ರಾಜಕಾರಣಿಗಳಿಗೆ ಬೈಸಿಕೊಂಡಷ್ಟು ಸಂತೋಷವೇ
ರಾಜಕಾರಣಿಗಳಿಗೆ ಬೈಸಿಕೊಂಡಷ್ಟು ಸಂತೋಷವೇ
ಬೈಸಿಕೊಳ್ಳುವುದು ಎಂದರೆ ರಾಜಕಾರಣಿಗಳಿಗೆ ಹಾಲು ಕುಡಿದಷ್ಟು ಸಂತೋಷ ಆಗುತ್ತೆ ಅನಿಸುತ್ತದೆ. ಎಷ್ಟು ಬೈದ್ರು ಮನಸಿಗೆ ಹಚ್ಚಿಕೊಳ್ಳಲ್ಲ. ಎಲ್ಲರ ಬಾಯಿಯಿಂದಲೂ ಬೈಸಿಕೊಂಡು ಬೈಸಿಕೊಂಡು ರೂಢಿಯಾಗಿದೆ. ಬೈಯುವವರಿಗೂ ಬೈದು ಬೈದು ದ್ವನಿ ಒಡೆದಿದೆ. ಬೈಯ್ಯುವುದಕ್ಕೆ ಕಾರಣ ತಾಳ ಇಲ್ಲ ಎಂದರ್ಥ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವೆ ತಾಳ ಇಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ನಡುವೆ ತಾಳ ಇಲ್ಲ. ಹೀಗಾಗಿ ಸರ್ಕಾರದ ಸೌಲಭ್ಯಗಳು ಪಡೆಯಲು ಸಾರ್ವಜನಿಕರು ರೊಚ್ಚಿಗೆದ್ದ ರಾಜಕಾರಣಿಗಳು ಅಧಿಕಾರಿಗಳನ್ನು ಬೈಯುವುದುಂಟು. ರಾಜಕಾರಣಿಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗದವರ ನಡುವೆ ತಾಳ ಹೇಗಿದೆ ಎಂದರೆ ಒಬ್ಬರು ಮಾತು ಇನ್ನೊಬ್ಬರು ಕೇಳುವುದಿಲ್ಲ ಹಾಗಾಗಿ ಕೆಲಸಗಳು ವಿಳಂಬವಾಗುತ್ತದೆ. ಒಂದು ಸಮಸ್ಯೆ ಬಗೆಹರಿಸಲು ಕನಿಷ್ಠ 7 ದಿನ, 15 ದಿನ, 30 ದಿನವಾದರೂ ಸಮಯ ಬೇಕು. ಆದರೆ ಅಲ್ಲಿವರೆಗೂ ಕಾಯುವ ತಾಳ್ಮೆ ಸಾರ್ವಜನಿಕರಿಗೆ ಇಲ್ಲ ಇದೇ ದೊಡ್ಡ ಸಮಸ್ಯೆ. ಹಾಗಾಗಿ ಸಾರ್ವಜನಿಕರಿಗೆ ತಾಳ್ಮೆ ಇಲ್ಲ. ರಾಜಕಾರಣಿಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗದವರ ನಡುವೆ ತಾಳ ಇಲ್ಲ ಅಷ್ಟೇ ವ್ಯತ್ಯಾಸ. ಹೀಗಾಗಿ ವೇಗವಾಗಿ ನಡೆಯಬೇಕಿದ್ದ ಕೆಲಸಗಳು ವರ್ಷಾನುಗಟ್ಟಲೆಯಾದರೂ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ಶಾಸಕರ ಸಂದರ್ಭ ತಕ್ಕಂತೆ ಮಾತು ತಪ್ಪಿರಬಹುದು ಆದರೆ ನಿಜವಲ್ಲ
ಧಾರವಾಡ, ಗದಗ, ಕೊಪ್ಪಳ ಈ ಮೂರು ಜಿಲ್ಲೆಗಳು ನನಗೆ ಶೈಕ್ಷಣಿಕ ಜಿಲ್ಲೆಗಳು ಅದರಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರಿನ ಗುದ್ನೇಪ್ಪನಮಠದ ಕೆಎಲ್ಇ ಸಂಸ್ಥೆಯ ಪಿಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡಬೇಕಾದರೆ ಅಲ್ಲಿನ ವಾತಾವರಣ ನನಗೆ ಚೆನ್ನಾಗಿ ಗೊತ್ತು. ಅಲ್ಲದೇ ಕುಕನೂರಿನ ಗುದ್ನೇಪ್ಪನಮಠದ ಮೊಮ್ಮಗ ಸಹ. ಯಲಬುರ್ಗಾ ವಿಧಾನಸಭಾ ಕ್ಷೇತ್ರ ಬರೀ ಸೋಷಿಯಲ್ ಮೀಡಿಯಾ ರಾಜಕಾರಣ ಅವರನ್ನು ಬೈಯುವುದು ಇವರನ್ನು ಬೈಯುವುದು ಸೋಷಿಯಲ್ ಮೀಡಿಯಾ ಒಂದು ವೇದಿಕೆಯಾಗಿದೆ. ಇದನ್ನೂ ಮಾಡುವ ಬದಲು ನೇರವಾಗಿ ಚುನಾವಣೆ ನಿಂತು ಬಲ ತೋರಿಸಬೇಕು. ಒಂದು ಧರ್ಮದ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಸಂದರ್ಭಕ್ಕೆ ತಕ್ಕಂತೆ ಶಾಸಕರು ಭಾಷಣ ಮಾಡಬೇಕಾದರೆ ಮಾತಿನ ಅರ್ಥವು ತಪ್ಪಿರಬಹುದು ಆದರೆ ಅದೇ ನಿಜವೆಂದೇ ಬಿಂಬಿಸುವುದು ಸರಿಯಲ್ಲ. ಸ್ಥಳೀಯ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ 5-6 ಬಾರಿ ಶಾಸಕರಾಗಿದ್ದಾರೆ. ಕೆಲಸ ಮಾಡುವ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ. ಕ್ಷೇತ್ರ ಅಭಿವೃದ್ಧಿಗಾಗಿ ಯಾರನ್ನಾದರೂ ಎದುರು ಹಾಕಿಕೊಳ್ಳುವ ವ್ಯಕ್ತಿಯಾಗಿರಬಹುದು ಆದರೆ ಒಟ್ಟಿನಲ್ಲಿ ಅಭಿವೃದ್ಧಿ ಕೆಲಸವಾಗಬೇಕು ಎಂಬ ಮನೋಭಾವಯುಳ್ಳ ವ್ಯಕ್ತಿ ಅಷ್ಟೇ. ಇನ್ನು ರಾಜ್ಯ ಚುನಾವಣೆಯಲ್ಲಿ ಮ್ಯಾಜಿಕ್ ಮಾಡುವ ಕ್ಷೇತ್ರ ಯಾವುದು ಎಂದರೆ ಕೊಪ್ಪಳ ಜಿಲ್ಲೆಯ ಕನಕಗಿರಿ, ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಗೆದ್ದು ಬರುತ್ತದೆ. ಆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರ ಯಾವ ಪಕ್ಷ ಗೆದ್ದು ಬರುತ್ತದೆ. ಆ ಪಕ್ಷ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. 2013 ರ ಫಲಿತಾಂಶ ರಿಪೀಟ್ ಆಗಿದೆ.
ವೀರೇಶ ಧೂಪದಮಠ, ಗುದ್ನೇಪ್ಪನಮಠ-ಕುಕನೂರು