ವ್ಯಕ್ತಿಯಲ್ಲಿ ಶ್ರೀಮಂತ, ಮದ್ಯಮ ವರ್ಗದವ, ಬಡವ ಎಂದು ಗುರುತಿಸಲಾಗುತ್ತದೆ. ಶ್ರೀಮಂತರು ಬದುಕಬೇಕಾದರೂ ಬಡವರು ಬೇಕು. ನನ್ನ ಬಳಿ ಹಣವಿದೆ, ಜಗತ್ತಿನಲ್ಲಿ ನನ್ನದೆ ಆಟ ಎಂದರೆ ಅದು ನಡೆಯುವುದಿಲ್ಲ. ಜನರೇ ಇಲ್ಲದೆ ಜಗತ್ತು ಸೃಷ್ಟಿಸಲು ಹೋದರೆ ಪ್ರತಿಯೊಬ್ಬರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಜಗತ್ತಿಗೆ ಪ್ರತಿಯೊಬ್ಬ ವ್ಯಕ್ತಿಯೂ ಬಹಳ ಮುಖ್ಯವಾಗಿದೆ. ಒಟ್ಟಿನಲ್ಲಿ ಒಂದಲ್ಲಾ ಒಂದು ದಿನ ಆರಂಭದಂತೆ ಅಂತ್ಯವೂ ಆಗಲಿದೆ ಅದಕ್ಕಾಗಿ ನಿರ್ದಿಷ್ಟ ದಿನಾಂಕವಿಲ್ಲ, ಸಮಯವಿಲ್ಲ. ಪ್ರಕೃತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕರೋನಂತಹ ಮಾರಕ ರೋಗ ಜಗತ್ತಿಗೆ ಹರಡಿದಾಗ ಪ್ರಕೃತಿ ತನ್ನ ಸೌಂದರ್ಯವನ್ನು ಸ್ವಚ್ಛಗೊಳಿಸಿಕೊಂಡಿತು. ಹಾಗಾಗಿ ವರ್ತಮಾನದ ವಿಚಾರಗಳನ್ನು ಭವಿಷ್ಯದ ಕಾಲಕ್ಕೆ ತೀರಿಗಿಸುವುದು ಅಪಾಯಕಾರಿ.
ಜಗತ್ತಿನ ಆಯಸ್ಸು 5 ಸಾವಿರ ವರ್ಷವೇ? ಇಲ್ಲವೇ ಜಗತ್ತಿನ ಆಯಸ್ಸಿನ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಮನುಷ್ಯನಿಗೆ ರೋಗರುಜಿನಗಳು ಹೇಗೆಯೋ ಅದೇರೀತಿ ಜಗತ್ತಿಗೂ ಸಂಕಷ್ಟಗಳು ಸಹಜ. ಆದರೂ ಇದ್ದಷ್ಟು ದಿನ ಜನರಿಗೆ ಒಳ್ಳೆಯದು ಮಾಡಬೇಕು, ಅದೇ ಜಗತ್ತಿನ ನಿಯಮವಾಗಿದೆ.
ವೀರೇಶ ಧೂಪದಮಠ
ವೀರೇಶ ಧೂಪದಮಠ
