ಹು-ಧಾ ಪಾಲಿಕೆ ಆಡಳಿತ ಮಂಡಳಿ ವಿಸರ್ಜಿಸಿಯಾದರೂ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಲಿ?
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಮಾಡಲು ಘನವೆತ್ತ ರಾಜ್ಯಪಾಲರು ಎರಡು ಷರತ್ತು ಬದ್ಧ ಅನುಮೋದನೆ ನೀಡಿದ್ದಾರೆ. ಈ ಶ್ರೇಯಸ್ಸು ಧಾರವಾಡಿಗರ ಗಟ್ಟಿ ನಿಲುವು ಮತ್ತು ಹುಬ್ಬಳ್ಳಿಗರ ಪರೋಕ್ಷ ಬೆಂಬಲ. ಜೊತೆಗೆ 99.98% ಜನರ ಭರ್ಜರಿ ಬೆಂಬಲವೇ ಕಾರಣ. ಆ ಎರಡು ಅಣಿ ಒತ್ತಡಕ್ಕೆ ಮಣಿದು 100ಕ್ಕೆ 100 ರಷ್ಟ್ರು ಬೆಂಬಲ ಆಗಿದೆ. ಘನವೆತ್ತ ರಾಜ್ಯಪಾಲರು ಜನಗಣತಿ ಪ್ರಕ್ರಿಯೆ ಮುಗಿದ ಬಳಿಕ ಪಾಲಿಕೆ ಗಡಿ ಗುರುತಿಸಬೇಕು ಮತ್ತು ಪ್ರಸ್ತುತ ಬಾಕಿಯಿರುವ ಹಾಲಿ ಪಾಲಿಕೆ ಸದಸ್ಯರ ಅವಧಿ ಮುಗಿದ ಮೇಲೆ ಪ್ರತ್ಯೇಕ ಪಾಲಿಕೆ ಅಸ್ತಿತ್ವಕ್ಕೆ ಬರಬೇಕೆಂದು ಸೂಚಿಸಿದ್ದಾರೆ. ಒಂದೇ ಷರತ್ತು ಏನೆಂದರೆ, ಜನಗಣತಿ ಪ್ರಕ್ರಿಯೆ ಮುಗಿದ ಬಳಿಕ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಡಿ.31, 2025 ರೊಳಗೆ ಗಡಿ ವಿಭಜಿಸುವ ಪ್ರಕ್ರಿಯೆ ಮುಗಿಸಿಕೊಳ್ಳಿ ಎಂದು ಹೇಳಿದ್ದಾರೆ. ಹಾಗಾಗಿ ಪ್ರತ್ಯೇಕ ಪಾಲಿಕೆ ವಿಭಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಜನಗಣತಿ ಆದೇಶ ಮಾಡುವ ಮೊದಲೇ ಅಂದರೆ 11 ತಿಂಗಳಿಗಿಂತ ಹೆಚ್ಚು ಕಾಲ ರಾಜ್ಯಪಾಲರ ಕಚೇರಿಗೆ ಕಳಿಸಲಾಗಿದೆ. ಹಾಗಾಗಿ ಒಂದು ಷರತ್ತು ಅನ್ವಯಿಸುವುದಿಲ್ಲ. ಮತ್ತೊಂದು ಷರತ್ತು ಏನೆಂದರೆ ಪಾಲಿಕೆ ಸದಸ್ಯರ ಅಧಿಕಾರದ ಅವಧಿ ಮುಗಿದ ನಂತರ ಪಾಲಿಕೆ ಅಸ್ತಿತ್ವಕ್ಕೆ ಬರಬೇಕೆಂದು ಸೂಚಿಸಿದ್ದಾರೆ. ಅಲ್ಲಿಯವರೆಗೆ ಕಾಯುವ ಬದಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ವಿಶೇಷಾಧಿಕಾರ ಬಳಸಿ, ಪಾಲಿಕೆ ವಿಸರ್ಜಿಸಿ ಪ್ರತ್ಯೇಕ ಪಾಲಿಕೆ ಮುಖಾಂತರ ಹೊಸ ಚುನಾವಣೆ ನಡೆಸಬೇಕು. ಇಲ್ಲವೇ ಪಾಲಿಕೆ ಸದಸ್ಯರನ್ನು ಪಾಲಿಕೆ ಗಡಿರೇಖೆಯನ್ವಯ ಹಸ್ತಾಂತರಿಸಿ, ಹೊಸ ಪಾಲಿಕೆಗೆ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಒಟ್ಟಿನಲ್ಲಿ ಹೇಗಾದರೂ ಪ್ರತ್ಯೇಕ ಧಾರವಾಡ ಪಾಲಿಕೆ ಅಸ್ತಿತ್ವಕ್ಕೆ ಬರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.
ವೀರೇಶ ಧೂಪದಮಠ