
ಯಾವುದೇ ಜಾತಿಯಾಗಲಿ ಕೇವಲ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಐದು ವರ್ಷಕ್ಕೊಮ್ಮೆ, ಐದು ವರ್ಷಕ್ಕೊಮ್ಮೆ ಪಕ್ಷ ಬದಲು ಮಾಡಿ, ಸರ್ಕಾರ ರಚಿಸುತ್ತಾರೆ. ವೋಟ್ ಹಾಕುವ ಒಬ್ಬ ವ್ಯಕ್ತಿ ಮುಖ ಕಾಣದ ರೀತಿಯಲ್ಲಿ ರಟ್ಟಿನ ಪೆಟ್ಟಿಗೆ ಇಟ್ಟಿರುತ್ತಾರೆ. ಯಾವ ವ್ಯಕ್ತಿ ಯಾವ ಪಕ್ಷಕ್ಕೆ ವೋಟ್ ಹಾಕಿದ ಅಂತ ಸತ್ತರು ಗೊತ್ತಾಗಲ್ಲ. ಇನ್ನು ಚುನಾವಣೆ ಸಮೀಕ್ಷೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. ಅವುಗಳು ನಿಜವಾಗಲೂ ಸಾಧ್ಯವಿಲ್ಲ. ಏಕೆಂದರೆ ಚುನಾವಣೆ ನಡೆಯುವ ಬೂತ್ ಮಟ್ಟದ ಏಜೆಂಟರು ನೇಮಕ ಮಾಡಿರುತ್ತಾರೆ. ಯಾರು ಯಾರ್ಯಾರಿಗೆ ವೋಟ್ ಹಾಕಿದ್ರು ಅಂತ ಬೂತ್ ಏಜೆಂಟರಿಗೆ ಗೊತ್ತಿರುವುದಿಲ್ಲ. ಇನ್ನು ಸಮೀಕ್ಷೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. ಮತ್ತೆ ಅದು ಹೆಂಗೆ ಅಹಿಂದ, ಲಿಂಗಾಯತ, ಒಕ್ಕಲಿಗ, ದಲಿತ ಸೇರಿದಂತೆ ಇಂತದೇ ಸಮುದಾಯ ಒಂದೇ ಪಕ್ಷಕ್ಕೆ ವೋಟ್ ಹಾಕಿದೇ ಅಂತ ಯಾವ ಆಧಾರದ ಮೇಲೆ ಯಾವ ದಾಖಲೆಗಳ ಮೇಲೆ ಹೇಳುತ್ತೀರಿ?. ಮುಸ್ಲಿಂರು ಬಿಜೆಪಿಗೆ ವೋಟ್ ಹಾಕಿರಬಹುದು ಅದು ಗೊತ್ತಿರುವುದಿಲ್ಲ ಅಷ್ಟೇ. ಇಲ್ಲಿ ಮೇಲ್ಜಾತಿ ಕೆಳಜಾತಿ ಯಾವುದು ಇಲ್ಲ. ಎಲ್ಲ ಜಾತಿ ಸಮುದಾಯಗಳಲ್ಲಿ 50:50 ಮತದಾರರು ಇದ್ದಾರೆ. ಅಂದರೆ ಕಾಂಗ್ರೆಸ್, ಬಿಜೆಪಿಗೆ ಸರಿಸಮಾನವಾಗಿ ಮತದಾರರು ಇದ್ದಾರೆ. ಯಾವಾಗ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಮನವರಿಕೆಯಾಗಿ ಯಾವಾಗ ಸರ್ಕಾರ ಅಥವಾ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಅವಾಗ ಗೊತ್ತಾಗುತ್ತದೆ ಈ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇಲ್ಲವೇ ಅತಂತ್ರ ಸ್ಥಿತಿ ತಲುಪುತ್ತದೆ ಎಂದು. ಇನ್ನು ವಿಧಾನಸಭಾ ಬಿಡಿ, ಲೋಕಸಭಾ ಕ್ಷೇತ್ರಕ್ಕೆ ಎಂಟು ವಿಧಾನಸಭಾ ಕ್ಷೇತ್ರ ಬರುತ್ತದೆ. ಅಭ್ಯರ್ಥಿಗಳು ಒಂದು ವೋಟಿನಿಂದ ಸೋಲೋಕೆ ಸಾಧ್ಯವಿದೆಯಾ ಇಲ್ಲ. ಒಟ್ಟಿನಲ್ಲಿ ಯಾವುದೇ ಜಾತಿ ಸಮುದಾಯ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ 50:50 ಮಾರ್ಗ ಅನುಸರಿಸುತ್ತಿದ್ದಾರೆ.
ಮೂಕ ಪ್ರೇಕ್ಷಕ ಕಾಂಗ್ರೆಸ್ ಕಾರ್ಯಕರ್ತ
ರಾಜ್ಯ ರಾಜಕಾರಣ 7.5 ವರ್ಷ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ನೋಡಿದ್ದು ಆಯಿತು, ಒಂದ್ಸಲಾದರೂ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಅನ್ನುವುದು ಕನಸು ಇದೆ. ಶೇ.70-75 ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮೂಕ ಪ್ರೇಕ್ಷಕರಾಗಿ ಕಾಯುತ್ತಿದ್ದಾರೆ. ಕಾದು ನೋಡೋಣ ಹೈಕಮಾಂಡ್ ಏನು ನಿರ್ಣಯ ಕೈಗೊಳ್ಳಬಹುದು ಎಂದು ನೊಂದ ಕಾರ್ಯಕರ್ತ.
ವೀರೇಶ ಧೂಪದಮಠ