ಸ್ಟಿಂಗ್ ಆಪರೇಷನ್ ಸೂಕ್ತ ಸಾಕ್ಷಿ ಅಲ್ಲ

ಸ್ಟಿಂಗ್ ಆಪರೇಷನ್ ಸೂಕ್ತ ಸಾಕ್ಷಿ ಅಲ್ಲ

ಸ್ಟಿಂಗ್ ಆಪರೇಷನ್ ಎನ್ನುವುದು ರಹಸ್ಯ ಕ್ಯಾಮೆರಾಗಳ ಮೂಲಕ ವಿಐಪಿ ಎನ್ನುವ ವ್ಯಕ್ತಿಯ ಚಲನವಲನ ಮೇಲೆ ನಿಗಾ ಇಡುವುದು. ಒಂದರ್ಥದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೂ ತಪ್ಪೇ ಎನ್ನುವ ಮಟ್ಟಕ್ಕೆ ಸ್ಟಿಂಗ್ ಆಪರೇಷನ್ ಹೋಗಿದೆ. ಮಲ, ಮೂತ್ರ ವಿಸರ್ಜನೆ ಮಾಡಿದ್ದಿದ್ದರೆ ಏನಾಗುತ್ತದೆ ಜೀವನೇ ಹೋಗುತ್ತೆ ಅಂತದ್ರಲ್ಲಿ ಯಾರೋ ಒಬ್ಬ ವ್ಯಕ್ತಿ ಕಡೆಯಿಂದ ಹೆಸರು ಹೇಳಿಸಿ ವಿಡಿಯೋ ಮಾಡಿಸಿದರೆ ಅದು ಸೂಕ್ತ ಸಾಕ್ಷಿ ಆಗುವುದಿಲ್ಲ. ಅಲ್ಲದೇ 15 ವರ್ಷದ ಹಳೆ ವಿಡಿಯೋ ಅದು. ಈ ತರ ವಿಡಿಯೋ ಎಲ್ಲರೂ ಮಾಡುತ್ತಾರೆ. ಅದೇ ಸೂಕ್ತ ಸಾಕ್ಷಿ ಎನ್ನುವಂತೆ ಬಿಂಬಿಸುವುದು ಸರಿಯಲ್ಲ. ಹಣಕ್ಕಾಗಿ ಏನು ಬೇಕಾದರೂ ಮಾಡುವ ಜನ ಇದ್ದಾರೆ. ಸೂಕ್ತ ಸಾಕ್ಷಿ ಎಂದರೆ ಇಬ್ಬರ ನಡುವೆ ದೈಹಿಕವಾಗಿ ಫೋಟೋ ಅಥವಾ ವಿಡಿಯೋ ತುಣುಕುಗಳು ಇರಬೇಕು. ಅದನ್ನು ಬಿಟ್ಟು ಯಾರೋ ಒಬ್ಬರನ್ನು ಕರೆ ತಂದು ಹೆಸರೇಳಿಸಿ ವಿಡಿಯೋ ಮುಂದೆ ಹೇಳಿಕೆ ನೀಡುವಂತೆ ಪ್ರೇರೇಪಿಸಿದ್ದಾರೆ. ಇದು ಒಂದು ರೀತಿ ಹೆಸರು ಕೆಡಿಸುವ ಪ್ರಯತ್ನ ಮತ್ತು ಜನರು ಕೆಟ್ಟ ದೃಷ್ಟಿಯಲ್ಲಿ ನೋಡುವ ಅವಕಾಶ ಎನ್ನುವಂತಾಗಿದೆ. ಹಾಗಾಗಿ ಸರ್ಕಾರ ಗಂಭೀರ ಪ್ರಕರಣವೆಂದು ಪರಿಗಣಿಸಿ, ರಹಸ್ಯ ಕ್ಯಾಮೆರಾಗಳ ಪತ್ತೆಗಾಗಿ ತಂತ್ರಜ್ಞಾನ ಅಳವಡಿಸಬೇಕು. ವಿಶೇಷವಾಗಿ ವಿಐಪಿ ಎನ್ನುವರು ತಮ್ಮ ಮನೆ ಬಾಗಿಲಿಗೆ ರಹಸ್ಯ ಕ್ಯಾಮೆರಾಗಳ ಪತ್ತೆಗಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಇದರಿಂದ ವಿಐಪಿ ಎನ್ನುವ ವ್ಯಕ್ತಿಗೆ ರಕ್ಷಣೆ ನೀಡಿದಂತಾಗುತ್ತದೆ. ಅದರ ಜೊತೆಗೆ ಮನುಷ್ಯ ಶುದ್ಧವಾಗಿದ್ದರೆ ಇಂತಹ ಸಮಸ್ಯೆ ಬರುವುದಿಲ್ಲ.

ಕಬ್ಬು ರೈತ ಹೋರಾಟಗಾರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲಿ

ಕಬ್ಬು ವಾಣಿಜ್ಯ ಬೆಳೆಯಾಗಿದ್ದು, ಕಬ್ಬಿನಿಂದ ಸಕ್ಕರೆ, ಬೆಲ್ಲ, ಟೀ, ಕಾಪಿ, ಕಬ್ಬಿನ ಹಾಲು ಎಥೆನಾಲ್ ಸೇರಿದಂತೆ ಪ್ರತಿಯೊಂದಕ್ಕೂ ಉಪಯೋಗದ ಬೆಳೆಯಾಗಿದೆ. ಪ್ರತಿ ಟನ್ ಗೆ 5500 ರೂ. ನೀಡುವಂತೆ ರೈತರು ಮನವಿ ಮಾಡುತ್ತಿದ್ದಾರೆ. ಈ ಕಡೆ ರೈತರು ಉಳಿಯಬೇಕು ಮತ್ತೆ ಈ ಕಡೆ ಸಕ್ಕರೆ ಕಾರ್ಖಾನೆಗಳು ಉಳಿಯಬೇಕು. ಅದರ ಜೊತೆಗೆ ಸರ್ಕಾರದ ಗೈಡ್ಲೈನ್ಸ್ ಪಾಲನೆಯಬೇಕು. ಇದಕ್ಕೆ ಮೂಲ ಕಾರಣ ಬೆಲೆ ಏರಿಕೆ. ರೈತರ ಮತ್ತು ಸಕ್ಕರೆ ಕಾರ್ಖಾನೆಗಳ ಖರ್ಚು ವೆಚ್ಚಗಳು ದುಪ್ಪಟ್ಟಾಗಿದೆ. ಇದ್ದರಿಂದಾಗಿ ಸಮಸ್ಯೆಗಳು ರೈತರಿಗೆ ಕಾಡುತ್ತಿದೆ. ಕೊಪ್ಪಳದ ನನ್ನ ಸಂಬಂಧಿಕರೊಬ್ಬರು ಕಬ್ಬು ಬೆಳೆಯುತ್ತಾರೆ. ಹುಬ್ಬಳ್ಳಿ ಹೋರಾಟಕ್ಕೂ ಬಂದಿದ್ದರು. ದೂರವಾಣಿ ಮೂಲಕ ಕಬ್ಬು ವಿವರಣೆ ಕೇಳಿದಾಗ, ಎಲ್ಲ ವಿವರಿಸಿ ಹೇಳಿದ್ದರು. ಮತ್ತೆ 5500 ರೂ. ಕಡಿಮೆ ಮಾಡಲ್ವಾ ಅಂತ ಚೌಕಾಸಿ ಮಾಡಿದೆ. ಅದಕ್ಕೆ ಕನಿಷ್ಠ 4000 ರೂ.ಯಿಂದ ಗರಿಷ್ಠ 4500 ರೂ. ಬೆಲೆ ನಿಗಪಡಿಸಿದರೇ ರೈತರು ಒಪ್ಪುತ್ತಾರೆ. ಒಮ್ಮೆ ಅಧಿಕಾರಿಗಳು, ಸಚಿವರು ಕುಳಿತು ಮನವೊಲಿಸಬೇಕು ಎಂದರು. ಒಟ್ಟಿನಲ್ಲಿ ಹೇಳುವುದಾದರೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ಗೈಡ್ಲೈನ್ಸ್ ಪಾಲನೆ ಮಾಡಲೇಬೇಕಾಗುತ್ತದೆ. ಆದರೂ ಮಾನವಿಯತೆ ದೃಷ್ಟಿಯಿಂದ ಕಬ್ಬು ಬೆಳೆಗಾರರ ರೈತರ ಸಮಸ್ಯೆ ಶೀಘ್ರ ಬಗೆಹರಿಸಬೇಕು. ಏಕೆಂದರೆ ಸಾಕಷ್ಟು ತೊಂದರೆ ಸಾರ್ವಜನಿಕ ಆಗುತ್ತಿರುವುದಲ್ಲದೆ ಕೇಂದ್ರ ಸರ್ಕಾರದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ ಎಂದರೆ ತಪ್ಪಾಗಲಾರದು.

ವೀರೇಶ ಧೂಪದಮಠ
Related High CPC Keywords