
ಮಹನೀಯರ ಹೆಸರನ್ನು ಹೆಚ್ಚಾಗಿ ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಇಡಬೇಕು. ಅದನ್ನು ಬಿಟ್ಟು ಇಡೀ ಬಸ್ ಸಾರಿಗೆ ಇಲಾಖೆಗೆ, ಇಡೀ ವಿಮಾನಯಾನ ಸಂಸ್ಥೆಗೆ ಇಡೀ ರೈಲು ಇಲಾಖೆಗೆ ಹೆಸರನ್ನು ಇಡ್ತಿನಿ ಅಂದ್ರೆ ಯಾರು ಒಪ್ಪಲ್ಲ. ಇದು ಆ ಸಂಸ್ಥೆ ಅವನತಿಗೆ ಕಾರಣವಾಗುತ್ತದೆ. ಮಹನೀಯರ ಹೆಸರು ಈಗಾಗಲೇ ಸಾಕಾಷ್ಟಿವೇ ಹಾಗಾಗಿ ಆಯಾ ಪ್ರದೇಶದ ಸ್ಥಳೀಯ ಮಹನೀಯರ ಹೆಸರನ್ನು ಸ್ಥಳೀಯ ಬಸ್ ನಿಲ್ದಾಣಕ್ಕೆ, ವಿಮಾನ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ಹೆಸರು ಇಡಬೇಕು. ಏಕೆಂದರೆ ಆಯಾ ಪ್ರದೇಶದ ಸ್ಥಳೀಯ ಮಹನೀಯರ ಕೊಡುಗೆ ಅಪಾರವಿದೆ. ಆಯಾ ಪ್ರದೇಶದ ಸ್ಥಳೀಯ ಮಹನೀಯರ ಹೆಸರೇನು ಇಟ್ಟರೆ ಆಯಾ ಪ್ರದೇಶದ ಸ್ಥಳೀಯರು ಸಹ ಖುಷಿಪಡುತ್ತಾರೆ. ಹಾಗಾಗಿ ಸರಕಾರ ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಆಯಾ ಪ್ರದೇಶದ ಸ್ಥಳೀಯ ಮಹನೀಯರ ಹೆಸರನ್ನು ಇಡಬೇಕು ಎನ್ನುವುದು ಬಹುತೇಕರ ಆಶಯ. ಅದನ್ನು ಬಿಟ್ಟು ದೆಹಲಿ ಅಥವಾ ಇನ್ನಿತರ ಪ್ರದೇಶದ ಮಹನೀಯರ ಹೆಸರನ್ನು ಇಟ್ಟರೆ, ಅದಕ್ಕೆ ಬೆಲೆ ಇರುವುದಿಲ್ಲ. ಆಯಾ ಪ್ರದೇಶದ ಸ್ಥಳೀಯ ಮಹನೀಯರ ಹೆಸರನ್ನು ಇಟ್ಟರೆ ಬೆಲೆ ಇಲ್ಲದಿದ್ದರೆ ಆ ಮೌಲ್ಯ ಕಳೆದು ಹೊಗುತ್ತದೆ. ಹಾಗಾಗಿ ಆಯಾ ಪ್ರದೇಶದ ಸ್ಥಳೀಯ ಮಹನೀಯರ ಹೆಸರನ್ನು ಸರಕಾರ ಇಟ್ಟರೆ ಚಂದ.