ಗ್ರಾ.ಪಂರಿಂದ ಮಹಾನಗರ ಪಾಲಿಕೆ, ಮೇಲ್ದರ್ಜೆಗೇರಿಕೆ ನಿಜವಾ ಅಥವಾ ನೆಪವಾ?

ರಾಜ್ಯದ ಕೆಲವು ಗ್ರಾಮ/ಪಟ್ಟಣ/ನಗರಗಳು ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮಾಡುವಷ್ಟು ಜನಸಂಖ್ಯೆ ಹೊಂದಿದ್ರು ಕೂಡ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ಸಿಗುತ್ತಿಲ್ಲವೇಕೆ? 5 ಸಾವಿರ ಮೇಲೆ 7 ಸಾವಿರ ಒಳಗಿರುವ ಗ್ರಾಮಗಳನ್ನ ಅಥವಾ ಗ್ರಾಮಗಳ ಸಮೂಹವನ್ನು ಸೇರಿಸಿ ಗ್ರಾಮ ಪಂಚಾಯತ ಮಾಡಲಾಗುತ್ತದೆ ಅದೇ ರೀತಿ 15 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಗಳನ್ನ ಪಟ್ಟಣ ಪಂಚಾಯಿತಿ, 25 ಸಾವಿರ ಮೇಲೆ ಜನಸಂಖ್ಯೆ ಹೊಂದಿರುವ ಪಟ್ಟಣ ಪಂಚಾಯಿತಿಯನ್ನ ಪುರಸಭೆ, 1 ಲಕ್ಷ ಜನಸಂಖ್ಯೆ ಹೊಂದಿರುವ ಪ್ರದೇಶವನ್ನು ನಗರ ಸಭೆ 3 ಲಕ್ಷ ಮೇಲೆ ಜನಸಂಖ್ಯೆ ಹೊಂದಿರುವ ಪ್ರದೇಶವನ್ನು ಮಹಾನಗರ ಪಾಲಿಕೆ
12 ಲಕ್ಷ ಜನಸಂಖ್ಯೆ ಹೊಂದಿರುವ ಪ್ರದೇಶವನ್ನು ಬೃಹತ್ ಮಹಾನಗರ ಪಾಲಿಕೆ ಮಾಡಬೇಕು ಎಂಬ ನಿಯಮವಿದೆ. ಕೆಲವು ಗ್ರಾಮ/ಪಟ್ಟಣ/ನಗರಗಳು ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮಾಡುವಷ್ಟು ಜನಸಂಖ್ಯೆ ಹೊಂದಿದ್ರು ಕೂಡ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ಅನುಮೋದನೆ ಸಿಗುತ್ತಿಲ್ಲ ಯಾಕೆ? ಪ್ರಶ್ನೆ ಸಾರ್ವಜನಿಕರಿಗೆ ಕಾಡುತ್ತಿದೆ. ಈ ಕಡೆ ಗ್ರಾಮೀಣ ಪ್ರದೇಶ ಜನ ಗ್ರಾಮ ಪಂಚಾಯಿತಿಗಳು ಒಂದುವೇಳೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ರೆ ತೆರಿಗೆ ಬಹಳ ಕಟ್ಟಬೇಕು ಮತ್ತು ಭ್ರಷ್ಟಾಚಾರ ಮಾಡಲು ಈಜಿ ಆಗಿರುವ ನರೇಗಾ ಯೋಜನೆ ಪಟ್ಟಣ ಪಂಚಾಯಿತಿಯಾದ್ರೆ ಕೈ ತಪ್ಪಲಿದೆ ಎಂಬ ಆತಂಕ ಭ್ರಷ್ಟ ಕುಳ್ಳರನ್ನು ಕಾಡುತ್ತಿದೆ.
ಕೆಲವು ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಆರ್ಹತೆ ಪಡೆದುಕೊಂಡಿದ್ದರು ಅಡ್ಡಗಾಲು ಹಾಕುತ್ತಿದ್ದಾರೆ. ಇದರಿಂದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಮೇಲ್ದರ್ಜೆಗೇರಿಸಲು ಅವಕಾಶವಿದ್ದರೇ ಜನಪ್ರತಿನಿಧಿಗಳು ಅಧಿಕಾರಿಗಳು ಹಿಂದೇಟು ಹಾಕಬಾರದು ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗ್ರಾ.ಪಂ/ಪಪಂ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿ ಅನುಮೋದಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವೀರೇಶ ಧೂಪದಮಠ