ರಾಜ್ಯದಲ್ಲಿ ಬಹುತೇಕ ಶೇ.10 ಮಾತ್ರ ಬೆಳೆ. ಇನ್ನುಳಿದ ಶೇ.90 ಬೆಳೆ ಹಾನಿ

ರಾಜ್ಯದಲ್ಲಿ ಬಹುತೇಕ ಶೇ.10 ಮಾತ್ರ ಬೆಳೆ. ಇನ್ನುಳಿದ ಶೇ.90 ಬೆಳೆ ಹಾನಿ

ರಾಜ್ಯದಲ್ಲಿ ಸರ್ಕಾರ ಬರಗಾಲ ಪೀಡಿತ ತಾಲ್ಲೂಕು ಘೋಷಣೆ ಮಾಡಿದೆ ತಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಕೇಂದ್ರ ಸರ್ಕಾರದ ಬರಗಾಲ ನಿರ್ಣಯಿಸುವ ಕೈಪಿಡಿ 2016 ರನ್ವಯ ಮಳೆ ಶೇ.60 ಕಡಿಮೆ + ಬಿತ್ತನೆ ಶೇ.75 ಕ್ಕಿಂತ ಕಡಿಮೆ + ಬೆಳೆ ಶೇ.33 ನಷ್ಟವಾಗಿರಬೇಕಂತೆ ಅಂದರೆ ಮಾತ್ರ ಆಯಾ ತಾಲ್ಲೂಕು ಬರ ಪೀಡಿತ ತಾಲ್ಲೂಕು ಎಂದು ಘೋಷಿಸಲು ಸಾಧ್ಯ ಎಂದು ಕೈಪಿಡಿ ತಿಳಿಸಿದಂತಿದೆ. ಅಂದರೆ ಕೇವಲ ಒಂದೇ ಒಂದು ಪಾಯಿಂಟ್ ಕಡಿಮೆಯಿದ್ದರೂ ಬರಗಾಲ ಪೀಡಿತ ತಾಲ್ಲೂಕು ಘೋಷಣೆ ಕೈ ತಪ್ಪುತ್ತದೆ ಎಂದರ್ಥ. ಆದರೆ ವಾಸ್ತವಾಂಶ ಬೇರೆಯೇ ಇದೆ. ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕೇವಲ ಶೇ.10 ಮಾತ್ರ ಬೆಳೆ ಬಂದಿದೆ.

ಇನ್ನುಳಿದ ಶೇ.90 ಬೆಳೆ ಹಾನಿಯಾಗಿದೆ. ಅದರ ಜೊತೆಗೆ ಬಹಳಷ್ಟು ಕಡೆ ಶೇ.100 ಬೆಳೆ ಹಾನಿ ಸಂಭವಿಸಿದೆ. ಬರಗಾಲ ಪೀಡಿತ ತಾಲ್ಲೂಕು ಘೋಷಿಸುವ ನೀತಿ ನಿಯಮಗಳು ಬಹಳಷ್ಟು ರೈತರಿಗೆ ಬೇಸರ ತರಿಸಿವೆಯಾದರೂ ರಾಜ್ಯ ಸರ್ಕಾರ ಪರಿಹಾರ ಎಲ್ಲರಿಗೂ ಕೊಡಲೇಬೇಕು. ಪ್ರತಿಯೊಬ್ಬ ರೈತನು ಬೆಳೆ ಬಾರದೆ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಎಲ್ಲ ರೈತ ಬಾಂಧವರಿಗೆ ಪರಿಹಾರ ದೊರಕಿಸಿಕೊಡುವುದು ಅತಿ ಅವಶ್ಯಕವಾಗಿರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಸರ್ಕಾರದ ನಿಯಮದ ಮಾನದಂಡಕ್ಕಿಂತಲೂ ಹೆಚ್ಚು ಅಂದರೆ ಶೇ.90 ರಿಂದ 100 ರಷ್ಟು ಬೆಳೆ ಹಾನಿ ಎಲ್ಲ ರೈತರಿಗೂ ಸಂಭವಿಸಿದೆ. ಹಾಗಾಗಿ ಪ್ರತಿಯೊಬ್ಬ ರೈತನಿಗೂ ಬೆಳೆ ಪರಿಹಾರ ಮತ್ತು ಫಸಲ್ ಭೀಮಾ ವಿಮಾ ಪರಿಹಾರ ನೀಡುವುದು ಅತಿ ಅವಶ್ಯಕ.

ವೀರೇಶ ಧೂಪದಮಠ

Related High CPC Keywords