ಬೆಂಗಳೂರು ಕನ್ನಡಿಗರ ಸಾರ್ವಭೌಮ

ಬೆಂಗಳೂರು ಕನ್ನಡಿಗರ ಸಾರ್ವಭೌಮ

ರಾಜಧಾನಿ ಬೆಂಗಳೂರಿಗೆ ದಿಕ್ಕು ದೆಸೆಯೇ ಇಲ್ಲ ಅಂತ ಯಾರು ತಿಳಿದುಕೊಳ್ಳಬಾರದು ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಎಲ್ಲ 31 ಜಿಲ್ಲೆಯ ಭಾಗದ ಜನ. ಕನಿಷ್ಠ ಪ್ರತಿ 2 ಲಕ್ಷ ಜನ ಅಂದರೂ, ಒಟ್ಟು 62 ಲಕ್ಷ ಜನ ಬೆಂಗಳೂರಿಗೆ ಬಂದು ವಲಸಿಗರನ್ನು ಒದ್ದು ಹೊರಗೆ ಓಡಿಸುವ ಮೊದಲೇ ರಾಜ್ಯ, ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ. ದಿನದಿನಕ್ಕೆ ವಲಸಿಗರ ಬೇಜವಾಬ್ದಾರಿ ಅತಿಯಾಯಿತು. ಕನ್ನಡ ಭಾಷೆ ಮಾತಾಡುವ ಪ್ರದೇಶದಲ್ಲಿ ಅನ್ಯಭಾಷೆ ಮಾತಾಡಿದ್ದಾರೆ. ಒಂದು ಭಾಷೆಯನ್ನು ಕನಿಷ್ಠ 6 ತಿಂಗಳಲ್ಲಿ ಕಲಿಯಬಹುದು. ಆದರೆ 6 ತಿಂಗಳ ಅಲ್ಲ, 2 ವರ್ಷವಾದರೂ ಕನ್ನಡ ಕಲಿತಿಲ್ಲ. ಇದು ಬೇಜವಾಬ್ದಾರಿ ಅಲ್ಲದೇ ಮತ್ತೊಂದಲ್ಲ. ಹಾಗೆಯೇ ರಜೂಮ್ ನಲ್ಲಿ ಕನ್ನಡ ಎಂದು ಇದ್ದರೆ ಕೆಲಸ ಕೊಡಲ್ಲ ಅಂತಾ ಹೇಳುತ್ತಿದ್ದರಂತೆ ಅದು ಯಾವ ಕಂಪನಿಯೆಂದು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾತೃ ಭಾಷೆಯ ಸಹಾಯವಿಲ್ಲದೆ, ಯಾವ ಭಾಷೆಯನ್ನೂ ಕಲಿಯಲು ಸಾಧ್ಯವಿಲ್ಲ. ಆದರೂ ಆಯಾ ಭಾಷಾ ಪ್ರದೇಶದ ದಿನಬಳಕೆ ಶಬ್ದಗಳ ಮೇಲೆ ವಲಸಿಗರು ಕನಿಷ್ಠ 6 ತಿಂಗಳಲ್ಲಿ ಕನ್ನಡ ಭಾಷೆ ಕಲಿಯಬಹುದು. ಕೆಲವರಿಗೆ ಕನ್ನಡ ಬರುತ್ತದೆ ಮಾತಾಡಲ್ಲ ಫ್ಯಾಷನ್ ಶೋಕಿ ಅಂತೆ ಅದೆಂತಾ ಶೋಕಿ. ಒಮ್ಮೆ ಬಿಸಿ ಮುಟ್ಟಿಸಿದರೆ ಸರಿಹೋಗುತ್ತದೆ. ಇನ್ನೊಂದು ನಮ್ಮ ಮೆಟ್ರೋ ನಮ್ಮ ರಾಜ್ಯದ ಗಡಿದಾಟಿ ಸರ್ಕಾರ ವಿಸ್ತರಣೆ ಮಾಡಬಾರದು.

ಕೇಂದ್ರ ಸರ್ಕಾರ ಎಫ್.ಆರ್‌.ಪಿ ಪ್ರತಿ ಕ್ವಿಂಟಾಲ್‌ಗೆ ₹400 ಹೆಚ್ಚಿಸಲಿ

ಸದ್ಯ ಎಫ್.ಆರ್‌.ಪಿ ಸಕ್ಕರೆ ಇಳುವರಿ ಶೇ. 10.25 ರಷ್ಟಿದ್ದರೆ ಪ್ರತಿ ಕ್ವಿಂಟಾಲ್‌ಗೆ 365 ರೂ. ಸಿಗುತ್ತದೆ. ಅಂದರೆ ಪ್ರತಿ ಟನ್ 3,650 ರೂ. ಸಿಗುತ್ತಿದೆ. ಸ್ವಲ್ಪ 400 ರೂ. ಮಾಡಿದರೆ ಪ್ರತಿ ಟನ್ 4,000 ರೂ. ಸಿಗುತ್ತದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಸಾಧ್ಯವಿದೆ. ರಾಜ್ಯ ಸರಕಾರದ ಹಣಕಾಸಿನ ಪರಿಸ್ಥಿತಿ ಒಬ್ಬ ರೈತನ ಪರಿಸ್ಥಿತಿ ಇದ್ದಂತೆ ಇದೆ. ಸುಮಾರು 43 ಇಲಾಖೆಗಳಿಗೆ ಹಾಗೂ ಐದು ಗ್ಯಾರಂಟಿಗೆ ಹಣ ಮೀಸಲಿಡಲಾಗಿದೆ. ಕೆಲವು ಯೋಜನೆಗಳು ಕೇಂದ್ರ, ರಾಜ್ಯ 50-50 ಅನುದಾನ ಇದೆ. ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ, ನಿವೃತ್ತ ನೌಕರರಿಗೆ ಪಿಂಚಣಿ ಕೊಡಬೇಕು. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲ ಹಣ ಆಯಾ ಇಲಾಖೆ ಮೀಸಲಾಗಿದೆ. ಆ ಹಣ ಬಳಕೆ ಮಾಡಿದರೆ. ಬೆಳ್ಳಂಬೆಳಿಗ್ಗೆ ಬ್ರೇಕಿಂಗ್ ನ್ಯೂಸ್ ಬರುತ್ತದೆ. ಹಾಗಾಗಿ ರೈತರು ರಾಜ್ಯ ಸರ್ಕಾರದ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಘೋಷಿಸಿದ್ದ ಎಫ್.ಆರ್.ಪಿ ಪ್ರತಿ ಕ್ವಿಂಟಾಲ್‌ಗೆ 365 ರೂ. ಹಣಕ್ಕೆ ಸಣ್ಣ, ಅತಿ ಸಣ್ಣ, ಮಧ್ಯಮ ರೈತರು ಒಪ್ಪಿದ್ದಾರೆ. ಯಾವಾಗದರೂ ಸಕ್ಕರೆ ಕಾರ್ಖಾನೆ ಶುರುವಾಗುತ್ತದೆ ಎಂದು ಕಾದು ಕುಳಿತಿದ್ದಾರೆ. ರಸ್ತೆ ತಡೆ ಮಾಡುವುದು, ಸಕ್ಕರೆ ಕಾರ್ಖಾನೆ ಬಂದ್ ಮಾಡುವುದು ಮತ್ತೆ ಇನ್ನಿತರ ಬಂದ್ ಮಾಡುವುದು ಕಾನೂನು ಪ್ರಕಾರ ತಪ್ಪು. ಒಂದು ನಿರ್ದಿಷ್ಟ ಸ್ಥಳದಲ್ಲಿ ಶಾಂತಿಯುತವಾಗಿ ಹೋರಾಟ ಮಾಡಲು ಯಾವುದೇ ಅಡ್ಡಿ ಇಲ್ಲ. ರಾಜ್ಯ ಸರ್ಕಾರದ ಕಷ್ಟವನ್ನು ರೈತರಂತೆ ಅರಿತು. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ರೈತರಿಗೆ ಒಳ್ಳೆದಾಗಲಿ.

3 ಸಾರಿಗೆ ನಿಗಮಗಳನ್ನು ಕೆ.ಎಸ್.ಆರ್.ಟಿಗೆ ವಿಲೀನಗೊಳಿಸಿ

ರಾಜ್ಯ ಸರ್ಕಾರಗಳು ಒಬ್ಬರಿಗೆ ಖುಷಿ, ಇನ್ನೊಬ್ಬರಿಗೆ ಸಂಕಷ್ಟ ತಂದಿಟ್ಟಿದೆ. ಯಾವಾಗಲೂ ನಾವು ಕರ್ನಾಟಕ ಎಂಬ ಪದ ಬಿಟ್ಟು ಕೊಡುವುದಿಲ್ಲ. ಕರ್ನಾಟಕ ಎಂಬ ಪದ ತೆಗೆದುಹಾಕಿ, ವ್ಯಕ್ತಿಗಳ ಹೆಸರುಗಳನ್ನು ಇಡುವುದು ಎಷ್ಟು ಸರಿ. ಸರ್ಕಾರಿ ಕಟ್ಟಡಕ್ಕೆ ವ್ಯಕ್ತಿಗಳನ್ನು ಹೆಸರನ್ನು ಇಡಲಿ ಯಾರ ಅಭ್ಯಂತರವಿಲ್ಲ. ಈಗ ಸರ್ಕಾರಿ ಶಾಲೆ-ಕಾಲೇಜಿಗಳಿಗೆ ಒಂದು ನಿಯಮವಿದೆ ಏನೆಂದರೆ ಯಾರು ಜಾಗ ಕೊಡುತ್ತಾರೆ ಅವರ ಹೆಸರು ಇಡಬೇಕು ಅಂತ ಆದರೆ ಒಂದು ಇಲಾಖೆಯ ಕರ್ನಾಟಕ ಹೆಸರನ್ನು ತೆಗೆದುಹಾಕಿ, ವ್ಯಕ್ತಿ ಹೆಸರಿಡುವುದು ಬಹಳಷ್ಟು ಜನಕ್ಕೆ ಖುಷಿ ಕೊಟ್ಟಿಲ್ಲ. ನಾಳೆ ಕರ್ನಾಟಕ ರಾಜ್ಯದ ಹೆಸರು ವ್ಯಕ್ತಿ ಹೆಸರು ಇಡಿ ಅಂತ ಬೇಡಿಕೆ ಬರಬಹುದು. ಈ ತರ ವ್ಯಕ್ತಿಯ ಮರುನಾಮಕರಣ ಪ್ರಕ್ರಿಯೆ. ಮುಂದಿನ ದಿನಮಾನಗಳಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಹಾಗಾಗಿ ರಾಜ್ಯ ಸರ್ಕಾರ ಮೂರು ಸಾರಿಗೆ ನಿಗಮಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯನ್ನು ಒಂದೇ ನಿಗಮ ಅದು ವ್ಯವಸ್ಥಾಪಕ ನಿರ್ದೇಶಕ, ಆಡಳಿತ ಮಂಡಳಿ ಸಹಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೊತೆ ವಿಲೀನಗೊಳಿಸಿಬಿಡಿ. ಅದನ್ನು ಬಿಟ್ಟು ಕರ್ನಾಟಕ ಎಂಬ ಪದ ತೆಗೆದು ವ್ಯಕ್ತಿ ಹೆಸರಿಗೆ ಸಹಮತವಿಲ್ಲ. ಇಲ್ಲದಿದ್ದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಬರುವ ಅಖಂಡ ಧಾರವಾಡ ಜಿಲ್ಲೆಯ. ಧಾರವಾಡ ಹಳೆ ಜಿಲ್ಲೆ ಗದಗ, ಹಾವೇರಿ ಸೇರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಲೀನಗೊಳಿಸುವುದು ಸೂಕ್ತ. ಕರ್ನಾಟಕದಲ್ಲಿ ಧಾರವಾಡ ಅಖಂಡ ಜಿಲ್ಲೆ ದೊಡ್ಡ ಜಿಲ್ಲೆ 24 ತಾಲ್ಲೂಕು ಇದೆ. 17 ರಲ್ಲಿ 13 ಜನ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇವರಿಗೂ 4 ಜನ ಮುಖ್ಯಮಂತ್ರಿಗಳ ಕಂಡ ಜಿಲ್ಲೆ. ಒಟ್ಟಿನಲ್ಲಿ ಹೇಳುವುದಾದರೆ ವ್ಯಕ್ತಿ ಹೆಸರು ಬೇಡ, ಕರ್ನಾಟಕ ಪದ ತೆಗೆಯದಂತೆ ರಾಜ್ಯ ಸರ್ಕಾರಕ್ಕೆ ಮನವಿ.

ವೀರೇಶ ಧೂಪದಮಠ
Related High CPC Keywords