
ಅಧಿಕಾರಕ್ಕಿಂತ ಜನರಿಗೆ ನೆಮ್ಮದಿ ಸಿಗಬೇಕು
ಮನುಷ್ಯನಲ್ಲಿ ಎರಡು ಮನಸ್ಥಿತಿ ಇರುತ್ತೆ, ಒಂದು ಕಾಂಗ್ರೆಸ್ ಮನಸ್ಥಿತಿ ಇನ್ನೊಂದು ಬಿಜೆಪಿ ಮನಸ್ಥಿತಿ. ಕಾಂಗ್ರೆಸ್ ಅಥವಾ ಬಿಜೆಪಿ ಏನೇ ಮಾಡಿದರೂ ಆ ಮನಸ್ಥಿತಿಗಳಿಗೆ ಹಿತ ಎನ್ನಿಸುತ್ತದೆ. ಅದು ಸರಿ ಇರಲಿ ತಪ್ಪು ಇರಲಿ ಒಟ್ಟಿನಲ್ಲಿ ಅಂತಹ ಮನಸ್ಥಿತಿಗಳನ್ನು ನಿಯಂತ್ರಣ ಮಾಡುವುದು ಕಷ್ಟವೇ ಸರಿ. ಯಾವಾಗ ಮನಸ್ಥಿತಿಗಳು ಬದಲಾಗುತ್ತದೆ ಎಂದರೆ ಬೇಸತ್ತು ಹೋದಾಗ ಉದಾ: 2008 ರಿಂದ 2013 ರಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿತ್ತು. ಈ ಐದು ವರ್ಷಗಳಲ್ಲಿ 3 ಜನ ಮುಖ್ಯಮಂತ್ರಿಯಾದರು. ಈ ಐದು ವರ್ಷಗಳಲ್ಲಿ ಒಳ ಜಗಳ, ಕಿತ್ತಾಟ, ದಿನಕ್ಕೊಂದು ಹೇಳಿಕೆಗಳು ಒಂದು ರೀತಿಯಲ್ಲಿ ಹುಚ್ಚಾಟವನ್ನು ದಿನನಿತ್ಯ ನೋಡಿದ ಸಾರ್ವಜನಿಕರು ಬೇಸತ್ತು ಸರ್ಕಾರ ಬದಲಾವಣೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ ಎನ್ನಿಸುತ್ತದೆ. ಈ ರಾಜಕಾರಣಿಗಳಿಗೆ ಅಧಿಕಾರ ಬೇಕಾಗಿರುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ಬೇಕಾಗಿರುತ್ತದೆ. ರಾಜಕಾರಣಿಗೆ ಅಧಿಕಾರ ಸಿಗಲ್ಲ, ಸಾರ್ವಜನಿಕರಿಗೆ ನೆಮ್ಮದಿ ಸಿಗಲ್ಲ ಜೊತೆಗೆ ಉತ್ತಮ ಆಡಳಿತ ಮತ್ತು ಅಧಿಕಾರಿಗಳ ಸ್ಪಂದನೆ ಸಿಗಲ್ಲ. ಈ ರೀತಿ ಸನ್ನಿವೇಶ ನಡೆದಾಗ ಪಕ್ಷದ ಮನಸ್ಥಿತಿ ಬದಲಾಯಿಸಿ, ಮೊದಲು ಮಂತ್ರಿಗಳನ್ನು ಸೋಲಿಸಿ, ನಂತರ ಕೆಲಸದ ಮಾಡದ ಶಾಸಕರನ ಮನೆಯ ಹಾದಿ ಹಿಡಿಸುತ್ತಾರೆ. ಹಾಗಾಗಿ ಎಷ್ಟು ದಿನ ಅಧಿಕಾರ ಸಿಗುತ್ತೋ ಅಷ್ಟು ದಿನ ಅಧಿಕಾರ ಅನುಭವಿ ಹಿಂದೆ ಸರಿಯಬೇಕು. ಅದನ್ನು ಬಿಟ್ಟು ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಕೊನೆವರೆಗೆ ಮಂತ್ರಿ ಸ್ಥಾನ ಕೊಡದಿದ್ದವನನ್ನು ಟೀಕಿಸುವುದು ಯಾವುದೇ ಅರ್ಥವಿರುವುದಿಲ್ಲ. ಎಲ್ಲೋ ಒಂದು ಕಡೆ ಮಂತ್ರಿ ಮಹಾಶಯರು ಸೋಲುತ್ತಾರೆ ಎಂಬ ಜಿಜ್ಞಾಸೆ ಹುಟ್ಟಿದೆ. ಸ್ವ ಇಚ್ಛೆಯಿಂದ ಮಂತ್ರಿ ಪದವಿ ತ್ಯಜಿಸಬೇಕು. ರಾಜಕಾರಣಿಗೆ ಅಧಿಕಾರ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಜನರಿಗೆ ನೆಮ್ಮದಿ ಸಿಗಬೇಕು.
ವೀರೇಶ ಧೂಪದಮಠ