ಶಕ್ತಿ ಯೋಜನೆ ಉಚಿತ ಬದಲು ಅರ್ಧ ಹಣಕ್ಕೆ ಪರಿಷ್ಕರಿಸುವುದು ಸೂಕ್ತ?

ಶಕ್ತಿ ಯೋಜನೆ ಉಚಿತ ಬದಲು ಅರ್ಧ ಹಣಕ್ಕೆ ಪರಿಷ್ಕರಿಸುವುದು ಸೂಕ್ತ?

ಬಹುತೇಕ ಗಂಡಸರು ಶಕ್ತಿ ಯೋಜನೆ ಜಾರಿಯಾದ ನಂತರ ತಮ್ಮ ಕೆಲಸವನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಸಿಟ್ಟಾಗಿದ್ದಾರೆ. ಏಕೆಂದರೆ ಆ ಕೆಲಸಗಳು ಮಹಿಳೆಯರ ಪಾಲಾಗಿದೆ. ಇನ್ನು ಶಾಲಾ ಕಾಲೇಜು ತೆರಳುವ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳ ತೀರದು ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಸರಿಯಾದ ಸಮಯಕ್ಕೆ ಮನೆಗೆ ಸೇರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಬಸ್ ಗಳ ಸಮಯ ಪಾಲನೆ ಮೊದಲೇ ಇಲ್ಲ. ಒಂದು ಬಸ್ 120 ಲೀಟರ್ ಡಿಸೇಲ್ ಇದೆ. ಅಂದರ ಬೆಲೆ 11,700 ರೂ. ಆಗಿದೆ, ಒಂದು ಬಸ್ ನಲ್ಲಿ 120 ಜನ ಪ್ರಯಾಣಿಕರಿದ್ದಾರೆ ಅದರಲಿ 100 ಪ್ರಯಾಣಿಕರು ಮಹಿಳೆಯರೇ ಆಗಿರುತ್ತಾರೆ. 20 ಪುರುಷ ಪ್ರಯಾಣಿಕರಿಂದ ಡಿಸೇಲ್ ಖರೀದಿಸಿ, ಸಂ‌‌ಸ್ಥೆ ನಡೆಸಲು ಪ್ರಾಯೋಗಿಕವಾಗಿ ಸಾಧ್ಯವೇ?.

ಪರಿಚಿತ ಕಂಡಕ್ಟರೊಬ್ಬರು ತಿಳಿಸಿದ ಪ್ರಕಾರ ಹುಬ್ಬಳ್ಳಿಯಿಂದ ಬೆಂಗಳೂರು, ಮೈಸೂರು, ಕಲಬುರಗಿ ಮಾರ್ಗಗೆ ಓಡುವ ಒಂದು ಬಸ್ 35 ಸಾವಿರ ರೂಪಾಯಿ ಹಣ ಸಂಗ್ರಹಿಸುತ್ತಿದೆ. 10 ಸಾವಿರ ಪುರುಷ ಪ್ರಯಾಣಿಕರದ್ದು 25 ಸಾವಿರ ಮಹಿಳಾ ಪ್ರಯಾಣಿಕರದ್ದು ಆಗಿರುತ್ತದೆ. ಹಾಗಾಗಿ ರಾಜ್ಯ ಸರ್ಕಾರ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ, ಶಕ್ತಿ ಯೋಜನೆಗೆ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ನೀಡುವ ಬದಲು ಅರ್ಧ ಹಣ ಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ ಕಲ್ಪಿಸಬಾರದು ಏಕೆ? ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಶಕ್ತಿ ಯೋಜನೆಯಿಂದ ಕೆಲಸ ಕಳೆದುಕೊಂಡ ಗಂಡಸರು ಕಾಂಗ್ರೆಸ್ ಪಕ್ಷದ ವಿರುದ್ಧ ಕೋಪಗೊಂಡವರು ತಣ್ಣಾಗಬಹುದು. ಜೊತೆಗೆ ಸಾರಿಗೆ ಸಂಸ್ಥೆ ಡಿಸೇಲ್ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು.

ಅರ್ಧದಷ್ಟು ಹಣವನ್ನು ಸರ್ಕಾರ ಪಾವತಿಸಬೇಕು ಇನಾರ್ಧದಷ್ಟು ಹಣ ಮಹಿಳೆಯರು ಟಿಕೆಟ್ ಪಡೆದು ಪ್ರಯಾಣಿಸುವ ಮಾರ್ಗವಾದರೆ ಮಾತ್ರ ಒಂದು ರೀತಿ ಎಲ್ಲರಿಗೂ ಅನುಕೂಲವಾಗಬಹುದಾಗಿದೆ. ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಏಕೆಂದರೆ ದಿನನಿತ್ಯ ಬಸ್ ಸಮಸ್ಯೆ ಗದ್ದಲ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ. ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ.

ಗೃಹ ಲಕ್ಷ್ಮಿಗೂ ಬೇಕು ಪರಿಷ್ಕರಣೆ

ಇನ್ನು 70 ವರ್ಷ ಅಲ್ಪಸ್ವಲ್ಪ ಆದಾಯ ಮೂಲ ಸಂಪನ್ಮೂಲ ನೋಡಿಕೊಂಡು ಅಭಿವೃದ್ಧಿಯಾಗಬಹುದು ಆಮೇಲೆ ಅಮೇರಿಕಾ ರೀತಿ ಡೆವಲಪ್ಮೆಂಟ್ ರಾಜ್ಯವಾಗಲಿದೆಯಂತೆ. ಅದಾಗ ನೋಡೋಣ ಅದಕ್ಕಾಗಿ ಬೇಗ ಬೇಗನೆ ಶ್ರೀಮಂತರಾಗಬೇಕು ಬೇಗ ಬೇಗನೆ ಎಲ್ಲಾ ಆಸೆ ಆಕಾಂಕ್ಷೆ ಈಡೇರಿಸಿಕೊಳ್ಳಬೇಕೆಂದರೆ ಸಾಧ್ಯವಿಲ್ಲ. ಹಾಗಾಗಿ ಈಗ ಯಾರು ಆರ್ಥಿಕವಾಗಿ ಸದೃಢರಾಗಿದ್ದಾರೆ ಅವರಿಗೆ ಗ್ಯಾರಂಟಿ ಯೋಜನೆ ಅವಶ್ಯಕತೆ ಇಲ್ಲ. ಯಾರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಅವರಿಗೆ ಗ್ಯಾರಂಟಿ ಅವಶ್ಯಕತೆ ಪೂರ್ಣ ಪ್ರಮಾಣದಲ್ಲಿದೆ.

ಶಕ್ತಿ ಯೋಜನೆಯ ಹಾಫ್ ಬಸ್ ಚಾರ್ಜ್ ಸಿಸ್ಟಮ್ ಸೇರಿದಂತೆ ಎಲ್ಲಾ ಗ್ಯಾರಂಟಿಗಳು ಅದರಲ್ಲೂ ಗೃಹ ಲಕ್ಷ್ಮಿ ಹಣ ಅಂತ್ಯೋದಯ ಕಾರ್ಡ್, ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಸೀಮಿತಗೊಳಿಸಬೇಕು ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಏಕೆಂದರೆ ಲೇಖನ ಯಾರನ್ನು ಮೆಚ್ಚಿಸಲು ಅಲ್ಲ, ಯಾರನ್ನು ತೆಗಳಲು ಅಲ್ಲ. ಕೆಲವರಿಗೆ ಖುಷಿಪಡಿಸಿ ಕೆಲವರಿಗೆ ಸಿಟ್ಟು ಬರದೇ ಹೋದರೆ ಅದು ಲೇಖನವೇ ಅಲ್ಲ. ವಾಸ್ತವವಾಗಿ ಸತ್ಯ ಜನರಿಗೆ ತಿಳಿಸುವುದಾಗಿದೆ.

ವೀರೇಶ ಧೂಪದಮಠ
Related High CPC Keywords