11 Jan 2026

// //

ಜಿಲ್ಲೆಗಳಿಗೆ ಸಮ ಅನುದಾನ ಬೇಕು! ಕರ್ನಾಟಕದಲ್ಲಿ ಗಾಂಧಿ ಪರಿವಾರ ಸ್ಪರ್ಧೆ


ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಬೇಕು ಸಮ ಅನುದಾನ
ಪ್ರತಿ ಬಜೆಟ್‌ನಲ್ಲಿ ಪ್ರತಿ ಜಿಲ್ಲೆಗಳಿಗೆ ಅನುದಾನ ಬದಲಾಗಿ ಆಯಾ ಇಲಾಖೆಗಳಿಗೆ, ಆಯಾ ಕ್ಷೇತ್ರಕ್ಕೆ ಅನುದಾನ ಮೀಸಲಿಡುವುದು ಸಾಮಾನ್ಯ ಇದರ ಜೊತೆಗೆ ಪ್ರತಿ ಜಿಲ್ಲೆಗಳಿಗೆ ಸಮವಾಗಿ ಅನುದಾನ ನೀಡಬೇಕು ಇಲ್ಲವೇ ಆಯಾ ಜಿಲ್ಲೆಯ ಭೌಗೋಳಿಕ ಪ್ರದೇಶದ ಅಭಿವೃದ್ಧಿಗೆ ತಕ್ಕಂತೆ ಅನುದಾನ ನೀಡಿದ್ರೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುವುದಲ್ಲದೇ, ಜನರಲ್ಲಿರುವ ಅಭಿವೃದ್ಧಿ ತಾರತಮ್ಯ ಹೋಗಲಾಡಿಸಲು ಸಾಧ್ಯವಾಗುತ್ತದೆ. ಬಹುತೇಕ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಅನುದಾನ ಕಡಿಮೆ ಬರುತ್ತದೆ ಎಂಬ ಮಾತು ಕೇಳಿ ಬರುತ್ತಿದ್ದು ಮುಂದಿನ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿಗೆ ಪ್ರತ್ಯೇಕವಾಗಿ ಅನುದಾನ ನೀಡಬೇಕು ಇನ್ನುಳಿದ ಎಲ್ಲ ಪ್ರತಿ ಜಿಲ್ಲೆಗಳಿಗೆ ಸಮ ಅನುದಾನ ಅಥವಾ ಜಿಲ್ಲೆಯ ಭೌಗೋಳಿಕ ಪ್ರದೇಶದ ಅಭಿವೃದ್ಧಿಗೆ ತಕ್ಕಂತೆ

ಅನುದಾನ ನೀಡಿ ಅಥವಾ ಅನುದಾನ ಮೀಸಲಿಟ್ಟು ತಾರತಮ್ಯ ಹೋಗಲಾಡಿಸಬೇಕು ಮತ್ತು ಬೆಂಗಳೂರು ರಾಜಧಾನಿ ಜೊತೆಗೆ ಮೈಸೂರು, ಕಲಬುರಗಿ, ಹುಬ್ಬಳ್ಳಿ ಈ ಮೂರು ನಗರಗಳನ್ನು ಉಪ ರಾಜಧಾನಿ ಅಂತ ಘೋಷಿಸಿ, ಎಲ್ಲ ಇಲಾಖೆಗಳಿಗೆ ಸಂಬಂಧಪಡುವ ಹಾಗೇ ಒಬ್ಬ ಸರ್ಕಾರದ ಉಪಕಾರ್ಯದರ್ಶಿಯನ್ನು ಮೈಸೂರು, ಕಲಬುರಗಿ, ಹುಬ್ಬಳ್ಳಿಯಲ್ಲಿ ನೇಮಿಸಿ ಅಧಿಕಾರ ನೀಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಲಿ?
ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಒಂದು ವೇಳೆ ಪ್ರಧಾನಿ ಆಭ್ಯರ್ಥಿ ಎಂದು ಘೋಷಿಸಿ, ಭಾರತದ ಪ್ರಧಾನಮಂತ್ರಿಗಳಾದರೇ, ಮುಂದಿನ ದಿನಮಾನಗಳಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಾದರಿಯಲ್ಲಿ ಆಡಳಿತ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದರು. ಅಷ್ಟೇ ಅಲ್ಲದೇ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅದೇ ರೀತಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ, ಧಾರವಾಡ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸಬೇಕು

ಮುಂದಿನ ದಿನಮಾನಗಳಲ್ಲಿ ಇಂದಿರಾ ಗಾಂಧಿ ಅವರ ಮಾದರಿ ಆಡಳಿತ ದೇಶದ ಬಡ ಜನರಿಗೆ ಅಗತ್ಯವಾಗಿದೆ ಹಾಗಾಗಿ ಕರ್ನಾಟಕ ರಾಜ್ಯದಿಂದ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಸ್ಪರ್ಧಿಸಬೇಕು ಎನ್ನುವುದು ಕಾರ್ಯಕರ್ತರ ಅಭಿಮತವಾಗಿದೆ.

ಪ್ರತಿ 20 ತಿಂಗಳಗೊಮ್ಮೆ ಸಚಿವ ಸಂಪುಟ ಪುನರ್ ರಚಿಸುವುದು ಅಗತ್ಯ
ಆಡಳಿತ ಯಂತ್ರದಲ್ಲಿ ಚುರುಕು ಮುಟ್ಟಿಸಲು ಪ್ರತಿ 20 ತಿಂಗಳಗೊಮ್ಮೆ 34 ಸಚಿವರಲ್ಲಿ 20 ಸಚಿವರನ್ನು ಬದಲಿಸಿ, ಆಯ್ಕೆಯಾದ ಹಿರಿಯ, ಕಿರಿಯ ಶಾಸಕರಿಗೆ ಮಣೆ ಹಾಕಬೇಕು. ಬಹುತೇಕ 3-4 ಬಾರಿ ಆಯ್ಕೆಯಾಗಿರುವ ಶಾಸಕರಲ್ಲಿ 50-60 ಶಾಸಕರು ಇರುವುದರಿಂದ ಯಾರಿಗೂ ಅನ್ಯಾಯವಾಗದೇ ಇರುವ ರೀತಿಯಲ್ಲಿ ಐದು ವರ್ಷಗಳಲ್ಲಿ ಮೂರು ಬಾರಿ ಪ್ರತಿ 20 ತಿಂಗಳಿಗೆ ಒಂದರಂತೆ 20 ಸಚಿವರನ್ನು ಬದಲಾಯಿಸಿ, ಹೊಸ ಹೊಸ ಶಾಸಕ ಮುಖಗಳಿಗೆ ಆದ್ಯತೆ ನೀಡುವುದರ ಮುಖಾಂತರ ಎಲ್ಲ 3-4 ಬಾರಿ ಆಯ್ಕೆಯಾಗಿರುವ ಶಾಸಕರಿಗೆ ಆದ್ಯತೆ ನೀಡಬೇಕಿದೆ.

ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಲಿ
ಚುನಾವಣೆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯ ಕೇವಲ ನೆನಪಿಗೆ ಬಾರದೆ ಅತಿ ಹೆಚ್ಚು ಉತ್ತರ ಕರ್ನಾಟಕ ಭಾಗದ ಕೆಲವು ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕ ಪಾತ್ರ ವಹಿಸುವುದರಿಂದ ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ನೀಡುವುದು ಅವಶ್ಯಕವಾಗಿದೆ.