11 Jan 2026

// //

ಸಮಸ್ಯೆಗಳಿಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಲಿ



ಕೆಲವರಿಗೆ ತಲೆ ನೋವು ಹೇಳಿಕೆಗಳು ಏನು ಅಂದರೆ ಯಾವ ಯಾವ ಇಲಾಖೆಗಳು ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲ. ಅದರಲ್ಲೂ ರಾಜ್ಯದಲ್ಲಿ ಬೇರೆ ಪಕ್ಷ ಕೇಂದ್ರದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿ ಇದ್ದರಂತು ಮುಗಿತು ಕಥೆ ಅವರ ಮೇಲೆ ಇವರು, ಇವರು ಮೇಲೆ ಅವರು ಹಾಕಿ ಕೈ ತೊಳೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ತಮ್ಮೂರಲ್ಲಿ ಬೀದಿ ದೀಪಗಳನ್ನು ಸರಿಪಡಿಸುವಂತೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದ ಆ ಪತ್ರ ಮೇಲಾಧಿಕಾರಿಗಳಿಂದ ಕೆಳ ಅಧಿಕಾರಿಗಳಿಗೆ ರವಾನೆ ಆಗುತ್ತಾ ಆಗುತ್ತಾ ಸಂಬಂಧಿಸಿದ ಗ್ರಾಮ ಪಂಚಾಯತ್ ಪಿಡಿಒಗೆ ಕ್ರಮ ಕೈಗೊಳ್ಳುವಂತೆ ಸೂಚನೆ ಬರುತ್ತದೆ.

ಬೀದಿ ದೀಪಗಳನ್ನು ಸರಿಪಡಿಸಿದರೋ ಬಿಟ್ರೊ ಗೊತ್ತಿಲ್ಲ. ಆದರೆ ಒಂದಂತೂ ನಿಜ ಸಮಸ್ಯೆಗಳನ್ನು ಯಾರು ಮೈಮೇಲೆ ಹಾಕಿಕೊಳ್ಳುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ರವಾನೆ ಮಾಡುತ್ತಾರೆ. ಪ್ರಬಲರಿಗೂ ಪತ್ರ ಬರೆದರು, ಅದು ರವಾನೆಯಾಗುವುದು ಸಂಬಂಧಿಸಿದ ಅಧಿಕಾರಿಗೆ ಬರುವುದು. ಒಂದುವೇಳೆ ಪಕ್ಕ ಇಲಾಖೆಗಳು ಯಾರು ವ್ಯಾಪ್ತಿಗೆ ಬರುತ್ತದೆ ಎಂದು ತಿಳಿದುಕೊಳ್ಳಬೇಕಾದರೆ ಪ್ರಧಾನಮಂತ್ರಿಗಳಿಗೆ ಅಥವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿರಿ, ಆಗ ಗೊತ್ತಾಗುತ್ತದೆ. ಯಾವ ಯಾವ ಸಮಸ್ಯೆ ಯಾರ ವ್ಯಾಪ್ತಿಗೆ ಒಳಪಡುತ್ತವೆಂದು. ಇಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳು ಬೇರೆ, ರಾಜ್ಯ ಸರ್ಕಾರದ ಇಲಾಖೆಗಳು ಬೇರೆ ಆಯಾ ಇಲಾಖೆಯ ನೀತಿ ನಿಯಮಗಳು ಏನೇನಿದೆ ಎಂದು ಬಹುತೇಕರಿಗೆ ಗೊತ್ತಿಲ್ಲ‌.

ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ. ಸಾಮಾನ್ಯವಾಗಿ ರೈತರ ಬೆಳೆಗಳಿಗೆ ಸೂಕ್ತ ದರ ಬೆಂಬಲ ಬೆಲೆ ನಿಗದಿಪಡಿಸುವ ಪ್ರಾಧಿಕಾರ ಕೇಂದ್ರ ಸರ್ಕಾರವಾದರೂ. ಅದರ ನೀತಿ ನಿಯಮಗಳು ಏನೇನಿದೆ ಅಂತ ಜನರಿಗೆ ಗೊತ್ತೇ ಇಲ್ಲ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಜನರ ಸಮಸ್ಯೆಗಳನ್ನು ಸಂಬಂಧಿಸಿದವರು ಶೀಘ್ರ ಕ್ರಮ ಕೈಗೊಂಡರೆ ಸಾಕು ಕಿತ್ತಾಡಿಕೊಳ್ಳುವುದು ಅವಶ್ಯಕತೆ ಇರುವುದಿಲ್ಲ.

ವೀರೇಶ ಧೂಪದಮಠ