ಸುದ್ದಿ ಇಲ್ಲ ಅನ್ನುವುದೇ ಒಂದು ಸುದ್ದಿ







ಕೆಲವರು ಹೇಳ್ತಾರೆ ಟಿ.ಆರ್.ಪಿ ಅಥವಾ ಇನ್ನಿತರಗಾಗಿ ಮಾಡುತ್ತಾರೆ ಅಂತ ಹಾಗೂ ಒಂದೇ ಸುದ್ದಿ ಹಾಕಿ, ಜಡಿತ್ತಾರೆ ಅಂತಾ. ಒಂದು ಮಾತ್ರ ಸ್ಪಷ್ಟ ಏಕೆಂದರೆ ನಾನು ಗದಗ ಮೂಲದ ಸ್ಥಳೀಯ ಜಿಲ್ಲಾ ಪತ್ರಿಕೆಯಲ್ಲಿ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಆಧಾರದ ಮೇಲೆ ದಿನಕ್ಕೆ ಏನಿಲ್ಲವೆಂದರೂ 50-60 ಸುದ್ದಿಗಳು ಬರುತ್ತದೆ. ಅದು ಸ್ಥಳೀಯ ತಾಲ್ಲೂಕು ವರದಿಗಾರರು, ಸಾರ್ವಜನಿಕರು ಪ್ರಕಟಣೆ ನೀಡಿದ ಸುದ್ದಿ ಆಗಿದೆ. ಭಾನುವಾರ ಮಾತ್ರ ಸ್ವಲ್ಪ ಸುದ್ದಿಗಳು ಕಡಿಮೆ ಬರುತ್ತದೆ. ದಿನನಿತ್ಯವೂ 50-60 ಸುದ್ದಿಗಳನ್ನು ತಿದ್ದಿ ತೀಡಿವ ಕೆಲಸವನ್ನು ನಾನು ಮಾಡುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ ನಾನು ಸುದ್ದಿ ತಿದ್ದಿ ತೀಡಿ ಕೆಲಸವನ್ನು ಅಚ್ಚುಕಟ್ಟಾಗಿ ನಿಟ್ಟಾಗಿ ಮಾಡುತ್ತಿದೆ. ಪತ್ರಿಕೆ ಸಂಪಾದಕರು ಹೊಗಳುತ್ತಿದ್ದರು.

ಹಾಗಾಗಿ ಸುದ್ದಿ ಇಲ್ಲ ಅನ್ನುವುದೇ ಒಂದು ಸುದ್ದಿ ಒಂದು ಜಿಲ್ಲೆಯ ಪತ್ರಿಕೆಗೆ ದಿನನಿತ್ಯ 50-60 ಸುದ್ದಿ ಅಂದರೆ 31 ಜಿಲ್ಲೆಗಳಿಗೆ 1550+ ಸುದ್ದಿಗಳು ಕರ್ನಾಟಕ ರಾಜ್ಯವೊಂದರಲ್ಲಿ ಬರುತ್ತದೆ. ಹಾಗಾಗಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳು ಟಿ.ಆರ್.ಪಿ ಆಯಿತು. ಇನ್ನಿತರ ಕಾರಣಕ್ಕಾಗಿ ಮಾಡುತ್ತಾರೆ. ಅನ್ನುವುದು ಸುಳ್ಳು. ಕರ್ನಾಟಕದ 1550+ ಸುದ್ದಿಗಳನ್ನು ಹೇಗೆ ಹಾಕಬೇಕು, ಯಾವುದೇ ಬಿಡಬೇಕು ಗೊತ್ತಾ ಆಗಲ್ಲ. ಹಾಗಾಗಿ ಮುಖ್ಯವಾಗಿರುವ ಸುದ್ದಿ ಆಧ್ಯತೆ ನೀಡಲಾಗುತ್ತದೆ. ಅದಕ್ಕೆ ಸುದ್ದಿ ಇಲ್ಲ ಅಂತ ಯಾರೂ ಹೇಳಿದರು. ಸುದ್ದಿ ಇಲ್ಲ ಅನ್ನುವುದೇ ಒಂದು ಸುದ್ದಿ ಆಗಿದೆ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ

Related High CPC Keywords