ಪಿಎಂ ಕಿಸಾನ್ ಸಮ್ಮಾನ್ ಮಾದರಿ, ಗೃಹ ಲಕ್ಷ್ಮೀಗೂ ಅನುಸರಿಸುತ್ತಾ ಸರ್ಕಾರ

ಪಿಎಂ ಕಿಸಾನ್ ಸಮ್ಮಾನ್ ಮಾದರಿ, ಗೃಹ ಲಕ್ಷ್ಮೀಗೂ ಅನುಸರಿಸುತ್ತಾ ಸರ್ಕಾರ

ಬಹುತೇಕ ರಾಜಕಾರಣಿಗಳು ನನ್ನ ವಯಸ್ಸಿನ 40-50 ವರ್ಷ ದೊಡ್ಡವರು ಅಂದ್ರೆ ತಂದೆ, ತಾತನ ವಯಸ್ಸಿನವರು. ವಯಸ್ಸಿನಲ್ಲಿ ದೊಡ್ಡವರು, ಅನುಭವಿಗಳಾದರೂ ಸಣ್ಣ ಸಲಹೆ ನೀಡುವುದು ಅವಶ್ಯಕತೆ ಇದೆ. ಬೇರೆವರೂ ಹಿಂಗೆಲ್ಲಾ ಬೈಹುದು ಮುದುಕ ಆಗಿ ಗೊತ್ತಾ ಆಗಲ್ಲ ನಿನಗ ಅಂತ. ನಮಗೆಲ್ಲ ಬೈಯಾಗ ಬರಲ್ಲ. ಹೀಗಾಗಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಾನ್ವಯ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿ ಜಮಾವಾಗುತ್ತಿದೆ. ಅದು ಹಣ ಜಮಾ ದೊಡ್ಡ ಪ್ರಮಾಣದಲ್ಲಿ ಪ್ರಚಾರದಡಿ ಇಷ್ಟು ಕಂತು, ಇಷ್ಟೇನೆ ಕಂತು ಎಂಬ ಹಣ ಜಮಾ ಆಗಲಿದೆ ಎಂಬ ಮಾಧ್ಯಮ ವರದಿಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿ, ಹಣ ಸಂದಾಯವಾಗುತ್ತಿದೆ. ಇದೇ ಮಾದರಿ ಮುಖ್ಯಮಂತ್ರಿ ಗೃಹಲಕ್ಷ್ಮೀ ಹಣ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಣ ಜಮಾ ಆಗಲಿದೆ.

ಆದರೆ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿಸಬೇಕು. ಏಕೆಂದರೆ ಜನರಿಗೆ ಗೊತ್ತೇ ಆಗುತ್ತಿಲ್ಲ. ಗೃಹಲಕ್ಷ್ಮೀ ಹಣ ಬಂದಿದ್ದು ಬಿಟ್ಟಿದ್ದು. ಜನರಿಗೆ ತಿಳಿಸಿ, ಹಣ ಹಾಕುವುದರಿಂದ ಸರ್ಕಾರದ ಮೇಲೆ ಜನರಿಗೆ ಇನ್ನೂ ಹೆಚ್ಚು ವಿಶ್ವಾಸ ಮೂಡಲಿದೆ. ಪ್ರಚಾರ ಮಾಡಿಸಿರುವುದನ್ನು ಸಹಿಸಲಾಗದೆ. ಇದೇ ವಿಚಾರಕ್ಕೂ ವಿರೋಧ ಪಕ್ಷಗಳು ಉಳ್ಳಾಗಡ್ಡಿ ಕಣ್ಣಿರು ಸುರಿಸಿದ್ರು, ಆಡಳಿತ ಪಕ್ಷ ಸೇಬು ಹಣ್ಣು ತಿನ್ನುತೆ ಹೊರತಾಗಿ ಕ್ಯಾರೇ ಎನ್ನಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಗೃಹ ಲಕ್ಷ್ಮೀ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೊದಲು ಮಾಧ್ಯಮ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿ ಹಣ ಹಾಕಿ. ಜೊತೆಗೆ ಗೃಹಲಕ್ಷ್ಮೀ ಮುಂದೆ ಮುಖ್ಯಮಂತ್ರಿ ಗೃಹಲಕ್ಷ್ಮೀ ಯೋಜನೆ ಹಣ ಎಂದು ನಮೂದಿಸಿದರೆ ಚಂದ. ಎಲ್ಲಾ ಗ್ಯಾರಂಟಿ ಯೋಜನೆಗಳ ಹೆಸರು ಮುಂದೆ ಮುಖ್ಯಮಂತ್ರಿ ಎಂಬ ಪದ ಇರಬೇಕು. ಏಕೆಂದರೆ ಇದು ಕೇಂದ್ರದಲ್ಲ ರಾಜ್ಯದ ಯೋಜನೆ ಎನ್ನುವಂತೆ ಜನರಿಗೆ ಮನದಟ್ಟಾಗುತ್ತದೆ.

ಎಐ ಎಂಬುದು ಹೇಳಿದ್ದನ್ನೇ ಹೇಳುವ ಕಿಸಬಾಯಿ ದಾಸ
ಎಐ ನಂಬಿಕೊಂಡು ಎಲ್ಲವನ್ನೂ ಮಾಡಿ ಬಿಡುತ್ತೇವೆ ಎನ್ನುವ ಒಂದು ಕಾಲ್ಪನಿಕ ಕಥೆ ಅಷ್ಟೇ. ಎಐ ಎನ್ನುವುದು ಲಭ್ಯವಿರುವ ಮಾಹಿತಿಯನ್ನು ಮಾತ್ರ ತಿಳಿಸುತ್ತದೆ. ಅದು ಬಿಟ್ಟರೆ ಹೊಸ ಹೊಸ ವಿಚಾರಗಳು ಅದರ ಬಳಿ ಲಭ್ಯವಿರುವುದಿಲ್ಲ. ನಾವು ಅಂದುಕೊಂಡಷ್ಟು ತಿಳಿಕೊಂಡಷ್ಟು ಪ್ರಭಾವ ಬೀರಿಲ್ಲ. ಒಂದು ವಿಷಯವನ್ನು ಪದೇ ಪದೇ ಹೇಳುತ್ತದೆ. ಮತ್ತು ಸುಳ್ಳು ಮಾಹಿತಿ ಸ್ವಲ್ಪ ಮೆಟ್ಟಿಗೆ ಕಂಡು ಬರುತ್ತದೆ. ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಿಸುವುದಲ್ಲದೇ, ಸರಿಯಾದ ಮಾಹಿತಿ ಪಡೆಯಲು ಸುಮಾರು ಹೊತ್ತು ಸಮಯವನ್ನು ಹಾಳುಮಾಡುತ್ತದೆ.

ಒಂದು ರೀತಿಯಲ್ಲಿ ಕೋಪ ಬರುತ್ತದೆ. ಹೀಗಾಗಿ ಎಐ ನಂಬಿಕೊಂಡು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದು ದೊಡ್ಡ ಅಪಾಯಕಾರಿ ಎನ್ನುವ ಅಂಶ ಇತ್ತಿಚಿನ ದಿನಗಳಲ್ಲಿ ಕಂಡು ಬರುತ್ತದೆ. ಹಾಗಾಗಿ ಎಐ ನಂಬಿಕೊಂಡು ಉದ್ಯೋಗದಾತರನ್ನು ಕೆಲಸದಿಂದ ತೆಗೆದುಹಾಕಿ ಸಂಸ್ಥೆಗೆ ನಷ್ಟಯುಂಟು ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ.

ವೀರೇಶ ಧೂಪದಮಠ

📌 ಇದನ್ನೂ ಓದಿ

  1. ಇಸ್ರೋದಲ್ಲಿ ಭಾರಿ ಬಿರುಗಾಳಿ: 120+ ಟಾಪ್ ವಿಜ್ಞಾನಿಗಳ ರಾಜೀನಾಮೆ!
  2. 2026: ಅಮೆರಿಕ-ಇರಾನ್ ಯುದ್ಧ, ಮಯನ್ಮಾರ್ ಬೋಟ್ ದುರಂತ
  3. 60ಕ್ಕೆ ಅರಳು ಮರಳು ಬೇಡ: ವಯಸ್ಸು ರಿವರ್ಸ್ ಮಾಡೋ 5 ಸೀಕ್ರೆಟ್
  4. Karnataka Lokayukta Clerk Recruitment 2026: 25 ಹುದ್ದೆಗಳು
  5. ಜಗತ್ತಿನಲ್ಲಿ ಪಾಪ ಏಕೆ ಹೆಚ್ಚಾಗ್ತಿದೆ? 7 ನಿಜವಾದ ಕಾರಣಗಳು
Related High CPC Keywords
Sponsored