ಎಂದು ನಿಗದಿಪಡಿಸಲಾಗುತ್ತದೆ. 20 ನಿಮಿಷಗಳು ಮುಗಿದ ನಂತರ ಸ್ವಯಂಚಾಲಿತವಾಗಿ ಪ್ರಶ್ನೆಗಳ ಭಾಗ ಬದಲಾಗುತ್ತವೆ. ಒಂದೊಂದು ಪ್ರಶ್ನೆಗಳು ಸುಮಾರು 50-60 ಪದಗಳು ಇರುತ್ತೆ, ಒಂದು ಪ್ರಶ್ನೆ ಓದಿ, ವಿಚಾರಿಸಿ ಉತ್ತರ ಹುಡುಕು ವೇಳೆಗೆ 1 ರಿಂದ 2 ನಿಮಿಷ ಕಳೆದು ಹೋಗುತ್ತೆ. ಒಬ್ಬ ಮನುಷ್ಯ 35 ಪ್ರಶ್ನೆಗಳನ್ನು 20 ನಿಮಿಷದಲ್ಲಿ 20 ರಿಂದ 25 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯ.
ಅಲ್ಲದೇ ಪ್ರಶ್ನೆಗಳು ಒಂದಕ್ಕೊಂದು ಸಂಬಂಧವೇ ಇಲ್ಲ. ಅಂತಹ ಪ್ರಶ್ನೆಗಳನ್ನು ಎರಡು-ಮೂರು ಸಲ ಓದಿದ್ರು ಪ್ರಶ್ನೆಗಳು ಕರಗತ ಮಾಡಿಕೊಳ್ಳುವುದು ಬಲು ಕಷ್ಟಕರ ಅಲ್ಲದೇ ಸುಮಾರು 50ಕ್ಕೂ ಅಧಿಕ ಪದಗಳನ್ನು ಓದಿ, ಅರ್ಥೈಸಿಕೊಳ್ಳಲು ಒಂದು ಅಥವಾ ಒಂದೂವರೆ ನಿಮಿಷಕ್ಕಿಂತ ಹೆಚ್ಚಿನ ಸಮಯ ಬೇಕು. ಒಬ್ಬ ಮನುಷ್ಯ 60 ನಿಮಿಷಕ್ಕೆ 50-70 ಪ್ರಶ್ನೆಗಳಿಗೆ ಉತ್ತರಿಸಲು ಮಾತ್ರ ಸಾಧ್ಯ. ಈ ಕಂಪ್ಯೂಟರ್ ಪರೀಕ್ಷೆಗಳು ರೋಬೋಟ್ ಪರೀಕ್ಷೆಗಳಾಗಿವೆ. ಏಕೆಂದರೆ ಒಂದಕ್ಕೂಂದು ಸಂಬಂಧವಿಲ್ಲದ ಪ್ರಶ್ನೆಗಳು, ಪದೇ ಪದೇ ಓದಿ ಅರ್ಥೈಸಿಕೊಂಡರು ಪ್ರಶ್ನೆ ತಿಳಿಯದೇ ಹೆಚ್ಚುವರಿ ಸಮಯ ಹಾಳು ಮಾಡುತ್ತಿದೆ. ಕಂಪ್ಯೂಟರ್ ಪರೀಕ್ಷೆಯನ್ನು ನಡೆಸುವ ಕೇಂದ್ರ ಸರ್ಕಾರ, ಆಯಾ ರಾಜ್ಯದ ಸರಕಾರಗಳು ರೋಬೋಟ್ ಪರೀಕ್ಷೆ ಅಂತ ನಾಮಕರಣ ಮಾಡಿದ್ರೆ ಒಳ್ಳೆಯದು.
ಈ ರೀತಿ ಕಂಪ್ಯೂಟರ್ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನ ಹಾಳು ಮಾಡುತ್ತೀವೆ, ಬಹುತೇಕ ಪರೀಕ್ಷೆಗಳು ಇಂಗ್ಲೀಷ್, ಹಿಂದಿಯಲ್ಲಿ ನಡೆಯುತ್ತದೆ. ಕೆಲ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿ ನಡೆಯುತ್ತದೆ. ದೇಶದ 22 ರಾಷ್ಟ್ರ ಭಾಷೆಗಳಿಗೆ ಏಕೆ ಅವಕಾಶ ನೀಡುತ್ತಿಲ್ಲ. ಎಲ್ಲ 22ರಾಷ್ಟ್ರ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಇತ್ತ ಕಂಪ್ಯೂಟರ್ ಪರೀಕ್ಷೆಗಳು ಗೊಂದಲ ಉಂಟು ಮಾಡುವ ಪ್ರಶ್ನೆಗಳನ್ನ ಉತ್ತರಿಸಲು ರೋಬೊಟ್‌ಗೆ ಮಾತ್ರ ಸಾಧ್ಯ. ಕಂಪ್ಯೂಟರ್ ಪರೀಕ್ಷೆಗಳು ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಕಂಟಕವಾಗಿದ್ದು, ಕಂಪ್ಯೂಟರ್ ಪರದೆ ನೋಡಿ, ಪ್ರಶ್ನೆಗಳನ್ನು ಓದಿ ಉತ್ತರ ತಿಳಿಯದೇ ತಲೆನೋವು, ಒತ್ತಡ ಪ್ರಾರಂಭವಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯದ ಸರ್ಕಾರಗಳು ಕಂಪ್ಯೂಟರ್ ಪರೀಕ್ಷೆಗಳನ್ನು ಸ್ಥಗಿತಗೊಳಿಸಿ,
ಮೊದಲಿನಂತೆ ಪೇಪರ್ ಪರೀಕ್ಷೆ ನಡೆಸಿ, ಇಲ್ಲವೇ ಪ್ರಶ್ನೆಗಳ ಸಂಖ್ಯೆ ಕಡಿಮೆ (ನಿಮಿಷಕ್ಕೆ ಒಂದು ಪ್ರಶ್ನೆ), ಇಲ್ಲವೇ ಉತ್ತರ ಬರೆಯುವ ಸಮಯ ಹೆಚ್ಚಿಸಿ (100 ಪ್ರಶ್ನೆಗೆ 100 ನಿಮಿಷ), ಇವೆರಡನ್ನು ಮಾಡಲು ಸಾಧ್ಯವಿಲ್ಲದ್ದಿದರೆ, ಈ ಕಂಪ್ಯೂಟರ್ ಪರೀಕ್ಷೆ ಉಪಯೋಗವೇನು? ಈ ಕಂಪ್ಯೂಟರ್ ಪರೀಕ್ಷೆ ತೆಗೆದು ಸಾಮಾನ್ಯ ಕೈ ಬರಹ ಪರೀಕ್ಷೆ ನಡೆಸಬೇಕು. ಕೇಂದ್ರ ಸರ್ಕಾರ, ಆಯಾ ರಾಜ್ಯದ ಸರಕಾರಗಳು ರೊಬೋಟ್‌ಗಳನ್ನು ಕರೆತಂದು ಪರೀಕ್ಷೆ ನಡೆಸಿ, ಈ ತರ ಕಂಪ್ಯೂಟರ್ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಈ ಕಂಪ್ಯೂಟರ್ ಪರೀಕ್ಷೆಗಳು ಮಾರಕವಾಗಿದೆ. ಕಂಪ್ಯೂಟರ್ ಪರೀಕ್ಷೆಗಳು ರೋಬೋಟ್ ಅಥವಾ ಕಾಟಾಚಾರಕ್ಕೆ ಪರೀಕ್ಷೆಗಳಾಗದೇ ಸರಕಾರಿ ಹುದ್ದೆ ಆಕಾಂಕ್ಷಿಗಳ ಹಿತ ಕಾಯಬೇಕಿದೆ.

ವೀರೇಶ ಧೂಪದಮಠ