ಸರ್ಕಾರದ 100 ರ ಸಂಭ್ರಮ, ಜವಾಬ್ದಾರಿ ಹೆಚ್ಚು
ಸರ್ಕಾರದ 100 ರ ಸಂಭ್ರಮ, ಜವಾಬ್ದಾರಿ ಹೆಚ್ಚು
ಅಧಿಕಾರ ಸ್ವೀಕರಿಸಿ 100 ದಿನ ಪೂರೈಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಜನರ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಒಂದು ತಪ್ಪಿದ ಮೇಲೆ ಮತ್ತೊಮ್ಮೆ ಬೇಡಿಕೆ ಶುರುವಾಗುತ್ತದೆ. ಜನರ ಬೇಡಿಕೆಗಳಿಗೆ ಲಿಮಿಟ್ ಇಲ್ಲ. ಮೊದಲನೆಯದ್ದಾಗಿ ಖಾಸಗಿ ವಲಯದಲ್ಲಿ ಯುವಕರಿಗೆ ಉದ್ಯೋಗ ಒದಗಿಸುವುದು ಅತಿ ಅವಶ್ಯಕ. ಬಹಳಷ್ಟು ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಒದಗಿಸಿಕೊಡುವುದು ಮೊದಲ ಆಯ್ಕೆಯಾಗಿದೆ. ಎರಡನೇಯದು ಸರ್ಕಾರದ ಬೊಕ್ಕಸ ತುಂಬಿಸಲು ಪ್ರಯತ್ನಿಸುವುದು ವಿಐಪಿ ಎನ್ನುವ ವ್ಯಕ್ತಿಯಿಂದ ಸರಿಯಾಗಿ ದುಡಿಸಿಕೊಂಡ ವ್ಯಕ್ತಿಗೆ ಸಂಬಳ ಕೊಡದೆ ಮೋಸ ಮಾಡಿದ ಹಾಗೇ ಸರಕಾರಕ್ಕೂ ತೆರಿಗೆ ಪಾವತಿಸಿರುವುದಿಲ್ಲ. ಸಂಪೂರ್ಣ ತೆರಿಗೆ ವಸೂಲಿ ಮಾಡಬೇಕು. ರಾಜ್ಯದಲ್ಲಿ ಸಂಪನ್ಮೂಲ ತುಂಬಿಸಲು ಸರ್ಕಾರ ಪ್ರಯತ್ನಿಸಬೇಕು.
ಬೂತ್ ಮಟ್ಟದಲ್ಲಿ ಪಾದಯಾತ್ರೆ

ಒಮ್ಮೆಯಾದರೂ ಪಾದಯಾತ್ರೆ ವಿಧಾನಸಭೆಯ ಬೂತ್ ಮಟ್ಟದ 1ನೇಯ ಬೂತ್ ನಿಂದ ಕೊನೆಯ ಬೂತ್ ವರೆಗೂ ಪಾದಯಾತ್ರೆ ಆಯಾ ಸ್ಥಳೀಯ ಕಾಂಗ್ರೆಸ್ ಪಕ್ಷದಿಂದ ನಡೆಯಬೇಕು. ಇದು ಸ್ಥಳೀಯ ಶಾಸಕರಿಗೂ ಅವಶ್ಯಕತೆ ಇದೆ. ರಾಜ್ಯದಲ್ಲಿ ನಾಯಕನಾಗಿ ಬೆಳೆಯಬೇಕಾದರೆ ಅದು ರಾಜ್ಯಾದ್ಯಂತ ಪ್ರವಾಸ ಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ ಕುಳಿತುಕೊಂಡರೆ ಆಗುವುದಿಲ್ಲ. ಒಬ್ಬ ನಾಯಕನಾಗಿ ಗುರುತಿಸಿಕೊಳ್ಳಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದು ಸೂಕ್ತ. ರಾಜ್ಯ ಪ್ರವಾಸಕ್ಕೆ ಜನರು ಹೆಚ್ಚು ಆಕರ್ಷಿತರಾಗುತ್ತಾರೆ.
ಅಲರ್ಟ್ ಮೆಸೇಜ್ ದಾಳಿಗೆ ಕಾರಣ ಇರಬಹುದೇ?
ಯಾರಾದರೂ ಪಾನ್ ಕಾರ್ಡ್ ಮುಖಾಂತರ ಕಾರ್, ಬೈಕ್, ಚಿನ್ನ, ಬೆಳ್ಳಿ, ಒಡವೆ ಸೇರಿದಂತೆ ಇನ್ನಿತರ ಹೈ ಪ್ರೈಸ್ ಐಟಂ ಖರೀದಿಸಿದಾಗ ಸಹಜವಾಗಿಯೇ ಐಟಿ, ಇಡಿ ಇಲಾಖೆಗೆ ಅಲರ್ಟ್ ಮೆಸೇಜ್ ಹೋಗುತ್ತದೆ ಅಂತ ಅನಿಸುತ್ತದೆ. ವ್ಯಕ್ತಿ ತನ್ನ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದರೇ, ಸಹಜವಾಗಿ ದಾಳಿ ಮಾಡುತ್ತದೆ. ಹೆಚ್ಚಾಗಿ ವಿರೋಧ ಪಕ್ಷಗಳ ಮೇಲೆ ಹೆಚ್ಚು ಕಂಡು ಬಂದಿದ್ದು ನೋಡಿದ್ದೇವೆ. ಒಂದು ನೆನಪಿರಲಿ ಅಧಿಕಾರ ಎನ್ನುವುದು ಶಾಶ್ವತವಲ್ಲ ಒಂದಲ್ಲಾ ಒಂದು ಅಧಿಕಾರದಿಂದ ಕೆಳಗಿಳಿಯಲೇಬೇಕು ಅದು ಜಗದ ನಿಯಮ.
ಐಟಿ, ಇಡಿ ಮಾದರಿ ರಾಜ್ಯದಲೂ ಲೋಕಾಯುಕ್ತ ಬಲಿಷ್ಠವಾಗಲಿ
ಪ್ರಜಾಸೇವೆ ಕಾರ್ಯಕ್ರಮದಡಿ ರಾಜ್ಯಾದ್ಯಂತ 26,000 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಶೇ.10 ಮಾತ್ರ ಅರ್ಜಿಗಳು ಸರಳ ಇರಬಹುದು ಕೆಲವು ಅರ್ಜಿ ಕಾನೂನಿನ ತೊಡಕು. ಅಧಿಕಾರಿಗಳ ಸೊಂಬೇರಿತನದಿಂದ ತಪ್ಪು ಮಾಹಿತಿ ನೀಡಿ ಅರ್ಜಿ ತಿರಸ್ಕರಿಸುವುದು ಸೇರಿದಂತೆ ಇನ್ನಿತರ ಸೇರಿ ಬಹಳಷ್ಟು ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿಯಬಹುದು. ಸಾರ್ವಜನಿಕರ ಸ್ನೇಹಿಯಾದ ಸಾರಿಗೆ, ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ, ಇಂಧನ ಸೇರಿದಂತೆ ಹಲವು ಇಲಾಖೆಗಳಿಗೆ ಅರ್ಜಿ ಸ್ಪಂದಿಸುವುದು ಅಪರೂಪವಾಗಿದೆ. ಸಾಧ್ಯವಾದಷ್ಟು ಲೋಕಾಯುಕ್ತ ಅಲರ್ಟ್ ಆಗಿ ಸೇವೆ ಒದಗಿಸಿಕೊಡುವುದು ಮೊದಲ ಆದ್ಯತೆ ನೀಡಬೇಕು.
ವೀರೇಶ ಧೂಪದಮಠ