ಇಡೀ ಬೆಂಗಳೂರು ವೀಕ್ಷಿಸಲು ಕನಿಷ್ಠ 15 ದಿನವಾದರೂ ಬೇಕು

ವೈಯಕ್ತಿಕ ಅಥವಾ ಅಪರೂಪಕ್ಕೊಮ್ಮೆ ಬೆಂಗಳೂರು ಬಂದಾಗ ಗಲಿಬಿಲಿಯಾಗುವುದು ಸಹಜ. ಏಕೆಂದರೆ ಸರಿಯಾದ ರೂಟ್ ಗೊತ್ತಿರುವುದಿಲ್ಲ. ಇನ್ನು ಗೂಗಲ್ ಮ್ಯಾಪ್ ನೆಚ್ಚಿಕೊಂಡು ಹೋದರೆ ಅದು ಎಲ್ಲೆಲ್ಲೋ ಕರೆದುಕೊಂಡು ಹೋಗಿಬಿಡುತ್ತದೆ. ಹೀಗಾಗಿ ನನಗೆ ಅನಿಸಿದ್ದ ಮಟ್ಟಿಗೆ ಕನಿಷ್ಟ 15 ದಿನವಾದರೂ ಬೇಕು ಇಡೀ ಬೆಂಗಳೂರು ನೋಡಲು ಒಂದೇ ದಿನಕ್ಕೆ ನೋಡುವುದಾದರೆ ಅದು ಲಾಲ್ ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ, ಉಚ್ಚ ನ್ಯಾಯಾಲಯ, ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಅರಮನೆ, ಕಂಠೀರವ ಸ್ಟುಡಿಯೋ ಇನ್ನೂ ಇತ್ಯಾದಿ. ಪ್ರಮುಖವಾದುದು ಒಂದೇ ದಿನದಲ್ಲಿ ನೋಡಬಹುದು. ಆದರೆ ಇಡೀ ಗಲ್ಲಿ ಗಲ್ಲಿ ವೀಕ್ಷಣೆ ಮಾಡಲು ಸಮಯ ಬೇಕು. ಬೆಂಗಳೂರಲ್ಲಿ ಜನ ಗಡಿಬಿಡಿಯಲ್ಲಿ ಪಾಸ್ಟ್ ಆಗಿ ಓಡಾಡುತ್ತಿರುವ ಅಂಶ ಕಂಡುಬಂತು ಏಕೆಂದರೆ ಅಷ್ಟು ಬ್ಯುಸಿ ಆಗಿದ್ದಾರೆ. ಅದು ಯಾವ ಮಟ್ಟಕ್ಕೆ ಅಂದ್ರೆ ಸುದ್ದಿ ಚಾನೆಲ್ ಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಲು ಪುರುಸೊತ್ತು ಇರಲಿಕ್ಕಿಲ್ಲ ಅನಿಸುತ್ತದೆ. ಸುಮಾರು 10-11 ವರ್ಷಗಳ ಹಿಂದೆ ಆಗ ಬೆಂಗಳೂರಿಗೆ ಬಂದಾಗ ಅಂದರೆ 2016-17 ಇಸ್ವಿ ಅನಿಸುತ್ತದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಒಂದು ಬಸ್ ನಲ್ಲಿ ಸುಮಾರು 20 ವರ್ಷದ ಹುಡುಗಿ ಪತ್ರಕರ್ತೆ ನ್ಯೂಸ್ ಪೇಪರ್ ಹಿಡಿದು ಪತ್ರಿಕೆಯಲ್ಲಿ ಪ್ರಕಟವಾದ ಸರ್ಕಾರದ ಆಡಳಿತ ವೈಖರಿ ಬಗ್ಗೆ ಹಿಗ್ಗಾಮುಗ್ಗಾ ತರಾಟೆಗೆ ತಗೊಳ್ತಾ ಇದ್ದರು. ಒಂದು ರೀತಿಯಲ್ಲಿ ಬಸ್ ಅಲ್ಲ. ಇಡೀ ಬಸ್ ನಿಲ್ದಾಣವೇ ಕಂಪನದ ಅನುಭವವಾಯಿತು. ಮೂಕ ಪ್ರೇಕ್ಷಕನಾಗಿ ಆ ಸಂದರ್ಭದಲ್ಲಿ ಪತ್ರಿಕೆ ಹೆಸರನ್ನು ಗಮನಿಸಲಿಲ್ಲ ಹಾಗಾಗಿ ಆ ಪತ್ರಿಕೆ ಹೆಸರು ಗೊತ್ತಿಲ್ಲ. ಸ್ಥಳೀಯ ಪತ್ರಿಕೆಯಾಗಿರಬಹುದು. ಆ ನೆನಪು ಬೆಂಗಳೂರು ಬಂದಾಗ ಅದರಲ್ಲೂ ಮೆಜೆಸ್ಟಿಕ್ ಬಂದಾಗ ನೆನಪು ಆಗುತ್ತೆ ಮರೆಯಲು ಸಾಧ್ಯವೇ ಇಲ್ಲ. ಆಗಾಗ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಬಂದಾಗ ಆ ನೆನಪು ಸದಾ ನೆನಪು ಆಗುತ್ತದೆ.
ಕೆಲಸದ ಹೊರೆ ಒಂದು ಶೂನ್ಯ ಜಾಸ್ತಿ
ಈಗಿನ ಪರಿಸ್ಥಿತಿ ಏನಾಗಿದೆ ಎಂದರೆ ತಾವು ಪಡೆದುಕೊಳ್ಳುವ ಸಂಬಳದಲ್ಲಿ ಹೆಚ್ಚುವರಿಯಾಗಿ ಒಂದು ಶೂನ್ಯ ಸೇರಿಸಬೇಕು. ಅಂದ್ರೆ ಒಬ್ಬ ವ್ಯಕ್ತಿ 12,000 ರೂ. ಸಂಬಳವಿದ್ದರೆ 1,20,000 ರೂ. ಅಂತ ತಿಳಿದುಕೊಳ್ಳಬೇಕು. ಸರ್ಕಾರಿ ಸಂಬಳ ಪಡೆಯುವ ವ್ಯಕ್ತಿ ಹೆಚ್ಚುವರಿಯಾಗಿ ಒಂದು ಶೂನ್ಯ ಸೇರಿಸುವಷ್ಟು ಕೆಲಸದ ಒತ್ತಡವಿರುತ್ತದೆ. ಹಾಗಾಗಿ ಒತ್ತಡದ ಕೆಲಸವಾಗಬಾರದು ಅದರ ಜೊತೆಗೆ ಉತ್ತಮ ಆರೋಗ್ಯ ಮುಖ್ಯವಾಗಿರುತ್ತದೆ. ಕೆಲಸದ ಒತ್ತಡಕ್ಕೆ ಸಿಲುಕಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಸರಿಯಲ್ಲ.
ಪ್ರೇಕ್ಷಕರ ಗ್ಯಾಲರಿ ಒಂದು ಮಾತಿನ ಕಥೆ
ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ. ಕೆಲವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ನೋಡಿಕೊಂಡು ಹೋಗಬೇಕು ಅಂತ ಮಾಡಿರುತ್ತಾರೆ. ಹಂಗೆ ಪ್ಲಾನ್ ಇತ್ತು ಆದರೆ ವಿಪಕ್ಷ ಕಲಾಪ ಸೂಸುತ್ರವಾಗಿ ನಡೆಸಿಕೊಡುತ್ತಿಲ್ಲ ಎನ್ನುವುದು ಡಿಡಿ ಚಂದನ ನೋಡಿದ ಮೇಲೆ ಗೊತ್ತಾಯಿತು. ಅದಕ್ಕೆ ಈ ಎಲ್.ಕೆ.ಜಿ ಯು.ಕೆ.ಜಿ ಮಕ್ಕಳು ಆಟ ಆಡುತ್ತಾರಲ್ಲ ಆ ರೀತಿ ಆಟ ನಾ ಎಲ್ಲಿ ನೋಡಕೊಂತ ಕುಂದ್ರಲಿ ಅಂತ ಸುಮ್ಮನಾಗಿ ಹುಬ್ಬಳ್ಳಿಗೆ ರೈಲು ಹತ್ತಿ ಹೊರಟೆ ಅಷ್ಟೇ.
ವೀರೇಶ ಧೂಪದಮಠ