ಎಸ್ಐಆರ್ ವಿರುದ್ಧ ರಾಹುಲ್ ಗಾಂಧಿ ಹವಾ ಜೋರು

ಎಸ್ಐಆರ್ ವಿರುದ್ಧ ರಾಹುಲ್ ಗಾಂಧಿ ಹವಾ ಜೋರು

ನಾನು ಹೆಚ್ಚಾಗಿ ರಾಜ್ಯ ಸುದ್ದಿ ಹೊರತುಪಡಿಸಿ ದೇಶದ ಸುದ್ದಿ ಬಹಳ ಗಮನಿಸುವುದಿಲ್ಲ. ಆದರೂ ಒಂದು ಸುದ್ದಿ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಅದು ಯಾವುದೆಂದರೆ ಎಸ್ಐಆರ್ ಮೂಲಕ ಮತ ಕಳ್ಳತನ (ವೋಟ್ ಚುರಿ) ಹಾಗೂ ಬಿಜೆಪಿ ವಿರೋಧಿ ಮತಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರದ ವಿರುದ್ಧ ನಡೆಯುತ್ತಿರುವ ಹೋರಾಟ. ಈ ಸದ್ದು ಲೋಕಸಭಾ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ವರ್ಚಸ್ಸು ಮತ್ತೊಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಒಂದು ರಾಹುಲ್ ಗಾಂಧಿ ಅವರ ಬೇಡಿಕೆ ಪರಿಗಣಿಸಬೇಕು ಇಲ್ಲವೇ ಅವರ ವರ್ಚಸ್ಸು ಮತ್ತೊಷ್ಟು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ಹೀಗೆ ಬೇಡಿಕೆ ಪರಿಗಣಿಸದಿದ್ದರೆ ದೇಶದ ಪ್ರತಿಯೊಂದು ಮೂಲೆ ಮೂಲೆಗೂ ದೇಶದ ಗಮನ ಸುದ್ದಿ ಸೆಳೆಯುತ್ತಾ ಹೋಗುತ್ತದೆ. ಅಕಸ್ಮಾತ್ ಸದ್ಯ ಲೋಕಸಭಾ ಚುನಾವಣೆ ನಡೆದು ಬಿಜೆಪಿ 200 ಕ್ಷೇತ್ರ ಗೆದ್ದರು ಆಡಳಿತ ಚುಕ್ಕಾಣಿ ಹಿಡಿಯುವುದು ಕಷ್ಟ. ಈಗ 240 ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ಮುಂದಿನ ಸಲ ಕೇವಲ 40 ಕ್ಷೇತ್ರ ಕಡಿಮೆಯಾದರೂ ಆಡಳಿತ ಚುಕ್ಕಾಣಿಗೆ ಸಮಸ್ಯೆಯಾಗಲಿದೆ. ಬಹುಮತಕ್ಕೆ 272 ಸ್ಥಾನ ಬೇಕು. ಕಾಂಗ್ರೆಸ್ ಪಕ್ಷಕ್ಕೆ ಇದೇ ಪ್ಲಸ್ ಪಾಯಿಂಟ್, ಇಂಡಿಯಾ ಮೈತ್ರಿಕೂಟದ ಮೂಲಕ 2029 ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದರು ಯಾವುದೇ ಅನುಮಾನವಿಲ್ಲ.

ಕಾಂಗ್ರೆಸ್ ಪಕ್ಷ ಡ್ಯಾಮೇಜ್, ನೋಟ್ ಬ್ಯಾನ್ ಕಾರಣವೇ?

ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿತು. ಆ ಹಳೆ ನೋಟ್ ಹೊಸ ನೋಟಾಗಿ ಪರಿವರ್ತನೆ ಮಾಡಲು ಸಮಯಾವಕಾಶ ನೀಡಲಾಗಿತ್ತು. ಬಹುತೇಕ ಹಳೆ ನೋಟ್ ವಾಪಾಸ್ ಬಂದಿರಬೇಕು ಅನುಸುತ್ತದೆ. ಆದರೆ ಈ ನೋಟ್ ಬ್ಯಾನ್ ಹಿಂದೆ ಕಾಂಗ್ರೆಸ್ ಪಕ್ಷ ಸತ್ಯನಾಶ ಮಾಡುವುದಾಗಿತ್ತು ಹೊರತಾಗಿ ಯಾರಿಗೆ ಲಾಭ ಇರಲಿಲ್ಲ ಎಂಬ ಅನುಮಾನಗಳಿವೆ. ಆದರೂ ಕೆಲವರಿಗೆ ಸಮಸ್ಯೆಯಾಗಿ ತೊಂದರೆಯಾಗಿದ್ದು ಸುಳ್ಳಲ್ಲ. ಇದೇ ರೀತಿ ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಂಪೂರ್ಣ ಪರಿವರ್ತನೆ ಇಲ್ಲದ ನೋಟ್ ಬ್ಯಾನ್ ಮಾಡಿದ್ರೆ ಹೇಗಾಗುತ್ತದೆ. ದ್ವೇಷ ರಾಜಕಾರಣ ದ್ವೇಷ ಬೆಳೆಸಿಕೊಳ್ಳುತ್ತಾ ಹೋಗುತ್ತೆ ಹೊರತು ಯಾರಿಗೂ ನೆಮ್ಮದಿ ಶಾಂತಿ ಸಿಗುವುದಿಲ್ಲ. ಒಂದು ದೇಶದ ಆರ್ಥಿಕತೆ ಬೆಳೆಯಬೇಕಾದರೆ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಮೇಲೆ ಹಣ ಪ್ರಿಂಟ್ ಮಾಡಬೇಕು. ದೇಶದ ಬೆಳವಣಿಗೆ ಜಿಡಿಪಿಯೇ ಮೂಲ ಆಧಾರ‌. ಕಾಂಗ್ರೆಸ್ ಪಕ್ಷ ಸತ್ಯನಾಶ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕಾಂಗ್ರೆಸ್ ಕಸ ಕಿತ್ತಷ್ಟು ಬೆಳೆತಾ ಹೋಗುತ್ತೆ ಹೊರತು ಬೆಳೆ ನಾಶವಾಗುವುದಿಲ್ಲ. ಬಹುತೇಕ ಕಾಂಗ್ರೆಸ್ ಪಕ್ಷದಿಂದ ವಲಸೆ ಹೋದವರು ಕೇಂದ್ರ ಸರ್ಕಾರದಲ್ಲಿ ಸಂಸದರಾಗಿ ಕೇಂದ್ರ ಮಂತ್ರಿಯಾಗಿದ್ದಾರೆ. ಇವರೆಲ್ಲರೂ ಅವಕಾಶವಾದಿ ಎನ್ನಬೇಕೋ ಅಥವಾ ಪಕ್ಷದ ನಿಷ್ಠಾವಂತವರು ಎನ್ನಬೇಕೋ.

ವೀರೇಶ ಧೂಪದಮಠ
Related High CPC Keywords