ಬೆಂಗಳೂರಿನಲ್ಲಿ ಸ್ನೇಹಿತರನ್ನು ಭೇಟಿಯಾದಾಗ ಹಳೆ ನೆನಪು ಮೆಲುಕು
ಪ್ರತಿ ಬಾರಿಯೂ ಕೆಸೆಟ್ ಎಕ್ಸಾಂ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯ ಸೇರಿದಂತೆ ಎಲ್ಲ 37 ವಿಷಯಗಳಿಗೂ ಬೆಂಗಳೂರು ಎಕ್ಸಾಂ ಕೇಂದ್ರವಾಗಿತ್ತು. ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಎಲ್ಲ 31 ಜಿಲ್ಲೆಯ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬರುತ್ತಾರೆ. ಎಕ್ಸಾಂ ಬರೆಯಲು ಹೋಗುವಾಗ ಹುಮ್ಮಸ್ಸು ಬರುವಾಗ ನಿರುತ್ಸಾಹ. ಏಕೆ ಹೀಗೆ ಎಂದರೆ ಎಕ್ಸಾಂ ಇರುವುದೇ ಹಾಗೇ. ಯಾರಿಗೂ ಅರ್ಥವಾಗದ ಯಾರಿಗೂ ತಿಳಿಯದ ಒಂದು ಕುತೂಹಲಕಾರಿಯಾದ ವಿಶೇಷ ಅಕ್ಷರಗಳ ಸಮೂಹ. ಓದಿದ್ರು ಸಣ್ಣ ಹುಡುಗನಿಗೂ ಅರ್ಥವಾಗುವಂತಿರಬೇಕು. ಆದರೆ ಒಂದು ರೀತಿ ಇಂಜಿನೀಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ತೆಗೆದಂತೆ ಪ್ರಶ್ನೆ ಪತ್ರಿಕೆಯನ್ನುವಂತೆ ಭಾಸವಾಗುತ್ತದೆ. ಆಮೇಲೆ ಎಕ್ಸಾಂ ಎಲ್ಲವೂ ಹಾಗೇ ಬಿಡು ಅಂತ ಸುಮ್ಮನೆ ಆಗಿಬಿಡುವುದು. ಒಟ್ಟಿನಲ್ಲಿ ಕೆಸೆಟ್ ಎಕ್ಸಾಂ ಬರೆಯಲು ಬಂದಾಗ ಹಳೆ ಸ್ನೇಹಿತರ ಆಗಮನದಿಂದ ಹಿಂದಿನ ಕಾಲಕ್ಕೆ ಹೋದೆವು ಎನಿಸಿತು. ಹಿಂದಿನ ಘಟನೆ ನೆನಪಿಸಿಕೊಂಡಾಗ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಹಳೆ ಎಚ್ಓಡಿ ಹೊಸ ಎಚ್ಓಡಿ ಒಟ್ಟಿಗೆ ನೆನಪು ಆಗುತ್ತಾರೆ. ಗುರು ಶಿಷ್ಯರ ನಡುವೆ ಮುನಿಸು ಇತ್ತು. ನನಗೆ ಅಲ್ಲಿನ ಪ್ರಾದ್ಯಾಪಕರಿಗೆ, ಎಚ್ಓಡಿಗೆ ಆಗಿ ಬರುತ್ತಿರಲಿಲ್ಲ ಸಿಟ್ಟು ಬರುತ್ತಿತ್ತು. ಎಂತೆಂತಹ ಕುರ್ಚಿ ಸಮಸ್ಯೆ ಮುಗಿದಿದೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರ ನಡುವೆ ಕುರ್ಚಿ ಸಮಸ್ಯೆ ತೆರೆ ಬಿದ್ದಿಲ್ಲ. ಒಮ್ಮೆ ಮಾಜಿ ಆಗುವುದು ಮತ್ತೊಮ್ಮೆ ಹಾಲಿಯಾಗುವುದು ಎಂದರೆ ಸುಮ್ಮನೇನಾ ಮಕ್ಕಳಾಟ. ನನಗೊಂದು ಹವ್ಯಾಸವಿತ್ತು ಏನಂದ್ರೆ ರಾತ್ರಿ 10 ಗಂಟೆಗೆ ಸರಿಯಾಗಿ ವಾಟ್ಸಪ್ ಸ್ಟೇಟಸ್ ನಲ್ಲಿ ಬರೆಯುತ್ತಿದೆ. ನಮ್ಮ ಹಾಲಿ ಎಚ್ಓಡಿ ಸೀನಿಯರ್, ಜೂನಿಯರ್ ವಾಟ್ಸಪ್ ಸ್ಟೇಟಸ್ ಚಾಚು ತಪ್ಪದೇ ಹುಮ್ಮಸ್ಸಿನಿಂದ ನೋಡುತ್ತಿದ್ದರು. ಕಾಲೇಜಿನಲ್ಲಿ ಪ್ರಾಧ್ಯಾಪಕರು ನನಗೆ ಬೈದ್ರೆ ರಾತ್ರಿ ಸ್ಟೇಟಸ್ ಬರೆಯುತ್ತಿದೆ. ಮತ್ತೆ ಯಾರು ಹೆಸರು ಹಾಕದಿದ್ದರು ಹಾಸ್ಯಮಯವಾಗಿ ಇವನೇ ಬೈದ ಅಂತ ಗೊತ್ತು ಹಿಡಿದು ನಗುತ್ತಾರೆ. ಒಟ್ಟಿನಲ್ಲಿ ಹೆಂಗ್ ಹೆಂಗೋ ಕಾಲೇಜು ಮುಗಿಸಿ ಮನೆಗೆ ಬರಬೇಕಾದರೆ. ಎಚ್ಓಡಿ ರಿಟೈರ್ಡ್ ಆಗುವ ಒಂದು ದಿನ ಮುಂಚೆನೇ ರಾಜೀನಾಮೆ ಕೊಟ್ಟು ಸರ್ಕಾರಕ್ಕೆ ಮಾದರಿಯಾಗು ಸರ್ಕಾರಕ್ಕೆ ಪಿಂಚಣಿ ಹಣ ಉಳಿಸು ಅಂತ ವಾಟ್ಸಪ್ ಸ್ಟೇಟಸ್ ಸಲಹೆ ಕೊಟ್ಟೆ ಎಚ್ಓಡಿ ಅದನ್ನು ನೋಡಿ 2 ಸೆಕೆಂಡ್ ಮೂರ್ಚೆ ಹೋಗಿ 3 ಸೆಕೆಂಡಗೆ ಎದ್ದ ಅಷ್ಟೇ. ಸಣ್ಣ ಹುಡುಗ ಬಿದ್ದು ಬಿದ್ದು ನಕ್ಕ ಬಿಡ್ತು. ಇನ್ನು ಪತ್ರಿಕೆಗಳು ಸಾಮಾಜಿಕ ಸೇವೆ ಸಲ್ಲಿಸಲು ಬಂದಿವೆ ಹೊರತು ಹಣಕ್ಕಾಗಿ ಬಂದಿಲ್ಲ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಸರಿಪಡಿಸಲು ಪ್ರಯತ್ನಿಸುತ್ತಿದೆ. ಉಚಿತವಾಗಿ ಸುದ್ದಿ ಪ್ರಕಟಿಸಬೇಕು. ಜಾಹೀರಾತು ಮಾತ್ರ ಉಚಿತವಾಗಿರುವುದಿಲ್ಲ ಎಂಬ ವಿಷಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಿಳಿಸಬೇಕು ತಾನೇ ಇಲ್ಲವೇ ಇಲ್ಲ ತಿಳಿಸೇ ಇಲ್ಲ, ಇನ್ನು ಬೇಸರ ಅನೇಕ ತರಿಸಿತು.
ವೀರೇಶ ಧೂಪದಮಠ