ಹುಬ್ಬಳ್ಳಿ-ಧಾರವಾಡ ನಡುವೆ HD-BRTS ಸಂಸ್ಥೆಯ 100ಕ್ಕೂ ಹೆಚ್ಚು ಚಿಗರಿ ಬಸ್ ಓಡಿಸಲಾಗುತ್ತಿದೆ. ಆದರೆ ಈ ಬಸ್‌ನಿಂದ ದಿನಕ್ಕೊಂದು ರಟ್ಟು ರಾಮಾಯಣ ಬರುತ್ತಿದ್ದು, ಒಟ್ಟಿನಲ್ಲಿ ದಿನನಿತ್ಯ ಇಲ್ಲವೇ ತಿಂಗಳಲ್ಲಿ ಒಂದ್ಸಲ ಸುದ್ದಿಯಲ್ಲಿದೆ. ಚಿಗರಿ ಬಸ್ ವ್ಯವಸ್ಥೆ ಬರುವ ಮೊದಲು ಸಾಮಾನ್ಯ ಬಸ್‌ಗಳ ಹವಾ ಜೋರಾಗಿತ್ತು. 2018 ಆಚೆಗಿನ ಸಾಮಾನ್ಯ ಬಸ್ ಸೇರಿದಂತೆ ತಡೆರಹಿತ ಬಸ್‌ಗಳು ಓಡಾಡುತ್ತಿದ್ದವು. ಒಂದು ರೀತಿಯಲ್ಲಿ ಚಿಗರಿ ಬಸ್ ಕ್ಕಿಂತ ಸಾಮಾನ್ಯ ಬಸ್‌ಗಳೇ ಬೆಸ್ಟ್ ಏಕೆಂದರೆ ಚಿಗರಿ ಬಸ್ ನಿರ್ವಹಣೆ ದುರಸ್ತಿ ಕೊರತೆಯಿಂದ ಜನರಿಗೆ ಬೇಸರವಾಯಿತು. ಸಾಮಾನ್ಯ ಬಸ್ ಓಡಿಸಿ ಎಂಬ ನಿರ್ಧಾರಕ್ಕೆ ಜನ ಬಂದಿದ್ದಾರೆ. ಈ ಯೋಜನೆಗಾಗಿ ಸರ್ಕಾರ 970 ಕೋಟಿ ಖರ್ಚು ವಿನಿಯೋಗಿಸಿತ್ತು.
22.5 ಕಿಮೀ ಬಿ.ಆರ್.ಟಿ.ಎಸ್ ಕಾರಿಡಾರ್ ಮುಖಾಂತರ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ರಸ್ತೆ ನಿರ್ಮಾಣ ಒಳಗೊಂಡಂತೆ 32 ಬಸ್ ನಿಲ್ದಾಣ ನಿರ್ಮಾಣ, ಬಸ್ ಖರೀದಿ, ಸಿಬ್ಬಂದಿ ನೇಮಕ ಇನ್ನಿತರ ಸೌಲಭ್ಯಗಳಿಗೆ ಖರ್ಚು ಮಾಡಲಾಗಿದೆ. ಅಕ್ಟೋಬರ್ 2018 ರಿಂದ ಇಲ್ಲಿಯವರೆಗೆ ಅಂದರೆ 7 ವರ್ಷದಲ್ಲಿ ಹಲವಾರು ಚಿಗರಿ ಬಸ್ ದುರಸ್ತಿ ಕಾಣದೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅಲ್ಲದೇ ಸುದ್ದಿಯಲ್ಲಿ ಸದ್ದು ಮಾಡುತ್ತಿದೆ. ಆದ್ದರಿಂದ ಹುಬ್ಬಳ್ಳಿ-ಧಾರವಾಡ ನಡುವೆ ಓಡಾಡುವ ಸಾರ್ವಜನಿಕರ ಬೇಡಿಕೆಯಂತೆ ಬಿ.ಆರ್.ಟಿ.ಎಸ್ ಸಂಸ್ಥೆಯನ್ನು ವಿಸರ್ಜಿಸುವುದರ ಜೊತೆಗೆ ಕಾರಿಡಾರ್ ತೆರವುಗೊಳಿಸಿ, ರಾಷ್ಟ್ರೀಯ ಹೆದ್ದಾರಿ ಮಾದರಿ ಒಂದು ಹೋಗಲು, ಒಂದು ಬರಲು ಓನ್ ವೇ ಮೂಲಕ ಹುಬ್ಬಳ್ಳಿ-ಧಾರವಾಡ ನಡುವೆ ವಾಯುವ್ಯ ಸಾರಿಗೆ ಸಂಸ್ಥೆಯ 60 ಸಾಮಾನ್ಯ ಬಸ್‌ಗಳು 40 ತಡೆ ರಹಿತ ಬಸ್‌ಗಳನ್ನು ಓಡಿಸಬೇಕು.
ಹುಬ್ಬಳ್ಳಿ-ಧಾರವಾಡಕ್ಕೆ ಬಿ.ಆರ್.ಟಿ.ಸಿ ಸೇವೆ ನೀಡಿದ್ದು ಸಾಕು. ಸರ್ಕಾರ ಗಂಭೀರ ಪ್ರಕರಣವೆಂದು ಪರಿಗಣಿಸಿ, ಬಿ.ಆರ್.ಟಿ.ಎಸ್ ಸಂಸ್ಥೆಯನ್ನು ವಿಸರ್ಜಿಸಿ, ಸಾಮಾನ್ಯ ಬಸ್‌ಗಳನ್ನು ಓಡಿಸಬೇಕು ಎನ್ನುವುದು ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
Disband HD-BRTS, Run regular buses in Hubballi-Dharwad, Public transport alternative, Replace BRTS with NWKRTC buses, Improve public transportation service, Government intervention required, Maintenance and repair issues, Safety concerns for dilapidated buses, Financial mismanagement in the project, Utilize allocated funds for better services, Public demand for change in transport system, Daily commuter inconvenience, Inadequate infrastructure for BRTS, Overcrowded buses and bus stands, Reduce traffic congestion, Enhance connectivity between cities, Increase frequency of non-stop buses, Revive the pre-2018 bus service model, Address the grievances of bus passengers, Environmental impact of BRTS, Fuel efficiency of regular buses, Reduced pollution levels, Economic viability of the regular bus system, Employment for local drivers and conductors, Affordable transportation options, Accessibility for all income groups, Decrease in bus accidents, Improve bus punctuality and reliability, Integrate bus routes with existing city transport, Respond to the voice of the citizens,