11 Jan 2026

// //

ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿ ವ್ಯಕ್ತಿ ಆಧಾರಿತ



ಕೇಂದ್ರ ಸರ್ಕಾರ ಅಂದ ತಕ್ಷಣ ಜನರಿಗೆ ನೆನಪಿಗೆ ಬರುವುದು ರೇಲ್ವೆ, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿ, ಪೋಸ್ಟ್ ಆಫೀಸ್, ದೂರ ಸಂಪರ್ಕ, ಆದಾಯ ತೆರಿಗೆ, ಭಾರತೀಯ ಸೇನೆ ಇತ್ಯಾದಿ. ಹೆಚ್ಚಾಗಿ ಪೂರ್ಣ ಬಹುಮತದೊಂದಿಗೆ ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದಿದ್ದು ವ್ಯಕ್ತಿ ಆಧಾರಿತವಾಗಿ ಎನ್ನುವುದು ವಿಶೇಷ. ಅದರಲ್ಲೂ ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರೇಂದ್ರ ಮೋದಿ ಅವರಂತಹ ಜನಮನ್ನಣೆ ಗಳಿಸಿದ ವ್ಯಕ್ತಿಗಳಿಂದ ಎರಡು-ಮೂರು ಸಲ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ. ಜನಮನ್ನಣೆ ಗಳಿಸದೇ ಹಾಗೇ ಸುಮ್ನೆ ಅತಂತ್ರ ಸ್ಥಿತಿಯಲ್ಲಿ ಮಿತ್ರ ಪಕ್ಷಗಳ ಬೆಂಬಲ ಪಡೆದು ಅಧಿಕಾರ ನಡೆಸಿವೆ.

ಕೇಂದ್ರದಲ್ಲಿ ಕಾಂಗ್ರೆಸ್ ಫೇಲ್ ಆಗಲು ಕಾರಣ

ಇಂದಿರಾ ಗಾಂಧಿ ಮಾದರಿ ಆಡಳಿತವನ್ನು ಒಂದು ಲೆಕ್ಕಕ್ಕೆ ಕೃತಿಚೌರ್ಯ ಮಾಡಿದವರು ಆಡಳಿತ ನಡೆಸುತ್ತಿದ್ದಾರೆ. ಒಂದೇ ಲೆಕ್ಕ ನೋಡಿದರೆ ಹಾಗೆಯೇ ಇದೆ ಆದರೆ ಈಗಿನ ಕಾಂಗ್ರೆಸ್ ಆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿಲ್ಲ. ಇಂದಿರಾ ಗಾಂಧಿ ಅವರು ಹೆಚ್ಚಾಗಿ ಭಾರತೀಯ ಸೇನೆಗೆ ಒತ್ತು ನೀಡುತ್ತಿದ್ದರು. ಅಲ್ಲದೇ ಅತಿ ಹೆಚ್ಚು ದೇಶಾದ್ಯಂತ ಭಾರತೀಯ ಸೇನೆಯ ಅಭಿಮಾನಿಗಳು ಇದ್ದಾರೆ. ದೇಶ ಅಂತ ಬಂದಾಗ ದೇಶದ ಜನ ಭಾರತೀಯ ಸೇನೆಗೆ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ‌ ಮತ್ತು ಇಂದಿರಾ ಗಾಂಧಿ ಅವರು ಸದಾ ಬಡವರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಬಹುತೇಕ ಇಂದಿರಾ ಗಾಂಧಿಯವರ ಆಡಳಿತ ಮಾದರಿಯನ್ನು ಕಾಂಗ್ರೆಸ್ ಅಳವಡಿಸಿಕೊಂಡರೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬಹುದು ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗಬಹುದು.

ವೀರೇಶ ಧೂಪದಮಠ