
ಕಳೆದ ಎರಡು-ಮೂರು ದಿನಗಳಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಆಗಬೇಕು ಎಂದು ಬೇಡಿಕೆ ಇಡಲು ಶುರು ಮಾಡಿದ್ದಾರೆ. ಇದರ ಬದಲಾಗಿ ಪ್ರತಿ ಸಲ 4 ಲಕ್ಷ ಕೋಟಿ ಬಜೆಟ್ ಮಂಡನೆಯಾಗುತ್ತದೆ. ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ಕಂದಾಯ ವಿಭಾಗಗಳಲ್ಲಿ ಪ್ರತಿಯೊಂದು ಕಂದಾಯ ವಿಭಾಗಕ್ಕೆ ಪ್ರತಿ 1 ಲಕ್ಷ ಕೋಟಿ ಬಜೆಟ್ ಮೀಸಲು ಇಡಬೇಕು. ಆಮೇಲೆ ಪ್ರತಿ ಕಂದಾಯ ವಿಭಾಗಕ್ಕೆ 5-10 ಸಾವಿರ ಕೋಟಿ ಅನುದಾನದಂತೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕು. ಇಷ್ಟು ಮಾಡಿದರೆ ಸಾಕು ಪ್ರತ್ಯೇಕ ರಾಜ್ಯದ ಅವಶ್ಯಕತೆ ಇರುವುದಿಲ್ಲ.
ನಮಗೆ ಬೇಕಿರುವುದು ಅನುದಾನ ಪ್ರತ್ಯೇಕ ರಾಜ್ಯವಲ್ಲ. ಪ್ರತ್ಯೇಕ ರಾಜ್ಯ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಅದು ಸಾಧ್ಯವಿಲ್ಲ, ಭಾಷಾವಾರು ಪ್ರಾಂತ್ಯ/ರಾಜ್ಯ ರಚನೆಯಾಗಿದೆ. ಈ ಹಿಂದೆ ನಮ್ಮ ಹಿರಿಯರು ಕನ್ನಡ ನಾಡು ಏಕೀಕರಣಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಏಕೀಕರಣ ಇಲ್ಲವೇ ಮರಣ ಎಂಬ ಧ್ಯೇಯ ವಾಕ್ಯ ಇಟ್ಟಿಕೊಂಡು ಹೋರಾಟ ಮಾಡಿ, ಏಕೀಕರಣದ ರಾಜ್ಯ ರಚನೆ ಮಾಡಿದ್ದಾರೆ. ಕೇವಲ ಡಾಂಬರ್ ರಸ್ತೆಗಾಗಿ ಪ್ರತ್ಯೇಕ ರಾಜ್ಯ ಮಾಡುವುದು ಅಥವಾ ಬೇಡಿಕೆ ಇಡುತ್ತಿದ್ದಾರೆ ಅದು ಸರಿಯಲ್ಲ.
ಅದರ ಬದಲಾಗಿ ಪ್ರತಿ ಬಜೆಟ್ ಹಣವನ್ನು ಪ್ರತಿ ನಾಲ್ಕು ಕಂದಾಯ ವಿಭಾಗಳಾದ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ಸಮನಾಗಿ ಹಂಚಿಕೆ ಮಾಡಲು ಮತ್ತು ನಾಲ್ಕು ಕಂದಾಯ ವಿಭಾಗಕ್ಕೆ 5 ಅಥವಾ 10 ಸಾವಿರ ಕೋಟಿ ಅನುದಾನದಂತೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕು. ಇದರ ಬಗ್ಗೆ ಕರ್ನಾಟಕ ಸರ್ಕಾರ ಕಾಯ್ದೆ ರಚಿಸಬೇಕು. ಸಣ್ಣ ಪುಟ್ಟ ಸಮಸ್ಯೆಗಳು ನಮ್ಮಲ್ಲಿ ಬಗೆಹರಿಸುವ ವ್ಯವಸ್ಥೆ ಇದೆ. ಪ್ರತ್ಯೇಕ ರಾಜ್ಯ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚುತ್ತದೆ.
ಆಂಧ್ರ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಯಾವುದೇ ರೀತಿ ಸುಧಾರಣೆ ಕಂಡಿಲ್ಲ. ಅಲ್ಲದೇ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಮತ್ತು ತೆಲುಗು ಜನರಲ್ಲಿ ಬೇದ ಭಾವ ಬಂದಿವೆ. ಪ್ರತ್ಯೇಕ ರಾಜ್ಯದ ಕೂಗು ಬೇಡವೇ ಬೇಡ. ನಮಗೆ ಬೇಕಿರುವುದು ಅನುದಾನ ಪ್ರತಿ ನಾಲ್ಕು ಕಂದಾಯ ವಿಭಾಗಕ್ಕೆ ಸಮನಾಗಿ ಬಜೆಟ್ ಮತ್ತು 5-10 ಸಾವಿರ ಕೋಟಿ ಅನುದಾನ ಬೇಕು. ನಮಗೆ ಬೇಕಿರುವುದು ಅನುದಾನ ಹೊರತಾಗಿ ಪ್ರತ್ಯೇಕ ರಾಜ್ಯವಲ್ಲ.
ವೀರೇಶ ಧೂಪದಮಠ