ಎಲೆಕ್ಷನ್ ಹವಾ ಕೇವಲ ಒಂದುವರೆ ವರ್ಷ ಮಾತ್ರ!
ಎಲೆಕ್ಷನ್ ಹವಾ ಕೇವಲ ಒಂದುವರೆ ವರ್ಷ ಮಾತ್ರ!
ಚುನಾವಣೆ ತಯಾರಿ ಮೂರು ತಿಂಗಳು ಹೊರತುಪಡಿಸಿ ಅಂದರೆ ನೀತಿ ಸಂಹಿತೆ ಹೊರತುಪಡಿಸಿ, ಕೇವಲ 15 ತಿಂಗಳು ಮಾತ್ರ ರಾಜ್ಯ ಸರ್ಕಾರದ ಅಧಿಕಾರ ಇರುವುದರಿಂದ ಈ ಅವಧಿಯನ್ನು ಚುನಾವಣೆ ಅವಧಿಯಂದೇ ಪರಿಗಣಿಸಲಾಗುತ್ತದೆ. ಈ 15 ತಿಂಗಳು ಚುನಾವಣೆ ಅವಧಿಯು ಆಡಳಿತ, ವಿರೋಧ ಪಕ್ಷ ಅದರಲ್ಲೂ ವಿರೋಧ ಪಕ್ಷದ ವಾಕ್ಸಮರ ಜೋರಾಗುತ್ತದೆ. ಈ ವಾಕ್ಸಮರವನ್ನು ರಾಜ್ಯ ಸರ್ಕಾರ ಯಾವ ರೀತಿಯಾಗಿ ಎದುರಿಸುತ್ತದೆ ಎಂಬುದೇ ಯಕ್ಷಪ್ರಶ್ನೆ. ಏಕೆಂದರೆ ಆರೋಪ, ಪ್ರತ್ಯಾರೋಪ ಕೋಲಾಹಲ, ಗದ್ದಲ ಮುಖಾಂತರ ಆಡಳಿತದ ಪಕ್ಷದ ಸರ್ಕಾರದ ಬಗ್ಗೆ ಒಳ್ಳೆ ಅಭಿಪ್ರಾಯವಿಲ್ಲದಂತೆ ಮಾಡಿಬಿಡುತ್ತಾರೆ. ಜನರನ್ನು ಅದರಲ್ಲೂ ಮತದಾರರ ಮನಸ್ಸನ್ನು ಗೆಲ್ಲಲು ನಾನಾ ಬಗೆಯ ನಾಟಕ ಆಡಬಹುದು. ಏಕೆಂದರೆ ಇದೊಂದು ಚುನಾವಣೆ ಅವಧಿ ಆಡಳಿತ ಪಕ್ಷ ವಿರೋಧ ಪಕ್ಷ ನಡುವೆ ದೊಡ್ಡ ಹೈಡ್ರಾಮಾ ನಡೆದರೂ ನಡೆಯಬಹುದು. ಮಂತ್ರಿಗಳು ಸೋಲುತ್ತಾರೆ ಎಂಬ ಅಂಶ ಕಂಡು ಬಂದರೆ ಸರಕಾರ ಬಿದ್ದಂತೆ ಹಾಗಾಗಿ ಮಂತ್ರಿಗಳು ಸೇರಿದಂತೆ ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ ಜನರ ಮನಸ್ಸನ್ನು ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವತ್ತ ಚಿತ್ತ ಹರಿಸಬೇಕು.
ವೀರೇಶ ಧೂಪದಮಠ