ಬೈಸಿಕೊಳ್ಳಕು ಯೋಗ ಬೇಕು?












ಬೈಸಿಕೊಳ್ಳಕು ಯೋಗ ಬೇಕು?
ಸರ್ಕಾರಿ ಹುದ್ದೆಯನ್ನು ಪಡೆಯಲು ಅಥವಾ ಸರ್ಕಾರಿ ಸಂಬಳ ತಿನ್ನೋಕೆ ಯೋಗ ಬೇಕು ಎನ್ನುವ ಹಾಗೇ, ಜನರಿಂದ ಬೈಸಿಕೊಳ್ಳಕು ಯೋಗ್ಯ ಬೇಕು. ಏಕೆಂದರೆ ಸುಮ್ನೆ ಸುಮ್ನೆ ಯಾರು ಬೈಯಲ್ಲ.‌ ಒಂದು ತಪ್ಪು ಮಾಡಿರಬೇಕು ಇಲ್ಲವೇ ಬೈಯುವುದು ಒಂದು ಚಟ ಆಗಿರಬೇಕು. ಇಲ್ಲಿ ಹೆಚ್ಚಾಗಿ ಏನು ಅಂತಂದ್ರೆ ರಾಜಕಾರಣಿಗಳು, ಸಿನಿಮಾ ನಟರು, ವಿಐಪಿಗಳು ಅಂತ ಏನು ಕರೆಯಲಾಗುತ್ತದೆ. ಅಂತವರನ್ನು ಮುಚ್ಚುಮರೆ ಇಲ್ಲದೆ ಸಾರ್ವಜನಿಕರು ಬೈಯಿತ್ತಾರೆ. ಅಂದ್ರೆ ಬೈಸಿಕೊಳ್ಳಕು ಯೋಗ ಪಡೆದುಕೊಂಡರು ಎಂದರ್ಥವಾಗುತ್ತದೆ. ಆದರೆ ಅವಾಚ್ಯ ಶಬ್ದ ಬಳಕೆ ಮಾಡದೇ, ಸರಿಯಾದ ರೀತಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರೆ ಚೆಂದ.

ದ್ವೇಷ ಭಾಷಣ ಕಾಯ್ದೆ ಬರೆಯುವವರಿಗೆ ಅನ್ವಯಸಲ್ಲ?
ದ್ವೇಷ ಭಾಷಣ ಅಂದ್ರೆ ಮಾತಿನಲ್ಲಿ ಬೈದ್ರೆ ಅದು ತಪ್ಪು. ಅಕ್ಷರದಲ್ಲಿ ಬರೆದರೆ ತಪ್ಪಲ್ಲ. ಏಕೆಂದರೆ ಭಾಷಣಕ್ಕೆ ಕಡಿವಾಣ ಹಾಕಿದಂತೆ ಅದು ಯಾವ ರೀತಿ ಬೈದ್ರೆ ಅಂತ ಗೊತ್ತಿಲ್ಲ. ಈಗಾಗಲೇ ಸಾಕಾಷ್ಟು ಶಾಸಕಾಂಗ ಕಾಯ್ದೆಗಳು ಇದ್ದವು. ಅವುಗಳಿಗೆ ಸಾರ್ವಜನಿಕರು ಬೆಲೆ ಕೊಡುತ್ತಿಲ್ಲ. ಕೆಲ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ನೀತಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.‌ ಇಂತವರಿಗೆ ಸಂವಿಧಾನ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇರುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ, ಸಾಕಾಷ್ಟು ಶಾಸಕಾಂಗ ಕಾಯ್ದೆಗಳು ಇವೆ. ಅವುಗಳನ್ನು ಪಾಲನೆ ಮಾಡೋಣ. ಹೆಚ್ಚುವರಿ ಕಾಯ್ದೆ ರಚಿಸಿ, ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ಸಾಧ್ಯವಾದಷ್ಟು ಈಗಿರುವ ಕಾಯ್ದೆಗಳನ್ನು ಸರಿಯಾಗಿ ಓದಿ, ಅರ್ಥೈಸಿಕೊಂಡು ಕಾಯ್ದೆ ಕಾನೂನು ಪಾಲನೆ ಮಾಡುವುದು ಉತ್ತಮ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords
Sponsored