ಬೃಹತ್ ನಗರ 70 ವರ್ಷ, ಗ್ರೇಟರ್ ನಗರ ಆಗಲು 150 ವರ್ಷ ಬೇಕು ಕಾರಣ ಜನಸಂಖ್ಯೆ ಇಲ್ಲ
ಬೃಹತ್ ನಗರ 70 ವರ್ಷ, ಗ್ರೇಟರ್ ನಗರ ಆಗಲು 150 ವರ್ಷ ಬೇಕು
ದಿನಕ್ಕೊಂದು ಹೊಸ ರಾಗದ ಕಥೆ ಕೇಳುವಂತಾಗಿದೆ. ವಿಶ್ವ ಸಂಸ್ಥೆ, ವಿಜ್ಞಾನಿಗಳ ಪ್ರಕಾರ 2100 ಇಸ್ವಿಗೆ ದೇಶದ ಜನಸಂಖ್ಯೆ 100 ಕೋಟಿಗೆ ಕುಸಿಯಲಿದೆ ಅಂತೆ, ಒಟ್ಟಿನಲ್ಲಿ 2100 ಇಸ್ವಿಯಿಂದ ಜನಸಂಖ್ಯೆ ಹಂತಹಂತವಾಗಿ ಕುಸಿತ ಕಾಣುತ್ತದೆ. ಹಾಗಾಗಿ ಇನ್ನು 70 ವರ್ಷ ಯಾವುದೇ ನಗರ ಬೃಹತ್ ನಗರ ಪಾಲಿಕೆಯಾಗಲು ಸಾಧ್ಯವಿಲ್ಲ. ಇನ್ನು 150 ವರ್ಷ ಯಾವುದೇ ನಗರ ಗ್ರೇಟರ್ ಬೆಂಗಳೂರು ತರ ಆಗಲು ಸಾಧ್ಯವಿಲ್ಲ. ಕಾರಣ ಜನಸಂಖ್ಯೆ ಇಲ್ಲ. ಜನಸಂಖ್ಯೆ ಇಲ್ಲದೆ ಅದನ್ನು ಮಾಡಿ ಇದನ್ನು ಮಾಡಿ ಎಂದರೆ ಹೇಗೆ ಮಾಡಬೇಕು ಎಂಬುದೇ ದಿಕ್ಕು ತೋಚುವುದಿಲ್ಲ. ಈಗಿನ ಹಲವಾರು ಹಳ್ಳಿಗಳು ಗ್ರಾ.ಪಂ ಕೇಂದ್ರ ಹೊಂದಿ ಊರಿನ ಗೌರವವನ್ನು ಹೆಚ್ಚು ಪಡೆದುಕೊಂಡಿವೆ. ಪ್ರತ್ಯೇಕ ಆಡಳಿತವಿದ್ದರೆ ಅದು ಗೌರವದ ಸಂಕೇತ.

ಈಗ ಬೃಹತ್ ನಗರ, ಗ್ರೇಟರ್ ನಗರದಿಂದ ಯಾರು ದುಪ್ಪಟ್ಟು ತೆರಿಗೆ ಪಾವತಿಸಲು ಸಿದ್ಧರಿಲ್ಲ. ಧಾರವಾಡ ಪ್ರತ್ಯೇಕ ಮಾಡುವ ಮೊದಲು ಒಂದು ತಿಂಗಳು ಕಾಲ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಇತ್ತು. ಆಗ ಕೆಲವರು ಸುಮ್ನೆ ಕುಳಿತು ಕುಂಭಕರ್ಣ ನಿದ್ದೆಯಲ್ಲಿ ಇದ್ದರು. ಈಗ ಎದ್ದು ಬಂದಿದ್ದಾರೆ. ಕೆಲವೇ ಕೆಲವರಿಗೆ ಪ್ರತ್ಯೇಕ ಪಾಲಿಕೆಯಾದರೆ ಏನು ಸಮಸ್ಯೆ?. ಧಾರವಾಡಿಗರ ತಿಂಗಳು ಕಾಲದ ಹೋರಾಟದ ಫಲವಾಗಿ ಈಗ ರಾಜ್ಯಪಾಲರ ಪ್ರತ್ಯೇಕ ಪಾಲಿಕೆಗೆ ಅನುಮೋದನೆ ನೀಡಿದ್ದಾರೆ. 2027 ರಿಂದ ಹುಬ್ಬಳ್ಳಿ ಮತ್ತು ಧಾರವಾಡ ಪ್ರತ್ಯೇಕ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬರಲಿದೆ.
ಬಿ.ಆರ್.ಟಿ.ಎಸ್ ಯೋಜನೆ ವಿಲೀನ ಅಥವಾ ವಿಸರ್ಜಿಸಿ
ಆರಂಭದಲ್ಲಿ ಮಸ್ತ್ ಮಸ್ತ್ ಹೌದು ಹೌದು ಎನ್ನುವಂತಿದ್ದ ಬಿ.ಆರ್.ಟಿ.ಎಸ್ ಚಿಗರಿ ಬಸ್ ನನಗೂ ವಯಸ್ಸಾಯಿತು ಎನ್ನುವಂತೆ ಓಡುತ್ತಿದೆ. ಎಲ್ಲ ನೆಟ್ ಬೋಲ್ಟ್ ಕಳಚಿ ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕಿ ಜನರ ಬಾಯಿಗೆ ದೊಡ್ಡ ಆಹಾರವಾಗುತ್ತಿದೆ. ಅದರಲ್ಲೂ ತಿಂಗಳಲ್ಲಿ 1-2 ಸಲ ಸುದ್ದಿ ಪ್ರಸಾರ ಕಟ್ಟಿಟ್ಟ ಬುತ್ತಿ. ಕೇಳಿ ಕೇಳಿ ಸಾಕಾಗಿದೆ. ಒಂದು ಬಿ.ಆರ್.ಟಿ.ಎಸ್ ಸಂಸ್ಥೆಯನ್ನು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಜೊತೆ ವಿಲೀನ ಮಾಡಿ, ಇಲ್ಲವೇ ಬಿ.ಆರ್.ಟಿ.ಎಸ್ ಸಂಸ್ಥೆಯನ್ನು ವಿಸರ್ಜಿಸಿ, ರಸ್ತೆಯ ಕಾರಿಡಾರ್ ತೆರವುಗೊಳಿಸಿ, ಸಾಮಾನ್ಯ ಬಸ್ ಗಳನ್ನು ಓಡಿಸಿ. ಇವೆರಡರಲ್ಲಿ ಒಂದು ತೀರ್ಮಾನ ಸರ್ಕಾರ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಇಲ್ಲಿನ ಮಂದಿಗೆ ದಿನನಿತ್ಯ ಕೇಳಿ ಕೇಳಿ ತಲೆನೋವು ಕಟ್ಟಿಟ್ಟ ಬುತ್ತಿ.
ಹುಬ್ಬಳ್ಳಿ ಫ್ಲೈ ಓವರ್ ಯಾವಾಗ ಮುಗಿಯುತ್ತೆ?
ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ಇನ್ನು ಯಾವಾಗ ಮುಗಿಯುತ್ತೆ ಎಂಬುದೇ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಕಾರ್ಮಿಕರ ಕೊರತೆ ಇದೆಯೇ?, ಸಲಕರಣೆ ಕೊರತೆ ಇದೆಯೇ?, ಆಸಕ್ತಿಯ ಕೊರತೆ ಇದೆಯೇ?, ಮಾಡಬೇಕಾ ಬೇಡ್ವಾ ಎಂಬ ಬೇಸರದಲ್ಲಿ ಮಾಡುವ ಕೆಲಸ ಯಾವಾಗಲೂ ಬೇಗ ಮುಗಿಯಲ್ಲ. ಯಾರು ಕೇಳುವವರು ಇಲ್ಲ ಹೇಳುವವರು ಇಲ್ಲ. ಕಾಮಗಾರಿ ಮುಗಿಯಲು ಎಷ್ಟು ದಿನ ಬೇಗ ಅಂತಾದರೂ ಗುತ್ತಿಗೆದಾರರು ಸ್ಪಷ್ಟಪಡಿಸಲಿ. ನಗರದ ಪೋಲೀಸ್ ಸ್ಟೇಷನ್ ಅರ್ಧಂಬರ್ಧ ಕೆಡಿವಿ ಹುಬ್ಬಳ್ಳಿ ಅಂದಚೆಂದ ಹಾಳಾಗಿದೆ. ಪೂರ್ತಿಯಾಗಬೇಕು, ಅರ್ಧ ಏಕೆ?. ಕಾಮಗಾರಿ ಕುಂಟು ನೆಪವೊಡ್ಡಿ ದಿನ ದುಡುವುದು ಸರಿಯಲ್ಲ. ಬೇಗ ಕಾಮಗಾರಿ ಮುಗಿದರೆ ಇಂದಿನ ಪೀಳಿಗೆ ನೋಡಿ ಕಣ್ತುಂಬಿಕೊಳ್ಳುತ್ತದೆ ಅಷ್ಟೇ ವಿಚಾರ ಮತ್ತೇ ಏನೇನು ಇಲ್ಲ.
ವೀರೇಶ ಧೂಪದಮಠ