
ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ, ಅನುಭವಿ ಹಿರಿಯರ ಅವಶ್ಯಕ
ಅನುಭವಿ ಹಿರಿಯ ರಾಜಕಾರಣಿ ಅದರಲ್ಲಿ ಮಾಜಿ ಮುಖ್ಯಮಂತ್ರಿಗಳ ಕೊಡುಗೆ ರಾಷ್ಟ್ರ ರಾಜಕಾರಣಕ್ಕೆ ಅವಶ್ಯಕತೆ ಇದೆ. ಮುಖ್ಯಮಂತ್ರಿ ಆದವರು ರಾಜ್ಯದ ಮಂತ್ರಿ ಸ್ಥಾನ ಸೇರಿದಂತೆ ಇನ್ನಿತರ ಮುಖ್ಯಮಂತ್ರಿ ಸ್ಥಾನಕ್ಕಿಂತ ಸಣ್ಣ ಹುದ್ದೆ ಪಡೆಯಲು ಬರುವುದಿಲ್ಲ ಅಥವಾ ಒಂದೇ ವೇಳೆ ಪಡೆದರು ಆ ಮುಖ್ಯಮಂತ್ರಿ ಹುದ್ದೆಗೆ ಗೌರವ ತಕ್ಕುದಲ್ಲ. ಬದಲಾಗಿ ಕೇಂದ್ರ ಮಂತ್ರಿಯಾಗಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಸತತ ಅಧಿಕಾರಕ್ಕೆ ಬರಲು ಕಾರಣ ಓರ್ವ ಒಳ್ಳೆ ವ್ಯಕ್ತಿ ನೋಡಿ, ಜನ ವೋಟು ಹಾಕಿದ್ದಾರೆ. ಮುಂದೊಂದು ದಿನ ಕಾಂಗ್ರೆಸ್ ಪಕ್ಷದಿಂದ ಬೇರೆ ಪಕ್ಷಕ್ಕೆ ಮಹಾ ವಲಸೆ ಹೋದವರು ವಾಪಾಸ್ ಮಾತೃ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತ. ಆಗ ಮತ್ತೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಮುಂದೊಂದು ದಿನ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಬಹುದು. ಹಾಗಾಗಿ ಹಿರಿಯ ಅನುಭವಿ, ಮಾಜಿ ಮುಖ್ಯಮಂತ್ರಿಗಳು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಒಳ್ಳೆಯದು. ಒಮ್ಮೆ ಮುಖ್ಯಮಂತ್ರಿಯಾದರೆ ಮುಗಿಯಿತು. ವಾಪಾಸ್ ಮುಖ್ಯಮಂತ್ರಿ ಆಗಬೇಕು. ಆದರೆ ಅದು ಅವಶ್ಯಕತೆ ಇರುವುದಿಲ್ಲ. ಪದೇ ಪದೇ ಒಂದೇ ಹುದ್ದೆಯಲ್ಲಿ ಮುಂದುವರಿದರೆ ಜನರಿಂದ ಒಳ್ಳೆಯ ಅಭಿಪ್ರಾಯ ಬರುವುದಿಲ್ಲ. ಆದ್ದರಿಂದ ರಾಷ್ಟ್ರ ರಾಜಕಾರಣ ಕಡೆ ಮುಖ ಮಾಡಬೇಕು ಅದೇ ಸರಿಯಾದ ನಿರ್ಧಾರ. ಇದೇಕೆ ಎಂದರೆ ರಾಹುಲ್ ಗಾಂಧಿಯವರು ರಾಜ್ಯಸಭೆ ಮೂಲಕ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸೂಚಿಸಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಒಳ್ಳೆಯದು. ರಾಜ್ಯ ರಾಜಕಾರಣ ಸಾಕು. ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ ಹೋಗುವುದು ಒಳ್ಳೆಯದು. ಅದರ ಜೊತೆಗೆ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ರಾಜ್ಯಸಭೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಮನವೊಲಿಸಬೇಕು. ಅನುಭವಿ ಹಿರಿಯ ರಾಜಕಾರಣಿಗಳು, ಮಾಜಿ ಮುಖ್ಯಮಂತ್ರಿಗಳು ರಾಜ್ಯದ ಆಲೋಚನೆ ಅಥವಾ ಚಿಂತನೆಗಳಗಿಂತ. ರಾಷ್ಟ್ರ ರಾಜಕಾರಣದತ್ತ ಗಮನಹರಿಸಬೇಕು ಅದೇ ಒಳ್ಳೆಯ ಬೆಳವಣಿಗೆ.
ವೀರೇಶ ಧೂಪದಮಠ