ಮಾತೃ ಭಾಷೆ ಸಹಾಯವಿಲ್ಲದೆ ಇನ್ನೊಂದು ಭಾಷೆ ಕಲಿಯುವುದು ಅಸಾಧ್ಯ

By











ಮಾತೃಭಾಷೆಯ ಸಹಾಯವಿಲ್ಲದೆ ಯಾವುದೇ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲ. ಕನಸುಗಳು ಬೀಳುತ್ತವೆ ಅದು ಮಾತೃಭಾಷೆಯಲ್ಲಿ ಮಾತ್ರ. ಜಗತ್ತಿನ ಯಾವುದೇ ಭಾಷೆ ಕಲಿಯಿರಿ ಅದು ಮಾತೃ ಭಾಷೆಯಿಂದ ಮಾತ್ರ ಇಲ್ಲದಿದ್ದರೆ ಭಾಷೆಯನ್ನು ಕಲಿಯುವುದು ಕಷ್ಟವಾಗಲಿದೆ. ಅದಕ್ಕಾಗಿ ಆಯಾ ಪ್ರದೇಶದ ಸರ್ಕಾರಗಳು ಮಾತೃ ಭಾಷೆಗೆ ಹೆಚ್ಚು ಒತ್ತು ನೀಡಬೇಕು. ಆಮೇಲೆ ಬೇರೊಂದು ಭಾಷೆಗೆ ಒತ್ತು ನೀಡಬೇಕು. ಜನ್ಮ ನೀಡಿದ ತಾಯಿ ಭಾಷೆಯೋ ಮಾತೃ ಭಾಷೆಯಾಗಲಿದೆ. ಆ ಮಾತೃ ಭಾಷೆಯಿಂದ ಇನ್ನಿತರ ಭಾಷೆಯನ್ನು ಕಲಿಯಲು ರಹದಾರಿ ಅಂತಾನೇ ಹೇಳಬಹುದು. ಕನ್ನಡ ಭಾಷೆಯ ಶಬ್ದಗಳು ಗೊತ್ತಿದ್ರೆ ಮಾತ್ರ ಇನ್ನೊಂದು ಭಾಷೆಯ ಶಬ್ದಗಳು ಅರ್ಥ ಮಾಡಿಕೊಳ್ಳಲು ಸಾಧ್ಯ. ಮಾತೃ ಭಾಷೆಯ ಶಬ್ದಗಳು ಗೊತ್ತಿಲ್ಲ ಎಂದಾಗ ಇನ್ನೊಂದು ಭಾಷೆ ಹೇಗೆ ಕಲಿಯುತ್ತಾರೆ. ಅದಕ್ಕಾಗಿ ಮಾತೃ ಭಾಷೆಗೆ ಒತ್ತು ನೀಡುವುದಲ್ಲದೇ, ಇನ್ನೊಂದು ಭಾಷೆಯನ್ನು ಕಲಿಯಲು ಸಹ ಮಾತೃ ಭಾಷೆ ಅತ್ಯಗತ್ಯ.

ನೀವು ಶಿಕ್ಷಣವನ್ನು ಪ್ರೀತಿಸಬೇಕು

ಶಿಕ್ಷಣವನ್ನು ಕಷ್ಟಪಟ್ಟು ಅಧ್ಯಯನ ಮಾಡುವ ಮೂಲಕ ಕಲಿಯಬಾರದು, ಬದಲಿಗೆ ಪ್ರೀತಿಯಿಂದ ಕಲಿಯುವ ಮೂಲಕ ಕಲಿಯಬೇಕು. ಅದು ಮನಸ್ಸಿನ ಆಳದಿಂದ ಬರಬೇಕು. ಒಂದು ಶಾಲೆಯಲ್ಲಿ 68 ವಿದ್ಯಾರ್ಥಿಗಳಿದ್ದರು. ಆ 68 ವಿದ್ಯಾರ್ಥಿಗಳಲ್ಲಿ, ಕೇವಲ 5 ಹುಡುಗರು ಮತ್ತು 5 ಹುಡುಗಿಯರು ಬುದ್ಧಿವಂತರಾಗಿ ಎದ್ದು ಕಾಣುತ್ತಿದ್ದರು. ಆದರೆ ಅವರು ತಮ್ಮ ಶಿಕ್ಷಣವನ್ನು ಮುಗಿಸಿದ ತಕ್ಷಣ, ಆ 10 ವಿದ್ಯಾರ್ಥಿಗಳು ಮೂರ್ಖರಂತೆ ಕಣ್ಮರೆಯಾದರು. ಉಳಿದ 58 ವಿದ್ಯಾರ್ಥಿಗಳು ಏನನ್ನೂ ಸಾಧಿಸದಿದ್ದರೂ, ಜನರ ಮುಂದೆ ಆರಾಮವಾಗಿ ಓಡಾಡುತ್ತಿದ್ದಾರೆ. ನಾನು ಇಲ್ಲಿ ಹೇಳುವುದೇನೆಂದರೆ, ಯಾರೂ ತಾವು ಎಷ್ಟು ಬುದ್ಧಿವಂತರು ಎಂದು ತೋರಿಸಿಕೊಳ್ಳಬಾರದು, ಏಕೆಂದರೆ ಇದು ಹೆಚ್ಚಿನ ನಷ್ಟಗಳಿಗೆ ಕಾರಣವಾಗುತ್ತದೆ. ಶಿಕ್ಷಣ ಯಾರೊಬ್ಬರ ಆಸ್ತಿಯಲ್ಲ, ಕಷ್ಟಪಟ್ಟು ಓದುವ ಬದಲು, ಒಬ್ಬರು ಸಂತೋಷದಿಂದ ಅಧ್ಯಯನ ಮಾಡಬೇಕು. ಆಗ ಶಿಕ್ಷಣದ ಉದ್ದೇಶ ಸುಲಭವಾಗಿ ಈಡೇರುತ್ತದೆ.

ವೀರೇಶ ಧೂಪದಮಠ

ಇದನ್ನೂ ಓದಿ

ಇಂದಿನ ಹೊಸ ಮುಖಗಳು ಜವಾಬ್ದಾರರಲ್ಲ: ಪೂರ್ಣ ಲೇಖನ ಓದಿ