ಒಂದೇ ಪಕ್ಷಕ್ಕೆ ಮಣೆ ಹಾಕಲ್ಲ ಮತದಾರ

1985 ರಿಂದ 2023 ವರೆಗೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರಗಳು ಮರು ಆಯ್ಕೆಯಾದ ಉದಾಹರಣೆಗಳಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಪದೇ ಪದೇ ಮತದಾರ ಬೇರೆ ಪಕ್ಷಕ್ಕೆ ಮಣೆ ಹಾಕಿರುವುದು ಕಂಡು ಬರುತ್ತಿದೆ. ಅಂದರೆ ಕರ್ನಾಟಕ ಮತದಾರ ಪದೇ ಪದೇ ಒಂದೇ ಪಕ್ಷಕ್ಕೆ ಮಣೆ ಹಾಕದೇ ಪ್ರತಿ ಐದು ವರ್ಷಕ್ಕೊಮ್ಮೆ ಪಕ್ಷ ಬದಲಾಯಿಸಿ ಅಧಿಕಾರಕ್ಕೆ ತರುತ್ತಾರೆ. ವಿಚಿತ್ರ ಏನೆಂದರೆ ಹಾಲಿ-ಮಾಜಿ ಸಚಿವರು ಚುನಾವಣೆಯಲ್ಲಿ ಸೋಲುವುದು ಕಟ್ಟಿಟ್ಟ ಬುತ್ತಿ ಎನ್ನುವುದು ಕಳೆದ 2008 ರಿಂದ ಕಂಡು ಬರುತ್ತಿದೆ. ಅಂದಹಾಗೇ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಅರ್ಜಿಗೆ ಸ್ಪಂದಿಸದೇ ಆಡಳಿತ ವಿರೋಧಿ ಅಲೆಗೆ ಸರ್ಕಾರಗಳು ಬಲಿಯಾಗಿವೆ. ಸರ್ಕಾರಗಳು ಬೀಳಲು ಅಧಿಕಾರಿಗಳ ವರ್ಗವು ಕಾರಣವಾಗಿವೆ.
ಸಾರ್ವಜನಿಕ ತೆರಿಗೆ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ, ಜೊತೆಗೆ ಲಂಚ ನೀಡಿದ್ದಾರೆ ಮಾತ್ರ ಕೆಲಸ ಎನ್ನುವಂತಾಗಿದೆ. ಒಂದು ಮಾತ್ರ ನಿಜವಾಗಿದೆ, ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ನಡೆಸುವ ಪಕ್ಷ ಬದಲಾಗುತ್ತದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕಾಂಗ್ರೆಸ್-ಗೆ ಬದಲಾವಣೆ ಅನಿವಾರ್ಯತೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದು 30 ತಿಂಗಳಾಗಿದೆ. ಇನ್ನು 30 ತಿಂಗಳು ಅಧಿಕಾರಾವಧಿ ಇದೆ. 30 ತಿಂಗಳಲ್ಲಿ 15 ತಿಂಗಳಂತೆ 2 ಎರಡು ಸಲ ಮಂತ್ರಿ ಮಂಡಲ ಪೂರ್ತಿ ಹೊಸದು ಆಗಬೇಕು. ಕೊನೆಯ 2 ವರ್ಷ ಡಿ.ಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಉಪಮುಖ್ಯಮಂತ್ರಿಯಾಗಿ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಮೂವರು ಡಿಸಿಎಂ ಆಗಬೇಕು. ಸ್ವಲ್ಪ ಆಡಳಿತ ಯಂತ್ರ ಬದಲಾವಣೆಯಾಗಬೇಕು. ಏಕೆಂದರೆ ಕೆಲ ಮಂತ್ರಿಗಳು ತಮ್ಮ ಉಸ್ತುವಾರಿ ಜಿಲ್ಲೆ ಬಿಟ್ಟು ಎಲ್ಲಿ ಓಡಾಡುತ್ತಿಲ್ಲ. ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವುದಿಲ್ಲ. ಶಾಸಕಾಂಗದ ಮಾತು ಕೇಳಿಬೇಕಿದ್ದ ಅಧಿಕಾರಿಗಳು ಕಾರ್ಯಾಂಗದ ಮಾತು ರಾಜಕಾರಣಿ ಕೇಳುವಂತಾಗಿದೆ.

ಕೊನೆಯ 15 ತಿಂಗಳ ಅಧಿಕಾರಾವಧಿಯಲ್ಲಿ ಮಂತ್ರಿ ಮಂಡಲ ಸಂಪೂರ್ಣವಾಗಿ ಬದಲಾಗಬೇಕು. ಹೊಸ ಮುಖಗಳಿಗೆ ಅವಕಾಶ ನೀಡಬೇಕಾಗುತ್ತದೆ. 1985 ರಿಂದ 2023 ವರೆಗೆ ರಾಜಕೀಯ ಸನ್ನಿವೇಶ ನೋಡಿದರೆ, ಜನರು ಬದಲಾವಣೆ ಮನಸ್ಸು ಮಾಡಿದ್ದಾರೆ ಎಂದರ್ಥವಾಗಿದೆ.
ವೀರೇಶ ಧೂಪದಮಠ