ತಾರತಮ್ಯ ಹೊಗಲಾಡಿಸಲು ಸಾಧ್ಯವಿಲ್ಲ, ಹೊಂದಿಕೊಂಡು ಹೋಗುವುದೆ ಲೇಸು



ತಾರತಮ್ಯ ಎಂಬ ಪದ ಅಥವಾ ನೀತಿ ಪ್ರತಿಯೊಂದಕ್ಕೂ ಅನುಸರಿಸುತ್ತಿದೆ. ಅದು ಜಾತಿ, ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ, ಊರು ಊರುಗಳ ಮಧ್ಯೆ, ವ್ಯಕ್ತಿ ವ್ಯಕ್ತಿಗಳ ಮಧ್ಯೆ, ಅಷ್ಟೇ ಏಕೆ ಸಂಬಂಧಗಳ ಮಧ್ಯ ಇನ್ನೂ ಹೇಳ್ತಾ ಹೋದರೆ ದೊಡ್ಡ ಪಟ್ಟಿಯೇ ಸಿಗುವುದು. ಒಂದು ಅಂತರೂ ಸ್ಪಷ್ಟ ತಾರತಮ್ಯ ನೀತಿಯನ್ನು ಹೊಗಲಾಡಿ‌ಸಲು ಸಾಧ್ಯವಿಲ್ಲ. ತಾರತಮ್ಯ ನೀತಿಗೆ ಪರ್ಯಾಯ ಮಾರ್ಗ ಹುಡುಕುವರು ಬಲಿಪಶು ಆಗುತ್ತಾರೆ ಹೊರತಾಗಿ ಉದ್ಧಾರ ಆಗಲ್ಲ. ಹಾಗಾಗಿ ಶತ ಶತಮಾನಗಳಿಂದ ಈ ತಾರತಮ್ಯ ನೀತಿ ಪ್ರತಿಯೊಂದಕ್ಕೂ ಅನುಸರಿಸುತ್ತಿದೆ ಎಂದರೆ ತಪ್ಪಾಗಲಾರದು. ತಾರತಮ್ಯ ನೀತಿಯನ್ನು ದೇವರು ಸೃಷ್ಟಿ ಮಾಡಿದ್ದೋ ಅಥವಾ ಮನುಷ್ಯನ ಮಾನಸಿಕ ಸ್ಥಿತಿಯೋ ಗೊತ್ತಿಲ್ಲ. ಜಗತ್ತಿನ ಅರ್ಧದಷ್ಟು ಜನರಲ್ಲಿ ಸಂಪೂರ್ಣ ಮಾಹಿತಿ ಕೊರತೆ ಅಥವಾ ಮಾನಸಿಕ ಒತ್ತಡದಿಂದಾಗಿ ಬಳಲುತ್ತಿದ್ದಾರೆ. ತಾರತಮ್ಯ ವಿರುದ್ಧ ಹೋರಾಡುವ ಬದಲು ಒಟ್ಟಿನಲ್ಲಿ ಹೊಂದಿಕೊಂಡು ಹೋಗುವುದೇ ಲೇಸು.

ಅಧಿವೇಶನ ಆರ್ಥಿಕತೆ ಮತ್ತು ಅಭಿವೃದ್ಧಿಗಳ ಬಗ್ಗೆ ಹೆಚ್ಚು ಚರ್ಚೆಯಾಗಲಿ
ಸುವರ್ಣ ಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಪ್ರಮುಖವಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಮತ್ತು ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಬೇಕು. ಸರ್ಕಾರಕ್ಕೆ ಬರಬೇಕಾದ ಹಣ ಅಧಿಕಾರಿಗಳಿಂದ ಪೂಲ್ ಆಗುತ್ತಿರುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕು. ಸಾರ್ವಜನಿಕರು ಕಟ್ಟುವ ತೆರಿಗೆ ಹಣ ಸರ್ಕಾರದ ಖಜಾನೆಗೆ ಹೋಗುತ್ತಿದ್ಯಾ ಅಥವಾ ಲಂಚದ ರೂಪದಲ್ಲಿ ಅಧಿಕಾರಿ ಅಥವಾ ಇಲಾಖೆ ಸಿಬ್ಬಂದಿ ಜೇಬಿಗೆ ಸೇರುತ್ತದೆ?. ಎಂಬುದನ್ನು ಪರಿಶೀಲಿಸಿ. ಮತ್ತು ಪ್ರಮುಖವಾಗಿ ಬೆಳಗಾವಿ ಜಿಲ್ಲಾ ವಿಭಜಿಸಿ, 1997ರ ಶಿಪಾರಸ್ಸಿನಂತೆ ಗೋಕಾಕ್ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ರಚಿಸಬೇಕು. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಲು ರಾಜ್ಯಪಾಲರ ಸಹಿ ಬಾಕಿ ಇದೆ. ಇಲ್ಲದಿದ್ದರೆ ರಾಜ್ಯಪಾಲರು ಧಾರವಾಡದಲ್ಲಿ ವ್ಯಾಸ್ತವ್ಯ ಹೂಡಿ ಸ್ಥಿತಿ ಪರಿಶೀಲಿಸಬೇಕು. ರಾಜ್ಯದಲ್ಲಿ ಏನೇನು ಬಾಕಿಯಿದೆ. ಅವುಗಳು ತತ್ ತಕ್ಷಣ ಜಾರಿಗೆ ಬರಲು ವಿಧಾನಮಂಡಲ ಅಧಿವೇಶನ ಸಾಕ್ಷಿಯಾಗಲಿ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords