Showing posts with label My Article. Show all posts
Showing posts with label My Article. Show all posts

9 Aug 2025

ಸಾರಿಗೆ ಸಂಸ್ಥೆಗೆ ಬೇಕು ಬಲ

By With No comments:











ದೇಶದ ಯಾವುದೇ ರಾಜ್ಯ ನೋಡಿಕೊಂಡು ಬನ್ನಿ ಕರ್ನಾಟಕ ರಾಜ್ಯದಲ್ಲಿರುವ ಉತ್ತಮ ಬಸ್ ವ್ಯವಸ್ಥೆ ಬೇರೆ ಎಲ್ಲಿಯೂ ಇಲ್ಲ. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 30 ಕಿ.ಮಿ ಮೇಲ್ಪಟ್ಟ ಗ್ರಾಮದ ಬಸ್ ಗಳನ್ನು ನಿಯಮಿತ ನಿಲುಗಡೆಯ ವೇಗದೂತ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಆದರೆ 60-70 ಕಿ.ಮಿ ದೂರವಾದರೂ ಸಾಮಾನ್ಯ ಬಸ್ ಗಳನ್ನಾಗಿ ಓಡಿಸುತ್ತಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗುವುದಲ್ಲದೇ, ಸರ್ಕಾರಕ್ಕೆ ಹೊರೆಯಾಗಲಿದೆ. ಒಂದು ಬಸ್, ಒಂದು ಲಿಟರ್ ಡೀಸೆಲ್‌ಗೆ ಕೇವಲ 4 ಕಿ.ಮೀ ಮೈಲೇಜ್ ಕೊಡುವುದು. ಆದ್ದರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 30 ಕಿ.ಮಿ ಮೇಲ್ಪಟ್ಟ ಗ್ರಾಮದ ಬಸ್ ಗಳ ಅನುಸೂಚಿಯನ್ನು ನಿಯಮಿತ ನಿಲುಗಡೆಯ ವೇಗದೂತ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ, ಪ.ಪಂ, ಪುರಸಭೆ, ನಗರಸಭೆ ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸುವ ಸರ್ಕಾರ ಸಾರಿಗೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ. 30 ಕಿ.ಮೀ ಮೇಲ್ಪಟ್ಟ ಸಾಮಾನ್ಯ ಸಾರಿಗೆಯನ್ನು ನಿಯಮಿತ ನಿಲುಗಡೆಯ ವೇಗದೂತ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಜರುಗಿಸಬೇಕು. ಸಾರಿಗೆ ಸಂಸ್ಥೆ ಉಳಿಸಿ, ಬೆಳೆಸುವುದಲ್ಲದೇ ಸಾರಿಗೆ ನೌಕರರ ಸಂಬಳ ಸರಿಯಾಗಿ ಪಾವತಿಸುವ ವ್ಯವಸ್ಥೆ ಮಾಡಿ.

ಎತ್ತ ಸಾಗುತ್ತಿದೆ ಸಮಾಜ

ಹಳೆ ಕಾಲದ ಮುದುಕರ ಮಾತು ಊರು ನಮ್ಮದಲ್ಲ, ನಮ್ಮಪ್ಪದಲ್ಲ ಊರೊಂದು ಸಾರ್ವಜನಿಕ ಆಸ್ತಿ ಅಂದ್ರೆ ಸರ್ಕಾರದ ಆಸ್ತಿ. ಊರಿನ ಮೇಲೆ ಅಭಿಮಾನ ಇರಬೇಕು ವಿನಃ ಅಂಧಾಭಿಮಾನ ಇರಬಾರದು. ಒಂದು ಗಾದೆ ಮಾತು ನೆನಪು ಆಗುತ್ತದೆ. ಊರ ಚಿಂತಿ ಮಾಡಿ ಮುಲ್ಲಾ ಸೊರಗಿದನಂತೆ. ವ್ಯಕ್ತಿ ತಪ್ಪು ಮಾಡಿದಾಗ ಕಾನೂನು ರೀತ್ಯಾ ಕ್ರಮ ಅನುಸರಿಸಬೇಕು ಹೊರತಾಗಿ ಕಾನೂನು ಮೀರಿ ಹೋಗಬಾರದು. ಬಲಿಷ್ಠ ರಾಜ್ಯ ಮಟ್ಟದ ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಸಹಕಾರ ನೀಡುವ ಮುಖಾಂತರ ಎಲ್ಲರೂ ತಾಳ್ಮೆವಹಿಸಬೇಕು ಅಷ್ಟೇ.

Public Transport, Karnataka, Bus System, Infrastructure Development, Village Buses, Express Transport, Fuel Efficiency, Government Initiatives, Local Economy, Rural Development, Sustainable Development, Environmental Impact, Mobility, Road Safety, Employment, Socioeconomic Growth, Rural Connectivity, Government Policy, Efficiency, Modernization, Vehicle Upgradation,

28 Jul 2025

ಸಮುದ್ರಕ್ಕೆ ನೀರನ್ನು ಕಳುಹಿಸುವುದು ಬೇಡ – ನೀರಿನ ಸಂರಕ್ಷಣೆ ಮತ್ತು ಕೃಷಿಗಾಗಿ ಬದಲಿ ಮಾರ್ಗಗಳು

By With No comments:











ಅಂತಾರಾಜ್ಯ ಜಲ ವಿವಾದಗಳು ಹೆಚ್ಚಾಗಿ ಕುಡಿಯುವ ನೀರಿಗೆ ಉಪಯೋಗ ಆಗಿದೆಯೇ ಇಲ್ಲವೋ ಗೊತ್ತಿಲ್ಲ. ಆದರೆ ಹೆಚ್ಚಾಗಿ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಸಮುದ್ರದ ಪಾಲಾಗಿ ನಷ್ಟವಾಗಿರುವುದು ಸುಳ್ಳಲ್ಲ. ಸಮುದ್ರದ ನೀರು ಅನ್ನುವುದು ಉಪ್ಪು ನೀರು ಕುಡಿಯಲು ಯೋಗ್ಯವಲ್ಲ. ಸಮುದ್ರಕ್ಕೆ ತಳ್ಳುವ ನದಿಯ ನೀರಿನ ಜನರಿಗೆ ಕುಡಿಯಲು ಕೊಟ್ಟರೆ ಜೀವ ರಕ್ಷಕ. ಅಲ್ಲದೇ ರೈತರ ಜಮೀನಿಗೆ ನೀರು ಕೊಟ್ಟರೆ ಪುಣ್ಯದ ಕೆಲಸ. ನಾವು ಯಾವ ರಾಜ್ಯದ ನೀರನ್ನು ಕೇಳುತ್ತಿಲ್ಲ. ಬದಲಾಗಿ ನಮ್ಮ ರಾಜ್ಯದ ಗಡಿಯೊಳಗಿಂದ ಹರಿದು ಹೋಗುತ್ತಿರುವ ನೀರನ್ನ ಕೇಳುತ್ತಿರುವುದು. ಕೇವಲ 20 ಶಾಸಕರ ಮೇಲೆ ಸಿಎಂ ಅದ್ದವನಿಗೆ ಏನು ಗೊತ್ತಿದೆ ಎಂಬುದು ಪ್ರಜ್ಞಾವಂತರ ಕಿಡಿ ನುಡಿ. ಸಮುದ್ರಕ್ಕೆ ನದಿಯ ನೀರಿನ ತಳ್ಳುವ ಬದಲು ನದಿಯ ನೀರಿನ ತಿರುಗಿಸಿ ಜನರಿಗೆ, ರೈತರಿಗೆ ಕೊಟ್ಟರೆ ದೇವರ ಸಹ ಮೆಚ್ಚುತ್ತಾನೆ. ನದಿಯ ನೀರಿನ ಉಪಯೋಗಿಸಿಕೊಳ್ಳಿ ಎಂಬ ಕಾನೂನು ಇರಬೇಕಾದರೆ, ಇನ್ನೊಬ್ಬರ ವೈಯಕ್ತಿಕ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇರುವುದಿಲ್ಲ. ಒಳ್ಳೆಯ ಕೆಲಸಕ್ಕೆ ಜನ ಸದಾ ಬೆಂಬಲ ಕೊಡುತ್ತಾರೆ ಆದರೆ ಕೆಟ್ಟ ಮಂದಿ ಕೆಟ್ಟ ವಿಚಾರಗಳಿಂದ ದೇಶಕ್ಕೆ ಮಾರಕ.

ಪತ್ರಕರ್ತರಾಗಲೂ ಬೇಕು ಭಂಡ ಧೈರ್ಯ

ಒಬ್ಬ ಹುಡುಗ ಅಣ್ಣ ನಾನು ಜರ್ನಲಿಸಂ ಓದು ಬೇಕು. ಏನು ಮಾಡಲಿ ಎಂದು ಕೇಳಿದಾಗ, ಭಂಡ ಧೈರ್ಯ ಇದ್ರೆ ಮಾತ್ರ ಮಾಡು ಎಂದೆ ಆ ಹುಡುಗ ನನ್ನ ಮಾತಿಗೆ ಸ್ವಲ್ಪ ವಿಚಲಿತನಾಗಿ ಬೇಡ ಬಿಡು ಬೇರೆ ಕೋರ್ಸು ಓದುತ್ತೇನೆ ಎಂದುಬಿಟ್ಟ. ಸುಮ್ನೆ ತಮಾಷೆಗಾಗಿ ಅಲ್ಲ ಸಮಾಜ ಸೇವೆ ಮಾಡುವುದು ಅಂದರೆ ಸುಮ್ನೆ ಅಲ್ಲ, ನ್ಯಾಯ ಕೊಡಿಸುವುದೇ ಎಂದರೆ ದೊಡ್ಡ ಪಾತ್ರವನ್ನು ವಹಿಸಬೇಕಾಗುತ್ತದೆ. ಈ ಪಾತ್ರದಲ್ಲಿ ಅಡೆತಡೆ, ಸಂಕಷ್ಟಗಳು ಬರಬಹುದು. ಈ ವಿಷಯದಲ್ಲಿ ಬೆಂಗಳೂರಿನಲ್ಲಿರುವ ಪತ್ರಕರ್ತರು ಬಿಟ್ಟರೆ, ಬೇರೆ ಕಡೆ ಭಂಡ ಧೈರ್ಯದಿಂದ ಸರ್ಕಾರದ ನಡೆಯನ್ನು ಆಡಳಿತದ ವೈಖರಿಯನ್ನು ಕುಟುಕಿದು ನಾನು ನೋಡಿಲ್ಲ. ದೇಶದ ಮಾಧ್ಯಮದ ಬಗ್ಗೆ ಹೇಳುವುದು ಬೇಡ ತಮಗೂ ತಿಳಿದ ವಿಚಾರ, ದೇಶದ ಮಾಧ್ಯಮಗಳು ಕೇಂದ್ರ ಸರ್ಕಾರವನ್ನು ರುಬ್ಬಿ ಅಂತಾರಾಜ್ಯ ಜಲ ವಿವಾದ ಬಗೆಹರಿಸಿ ನೋಡೋಣ. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ. ಸಾಧ್ಯವಾದಷ್ಟು ವೈಯಕ್ತಿಕ ಜೀವನದಲ್ಲಿ ಏನಾದ್ರೂ ಸುಳ್ಳು ಹೇಳಿಕೊಳ್ಳಿ, ಆದರೆ ಸಾರ್ವಜನಿಕ ಬದುಕಿನಲ್ಲಿ ಸತ್ಯವನ್ನೇ ಬರೆಯಿರಿ ಹೇಳಿ.

Keywords Tags:-
  • ನೀರಿನ ಸಂರಕ್ಷಣೆ

  • ರೈತ ಸಮಸ್ಯೆಗಳು

  • ಕರ್ನಾಟಕ ನದಿಗಳು

  • ಜಲ ಸಂಗ್ರಹಣೆ

  • ಪರಿಸರ ಸಂರಕ್ಷಣೆ

  • Sustainable Water Use

25 Jul 2025

ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಸಲ್ಲದು! 💧🙏

By With No comments:







ಬಹುದಿನದ ಬೇಡಿಕೆಯಾದ ಮಹದಾಯಿ ನದಿಯ‌ ಉಪ ನದಿಗಳಾದ ಕಳಸ ಮತ್ತು ಬಂಡೂರಿಯ ನೀರನ್ನು ತೀರುಗಿಸಿ, ಮಲಪ್ರಭಾ ನದಿಗೆ ಸೇರಿಸಲು ರೂಪಿಸಿದ ಯೋಜನೆಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ದೇಶದ ಒಕ್ಕೂಟ ಸೇರಬೇಕಾದರೆ, ರಾಜ್ಯದ ಬೇಕು ಬೇಡಿಕೆಗಳನ್ನು ಯಾವುದೇ ಷರತ್ತುಗಳು ಇಲ್ಲದೇ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಅಂತಾರಾಜ್ಯ ಜಲ ವಿವಾದಗಳನ್ನು ಕೇಂದ್ರ ಸರ್ಕಾರ ಮಧ್ಯಸ್ಥ ವಹಿಸಿ ಬಗೆಹರಿಸುವುದು ಆದ್ಯ ಕರ್ತವ್ಯವಾಗಿದೆ. ನ್ಯಾಯಾಧೀಕರಣ ತೀರ್ಪಿನಂತೆ 13.42 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ ನ್ಯಾಯಾಲಯದ ಎರಡು ಷರತ್ತುಗಳು ವಿಧಿಸಿದೆ ಆ ಷರತ್ತುಗಳು ಏನೆಂದರೆ ರಾಜ್ಯದ ಕಳಸಾ ನಾಲೆಗೆ ನದಿಯ ಸಂಪರ್ಕ ಕಲ್ಪಿಸುವ ತಾಣದಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ತೆಗೆಯಲು ‘ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯ ಇನ್ನೊಂದು ಹಲ್ಸರಾ ಮತ್ತು ಬಂಡೂರಿ ಬಳಿ ಹೊಸದಾಗಿ ಅಣೆಕಟ್ಟುಗಳನ್ನೂ ಕಟ್ಟಬೇಕು.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕಾಗುವುದು ಅವಶ್ಯಕವಾಗಿದೆ. ಅನುಮತಿ ನೀಡಬೇಕಾಗಿರುವುದು ಕೇಂದ್ರ ಸರ್ಕಾರವೇ ಅನುಮತಿ ನೀಡದೇ ಸಣ್ಣ ರಾಜ್ಯದ ಬೆದರಿಕೆಗೆ ಬಾಯಿ ಮುಚ್ಚಿಕೊಂಡು ಕುಳಿತಿರುವುದು ವಿಪರ್ಯಾಸ ಸರಿ. ಕೇಂದ್ರ ಸರ್ಕಾರದ ನಮ್ಮ ಬೇಡಿಕೆಗೆ ಬಗ್ಗದೆ ಹೋದರೆ ಗೋವಾ ರಾಜ್ಯದ ಸಂಪರ್ಕ ಕಡಿತಗೊಳಿಸಿ ಬಿಸಿ ಮುಟ್ಟಿಸಬೇಕು. ನಮ್ಮ ರಾಜ್ಯದಿಂದ ಗೋವಾ ರಾಜ್ಯಕ್ಕೆ ಯಾವುದೇ ತರ ಉಪಯೋಗಗಳು ಇದ್ದರೆ ತಕ್ಷಣ ನಿಲ್ಲಿಸುವ ಮೂಲಕ ಎಚ್ಚರಿಕೆ ನೀಡುವುದು ಅಗತ್ಯವಾಗಿದೆ.

ಕಳಸಾ ಬಂಡೂರಿ ಸಂಕ್ಷಿಪ್ತ ವಿವರ

ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಮತ್ತು ಗದಗ ಜಿಲ್ಲೆಯ ಕುಡಿಯುವ ನೀರಿನ ಅಗತ್ಯಗಳನ್ನು ಒದಗಿಸಲು, ಮಹಾದಾಯಿಯ ನದಿಯ ಉಪನದಿಗಳಾದ ಕಳಸ ಮತ್ತು ಬಂಡೂರಿಯ 7.56 ಟಿಎಂಸಿ ಯಷ್ಟನ್ನು ತಿರುಗಿಸಿ, ಮಲಪ್ರಭಾ ನದಿಗೆ ಸೇರಿಸಲು ಕಳಸ ಮತ್ತು ಬಂಡೂರಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ಯೋಜನೆ ಇದ್ದಾಗಿದೆ. ಕೇಂದ್ರ ಜಲ ಆಯೋಗದ ಪ್ರಕಾರವೇ 42 ಟಿಎಂಸಿ ಅಡಿ ನೀರು ನೀಡಬೇಕಿತ್ತು. ಈಗ ಕೇವಲ 13.42 ಟಿಎಂಸಿ ಅಡಿ ನೀರನ್ನು ತೀರ್ಪಿನಲ್ಲಿ ನೀಡಿದೆ. ಈ ತೀರ್ಪಿನಿಂದ ರಾಜ್ಯಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಕುಡಿಯುವ ಉದ್ದೇಶದಿಂದ 5.40 ಟಿಎಂಸಿ ಅಡಿ ಹಾಗೂ ಜಲ ವಿದ್ಯುತ್‌ ಉತ್ಪಾದನೆಗೆ 8.02 ಟಿಎಂಸಿ ಅಡಿ ಸೇರಿ ನ್ಯಾಯಮಂಡಳಿಯು ರಾಜ್ಯಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಆದರೆ ಮಹದಾಯಿ ನದಿಯಿಂದ ಮಲಪ್ರಭಾಕ್ಕೆ (ಕಳಸಾ ಬಂಡೂರಿ ಯೋಜನೆ) ನೀರು ಹರಿಸುವ ಕೋರಿಕೆಯಂತೆ ಮಹದಾಯಿ ನ್ಯಾಯಮಂಡಳಿ ತೀರ್ಪಿನಲ್ಲಿ ರಾಜ್ಯದ ಕಳಸಾ ನಾಲೆಗೆ ನದಿಯ ಸಂಪರ್ಕ ಕಲ್ಪಿಸುವ ತಾಣದಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ತೆಗೆಯಲು ‘ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯ’ ಎಂಬ ಷರತ್ತು ಇರುವುದರಿಂದ ಕುಡಿಯುವ ನೀರು ತಕ್ಷಣ ಲಭ್ಯತೆ ಇಲ್ಲ. ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿಯಷ್ಟು ನೀರನ್ನು ರಾಜ್ಯದ ಬಳಕೆಗೆ ಕೊಟ್ಟರೂ, ಬಳಸುವ ನಾಲೆಗೆ ಅರಣ್ಯದ ಒಳಗಿಂದಲೇ ನೀರನ್ನು ತರಬೇಕಾಗುವುದು,

ಮತ್ತೆ ಹಲ್ಸರಾ ಮತ್ತು ಬಂಡೂರಿ ಬಳಿ ಹೊಸದಾಗಿ ಅಣೆಕಟ್ಟುಗಳನ್ನೂ ಕಟ್ಟಬೇಕು. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕಾಗುವುದು. ಆದ್ದರಿಂದ ಬಂಡೂರಿ ನಾಲೆಯಿಂದ ಕುಡಿಯುವ ನೀರನ್ನು ಅಗತ್ಯ ಪ್ರದೇಶಗಳಿಗೆ ಒದಗಿಸಲು ಕೆಲವು ವರ್ಷಗಳೇ ತಡವಾಗಹುದು, ಎಂಬುದು ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯವಾಗಿದೆ.


Related Tags:- ಮಹದಾಯಿ ನದಿ, ಮಹದಾಯಿ ವಿವಾದ, ಮಹದಾಯಿ ಕರ್ನಾಟಕ, Mahadayi River Dispute, Karnataka Water Crisis, Central Government Negligence, Karnataka vs Goa, Water Sharing Issues, Kannada Politics, Kannada Blog


16 Jul 2025

ಕವಿವಿ ಪ್ರಾಧ್ಯಾಪಕರ ನಡುವೆ ಸಮನ್ವಯದ ಕೊರತೆ: ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ? 🎓📉

By With No comments:











2019 ರಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುಬೇಕಾದರೇ, ಎರಡು ವರ್ಷ ನನಗೆ ತಿಳಿದ ಮಟ್ಟಿಗೆ, ಅನುಭವದ ಮಟ್ಟಿಗೆ ಎಲ್ಲಾ ವಿಭಾಗಗಳಲ್ಲಿ ಪ್ರಾದ್ಯಾಪಕರ ನಡುವೆ ಸಮನ್ವಯ ಕೊರತೆ ಇದೆ. ಕಾರಣ ವಿಭಾಗದ ಮುಖ್ಯಸ್ಥ ಎಂಬ ಹುದ್ದೆ.

ಈ ಹುದ್ದೆಗೆ ಇರುವಷ್ಟು ಪೈಪೋಟಿ ಯಾವ ಹುದ್ದೆಗೂ ಇಲ್ಲ. ನಮ್ಮ ಪತ್ರಿಕೋದ್ಯಮ ವಿಭಾಗದಲ್ಲಿ ಜೆ.ಎಂ ಚಂದುನವರ ಮುಖ್ಯಸ್ಥರಾಗಿದ್ದರು, ಇಬ್ಬರು ಹಿರಿಯ ಪ್ರಾಧ್ಯಾಪಕರು ನಾಗರಾಜ್ ಹಳ್ಳಿಯವರ, ಸಂಜಯ ಮಾಲಗತ್ತಿ ಗುರುಗಳು ನಡುವೆ ಹೊಂದಾಣಿಕೆ ಇರ್ಲಿಲ್ಲ. ಕಾರಣ ವಿಭಾಗದ ಮುಖ್ಯಸ್ಥ ಎಂಬ ಹುದ್ದೆ. ಈ ಹುದ್ದೆಯಿಂದಾಗಿ ಮೂವರು ನಡುವೆ ಸರಿಯಾಗಿ ಮಾತು ಇಲ್ಲ,

ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲದರಲ್ಲೂ ವಿರೋಧ ಭಾವನೆ. ನನಗೂ ನೋಡಿ, ನೋಡಿ ಸಾಕಾಗಿ ಆಗಿನ ಮುಖ್ಯಮಂತ್ರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೂ ಪತ್ರ ಬರೆದು ಒಂದುಗೂಡಿಸುವಂತೆ ಕೇಳಿಕೊಂಡಿದ್ದು ಸುಳ್ಳಲ್ಲ. ಈ ಪತ್ರ ಕುಲಸಚಿವರಿಗೆ ತಲುಪಿರಬೇಕು ಅನ್ಸುತ್ತೆ, ಆಗ ಸಂವಹನ ಕೂಟ ಕಾರ್ಯಕ್ರಮದಲ್ಲಿ ಮೂವರು ಒಟ್ಟುಗೂಡಿ ಪೋಟೋ ತೆಗೆಯಿಸಿ ಕೊಂಡಿದ್ದು,

ನೋಡಿ ಎಲ್ಲಾ ವಿದ್ಯಾರ್ಥಿಗಳು ಫುಲ್ ಖುಷಿ ಆಗಿಬಿಡುತ್ತಾರೆ. ಜೆ.ಎಂ ಚಂದುನವರ ಸರ್-ಗೆ ನಾನು ಅಂತ್ರು ಅಚ್ಚು ಮೆಚ್ಚಿನ ವಿಧ್ಯಾರ್ಥಿಯಾಗಿದ್ದೆ. ಈಗ ಸಂಜಯ ಮಾಲಗತ್ತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ನಾಗರಾಜ ಹಳ್ಳಿಯವರ ನಿವೃತ್ತಿ ಆಗಿದ್ದಾರೆ. ನಾನು ಯಾವಾಗಲೂ ತಮಾಷೆ ಮಾಡುತ್ತಿದ್ದ ಜೆ.ಎಂ. ಚಂದುನವರ ಸರ್-ಗೆ ಮಾತ್ರ ನನ್ನ ನೆನಪು ಮಾಡಿಕೊಳ್ಳದಷ್ಟು ವಯಸ್ಸು ಆಗಿ, ಮರೆವು ಜಾಸ್ತಿ ಆಗಿದೆ.

ಪ್ರಾಧ್ಯಾಪಕ ಹುದ್ದೆಯಲ್ಲಿ ಮುಂದುವರಿದು ಮಾಜಿ ಎಚ್.ಓ.ಡಿ ಆಗಿದ್ದಾರೆ. ಅಂದರೆ ನನ್ನ ಅನುಭವದ ಮಟ್ಟಿಗೆ ಕೇವಲ ಒಂದೇ ವಿಭಾಗ ಅಲ್ಲ ಕರ್ನಾಟಕ ವಿಶ್ವವಿದ್ಯಾಲಯದ 48 ವಿಭಾಗದಲ್ಲಿ ಪ್ರಾಧ್ಯಾಪಕರ ನಡುವೆ ಸಮನ್ವಯತೆ ಇಲ್ಲ. ಕಾರಣ ವಿಭಾಗದ ಮುಖ್ಯಸ್ಥ ಹುದ್ದೆ. ಇದರಿಂದ ಹಿರಿಯ ಶ್ರೇಣಿ ಆಧಾರದ ಮೇಲೆ ವಿಭಾಗದ ಮುಖ್ಯಸ್ಥ, ಉಪ ಕುಲಪತಿ ನೇಮಕವಾಗಬೇಕು ಎಂಬ ವಾದವೂ ಸಮಸ್ಯೆಯಾಗುತ್ತದೆ. ಹುದ್ದೆ ಅನ್ನುವುದು ಶಾಶ್ವತ ಅಲ್ಲ, ವಿದ್ಯಾರ್ಥಿಗಳಿಗೆ ಕಲಿಸುವಂತಹ ಶಿಕ್ಷಣದ ಪಾತ್ರ ಮುಖ್ಯವಾಗಿರುತ್ತದೆ. ಎಲ್ಲ ವಿಭಾಗಗಳಲ್ಲೂ ಸುಧಾರಣೆ ಕಂಡರೆ ಸಾಕು, ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಲಿ.

Related Tags:- ಕವಿವಿ, ಕನ್ನಡ ವಿಶ್ವವಿದ್ಯಾಲಯ, ಪ್ರಾಧ್ಯಾಪಕರ ಸಮನ್ವಯ, Kannada University Hampi, Academic Conflict, Teacher Coordination Issues, Karnataka Education, Kannada Blog, University Issues, Education Quality

5 Jul 2025

ಸರ್ಕಾರದ ನಿರ್ಧಾರ ಶರವೇಗದಲ್ಲಿ ಆಗಲಿ – ಜನತೆಗೆ ತ್ವರಿತ ನ್ಯಾಯ ಮತ್ತು ಸೇವೆ ಬೇಕು! ⚖️🚀

By With No comments:











ಒಂದು ಒಳ್ಳೆಯ ಕೆಲಸ ಮಾಡಬೇಕಾದರೆ, ನೂರಾರು ಕೆಟ್ಟ ಹುಳಗಳು ಅಡ್ಡಗಾಲು ಹಾಕುವುದು ಸಹಜ. ಆ ತರ ಇರುವ ಕೆಟ್ಟ ಹುಳಗಳಿಗೆ ಮನ್ನಣೆ ನೀಡಿದ್ದರೆ, ಸಾಮಾಜ ಸುಧಾರಣೆ ಮಾಡುವುದು ಕಷ್ಟವಾಗಲಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಆಲೋಚನೆಗೆ ಸರ್ಕಾರ ಹಿಂದೇಟು ಹಾಕುವುದು ಏಕೆ?. ಸರ್ಕಾರ ಮಟ್ಟದಲ್ಲಿ ಕಾನೂನು ಪ್ರಕಾರ, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲು ಯಾವುದು ಸಾಧ್ಯತೆ ಇದೆ. ಆ ಎಲ್ಲ ಕೆಲಸ ಸರವೇಗದಲ್ಲಿ ರಾಜ್ಯ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿ. ಒಂದು ವೇಳೆ ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾನೂನು ಪ್ರಕಾರವೇ ಜಾರಿಗೆ ತೆಗೆದುಕೊಂಡ ನಿರ್ಧಾರದ ಯಾವುದಕ್ಕೂ ಸಮಸ್ಯೆಯಾಗುವುದಿಲ್ಲ.

ಕೆಲವರಿಗೆ ಕಾಯ್ದೆ ಕಾನೂನಿನ ಬಗ್ಗೆ ತಿಳಿವಳಿಕೆ ಕಡಿಮೆ ಇರುತ್ತದೆ. ಒಮ್ಮೆ ಹೇಳಿದ್ದರು ತಿಳಿದುಕೊಳ್ಳುವುದಿಲ್ಲ. ಕಾಯ್ದೆಗಳನ್ನು ನಿವೃತ್ತ ನ್ಯಾಯಮೂರ್ತಿಗಳಿಂದ ವರ್ಷಾನುಗಟ್ಟಲೆ ಸಂಶೋಧಿಸಿ, ರಚನೆ ಮಾಡಿದ ಕಾಯ್ದೆಗಳು ಆಗಿರುತ್ತದೆ. ಕಾಯ್ದೆ ವಿರುದ್ಧ ನಡೆಯುವವರು ಜೈಲು ಊಟ ಸವಿಯಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಡಿಸೆಂಬರ್ 31 ರೊಳಗೆ ಅಂತಿಮ ಗಡಿ ಗುರುತಿಸುವುದು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಎರಡು ಹೊಸ ಜಿಲ್ಲೆ ರಚನೆ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸುವುದು ಸೇರಿದಂತೆ ಯಾವುದು ಸರ್ಕಾರದ ಮಟ್ಟದಲ್ಲಿ ಬಾಕಿ ಇದೆ. ಅವುಗಳೆಲ್ಲವೂ ಶೀಘ್ರ ಕ್ರಮ ಕೈಗೊಳ್ಳುವ ಕೆಲಸವಾಗಲಿ.

ಲೇಖನಗಳು ಸಂಕ್ಷಿಪ್ತವಾಗರಲಿ

ಪತ್ರಿಕೆಗಳಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳಿಗಾಗಿ ಅಥವಾ ಲೇಖನ ಪುಟ ಇರುತ್ತದೆ. 500ಕ್ಕೂ ಅಧಿಕ ಪದ ಮೀರಿ ಬರೆದ ಲೇಖನ ಪದೇ ಪದೇ ಓದಿದಾಗ ಅರ್ಥ ಆಗಲ್ಲ. ನಿತ್ಯ ಕರ್ಮದ ಒಂದು, ಎರಡು ಬಿಟ್ಟು ಬೆಳ್ಳಗ್ಗೆಯಿಂದ ರಾತ್ರಿವರೆಗೂ ಏನೇನು ಮಾಡಿದ್ದೀವಿ ಅವುಗಳನ್ನೆಲ್ಲ ಸೇರಿಸಿ ಬರೆದ ಲೇಖನ ಸೇರಿದಂತೆ ಯಾವುದೇ ಲೇಖನ ಆಗ್ಲಿ 500ಕ್ಕೂ ಅಧಿಕ ಪದದಲ್ಲಿ ಜನರಿಗೆ ತಿಳಿಸುವ ಪ್ರಯತ್ನಕ್ಕಿಂತ ಸಂಕ್ಷಿಪ್ತವಾಗಿ 100, 150, 180 ಪದಗಳಲ್ಲಿ ಸರಿಯಾಗಿ ಬರೆದು ತಿಳಿಸಿದರು ಚಂದ. ಅತ್ಯುತ್ತಮ ಲೇಖನ ಪದಗಳಲ್ಲಿ ಗುರುತಿಸುವ ಕ್ಕಿಂತಲೂ ಸಾರ್ವಜನಿಕರ ನಾಡಿ ಮಿಡಿತದ ಲೇಖನದ ಬರಹಗಳನ್ನು ಹೆಚ್ಚು ಪ್ರಕಟಿಸಬೇಕು. ಪದೇ ಪದೇ ಓದಿದರು ಜನರಿಗೆ ಅರ್ಥ ಆಗದೇ ಇರುವ ಲೇಖನ ಒಂದು ರೀತಿ ಡಿಸೈನ್ ಆರ್ಟಿಕಲ್ ಆಗಿದೆ ಅಂತ ಅರ್ಥ.

Related Tags:- ಸರಕಾರದ ನಿರ್ಧಾರ, Governance in Kannada, Fast Decision Making, Public Administration, Kannada Blog, Good Governance, Policy Making, Government Action, People's Expectations, Karnataka Politics



28 Jun 2025

ಜಿಲ್ಲಾ ಉಸ್ತುವಾರಿ ಮಂತ್ರಿ ಅಲ್ಲ, ಉಸಾಬರಿ ಮಂತ್ರಿ! 🤦‍♂️📍

By With No comments:











ಸರ್ಕಾರ ಮಂತ್ರಿ ಮಂಡಲ ರಚಿಸುವುದು ಏಕೆ? ಸಚಿವರು ಒಂದೊಂದು ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿ ಎಂದು ಆದರೆ ಮಂತ್ರಿಗಳಾದ ಮೇಲೆ ಜಿಲ್ಲಾ ಉಸ್ತುವಾರಿ ಮಂತ್ರಿಗಾಗಿ ಜಗಳ ನಡೆದ ಘಟನೆಗಳು ನಡೆದಿವೆ. ನನಗೆ ಅದೇ ಜಿಲ್ಲೆ ಬೇಕು. ನನಗೆ ಇದೆ ಜಿಲ್ಲೆ ಬೇಕು‌ ಎಂದು ಮುಖ್ಯಮಂತ್ರಿಗಳ ಬೆನ್ನು ಬಿದ್ದು ಗಂಟು ಬೀಳುವುದು ನೋಡಿದ್ದಿವಿ. ಅದಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಹುದ್ದೆ ಏಕೆ ಅಂತ? ಸಚಿವರು ಇಡೀ ಕರ್ನಾಟಕ ರಾಜ್ಯಕ್ಕೆ ಮಂತ್ರಿ ಆಗಿರುತ್ತಾರೆ. ತಮ್ಮ ತಮ್ಮ ಇಲಾಖೆ ಸಂಬಂಧಿಸಿದಂತೆ ಕ್ರಮ ಕೈಗೊಂಡರೆ ಸಾಕು ಪ್ರಕರಣ ಅಂತ್ಯ ಕಾಣುತ್ತದೆ. ಈ ಜಿಲ್ಲಾ ಉಸ್ತುವಾರಿ ಮಂತ್ರಿಯಿಂದಾಗಿ, ಸಚಿವರು ರಾಜ್ಯ ಪ್ರವಾಸ ನಿಲ್ಲಿಸುತ್ತಾರೆ. ತಮ್ಮ ತಮ್ಮ ಉಸ್ತುವಾರಿ ಜಿಲ್ಲೆ ನೋಡಿಕೊಂಡರೆ ಸಾಕು ಎನ್ನುವ ಮಟ್ಟಕ್ಕೆ ಬರುತ್ತಾರೆ. ಅದಕ್ಕೆ ಈ ಜಿಲ್ಲಾ ಉಸ್ತುವಾರಿ ಮಂತ್ರಿ ಅಲ್ಲಲ್ಲ ಜಿಲ್ಲಾ ಉಸಾಬರಿ ಮಂತ್ರಿಯಿಂದ ಜನ ಬೇಸತ್ತು ಹೋಗಿದ್ದಾರೆ. ಸಚಿವರು ತಮ್ಮ ಇಲಾಖೆಯನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸಿರುವುದು ಕೆಲವರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ಈ ಜಿಲ್ಲಾ ಉಸ್ತುವಾರಿ ಮಂತ್ರಿ ಅಲ್ಲಲ್ಲ ಉಸಾಬರಿ ಮಂತ್ರಿ ತೆಗೆದು ಹಾಕಿ, ಇಡೀ ಕರ್ನಾಟಕ ರಾಜ್ಯಕ್ಕೆ ಮಂತ್ರಿ ಎಂದು ಜನರಿಗೆ ಮನದಟ್ಟು ಮಾಡಬೇಕು. ಅಂದಾಗ ಸರ್ಕಾರ ಆಡಳಿತ ಯಂತ್ರ ಚುರುಕುಗೊಂಡಿದೆ ಎಂಬ ಅರ್ಥ ಜನರಿಗೆ ಬರುತ್ತದೆ.

ಶಿಷ್ಟಾಚಾರ ಉಲ್ಲಂಘನೆ ವಿಧಾನಸೌಧಕ್ಕೆ ಅನ್ವಯಿಸಲ್ಲ

ಯಾವಾಗ ಕ್ಷೇತ್ರದ ಶಾಸಕರು ಸಾರ್ವಜನಿಕ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ರೊಚ್ಚಿಗೆದ್ದ ವಿಧಾನಸೌಧದಲ್ಲಿರುವ ಸಚಿವರ ಕೊಠಡಿ ಸಂಖ್ಯೆಗೆ ಪತ್ರ ಬರೆದು, ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರಿ ಅರ್ಜಿ ಪತ್ರದ ಮೂಲಕ ಸಚಿವರಿಗೆ ಸಾರ್ವಜನಿಕ ತಿಳಿಸಿರುತ್ತಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸಚಿವರ ಸ್ಪಂದಿಸಿದಾಗ ಶಾಸಕರ ಶಿಷ್ಟಾಚಾರ ಉಲ್ಲಂಘನೆ ಹೇಗಾಗುತ್ತದೆ. ಮುಖ್ಯಮಂತ್ರಿಗಳು, ಮಂತ್ರಿಗಳು ಶಾಸಕರಗಿಂತ ದೊಡ್ಡವರು, ಶಿಷ್ಟಾಚಾರ ಉಲ್ಲಂಘನೆ ಅನ್ವಯಿಸುವುದಿಲ್ಲ.

Related Tags:- ಜಿಲ್ಲಾ ಉಸ್ತುವಾರಿ ಮಂತ್ರಿ  
Kannada Blog  

27 Jun 2025

ಅಧಿಕಾರ ಶಾಶ್ವತ ಅಲ್ಲ – ರಾಜಕಾರಣಿಗಳು ಈ ಸತ್ಯವನ್ನು ಅರ್ಥೈಸಿಕೊಳ್ಳಲಿ! 🏛️⏳

By With No comments:











ತಾತ್ವಿಕ ಒಪ್ಪಂದ ಮೇರೆಗೆ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದೆ. ಒಂದು ವೇಳೆ ಸರಕಾರ ನಡೆಸುವ ಪಕ್ಷ ಬದಲಾದರೆ, ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸಬಹುದು. ಕೆಲವು ವರ್ಷಗಳ ಕಾಲ ಜನರ ಆರ್ಥಿಕ ಸ್ಥಿತಿ ಬಲಗೊಳಿಸುವ ನಿಟ್ಟಿನಲ್ಲಿ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸುವುದು ಸರ್ಕಾರದ ಮೂಲ ಉದ್ದೇಶ. ಜನರ ಆರ್ಥಿಕ ಸ್ಥಿತಿ ಬಲಗೊಂಡ ನಂತರ ನಿಲ್ಲಿಸಬಹುದು. ಹಿಂದಿನ ಸರ್ಕಾರಗಳು ಘೋಷಿಸಿದ್ದ ಕಲ್ಯಾಣ ಕಾರ್ಯಕ್ರಮಗಳು ಗೊತ್ತು ಗುರಿ ಇಲ್ಲದೆ ರದ್ದು ಆಗಿರುವ ಉದಾಹರಣೆಗಳು ಸಾಕಷ್ಟಿವೆ. ತಾತ್ವಿಕ ಒಪ್ಪಂದ ಮೇರೆಗೆ ಜಾರಿಗೆ ಬಂದ ಯೋಜನೆಗಳು ರಾಜ್ಯ ಸರ್ಕಾರ ಯಾವುದೇ ಸಂದರ್ಭದಲ್ಲಿ ರದ್ದು ಪಡಿಸಬಹುದಾಗಿದೆ. ಜನರಿಗೂ ತಿಳಿಸದೇ ರದ್ದು ಮಾಡಬಹುದು ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ರಾಜಕಾರಣಿಗಳಿಗೆ ಮನವರಿಕೆ ಆಗಬೇಕಾಗಿರುವುದು ಅಧಿಕಾರ ಅನ್ನುವುದು ಶಾಶ್ವತ ಅಲ್ಲ, ಇದ್ದಷ್ಟು ದಿನ ಅಧಿಕಾರದಲ್ಲಿ ಇದ್ದು ರಾಜಕಾರಣಿಗಳು ಜನರಿಗೆ ಉತ್ತಮ ಸೇವೆ ನೀಡಬೇಕು. ಜನರಿಗೆ ಆಡಳಿತ ಉತ್ತಮವಾಗಿದ್ದಾರೆ. ಜನರು ಸರ್ಕಾರವನ್ನು ಮರು ಆಯ್ಕೆ ಮಾಡುತ್ತಾರೆ. ಸರ್ಕಾರ ಎಂದಮೇಲೆ ರಾಜ್ಯದಲ್ಲಿ ಮಂತ್ರಿಗಳು ಫುಲ್ ಆಕ್ಟಿವ್ ಆಗಿರಬೇಕು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಯಾವುದೇ ಕ್ಷಣದಲ್ಲಾದರೂ ಎಂತಹ ಸಂದರ್ಭದಲ್ಲಾದರೂ ಸಂಕಷ್ಟ ನಿರ್ವಹಣೆ ಸಿದ್ಧರಾದರೆ ಉತ್ತಮ. ಇನ್ನು ಕ್ಷೇತ್ರದ ಶಾಸಕರು ಹೊರತಾಗಿಲ್ಲ ಅವರ ಸಹ ತಮ್ಮ ಕ್ಷೇತ್ರದ ಜನರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.

ಒಂಟಿ ಕಾಲಿನ ಕುಂಟೆ ಬಿಲ್ಲೆ ಆಡುವ ಸರ್ಕಾರಗಳಿಂದ, ಜನ ವಿರೋಧಿ ನೀತಿ ಬೇಡ

ದೇಶದ ಕೆಲವು ರಾಜ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಹುಮತವಿಲ್ಲ. ಮಿತ್ರ ಪಕ್ಷಗಳ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದಾರೆ. ಅಷ್ಟೇ ಏಕೆ ಕೇಂದ್ರ ಸರ್ಕಾರ ಸಹ ಒಂಟಿ ಕಾಲಿನಲ್ಲಿ ಅಧಿಕಾರ ನಡೆಸುತ್ತಿದೆ. ಯಾವಾಗ ಬಿಹಾರ, ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಮೂಡ್ ಬದಲಾಗುತ್ತದೆ ಅಂತ ಹೇಳೋಕೆ ಸಾಧ್ಯವಿಲ್ಲ. ಜನ ವಿರೋಧಿ ನೀತಿ ಏನಾದ್ರೂ ಒಂಟಿ ಕಾಲಿನ ಕುಂಟೆ ಬಿಲ್ಲೆ ಆಡುವ ಸರಕಾರಗಳು ತೆಗೆದುಕೊಂಡರೆ ಜನರು ಮನೆಯ ಹಾದಿ ತೋರಿಸುತ್ತಾರೆ. ಬೈಕ್ ಗಳಿಗೆ ಟೋಲ್ ಸಂಗ್ರಹ ಸುದ್ದಿ ಸುಳ್ಳಾಗಿದ್ದು, ಒಂದು ವೇಳೆ ನಿಜವಾದರೆ. ಕೇಂದ್ರ ಸರ್ಕಾರ ಬದಲಾಯಿಸು ನಿರ್ಧಾರಕ್ಕೆ ಜನ ಬರುತ್ತಾರೆ. ದೇವರು ಉಚಿತವಾಗಿ ನೀಡಿದ ಗಾಳಿ, ನೀರು, ಸೂರ್ಯನ ಬೆಳಕಿಗೂ ಹಣ ಪಾವತಿಸುವ ಕಾಲ ಬರುತ್ತದೆ ಅಂದರೆ ವಿಪರ್ಯಾಸ ಸರಿ.

Related Tags:- ಅಧಿಕಾರ ಶಾಶ್ವತವಲ್ಲ  
Political Awareness Kannada  
Rajakaranika Patha  
Public Accountability  
Leadership Ethics  
Voters Voice  
Kannada Politics  
Political Opinion Blog

23 Jun 2025

ಕರ್ನಾಟಕ ಸರ್ಕಾರದ ಶಕ್ತಿ ಕೇಂದ್ರ ವಿಧಾನಸೌಧ

By With No comments:











ಬೆಂಗಳೂರಿಗೆ ಹೋದಾಗ ಮೊದಲು ನೋಡಿ ಬಾರೋದು ವಿಧಾನಸೌಧವೇ. ಅದು 3 ಗಂಟೆ ನಂತರವಷ್ಟೇ, ಕರ್ನಾಟಕ ಒನ್ ಆಫ್ ನಲ್ಲಿ ವಿಧಾನಸೌಧ ಆಪ್ಷನ್ ಆಯ್ದುಕೊಂಡು ವಿಧಾನಸೌಧ ಅಥವಾ ಪಕ್ಕದಲ್ಲಿರುವ ವಿಕಾಸಸೌಧದ ಕಟ್ಟಡದಲ್ಲಿರುವ ಯಾವುದಾದರೂ ಇಲಾಖೆ ಆಯ್ದುಕೊಂಡು ಬಾರ್ ಕೊಡ್ ಆಧಾರಿತ ಪಾಸ್ ಪಡೆದು ವಿಧಾನಸೌಧದ ಒಳಗೆ 3 ಗಂಟೆ ನಂತರ ಹೋಗಬಹುದು. ಈ ಸಮಯ ಬದಲಾವಣೆ ತರಲು ಸಾಧ್ಯವಿದೆಯಾ? ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ವಿಧಾನಸೌಧ ನೋಡುವ ಮತ್ತು ಸಮಸ್ಯೆ ಹೇಳಿಕೊಳ್ಳುವ ವ್ಯವಸ್ಥೆ ಮಾಡಬೇಕು. ದೂರದ ಸ್ಥಳೀಯಗಳಾದ ಅಥವಾ ಪ್ರಾದೇಶಿಕ ವಿಭಾಗದ ವ್ಯಾಪ್ತಿಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮೈಸೂರು ಸುತ್ತಮುತ್ತಲಿನ ಜಿಲ್ಲೆಯ ಜನರು ಮದ್ಯಾಹ್ನ 3 ಗಂಟೆವರೆಗೂ ಕಾಯಬೇಕು. ಹಾಗಾಗಿ ವಿಧಾನಸೌಧದ ಒಳಾಂಗಣ ನೋಡಲು ಮತ್ತು ಸಮಸ್ಯೆ ಹೇಳಿಕೊಳ್ಳಲು ಎರಡು ತಾಸು ಸಾಕು ಅದು ಮದ್ಯಾಹ್ನ 12 ರಿಂದ 2 ಗಂಟೆ ವರೆಗೆ ನೀಡಿದರೆ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗಲಿದೆ.

ವಿಧಾನಸೌಧ ಕಳೆಗಟ್ಟಿದೆ ಕರ್ನಾಟಕ ಸರ್ಕಾರದ ಕಾರುಗಳು

ಒಂದರಮೇಲೊಂದು ಕರ್ನಾಟಕ ಸರ್ಕಾರ ಎಂಬ ನಾಮಫಲಕದ ಕಾರುಗಳು ನೋಡುಗರ ಕಣ್ಣುಗಳಿಗೆ ಕಳೆ ಗಟ್ಟಿದೆ. ಕರ್ನಾಟಕ ಸರ್ಕಾರ ಎಂಬ ನಾಮ ಅಂಕಿತ ಕಾರು ನೋಡಿದಾಗ ಮನಸ್ಸಿಗೆ ಅನ್ನಿಸಿದ್ದು ನಮ್ದೇ ನಡಿತೈತಿ ಹವಾ ನಿಮ್ಮದೇನು ಹೋಗು ಅನ್ನುವ ರೀತಿಯಲ್ಲಿ ಭಾವನೆ ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿತು. ವಿಧಾನಸೌಧದ ಕಳೆ ತಂದಿದ್ದು ಕರ್ನಾಟಕ ಸರ್ಕಾರ ನಾಮ ಅಂಕಿತ ಕಾರುಗಳು ನೋಡುಗರ ಕಣ್ಣುಗಳಿಗೆ‌ ಮತ್ತು ಮನಸ್ಸಿಗೆ ಹಿತ ನೀಡಿವೆ. ವಿಧಾನಸೌಧ ಕರ್ನಾಟಕ ಸರ್ಕಾರ ಎಂಬ ನಾಮ ಅಂಕಿತ ಕಾರುಗಳ ತಾಣವಾಗಿ ವಿಧಾನಸೌಧ ಕಳೆ ಗಟ್ಟಿದ್ದು ವಿಶೇಷ.

Related Tags:- ವಿಧಾನಸೌಧ  

9 Jun 2025

"ಕೆಟ್ಟ ಘಳಿಗೆ – ಇದೊಂದು ಸಲ ಕ್ಷಮಿಸಿಬಿಡಿ…" 🙏💔

By With No comments:







ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನಿರೀಕ್ಷೆ ಮೀರಿ, ಕ್ರೀಡಾಂಗಣದ ಸಾಮರ್ಥ್ಯ ಮೀರಿ ಆರ್.ಸಿ.ಬಿ ಅಭಿಮಾನಿಗಳು ಧಾವಿಸಿದರಿಂದ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕ್ರೀಡಾಂಗಣ ಭರ್ತಿಯಾಗಿದೆ. ಮನೆಗೆ ಹೋಗಿ ಎಂದರು. ಯಾರು ಕೇಳೋರು, ಯಾರು ಕ್ಯಾರೇ ಎನ್ನದ ಸನ್ನಿವೇಶ ಸೃಷ್ಟಿಯಾಗಿತು. ಒಟ್ಟಾರೆ ಬೆಂಗಳೂರಿನಲ್ಲಿ ಅಲ್ಲಿಲ್ಲಿ ನಿಂತ ಅಭಿಮಾನಿಗಳು, ಕಾರ್ಯಕ್ರಮ ಮಧ್ಯದಲ್ಲಿ ಮನೆಗೆ ಹೋದ ಅಭಿಮಾನಿಗಳು ಸೇರಿದಂತೆ ಅಂದಾಜು ಸುಮಾರು ೨ ಕೋಟಿಗೂ ಅಧಿಕ ಆರ್.ಸಿ.ಬಿ ಅಭಿಮಾನಿಗಳು ಬೆಂಗಳೂರಿನಲ್ಲಿ ಇರಬಹುದು ಎಂಬ ನಂಬಿಕೆ. ಟಿವಿ ನ್ಯೂಸ್ ವಿಡಿಯೋಗಳಲ್ಲಿ ಅಭಿಮಾನಿಗಳ ಸಂಖ್ಯೆ ಸ್ಪಷ್ಟವಾಗಿ ಕಾಣದಿದ್ದರೂ, ಅಂದಾಜು ಅಭಿಮಾನಿಗಳ ಸಂಖ್ಯೆ ೨ ಕೋಟಿ ಇರಬಹುದು. ಆರ್.ಸಿ.ಬಿಗೆ ೧೮ ಆವೃತ್ತಿಗೆ ಕಪ್ ಗೆದ್ದಿದ್ದರಿಂದ ಇದೊಂದು ನಾಡಹಬ್ಬದ ವಾತಾವರಣ ಸೃಷ್ಟಿಸಿತು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬಂದಿದ್ದರು. ಕ್ರೀಡಾಂಗಣದ ಸಾಮರ್ಥ್ಯ ಮೀರಿ ಜನ ಆಗಮಿಸಿದ್ದರಿಂದ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಯಾರು ಬೇಕಾತಲೇ ಮಾಡಲು ಸಾಧ್ಯವೇ. ಯಾರನ್ನು ಹೊಣೆ ಮಾಡಿ ಏನು ಪ್ರಯೋಜನ. ತೆಲಂಗಾಣದಲ್ಲಿ ಆದಂತೆ ಇದು ವೈಯಕ್ತಿಕ ಹಿತಾಸಕ್ತಿಯ ಕಾಲ್ತುಳಿತ ಅಲ್ಲ. ನಾಡಹಬ್ಬದ ವಾತಾವರಣದ ಕಾಲ್ತುಳಿತ. ಏನೋ ಕೆಟ್ಟ ಘಳಿಗೆ ತಪ್ಪು ಆಗಿದೆ. ಇದೊಂದು ಸಲ ಕ್ಷಮಿಸಿಬಿಡಿ. ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಅವಶ್ಯಕ.

ರಾಜ್ಯದ ಕಾಳಜಿ ರಾಜಕಾರಣಿಗಳೇ ಬೆಳೆಸಿಕೊಳ್ಳಿ

ರಾಜಕಾರಣಿ ಹೇಗಿರಬೇಕು ರಾಜ್ಯ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ರಾಜ್ಯದ ಕಾಳಜಿ ವಹಿಸಬೇಕು. ಅದನ್ನು ಬಿಟ್ಟು ಪ್ರಧಾನಮಂತ್ರಿ ಮಾಡಬೇಕಾದ ದೇಶದ ಕೆಲಸವನ್ನು ಇಲ್ಲಿನ ವಿರೋಧ ಪಕ್ಷಗಳು ಮಾಡುತ್ತಿವೆ. ರಾಜ್ಯದ ವಿಧಾನಸಭಾ, ವಿಧಾನ ಪರಿಷತ್ತಿನಿಂದ ಆಯ್ಕೆಯಾದವರು ರಾಜ್ಯದ ಬಗ್ಗೆ ಹೇಳಿಕೆ ನೀಡಿ. ದೇಶದ ಬಗ್ಗೆ ಅಲ್ಲ. ಆರ್.ಸಿ.ಬಿ ರಾಜ್ಯದ ತಂಡ ಎಂದಮೇಲೆ ಶುಭಾ ಹಾರೈಸಿ ಬೇಕು ಹೊರತಾಗಿ ಲೇವಡಿ ಮಾಡಬಾರದು. ದೇಶದ ಬಗ್ಗೆ ಹೇಳಿಕೆ ನೀಡಲು ಲೋಕಸಭಾ, ರಾಜ್ಯಸಭಾ ಸದಸ್ಯರು ಇರಬೇಕಾದರೆ, ರಾಜ್ಯದ ರಾಜಕಾರಣಿಗಳು ರಾಜ್ಯ ಹಿತ ಬಿಟ್ಟು ರಾಷ್ಟ್ರದ ಹಿತ ಮಾತಾಡುತ್ತಿರುವುದು ಕೇಂದ್ರದ ರಾಜಕಾರಣಿಗಳಿಗೆ ಹೊಡೆತ ಕೊಟ್ಟಂತೆ. ರಾಜ್ಯ ರಾಜಕಾರಣ ರಾಜ್ಯಕ್ಕೆ ಸೀಮಿತವಾಗಿರಲಿ


Related Tags:- ಕ್ಷಮೆ, Kannada Blog, Emotional Writing, Forgiveness Story Kannada, Heartfelt Post, Human Emotions , Relationship Healing, Mental Peace Kannada, Personal Blog, Manass, ina Maatu

27 May 2025

ಜಂಗಮ ಪರಂಪರೆ: ಭಕ್ತಿಯ ಮೂಲ, ವಿಭಜನೆಯ ನವ ಚಿಂತನೆ? 🙏📜

By With No comments:











ವೀರಶೈವ ಜಂಗಮರೇ ಬೇಡ 1935 ರ ಮಧ್ಯಂತರ ಭಾರತ ಸರ್ಕಾರ ಕಾಲಾವಧಿಯಲ್ಲಿ ಅಥವಾ ಬ್ರಿಟಿಷ್ ಇಂಡಿಯಾ ಕಾಲಾವಧಿಯಲ್ಲಿ ನಿಗದಿಪಡಿಸಿದ ವೃತ್ತಿ ಆಧಾರಿತ 101 ಪರಿಶಿಷ್ಟ ಜಾತಿಗಳಲ್ಲಿ ಬೇಡ ಜಂಗಮ ಜಾತಿ ಒಂದು. ಬೇರೆ-ಬೇರೆ ರಾಜ್ಯಗಳಲ್ಲಿ ಇಲ್ಲದ ಬೇಡ ಜಂಗಮರ ಪ್ರಮಾಣ ಪತ್ರ ನೀಡುವ ಸಮಸ್ಯೆ ಇಲ್ಲಿ ಯಾಕೆ ಇದೆ ಅಂದರೆ 224 ವಿಧಾನ ಕ್ಷೇತ್ರದಲ್ಲಿ 36 ಎಸ್ಸಿ ಮೀಸಲು ಕ್ಷೇತ್ರವಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ 5 ಎಸ್ಸಿ ಮೀಸಲು ಕ್ಷೇತ್ರವಿದೆ. ಒಂದು ವೇಳೆ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಿದರೆ. ಬೇಡ ಜಂಗಮರು ಚುನಾವಣೆಗೆ ಸ್ಪರ್ಧಿಸಿ ವೀರಶೈವ ಲಿಂಗಾಯತ ಪಂಥದ ಜಾತಿಗಳ ಕೃಪೆಯಿಂದ ಸರಳವಾಗಿ ಗೆಲ್ಲಬಹುದು ಇದರಿಂದ ರಾಜಕಾರಣಿಗಳಿಗೆ ರಾಜಕೀಯ ಹಿನ್ನೆಡೆ ಆಗುವುದಲ್ಲದೇ, ರಾಜಕೀಯ ನೆಲೆ ಕಳೆದುಕೊಳ್ಳುವ ಭೀತಿ ಇದೆ ಎಂಬ ಸಂಶಯ ಕಾಡುತ್ತಿದೆ. ಆದರೆ ಈ ತರ ಸಂಶಯ ತಪ್ಪಾಗಿದೆ, ಚುನಾವಣೆಯಲ್ಲಿ ಗೆಲ್ಲಲು ಹಣ ಬಲಬೇಕು, ಜನ ಬಲ ಬೇಕು, ಅಲ್ಲದೇ ಅದೃಷ್ಟ ಸೇರಿದಂತೆ ಪಕ್ಷದ ಚಿಹ್ನೆಯ ವರ್ಚಸ್ಸು ಬೇಕು ಅಂದಾಗ ಚುನಾವಣೆಯಲ್ಲಿ ಗೆಲ್ಲುಲು ಸಾಧ್ಯ. ಇದರಿಂದಾಗಿ ಬೇಡ ಜಂಗಮರಿಗೆ ಪ್ರಮಾಣ ನೀಡಿದರೇ ರಾಜಕೀಯ ನೆಲೆ ಕಳೆದುಕೊಳ್ಳುವ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ ಅದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಮೇಲ್ನೋಟ ಕಂಡು ಬರುತ್ತಿದೆ. ಆದರೆ ಇದು ಸುಳ್ಳಾಗಿದ್ದು, ಹಣ, ಜನ ಬಲ ಅದೃಷ್ಟ ಪಕ್ಷದ ಚಿಹ್ನೆಯ ವರ್ಚಸ್ಸಿನ ಮೇಲೆ ಚುನಾವಣೆ ಗೆಲುವು ಸಾಧ್ಯವಿದೆ ಮತ್ತು ವೀರಶೈವ ಲಿಂಗಾಯತ ಎನ್ನುವುದು ಪಂಥವಾಗಿದ್ದು, ಜಾತಿ ಅಲ್ಲ. ವೀರಶೈವ ಜಂಗಮರೇ ಬೇಡ ಜಂಗಮರಾಗಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಂಗಮರ ನೆಲೆ ಇದೆ. ಅಲ್ಲದೇ ರಾಜ್ಯದ ವಿವಿಧ ಮಠಾಧೀಶರರು ಜಂಗಮರೇ ಆಗಿದ್ದಾರೆ.

ಜಂಗಮರ ವೃತಿ

ಜಂಗಮರು ಜೋಳದ ಹಿಟ್ಟು ಭಿಕ್ಷೆ, ಕೋರಣ್ಯ ಭಕ್ಷೆ ಕಂತೆ ಭಿಕ್ಷೆ ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು. ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು, ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ. ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ "ಸಾರುವ ಜಂಗಮ ಅಥವಾ ಸಾರುವ ಅಯ್ಯನವರು". ಲಿಂಗಕ್ಕೆ ಕಂತಿ ಮಾಡುವ "ಕಂತಿ ಜಂಗಮ" ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ ಸಹಾಯಕನಾಗಿರುವ ಜಂಗಮನೇ "ಮಠಪತಿ" ಪತ್ರಿ ಹಂಚುವವರು "ಪತ್ರಿ ಮಠದವರು" ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ ಹೋಗುವುದಿಲ್ಲ. ಅವರಿಗೆ ಸಾಮೀಪ್ಯ ಜಂಗಮನು. ಬೇಡ ಜಂಗಮರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದು ಬರಲು ರಾಜಕಾರಣಿಗಳು ಸಹಕರಿಸಬೇಕಿದೆ.

Related Tags:- ವೀರಶೈವ ಜಂಗಮರು, Lingayat, Dharma, Veerashaiva Tradition, Kannada Blog, Jangama Sampradaya, Sharana Sahitya, Religious Reform, Spiritual Debate Kannada, Community Discussion, Basavanna Teachings,

8 May 2025

"ಇಂದಿನ ಹೊಸ ಮುಖಗಳು ಇತಿಹಾಸ ಪುಟ ಸೇರಿರುವ ಘಟನೆಗೆ ಕಾರಣರಲ್ಲ! 🚀"

By With No comments:











ಜಗತ್ತಿನಲ್ಲಿ ನಡೆದುಹೋದ ಘಟನೆಗಳು ಇತಿಹಾಸ ಪುಟ ಸೇರಿದರು ಕೂಡಾ ಇನ್ನು ನಮ್ಮ ದೇಶದಲ್ಲಿ ಕೆಲವರ ಸಿಟ್ಟು, ಆಕ್ರೋಶ ಹಾಗೆಯೇ ಇದೆ. ಆ ಸಿಟ್ಟು ಧರ್ಮ ಆಧಾರದ ದೇಶ ವಿಭಜನೆ ಮಾಡಿದ್ದು ಇರಬಹುದು. ಸ್ವಾತಂತ್ರ‍್ಯ ಪೂರ್ವದಲ್ಲಿ ನಿರ್ದಿಷ್ಟ ವ್ಯಕ್ತಿಯಿಂದ ಹಿಂಸೆ, ಶೋಷಣೆಯೊಳಗಾಗಿದ್ದು ಇರಬಹುದು. ವ್ಯಾಪಾರ ವಹಿವಾಟಿನಲ್ಲಿ ಪೈಪೋಟಿ ಸಲುವಾಗಿ ಇರಬಹುದು. ಲವ್ ಜಿಹಾದ್, ಅಶಾಂತಿಯ ವಾತಾವರಣ, ಕೋಮು ಗಲಭೆ, ಹಿಂಸಾಚಾರ ಸೇರಿದಂತೆ ಸಿಟ್ಟು, ಆಕ್ರೋಶಗಳಿಗೆ ಅನೇಕ ಅನೇಕ ಕಾರಣಗಳಿರಬಹುದು. ಆ ಎಲ್ಲ ಆಕ್ರೋಶ ವ್ಯಕ್ತಪಡಿಸಲು ಈ ಹಿಂದೆ ಶೋಷಣೆ ಮಾಡಿದವರು, ಶೋಷಣೆಗೆ ಒಳಗಾದ ಮೂರು-ನಾಲ್ಕನೆಯ ತಲೆಮಾರಿನ ಜನ ಈಗಿಲ್ಲ, ಸತ್ತು ಹೋಗಿದ್ದಾರೆ.

ಸತ್ತು ಹೋದವರು ನಷ್ಟ ತುಂಬಿ ಕೊಡಲು ಸಾಧ್ಯವಿಲ್ಲ. ಈಗ ಸಿಟ್ಟು ವ್ಯಕ್ತಪಡಿಸಿದರು ಪ್ರಯೋಜನವಿಲ್ಲ. ಮನುಷ್ಯನ ಸಿಟ್ಟು ಅನ್ಯಾಯಕ್ಕೆ ಒಳಗಾದ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ಇರುತ್ತದೆ. ಆ ಸಿಟ್ಟು ಪೂರ್ತಿ ಜಾತಿ, ಧರ್ಮ ಮೇಲೆ ಅಥವಾ ಜನ ಮೆಚ್ಚಿಗೆ ಪಡೆದ ನಿರ್ಜೀವ ವಸ್ತುವಿನ ಮೇಲೆ ರವಾನೆಯಾಗುತ್ತಿರುವುದು ತಪ್ಪು. ದ್ವೇಷ ಮಾಡಲು ಹಳೆ ತಲೆಮಾರಿನ ಜನ ಇಲ್ಲ. ಹಳೆ ತಲೆಮಾರಿನ ಬಹುತೇಕ ಜನರು ಸ್ವಾತಂತ್ರ‍್ಯ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತ ಮತ್ತು ಆರ್ಥಿಕ ಸಂಕಷ್ಟದ ಹಿನ್ನಡೆಯಿಂದಾಗಿ ಶೋಷಣೆಗೂ ಒಳಗಾಗಿರಬೇಕು. ಈಗಿರುವ ಜನ ಹೊಸ ಮುಖಗಳು ಇತಿಹಾಸ ಪುಟ ಓದಿ ತಿಳಿಯಬಹುದು ಹೊರತಾಗಿ ಅವುಗಳಿಗೆ ಕಾರಣರಲ್ಲ.

ಹಾಗಾಗಿ ಹಿಂದೆಲ್ಲ ನಡೆದ ಘಟನೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ಕಾರಣಗಳಿರಬಹುದು. ಮುಗಿದ ಹೋದ ಅಧ್ಯಾಯ ಭೂತಕಾಲವನ್ನು ಪದೇ ಪದೇ ಯೋಚಿಸುವ ಬದಲು ಭವಿಷ್ಯ, ವರ್ತಮಾನ ಕಾಲದ ಬಗ್ಗೆ ಚಿತ್ತ ಹರಿಸಬೇಕು. ಪರ್ಯಾಯ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು. ದೇಶ, ರಾಜ್ಯಕ್ಕೆ ಶಾಂತಿ ವಾತಾವರಣ ನಿರ್ಮಾಣ ಮಾಡುವತ್ತ ಇಂದಿನ ಜನ ಸಮೂಹ ದಿಟ್ಟ ಹೆಜ್ಜೆ ಇಡುವತ್ತ ದಾಪುಗಾಲು ಇಡುವಂತಾಗಲಿ ಎನ್ನುವುದು ಆಶಯ.

Related Tags:- 
ಇಂದಿನ ಹೊಸ ಮುಖಗಳು, ಇತಿಹಾಸ ಪುಟ ಸೇರಿರುವ ವ್ಯಕ್ತಿಗಳು, ಯುವ ನಾಯಕರು ಭಾರತ, ಹೊಸ ನಾಯಕತ್ವ ಉದಾಹರಣೆಗಳು, ಸಾಮಾಜಿಕ ಬದಲಾವಣೆ ಯುವ ಶಕ್ತಿ, ಇತಿಹಾಸ ನಿರ್ಮಾಣ ಯುವಕರು, ಪ್ರೇರಣಾದಾಯಕ ಯುವ ಮುಖಗಳು, ಇತ್ತೀಚಿನ ನಾಯಕತ್ವ ಕಥೆಗಳು, ಭಾರತದ ಹೊಸ ನಾಯಕತ್ವ, ಯುವಕರ ಇತಿಹಾಸಾತ್ಮಕ ಸಾಧನೆ

29 Mar 2025

"ಕೂಡಿ ಬಾಳಿದರೆ ಜೀವನ, ಆದರೆ ಗ್ಯಾರಂಟಿ ಇಲ್ಲದ ಸರ್ಕಾರಗಳು? 😠"

By With No comments:











ಅಲ್ಪಸಂಖ್ಯಾತರು ಅಂದ್ರೆ ಯಾರು? ಹಿಂದೂ ಧರ್ಮ ಹೊರತುಪಡಿಸಿ, ಇನ್ನುಳಿದ ಎಲ್ಲ ಧರ್ಮಗಳು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತಿದೆ. ಸಾಮಾನ್ಯವಾಗಿ ಹೇಳುವುದಾದರೇ 10 ಜನರಲ್ಲಿ ಒಬ್ಬ ಅನ್ಯ ಧರ್ಮೀಯ ವ್ಯಕ್ತಿ ಕಂಡುಬಂದರೆ ಅಲ್ಪಸಂಖ್ಯಾತರು. ಯಾವ ಜಾತಿ, ಧರ್ಮಗಳು ಕಡಿಮೆ ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಅಲ್ಪಸಂಖ್ಯಾತರು ಎಂದು ಪರಿಗಣಿಸಬಹುದು. ಯಾವ ಜಾತಿ, ಧರ್ಮ ಹೆಚ್ಚು ಜನಸಂಖ್ಯೆ, ಸಮುದಾಯ ಹೊಂದಿವೆ, ಅದು ಬಹುಸಂಖ್ಯಾತರು ಎಂದು ಪರಿಗಣಿಸಬಹುದು. ಇಲ್ಲಿ ಜಾತಿ, ಧರ್ಮಗಳು ವ್ಯಕ್ತಿಯನ್ನು ಬೇರ್ಪಡಿಸಬಹುದು. ಆದರೆ ವೃತ್ತಿ ಅಂತ ಬಂದಾಗ ಎಲ್ಲ ಜಾತಿ, ಧರ್ಮಗಳು ಒಗ್ಗೂಡಿ ಕೆಲಸ ಮಾಡಲೇಬೇಕು.

ಉದಾ: ಪತ್ರಕರ್ತರು, ವಕೀಲರು, ಪೋಲಿಸರು, ವೈದ್ಯರು, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಅನೇಕ ವೃತ್ತಿಗಳಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದಾರೆ. ಒಂದು ವೇಳೆ ಒಟ್ಟಿಗೆ ಕೆಲಸ ಮಾಡುವ ಸಂದರ್ಭ ಬಂದರೆ ಹೇಗೆ ಮಾಡ್ತೀರಿ?, ಆಗ ಕೂಡಿ ಮಾಡಲೇಬೇಕು. ಅದು ಬೇಡ ಆರೋಗ್ಯ ತುರ್ತು ಸಂದರ್ಭ ಬಂದಾಗ ಮನುಷ್ಯನ ಅಂಗಾಂಗಗಳು ಸೇರಿದಂತೆ ರಕ್ತ ಸಹ ಅವಶ್ಯಕತೆ ಬಿಳುತ್ತದೆ ಆಗ ಸಹ ಬೇಕೆ ಬೇಕು. ಯಾರು ಕೊನೆಯವರೆಗೆ ತಂದೆ-ತಾಯಿ ಒಡಹುಟ್ಟಿದವರ ಜೊತೆ ಬೆರೆತು ಜೀವನ ಸಾಗಿಸುತ್ತಾರೆ ಅವರೇ ನಿಜವಾದ ಒಗ್ಗಟ್ಟಿನ ವ್ಯಕ್ತಿ. ತಮ್ಮ ಮನೆಯಲ್ಲಿ ಎಲ್ಲರನ್ನೂ ಬೇರ್ಪಡಿಸಿ, ಸಮಾಜದ ಮುಂದೆ ಜಾತಿ, ಧರ್ಮ ಒಗ್ಗೂಡಿಸುವ ಕರೆ ನೀಡುವುದು ಹಾಸ್ಯಾಸ್ಪದ.

ಇಲ್ಲಿ ಜನರ ಬದುಕು ಇರುವುದೇ ಹೊಟ್ಟೆಪಾಡಿಗಾಗಿ, ವೃತ್ತಿ ಜೀವನ ಸಾಗಿಸುವುದಕ್ಕಾಗಿ ಎಲ್ಲೋ ನಡೆದ ಘಟನೆ ಎಲ್ಲೋ ನಡೆದಂತಹ ಘಟನೆಗೆ ಯಾರು ಹೊಣೆಗಾರರಲ್ಲ. ಆ ಘಟನೆಗೆ ಕಾರಣರಾದವರೇ, ಹೊಣೆಗಾರರು. ಯಾರು, ಯಾರಿಗೂ ಸಂಬಂಧವೇ ಇಲ್ಲ. ಯಾರು ತಮ್ಮ ವೃತ್ತಿ, ಕೆಲಸ ಬಿಟ್ಟು ಬರುವುದಿಲ್ಲ ಭಾಗಿಯಾಗಲ್ಲ ಇದೇ ಜೀವನದ ಸತ್ಯ ದರ್ಶನ.

ಗ್ಯಾರಂಟಿ ನೀಡದ, ಹಿಂದಿನ ಸರ್ಕಾರಗಳ ಕೊಡುಗೆ ಏನು?

ಪಂಚ ಗ್ಯಾರಂಟಿ ನೀಡಿ, ಬಡ, ಮಧ್ಯಮ ವರ್ಗದ ಜನರಿಗೆ ಸರ್ಕಾರ ಆಸರೆವಾಯಿತು, ಈ ಹಿಂದೆ ಬಂದಂತಹ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡಿರಲಿಲ್ಲ. ಅಂದಮೇಲೆ ಎಲ್ಲ ಗ್ರಾಮಗಳ ರಸ್ತೆಗಳು, ಕುಡಿಯುವ ನೀರು, ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿ ಹೊಂದಬೇಕಿತ್ತು. ಆದರೂ ಏಕೆ ಅಭಿವೃದ್ಧಿ ಆಗಲಿಲ್ಲ. ಈ ಹಿಂದಿನ ಸರ್ಕಾರಗಳು ಯಾವುದೇ ಗ್ಯಾರಂಟಿ ನೀಡದೇ ಅಭಿವೃದ್ಧಿ ಮಾಡಿಲ್ಲ. ಈಗಿನ ಸರ್ಕಾರ ಗ್ಯಾರಂಟಿ ನೀಡಿ ಅಭಿವೃದ್ಧಿ ಮಾಡುವುದು ಅಂದ್ರೇ ಸಾಮಾನ್ಯ ಕೆಲಸವಲ್ಲ. ಸಂಪನ್ಮೂಲ ಕ್ರೋಢೀಕರಿಸುವುದು ಸವಾಲಿನ ಕೆಲಸವಾಗಲಿದೆ. ಹಿಂದಿನ ಸರ್ಕಾರಗಳು ಸಾವಿರಾರು ಕೋಟಿ ಖರ್ಚು ಮಾಡಿ, ಸರ್ಕಾರ ಕೆಡವಿ, ಹೊಸ ಸರ್ಕಾರ ರಚನೆ ಮಾಡುವ ಹುಮ್ಮಸ್ಸು ಬರುತ್ತದೆ.

ಅಭಿವೃದ್ಧಿ ವಿಷಯದಲ್ಲಿ ನಿರಾಸಕ್ತಿ ಬರುತ್ತದೆ. ಇಂತಹ ವಿಚಾರ ಬಿಟ್ಟರೇ, ಅಭಿವೃದ್ಧಿ ಆಗುತ್ತಿಲ್ಲ ಅನ್ನುವುದಕ್ಕೆ ಯಾವ ರಾಜಕಾರಣಿಗಳಿಗೆ ನೈತಿಕತೆ ಇದೆ. ಯಾವುದೇ ಗ್ಯಾರಂಟಿ ಇಲ್ಲದೇ ಸರ್ಕಾರ ನಡೆಸಿದರು, ಸಾಕಷ್ಟು ಗ್ರಾಮಗಳು ಅಭಿವೃದ್ಧಿ ಆಗಿಲ್ಲ. ಈಗ ಗ್ಯಾರಂಟಿ ಮುಂದೆ ಬಜೆಟ್ ಬಗ್ಗೆ ವರ್ಣನೆ ಪದಗಳು ಇಲ್ಲ. ಗ್ಯಾರಂಟಿಯಿಂದ ಜನರ ಜೀವನ ಅಲ್ಪ ಸ್ವಲ್ಪ ಸುಧಾರಣೆಯಾಗಿದೆ, ಗ್ಯಾರಂಟಿ ಯೋಜನೆ ಮುಂದೆ ಬಜೆಟ್ ಶೂನ್ಯ. ಗ್ಯಾರಂಟಿಗಳು ಜನರ ಕಷ್ಟಕ್ಕೆ ಆಸರೆಯಾಗಿದೆ. ಅರ್ಹರಿಗೆ ಗ್ಯಾರಂಟಿ ತಲುಪಿದರೇ ಇನ್ನು ಚಂದ. ಗ್ಯಾರಂಟಿ ನೆಪ ಹೇಳುವ ಮೂಲಕ ಅಭಿವೃದ್ಧಿ ಆಗಿಲ್ಲ ಅನ್ನುವ ರಾಜಕಾರಣಿ ನೈತಿಕತೆ ಮೌಲ್ಯ ಕುಸಿದಿದೆ.

23 Mar 2025

ಕೊನೆಯ ಹಳ್ಳಿಗೂ ಬಸ್ ಓಡಿಸಿ! ಅಪ್ಪಟ ಸತ್ಯ ಹೇಳೋ ಸಮಯ ಬಂತು! 🚍

By With No comments:











ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿಗೆ ಮಾತ್ರ ಬಸ್ ಓಡಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು. ನೆಲ, ಜಲ, ಭಾಷೆ ವಿಚಾರ ಇಟ್ಟುಕೊಂಡು ಜಗಳ ಜೊತೆ ರಗಳೆ ತೆಗೆಯುವ ಪುಂಡರಿಗೆ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗಿದೆ. ಕರ್ನಾಟಕ ರಾಜ್ಯ ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡಿಗರು ರಾಜಿ ಇಲ್ಲ.

ಮಹಾರಾಷ್ಟ್ರ ಗಡಿ ಹೊಂದಿಕೊಂಡಿರುವ ರಾಜ್ಯದ ಕೊನೆಯ ಹಳ್ಳಿವರೆಗೆ ಮಾತ್ರ ಬಸ್ ಓಡಿಸಿ, ಅಲ್ಲಿಂದ ನಡೆದುಕೊಂಡು ಹೋಗಲಿ. ಹೆಚ್ಚುವರಿ ಬಸ್ ಇದ್ರೇ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯದ ಕಡೆ ಬಸ್ ಸಂಚರಿಸುವ ವ್ಯವಸ್ಥೆ ಮಾಡಬೇಕು. ಲಾಭ-ನಷ್ಟ ವಿಚಾರದಲ್ಲಿ ಸಾರಿಗೆ ಇಲಾಖೆ ತಲೆಕೆಡಿಸಿಕೊಳ್ಳಬಾರದು ಅವರಾಗಿವೆ ಬಸ್ ಬೇಕು,

ಬಸ್ ಬಿಡಿ ಅನ್ನುವರಿಗೂ ಮಹಾರಾಷ್ಟ್ರಕ್ಕೆ ಬಸ್ ಬಿಡಬಾರದು ಒಂದುವೇಳೆ ಬಸ್ ಬೇಕು ಅಂತ ಹೋರಾಟ ಮಾಡಲಿ ಆಗ ಬಸ್ ಬಿಡುವ ವಿಚಾರ ನೋಡೋಣ ಅನ್ನುವ ಮೂಲಕ ತಕ್ಕ ಪಾಠ ಕಲಿಸಬೇಕು. ಯಾವಾಗಲೂ ಬಸ್ ವಿಚಾರ ಇಟ್ಟಿಕೊಂಡೆ ರಗಳೆ ಎಬ್ಬಿಸುವ ಕೆಲಸವಾಗುತ್ತಿದೆ ಅದಕ್ಕೆ ಬಸ್ ಸಂಚಾರ ನಿಲ್ಲಿಸಿದ್ರೇ ಯಾವುದರ ಮೇಲೆ ರಗಳೆ ತೆಗೆಯಲು ಸಾಧ್ಯ. ಬಡಪಾಯಿ ಕಂಡಕ್ಟರ್ ಮೇಲೆ ಸುಳ್ಳು ಕೇಸ್ ಮತ್ತು ಹಲ್ಲೆ ಮಾಡಿದ್ದು ಖಂಡನೀಯ.

ಮಹಾರಾಷ್ಟ್ರದ ಗಡಿ ಭಾಗದ ಅಭಿವೃದ್ಧಿ ನೋಡಿದ್ರೇ. ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇದೇ ವಿಷಯ ಇಟ್ಟುಕೊಂಡು ಅಲ್ಲಿನ ಗಡಿ ಗ್ರಾಮಗಳು ಕರ್ನಾಟಕಕ್ಕೆ ಸೇರಲು ಇಂದಿಗೂ ಹಪಿಸುತ್ತಿವೆ. ಅಷ್ಟೇ ಯಾಕೆ ಕರ್ನಾಟಕ ಬಸ್ ಗಳು ಸೂಪರ್ ಸ್ಪೆಷಾಲಿಟಿ ಹೊಂದಿದೆ.

ಅಲ್ಲಿನ ಬಸ್ ಗಳನ್ನು ನೋಡಿದ್ರೆ ವಾಂತಿ, ವಾಕರಿಕೆ ಬರುತ್ತವು. ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಒಮ್ಮೆ ಹೊರಡಿಸಿದ ಅಂತಿಮ ಆದೇಶ ಬದಲಾಗಲೂ ಸಾಧ್ಯವೇ ಇಲ್ಲ. ಮರಾಠಿ ಪುಂಡರು ಪದೇಪದೇ ಗಡಿ, ಭಾಷೆ ವಿವಾದ ಕೆಣಕುವ ಬದಲು ಯಾವುದಾದರು ಕೆಲಸ ಬಗಿಸು ಇದ್ರೇ ನೋಡಿಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡವೇ ಆಡಳಿತ ಭಾಷೆ.

ಕನ್ನಡ ನೆಲದಲ್ಲಿ ಕನ್ನಡವೇ ಮಾತನಾಡಬೇಕು. ಭಾಷೆ ಗೊತ್ತಿಲ್ಲ ಅಂದ್ರೆ ಸೊನ್ನೆ ಮಾಡಿ, ಚಿತ್ರ ಬರೆದು ತೋರಿಸಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಕನ್ನಡಿಗರು ಮಾಡುತ್ತಾರೆ. ಒತ್ತಾಯಪೂರ್ವಕವಾಗಿ ಇದೆ, ಇಂಥದೇ ಭಾಷೆಯಲ್ಲಿ ಮಾತಾಡಿ ಎಂದು ತಾಕಿತ್ತು ಮಾಡುವ ಅಧಿಕಾರ ಯಾರಿಗೂ ಇಲ್ಲ. ರಾಜ್ಯ ಸರ್ಕಾರ ಮಾತ್ರ ಅವರಾಗಿವೆ ಬಸ್ ಬೇಕು ಅಂತ ಹೋರಾಟ ಮಾಡುವವರಿಗೂ ಬಸ್ ಬಿಡಬಾರದು ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಅಂತರರಾಜ್ಯ ಸಂಪರ್ಕ ಕಡಿತಗೊಳಿಸಿದಾಗ ಮಾತ್ರ ಕೆಲ ಮರಾಠಿ ಪುಂಡರು ಇಂತಹ ಹೀನಕೃತ್ಯ ನಿಲ್ಲಿಸಲು, ಬುದ್ದಿ ಬರಲು ಸಾಧ್ಯ.

ಎರಡು ನೂತನ ಜಿಲ್ಲಾ ರಚನೆ ಅಗತ್ಯ
ಅಖಂಡ ಧಾರವಾಡ ಜಿಲ್ಲೆ (ಈಗಿನ ಹಾವೇರಿ, ಗದಗ ಜಿಲ್ಲೆ ಒಳಗೊಂಡಂತೆ) ಒಟ್ಟು 24 ತಾಲ್ಲೂಕು, 17 ವಿಧಾನಸಭಾ ಕ್ಷೇತ್ರ ಎರಡು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. 1997 ರಲ್ಲಿ ಅಂದಿನ ಸರ್ಕಾರ ಎರಡು ನೂತನ ಗದಗ, ಹಾವೇರಿ ಜಿಲ್ಲೆ ರಚನೆ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿತು. ಇದೇ ರೀತಿ ಬೆಳಗಾವಿ ಜಿಲ್ಲೆ 14 ತಾಲ್ಲೂಕು, 18 ವಿಧಾನಸಭಾ ಕ್ಷೇತ್ರಗಳು, 2 ಲೋಕಸಭಾ ಕ್ಷೇತ್ರಗಳು ಇವೆ.

ಎರಡು ನೂತನ ಜಿಲ್ಲಾ ರಚನೆ ಮಾಡಲು ಸಾಧ್ಯವಿದೆ. ನಾಲ್ಕು-ನಾಲ್ಕು ಐದು-ಐದು ಜಿಲ್ಲಾ ರಚನೆ ಮಾಡಲು ಸಾಧ್ಯವಿಲ್ಲ. ಜಿಲ್ಲಾ ಕೇಂದ್ರದಿಂದ 80-100 ಕಿ.ಮೀ ಅಂತರದಲ್ಲಿರುವ ಯಾವುದಾದರೂ ಎರಡು ನಗರ ಜಿಲ್ಲಾ ಕೇಂದ್ರ ಮಾಡಬಹುದು. ಬೆಳಗಾವಿ ಮಂದಿ ಒಗ್ಗಟ್ಟಿನಿಂದ ಕುಳಿತು ಭಿನ್ನ ಅಭಿಪ್ರಾಯ ವ್ಯಕ್ತಪಡಿಸದೇ.

ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ಸಭೆ ಮಾಡಿ ಒಂದು ಸ್ಪಷ್ಟ ನಿರ್ಣಯಕ್ಕೆ ಬಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೇ, ಹೊಸ ಎರಡು ನೂತನ ಜಿಲ್ಲಾ ರಚನೆ ಆಗಲಿದೆ ಇದರಿಂದ 150-200 ಕಿ.ಮೀ ದೂರದಲ್ಲಿರುವ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಅಲ್ಲದೇ ದೊಡ್ಡ ಜಿಲ್ಲೆ ನಿರ್ವಹಣೆ ಮಾಡುವುದು ಅಧಿಕಾರಿಗಳಿಗೂ ತಲೆನೋವಿನ ಕೆಲಸ ಹಾಗಾಗಿ ಎರಡು ಜಿಲ್ಲಾ ರಚನೆ ಮಾಡಿದ್ರೇ ಆಡಳಿತಾತ್ಮಕ, ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದಾಗಿದೆ.

23 Feb 2025

"ಕರ್ನಾಟಕದ 31 ಜಿಲ್ಲೆ, 240+ ತಾಲ್ಲೂಕುಗಳು – Full List Shorts 🧠"

By With No comments:











Bagalkot, Bagalkot, Jamkhandi, Mudhol, Badami, Bilagi, Hunagund, Rabakavi Banahatti, Ilakalla, Guledagudda, Bangalore City, Bangalore, Yelahanka, Anekal, Kengeri, Krishnarajapura, Bangalore Rural, Doddaballapur, Devanahalli, Hoskote, Nelamangala, Dabaspet, Dodda Belavangala, Ramanagara, Ramanagara, Channapatna, Kanakapura, Magadi, Kunigal, Harohalli, Belgaum, Belgaum, Athani, Bailhongal, Chikkodi, Gokak, Mudalagi, Hukkeri, Khanapur, Rayabhaga, Kagawada, Ramadurga, Savadatti, Nippani, Kittur, Yaragati, Harugeri, Sadalga,

ಬಾಗಲಕೋಟೆ, ಬಾಗಲಕೋಟೆ, ಜಮಖಂಡಿ, ಮುಧೋಳ, ಬಾದಾಮಿ, ಬೀಳಗಿ, ಹುನಗುಂದ, ರಬಕವಿ ಬನಹಟ್ಟಿ, ಇಳಕಲ್ಲ, ಗುಳೇದಗುಡ್ಡ, ಬೆಂಗಳೂರು ನಗರ, ಬೆಂಗಳೂರು, ಯಲಹಂಕ, ಆನೇಕಲ್, ಕೆಂಗೇರಿ, ಕೃಷ್ಣರಾಜ ಪುರ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದಾಬಸ್ ಪೇಟೆ, ದೊಡ್ಡ ಬೆಳವಂಗಲ, ರಾಮನಗರ, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಹಾರೋಹಳ್ಳಿ, ಬೆಳಗಾವಿ, ಬೆಳಗಾವಿ, ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಮೂಡಲಗಿ, ಹುಕ್ಕೇರಿ, ಖಾನಾಪುರ, ರಾಯಭಾಗ, ಕಾಗವಾಡ, ರಾಮದುರ್ಗ, ಸವದತ್ತಿ, ನಿಪ್ಪಾಣಿ, ಕಿತ್ತೂರ, ಯರಗಟ್ಟಿ, ಹಾರೂಗೇರಿ, ಸದಲಗಾ,

ಬಳ್ಳಾರಿ, ಬಳ್ಳಾರಿ, ಕಂಪ್ಲಿ, ಸಂಡೂರು, ಶಿರುಗುಪ್ಪ, ಕುರುಗೋಡ, ಬೀದರ, ಬೀದರ, ಬಸವಕಲ್ಯಾಣ, ಭಾಲ್ಕಿ, ಹುಮ್ನಾಬಾದ್, ಔರಾದ, ಚಿಟಗುಪ್ಪಾ, ಹುಲಸೂರ, ಕಮಲಾ ನಗರ, ವಿಜಯಪುರ, ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟಿ, ಬಬಲೇಶ್ವರ, ತಿಕೋಟಾ, ಕೊಲ್ಹಾರ, ನಿಡಗುಂದಿ, ದೇವರ ಹಿಪ್ಪರಗಿ, ಚಡಚಣ, ಆಲಮೇಲ, ಚಾಮರಾಜ ನಗರ, ಚಾಮರಾಜ ನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು, ಹನೂರು, ಚಿಕ್ಕಮಗಳೂರು, ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರಿಕೆರೆ, ಕಳಸ, ಅಜ್ಜಂಪುರ,

ಚಿತ್ರದುರ್ಗ, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಪರಶುರಾಂಪುರ, ಭರ್ಮಸಾಗರ, ಭೀಮಸಮುದ್ರ, ಧರ್ಮಪುರ, ಬೂದಿಹಾಳ, ವಾಣಿವಿಲಾಸ ಸಾಗರ, ದಕ್ಷಿಣ ಕನ್ನಡ, ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಮೂಡುಬಿದಿರೆ, ಕಡಬ, ದಾವಣಗೆರೆ, ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು, ಧಾರವಾಡ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ, ಅಣ್ಣಿಗೇರಿ, ಹುಬ್ಬಳ್ಳಿ ನಗರ, ಗದಗ, ಗದಗ-ಬೆಟಗೇರಿ, ನರಗುಂದ, ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೇಶ್ವರ, ಕಲಬುರಗಿ, ಕಲಬುರಗಿ, ಆಳಂದ, ಸೇಡಂ, ಅಫಜಲ್ಪುರ, ಚಿಂಚೋಳಿ, ಚಿತ್ತಾಪುರ, ಜೀವರ್ಗಿ, ಕಾಳಗಿ, ಯಡ್ರಾಮಿ, ಶಹಾಬಾದ, ಕಮಲಾಪುರ,

ಯಾದಗಿರಿ, ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್, ಕೆಂಬಾವಿ, ಸೈದಾಪುರ, ಕೊಡೆಕಲ್, ಖಾನಪುರ, ಹಾಸನ, ಹಾಸನ, ಅರಸಿಕೆರೆ, ಚೆನ್ನರಾಯಪಟ್ಟಣ, ಹೊಳೇನರಸೀಪುರ, ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು, ಹಾವೇರಿ, ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ, ಸವಣೂರ, ಹಿರೇಕೇರೂರು, ಶಿಗ್ಗಾಂವ, ಕೊಡಗು, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ, ಕೋಲಾರ, ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಚೇಲೂರು,

ಕೊಪ್ಪಳ, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬರ್ಗಾ, ಕುಕನೂರ, ಕಾರಟಗಿ, ಕನಕಗಿರಿ, ಮಂಡ್ಯ, ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೃಷ್ಣರಾಜ ಪೇಟೆ, ನಾಗಮಂಗಲ, ಪಾಂಡವಪುರ, ಮೈಸೂರು, ಮೈಸೂರು, ಹುಣಸೂರು, ಕೃಷ್ಣರಾಜನಗರ, ನಂಜನಗೂಡು, ಹೆಗ್ಗಡದೇವನಕೋಟೆ, ಪಿರಿಯಾಪಟ್ಟಣ, ಟಿನರಸೀಪುರ, ಸರಗೂರು, ಸಾಲಿಗ್ರಾಮ, ರಾಯಚೂರು, ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ, ಲಿ೦ಗಸೂಗೂರು, ಮಸ್ಕಿ, ಶಿರವಾರ, ಶಿವಮೊಗ್ಗ, ಶಿವಮೊಗ್ಗ, ಸಾಗರ, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ,

ತುಮಕೂರು, ತುಮಕೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಶಿರಾ, ತಿಪಟೂರು, ಗುಬ್ಬಿ, ಕೊರಟಗೆರೆ, ಪಾವಗಡ, ತುರುವೆಕೆರೆ, ಚೇಳೂರು, ಚನ್ನರಾಯದುರ್ಗ, ನಿಟ್ಟೂರು, ಮಾಯಸಂದ್ರ, ಉಡುಪಿ, ಉಡುಪಿ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಬೈಂದೂರು, ಉತ್ತರ ಕನ್ನಡ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯ್ಡಾ, ದಾಂಡೇಲಿ, ಹೊಸಪೇಟೆ, ಹೊಸಪೇಟೆ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ,

Related Tags:- Karnataka Districts, Taluk Centers, Karnataka Geography, District And Taluk List, Kannada Shorts, Karnataka Map, Educational Shorts, GK In Kannada, ಕರ್ನಾಟಕ ಜಿಲ್ಲೆಗಳು, ತಾಲ್ಲೂಕು ಮಾಹಿತಿ,

20 Feb 2025

"ಸಾಮಾಜಿಕ ನ್ಯಾಯಕ್ಕೆ ಧ್ವನಿ ಕೊಟ್ಟವರ ವಿರುದ್ಧ ದೌರ್ಜನ್ಯ? 🚨"

By With No comments:











ಕೆಲವು ದಿನಗಳ ಹಿಂದಷ್ಟೇ, ಒಂದು ಸುದ್ದಿ ಬಂದಿತ್ತು. ಅದರಲ್ಲಿ ಅನಗತ್ಯ ಮಾಹಿತಿ ಹಕ್ಕು ಕಾರ್ಯಕರ್ತರ ಅರ್ಜಿಗಳ ವಿರುದ್ಧ ವಜಾಸ್ತ್ರ, ಇನ್ನುಮುಂದೆ ಅರ್ಜಿ ಹಾಕದಂತೆ ನಿರ್ಬಂಧ ಆದೇಶ ಇನ್ನಿತರ ಶೀರ್ಷಿಕೆಯಡಿ ಸುದ್ದಿಯಾಗಿತ್ತು. ಸುದ್ದಿ ಏನೇ ಇರಲಿ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರಿಂದ ಕೆಲವು ಅಲ್ಪ ಸ್ವಲ್ಪ ಕೆಲಸ ಕಾರ್ಯಗಳು ನಡೆಯುತ್ತಿವೆ ಮತ್ತು ಸುಧಾರಿಸಿವೆ. ವಿಐಪಿ ಅಂತ ಏನು ಕರೆಯಲ್ಪಡುವ ಅಂದರೆ ಬಹಳ ಮುಖ್ಯ ವ್ಯಕ್ತಿ ವಿಐಪಿ ಎಂಬ ವ್ಯಕ್ತಿ ಸಾಮಾನ್ಯ ವ್ಯಕ್ತಿ ತರ ವೇಷ ಧರಿಸಿ, 45 ಸರ್ಕಾರಿ ಇಲಾಖೆಯಲ್ಲಿ ಯಾವುದಾದರೂ ಒಂದು ಸರ್ಕಾರಿ ಇಲಾಖೆಗೆ ತೆರಳಿ, ಅರ್ಜಿ ಸಲ್ಲಿಸಿ, ತಮ್ಮ ಕೆಲಸ ಕಾರ್ಯ ಸರಳವಾಗಿ ಮಾಡಿಕೊಂಡು ಬಂದರೇ, ಅವರನ್ನು ಮೆರವಣಿಗೆ ಮಾಡಿ,

ಸನ್ಮಾನ ಮಾಡಬಹುದು ಆದರೆ ಸರ್ಕಾರಿ ಇಲಾಖೆಯ ಸೌಲಭ್ಯಗಳು ಅಷ್ಟು ಸಲ್ಲಿಸಾಗಿ ದಕ್ಕುವುದಿಲ್ಲ ಸುದೀರ್ಘ, ದೀರ್ಘಾವಧಿ ಸಮಯ ತೆಗೆದುಕೊಳ್ಳುತ್ತದೆ ಇಲ್ಲವೇ ಲಂಚ ನೀಡಬೇಕು ಇವರೆಡು ಸಮಸ್ಯೆಗಳು ಸಾಮಾಜಿಕ ಕಾರ್ಯಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಗೊತ್ತಿದೆ. ಅಧಿಕಾರಿಗಳು ಯಾವ ಕೆಲಸ ಅಷ್ಟು ಸರಳವಾಗಿ ಮಾಡಿಕೊಡುವುದಿಲ್ಲ. ಆದ್ದರಿಂದ ಮಾಹಿತಿ ಹಕ್ಕು ಹಾಕಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಅನ್ನುವುದು ಅವರ ಉದ್ದೇಶವಾಗಿರುತ್ತದೆ. ಅಧಿಕಾರಿಗಳು 30 ದಿನದಲ್ಲಿ ಮಾಹಿತಿ ಕೊಡಲು ಏನು ಸಮಸ್ಯೆ?. ಮಾಹಿತಿ ಕೇಳುವ ಹಕ್ಕು ಸಾರ್ವಜನಿಕರದ್ದು, ಮಾಹಿತಿ ಕೊಡುವ ಹಕ್ಕು ಅಧಿಕಾರಿಗಳದ್ದು ಅಲ್ಲವೇ. ಸರಿಯಾದ ಮಾಹಿತಿ ಒದಗಿಸಿದರೇ ಪ್ರಥಮ ಮೇಲ್ಮನವಿ,

ದ್ವಿತೀಯ ಮೇಲ್ಮನವಿ ಎಂಬ ಪ್ರಶ್ನೆಯೇ ಉದ್ಬವವಾಗಲ್ಲ. ಸಾರ್ವಜನಿಕರು ಸಮಸ್ಯೆ ಬಗ್ಗೆ ಅರ್ಜಿ ಸಲ್ಲಿಸಿದರೇ ಸರಿಯಾದ ಸ್ಪಂದನೆ ಅಧಿಕಾರಿಗಳು ಕೊಡಲ್ಲ. ಸ್ಪಂದನೆ ಕೊಟ್ಟರು ದಿಕ್ಕು ತಪ್ಪಿಸುವಂತಹ ತಪ್ಪು ಮಾಹಿತಿ ನೀಡುತ್ತಾರೆ. ಅಲ್ಲದೇ ಕೇಳಲು ಹೋದಲ್ಲಿ ರೌಡಿ, ಗುಂಡಾ ವರ್ತನೆ ಮಾಡ್ತಾರೆ ಅಂತ ಸಾರ್ವಜನಿಕರು ಸಾಕಷ್ಟು ಸಲ ಪತ್ರಿಕೆ, ದೃಶ್ಯ ಮಾಧ್ಯಮದ ಪತ್ರಕರ್ತರ ಮುಂದೆ ಆಕ್ರೋಶ ಭರಿತವಾಗಿ ಹೇಳಿಕೆ ನೀಡಿ ಆರೋಪಿಸಿದ್ದಾರೆ. ಇನ್ನು ಮಾಹಿತಿ ಹಕ್ಕು ಅರ್ಜಿ ಹಾಕಿದ್ರೇ ಸ್ಪಂದನೆ ಕೊಡುತ್ತಾರ? ಇದಕ್ಕೂ ಅದೇ ರೀತಿ ಪ್ರಕ್ರಿಯೆ ನೀಡಿ ಕಚೇರಿಯಿಂದ ಸಾರ್ವಜನಿಕರನ್ನು ಆಚೆ ಕಳಿಸುವ ಮನಸ್ಥಿತಿ ಇದೆ. ಆದ್ದರಿಂದ ವ್ಯವಸ್ಥೆ ಬದಲಾಗಲ್ಲ. ಎಲ್ಲಿಯವರೆಗೆ ಸರ್ಕಾರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೋ,

ಅಲ್ಲಿವರೆಗೆ ಸರ್ಕಾರ ಮರು ಆಯ್ಕೆಯಾಗಿ ಬರುತ್ತದೆ. ಉದಾಹರಣೆಯಾಗಿ ತೆಗೆದುಕೊಂಡರೇ ಬೊಮ್ಮಾಯಿ ಸರ್ಕಾರ ಬೀಳಲು ಇದು ಒಂದು ಕಾರಣವಾಯಿತು ಅಂತಲೂ ಹೇಳಬಹುದು. ಸರ್ಕಾರ ಬೀಳಬೇಕು ಎಂತಲೇ ಕೆಲ ಅಧಿಕಾರಿಗಳು ತಮ್ಮ ಕಾರ್ಯ ಚಟುವಟಿಕೆಯನ್ನು ಮಾಡದೇ, ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡದೇ ಕಾಲಹರಣ ಮಾಡುತ್ತಾ ಸಾರ್ವಜನಿಕರಿಗೆ ಸಮಸ್ಯೆಗಳು ತಲೆನೋವಿನ ಸಮಸ್ಯೆಯಾಗುದಲ್ಲದೇ ಸರ್ಕಾರಕ್ಕೂ ಮುಜುಗರವಾಗುತ್ತಿದೆ. ಆದರಿಂದ ವಿಐಪಿ ಎನ್ನುವುದು ಹೆಸರು ಮಾತ್ರ ಸಾಮಾಜಿಕ ಕಾರ್ಯಕರ್ತ, ಮಾಹಿತಿ ಕಾರ್ಯಕರ್ತ ಎನ್ನುವುದು ಉಸಿರು ಆಗಿದೆ. ಅವರನ್ನು ಹತ್ತಿಕ್ಕುವ ಪ್ರಯತ್ನ ಬೇಡ,

ಬಗೆಹರಿಯಲಾರದಂತ ಸಮಸ್ಯೆಯನ್ನು ಸಾಮಾಜಿಕ ಕಾರ್ಯಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರು ಬಗೆಹರಿಸಿದ್ದ ಉದಾಹರಣೆ ಸಾಕಷ್ಟಿವೆ. ಅಂತಹವರನ್ನು ಪ್ರೋತ್ಸಾಹಿಸುವ. ಸನ್ಮಾನಿಸುವ ಕಾರ್ಯವಾಗಲಿ.

Related Tags:- RTI Rights, Social Activists, Voice For Justice, RTI Activist, Kannada Shorts, Speak Up For Truth, Activist Suppression, Satyada Dhwani, ಮಾಹಿತಿ ಹಕ್ಕು, ಸಾಮಾಜಿಕ ಕಾರ್ಯಕರ್ತರು,

"ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಸಾರಿಗೆಗೆ ಪ್ರಥಮ ಹಕ್ಕು! ⚖️"

By With No comments:











ಹುಬ್ಬಳ್ಳಿ: ಹಳೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಇನ್ನು ಕೆಲ ಕಾಮಗಾರಿ ಬಾಕಿ ಇರುವ ಕಾರಣ ಹಸ್ತಾಂತರಿಸಿಲ್ಲ. ಹಸ್ತಾಂತರಿಸಿದ ಬಳಿಕ ಬಸ್‌ಗಳು ಕಾರ್ಯಾಚರಣೆ ಮಾಡುತ್ತವೆ ಆದರೆ ಬಸ್ ನಿಲ್ದಾಣಕ್ಕೆ ನಗರ ಮತ್ತು ಉಪನಗರ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ. ಅತಿ ಹೆಚ್ಚು ಜನ ಬರುವುದು ಹಳ್ಳಿ ಭಾಗದಿಂದ ಮೊದಲಿನಿಂದಲೂ ಹಳೆ ಬಸ್ ನಿಲ್ದಾಣದಲ್ಲಿ ಉಪನಗರ, ಗ್ರಾಮೀಣ ಭಾಗದ ಬಸ್ ನಿಲ್ದಾಣವಾಗಿತ್ತು. ನಗರ ಬಸ್ ನಿಲ್ದಾಣ ಈಗಾಗಲೇ ದುರ್ಗದಬೈಲ್‌ನಲ್ಲಿರುವ ಸಿಬಿಟಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ ನಗರ ಬಸ್ ನಿಲ್ದಾಣಕ್ಕೆ ಎರಡೇ ಎರಡು ಬಸ್ ನಿಲ್ದಾಣ ಏಕೆ? ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ಬಸ್ ನಿಲ್ದಾಣದಲ್ಲಿ ತಾಲೂಕು, ಜಿಲ್ಲಾ ಕೇಂದ್ರ ಸಂಪರ್ಕಿಸುವ ವೇಗದೂತ ಬಸ್ ಸಂಚಾರ ಮಾಡುತ್ತವೆ.

ಇವುಗಳು ಎಂದಿನಂತೆ ಸಂಚಾರ ಇರಲಿ. ನೂತನವಾಗಿ ಉದ್ಘಾಟನೆಗೊಂಡ ಹಳೆ ಬಸ್ ನಿಲ್ದಾಣದಲ್ಲಿ ಉಪನಗರ ಮತ್ತು ಗ್ರಾಮೀಣ ಬಸ್‌ಗಳಿಗೆ ಮಾತ್ರ ಅವಕಾಶ ನೀಡಬೇಕು. ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಕಂಪನಿ ಬಸ್ ನಿಲ್ದಾಣ ಹಸ್ತಾಂತರ ಮಾಡಿದ ಬಳಿಕ ಉಪನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಎಂದು ಹೆಸರಿಟ್ಟು ಸಂಚರಿಸಲು ಅವಕಾಶ ನೀಡಬೇಕು. ನಗರ ಬಸ್‌ಗಳು ಯಥಾಪ್ರಕಾರ ಸಿಬಿಟಿ ಬಸ್ ನಿಲ್ದಾಣದಿಂದ ಬಂದು ಹಳೆ ಬಸ್ ನಿಲ್ದಾಣದಲ್ಲಿ ಹಾಗೆಯೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಡಲಿ. ವೇಗದೂತ ಬಸ್ ಸೇರಿದಂತೆ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರದ ಬಸ್‌ಗಳು ಗೋಕುಲ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣದಿಂದ ಸಂಚಾರಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮವಹಿಸಬೇಕು. ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ಉಪನಗರ ಮತ್ತು ಗ್ರಾಮೀಣ ಬಸ್‌ಗಳಿಗೆ ಮೀಸಲಿಟ್ಟು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಬೇಕಿದೆ.

Related Tags:- Hubballi Bus Stand, Public Transport Issues, Rural Connectivity, Urban Planning, Kannada Shorts, Hubli Voice, Grameena Saarige, Saarige Samasyegalu, ಜವಾಬ್ದಾರಿ ಸಾರಿಗೆ, ಹುಬ್ಬಳ್ಳಿಸಾರಿಗೆ,

"ಸಮೂಹ ಸಂವಹನವಿಲ್ಲದ ಜಗತ್ತು? ಸಾಧ್ಯವೇ ಇದು? 🤯"

By With No comments:











ದಿನ ಬೆಳಗಾದರೆ, ಒಬ್ಬರಿಗೊಬ್ಬರು ಮಾತಾಡಲೇಬೇಕು ಇಲ್ಲವೇ ಪತ್ರದ ಮೂಲಕ, ಪತ್ರಿಕೆ, ಮಾಧ್ಯಮಗಳ ಮೂಲಕ, ರೇಡಿಯೊ ಮೂಲಕ, ದೂರವಾಣಿ ಮೂಲಕ, ಮಾತಿನ ಮೂಲಕ ಅಥವಾ ಮುಖದ ಹಾವಭಾವ ಕೈ ಸೊನ್ನೆಯಾದರೂ ಮಾಡಲೇಬೇಕು. ಸಂವಹನ ಇಲ್ಲದಿದ್ದರೇ ದಿನನಿತ್ಯ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಮನುಷ್ಯ ಪ್ರತಿಯೊಂದು ವಿಷಯವನ್ನು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಸಂವಹನದ ಮೂಲ ಉದ್ದೇಶವಾಗಿದೆ. ಸಂವಹನಕ್ಕೆ ವಾಕ್ ಸ್ವಾತಂತ್ರ‍್ಯ ಕೈ ಜೋಡಿಸಿದೆ. ಆದರೆ ಕೆಲವು ವಿವಾದಾತ್ಮಕ ಹೇಳಿಕೆಗಳಾದ ಜಾತಿ, ಧರ್ಮ, ರಾಜ್ಯ, ದೇಶ, ಭಾಷೆ, ನಾಡು ನುಡಿ ಸೇರಿದಂತೆ ಅತಿಹೆಚ್ಚು ಜನಪ್ರಿಯತೆ ಹೊಂದಿದ ವ್ಯಕ್ತಿ ಬಗ್ಗೆ ಅಥವಾ ಜನಪ್ರಿಯತೆ ಹೊಂದಿದ ಜೀವ, ನಿರ್ಜೀವ ವಸ್ತುವಿನ ಬಗ್ಗೆ ಅವಹೇಳನ ಮಾಡುವುದು ತೀವ್ರ ಕೋಲಾಹಲ ಅಸಮಾಧಾನ ವ್ಯಕ್ತವಾದ ಉದಾಹರಣೆಗಳು ಸಾಕಷ್ಟಿವೇ.

ಕೆಲವರ ಆಕ್ರೋಶ ಭರಿತ ಹೇಳಿಕೆಯನ್ನು ಸಮಾಧಾನಕರ ಹೇಳಿಕೆಯನ್ನಾಗಿ ತಿದ್ದಿ, ತಿಡಿ ಪತ್ರಿಕೆ ಸಂಪಾದಕರು ಸರಿಪಡಿಸುತ್ತಾರೆ. ಆದರೆ ದೃಶ್ಯ ಮಾಧ್ಯಮದಲ್ಲಿ ಮಾತ್ರ ನೇರವಾಗಿ ಮಾತನಾಡಿದು ಪ್ರಸಾರವಾಗುವುದರಿಂದ ಕೆಲವು ಆಕ್ರೋಶ ಭರಿತ ಹೇಳಿಕೆ ನೀಡಿದ ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಕರಣಗಳು ಸಾಕಷ್ಟಿವೇ. ಮಾನನಷ್ಟ ಮೊಕದ್ದಮೆ ನ್ಯಾಯಾಲಯಕ್ಕೆ ಹೋಗಿ, ದಂಡ ಕಟ್ಟಿಯೋ, ಕ್ಷೇಮಾಪಣೆ ಕೇಳಿಯೋ ಮುಗಿದು ಬಿಡುತ್ತದೆ. ಆದರೆ ಮಾನನಷ್ಟ ಮೊಕದ್ದಮೆ ಹೂಡಿದ ತಕ್ಷಣ ಯಾರ ಯಾರ ಸಂವಹನ, ವಾಕ್ ಸ್ವಾತಂತ್ರ‍್ಯ ನಿಲ್ಲುವುದಿಲ್ಲ ಅವರ ಅವರ ಜೊತೆ ಸಂವಹನ ಮೂಲಕ ದೈನಂದಿನ ಚಟುವಟಿಕೆಯಲ್ಲಿ ತೊಡಗುತ್ತಾರೆ. ಒಂದುವೇಳೆ ಸಂವಹನವನ್ನು ನಿಲ್ಲಿಸಿದರೇ, ಯಾವುದೇ ಕಾರ್ಯಚಟುವಟಿಕೆಗಳು ನಡೆಯುವುದೇ ಇಲ್ಲ.

ಯಾರೇ ಆದರೂ ಹೇಳಿಕೆ ನೀಡುವುದು ತಪ್ಪಲ್ಲ ಅದು ಸತ್ಯವೋ ಸುಳ್ಳೋ ಎಂಬುವುದನ್ನು ಕೂಲಂಕುಶವಾಗಿ ಪರಿಶೀಲಿಸಿ ಹೇಳಿಕೆ ನೀಡುವುದು ಸಂವಹನದ ಮೂಲ ಉದ್ದೇಶವಾಗಿದೆ.

ಸಾಮಾನ್ಯ ವ್ಯಕ್ತಿ ಹೇಳಿಕೆಗೆ ಇಲ್ಲ ಮನ್ನಣೆ
ಸಾಮಾನ್ಯ ವ್ಯಕ್ತಿ ಹೇಳಿಕೆಗಿಂತ ಪ್ರಧಾನಮಂತ್ರಿಗಳು ಹೇಳಿಕೆ ಹೆಚ್ಚು ಪ್ರಭಾವ ಬಿಳುತ್ತದೆ. ಪ್ರಧಾನಮಂತ್ರಿಗಳು ನಿಮ್ಮ ನಿಮ್ಮ ಊರನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಿ ಎಂದರೇ, ಜನ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡುತ್ತಾರೆ. ಇದೇ ಮಾತು ಸಾಮಾನ್ಯ ವ್ಯಕ್ತಿ ಹೇಳಿದ್ರೇ, ತಲೆ ಸರಿ ಇಲ್ವಾ ನಿನಗೆ ಎಂಬ ಪ್ರಶ್ನೆ ಜನ ಮಾಡ್ತಾರೆ. ಅದೇ ರೀತಿ ಪ್ರಧಾನಮಂತ್ರಿಗಳು ಯಾರು ಹೆಸರನ್ನು ಹೇಳದೇ, ಲೇವಡಿ ಮಾಡಿದ್ರೂ ಪ್ರಧಾನಮಂತ್ರಿಗಳು ಇವರನ್ನೇ ಟೀಕಿಸಿದರು ಎಂದು ವರದಿ ಪ್ರಸಾರವಾಗುವುದುಂಟು, ಈ ತರ ಪ್ರಧಾನಮಂತ್ರಿಗಳು ಯಾರ ಹೆಸರನ್ನು ನೇರವಾಗಿ ಹೇಳದೇ, ಈ ತರ ಹೇಳಿಕೆಯ ಉದಾಹರಣೆ ಎಂದರೇ ಬೆಂಗಳೂರು ಗ್ರಾಮಾಂತರ ಮಾಜಿ ಸಂಸದರ ಸೋಲಿಗೂ ಒಂದು ಕಾರಣವಾಯಿತು.

ಈಗ ಸಂಸದನಾಗಿ ಸೋತರು ಮನಸ್ಸು ಮಾಡಿ ಮುಂದೆ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಗೆ ಸ್ಪರ್ಧಿಸಿ, ಗೆದ್ದು ಶಾಸಕರಾಗಬಹುದು ಅದು ಬೇರೆ ವಿಷ್ಯ. ವ್ಯಕ್ತಿಗಿಂತ ಪ್ರಧಾನಮಂತ್ರಿ ಎಂಬ ಗೌರವದ ಹುದ್ದೆಗೆ ಬಹಳ ಬಹುಮುಖ್ಯ ಪ್ರಾಮುಖ್ಯತೆ ಸಿಗುತ್ತದೆ. ಗೌರವನ್ವಿತ ಹುದ್ದೆ ಸಹ ಸಂವಹನ ಬಯಸುತ್ತದೆ. ಯಾವುದೇ ಗೌರವನ್ವಿತ ಹುದ್ದೆಯಿಂದ ಮಾಜಿಯಾದ ವ್ಯಕ್ತಿ ಹೇಳಿಕೆ ಪ್ರಾಮುಖ್ಯತೆ ಕ್ಷೀಣಿಸುತ್ತದೆ. ಆದ್ದರಿಂದ ಯಾವುದೇ ಕೆಲಸ, ಕಾರ್ಯಗಳು ಸ್ಥಗಿತಗೊಳ್ಳಬಹುದು ಆದರೆ ಸಂವಹನ ತಡೆರಹಿತವಾಗಿರುತ್ತದೆ ಸ್ಥಗಿತಗೊಳ್ಳುವುದಿಲ್ಲ. ಇದು ರಾಜಕಾರಣಿಗಳಿಗೆ ಮನವರಿಕೆಯಾಗಲಿ ಎಂಬ ಸದುದ್ದೇಶವಾಗಿದೆ.

Related Tags:- Communication Matters, Future Of Communication, Kannada Shorts, Social Connection, Human Interaction, Samooha Sambandha, ಸಂವಹನದ ಮುಖ್ಯತೆ, Thought Provoking, ಭಾವನೆ ಮೂಕ ಜಗತ್ತು, Digital Silence

"ಸಚಿವ ಸಂಪುಟ ಪುನರ್ ರಚನೆಯು ಆಡಳಿತಕ್ಕೆ ದಾರಿಯೆ? ಇಲ್ಲ ಅಸ್ಥಿರತೆಗೆ? ⚖️"

By With No comments:











ಕಾಂಗ್ರೆಸ್ ಹೈಕಮಾಂಡ್ ಅಧಿಕಾರದ ಸೂತ್ರದ ವಿಚಾರವನ್ನು ಗುಪ್ತವಾಗಿ ಇರಿಸಿದೆ. ಯಾರಿಗೂ ಊಹಿಸಲು ಸಾಧ್ಯವಿಲ್ಲ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತಿರಬಹುದೇನು ಆದರೆ ಯಾವುದೇ ಸರ್ಕಾರವಾಗಲಿ ಐದು ವರ್ಷ ಅಂದರೆ 60 ತಿಂಗಳು ಅಧಿಕಾರ ನಡೆಸಲು ಕಾಲಾವಕಾಶ ಇರುತ್ತದೆ. ಈಗಾಗಲೇ ಸರ್ಕಾರ ರಚನೆಯಾಗಿ ಹೆಚ್ಚು-ಕಡಿಮೆ 17 ತಿಂಗಳಾಗಿದೆ. ಸರ್ಕಾರ ವಿವಿಧ ಕಾರ್ಯಕ್ರಮ, ಗ್ಯಾರಂಟಿ ಯೋಜನೆಗಳಿಂದ ಜನಮೆಚ್ಚುಗೆ ಪಾತ್ರರಾದರೂ ಪ್ರಸ್ತುತ ಸಚಿವರನ್ನು ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರು ಹಳೆ ಮುಖ ಮತ್ತೆ ಮತ್ತೆ ನೋಡಲು ಬಯಸುವುದಿಲ್ಲ.

ಪ್ರಸ್ತುತ ಸಚಿವರನ್ನು ಬೇರೆ-ಬೇರೆ ಜಿಲ್ಲೆಗೆ ಅಥವಾ ಅಂತರಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಮತ್ತು 20 ತಿಂಗಳು ಬಿಟ್ಟು ಬೇರೆಯವರಿಗೂ ಅವಕಾಶ ನೀಡುವುದು ಅವಶ್ಯಕವಾಗಿರುತ್ತದೆ. ಮಂತ್ರಿಗಳು ಎಂದಮೇಲೆ ಕೇವಲ ಅಯಾ ಇಲಾಖೆಯ, ಅಯಾ ಜಿಲ್ಲೆಯ ಸಚಿವರಾಗಿ ಇರುವುದಿಲ್ಲ. ಇಡೀ ಕರ್ನಾಟಕ ರಾಜ್ಯಕ್ಕೆ ಮಂತ್ರಿಯಾಗಿರುತ್ತಾರೆ. ಈಗಿರುವ 4-5 ಬಾರಿ ಆಯ್ಕೆಯಾಗಿರುವ ಶಾಸಕರಲ್ಲಿ 50-60 ಶಾಸಕರು ಇರುವುದರಿಂದ ಅವರಿಗೂ ಅವಕಾಶ ನೀಡುವ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸುವುದು ಅಗತ್ಯವಿರುತ್ತದೆ. ಈಗಿರುವ ಅಧಿಕಾರಿಗಳು ಯಾರು ಯಾರ ಮಾತನ್ನು ಕೇಳುತ್ತಿಲ್ಲ. ಜನ ಸಾರ್ವಜನಿಕರು ಕೇಳುತ್ತಿರುವುದು ಕಾಯ್ದೆ ಕಾನೂನಿನ ಪ್ರಕಾರ,

ನಿಯಮಾನುಸಾರ ಸಿಗಬೇಕಾದ ಸೌಲಭ್ಯ ಯೋಜನೆಗಳನ್ನು ಆದರೆ ಅಧಿಕಾರಿಗಳು ಅವುಗಳನೆಲ್ಲ ಓದಗಿಸಲು ನೂರಾರು ಬಾರಿ ವಿಚಾರ ಮಾಡಿ, ಕ್ರಮ ಕೈಗೊಳ್ಳಬೇಕಾ ಅಥವಾ ಬೇಡವೇ ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆಲಿಸಿದ ಜನಸ್ಪಂದನ ಕಾರ್ಯಕ್ರಮದ ಸಾರ್ವಜನಿಕರ ಕುಂದುಕೊರತೆಯ ಅರ್ಜಿಗಳು ಹಾಗೂ ದಿನನಿತ್ಯ ವಿಧಾನಸೌಧ ಸಚಿವಾಲಯಕ್ಕೆ ಬರುತ್ತಿರುವ ಪತ್ರದ ಅರ್ಜಿಗಳು ಮತ್ತು ಜನಸ್ಪಂದನ ಐ.ಪಿ.ಜಿ.ಆರ್.ಎಸ್ ಅನ್‌ಲೈನ್‌ನಲ್ಲಿ ದಾಖಲಾದ ಸಾರ್ವಜನಿಕರ ಅರ್ಜಿಗಳನ್ನು ಎಷ್ಟರ ಮಟ್ಟಿಗೆ ಬಗೆಹರಿಸಲಾಗಿದೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಶಾಸಕರು ಜನರ ಕಷ್ಟ ದೂರ ಮಾಡಲು ಪಣ ತೊಡುತ್ತಿದ್ದಾರೆ ಆದರೆ ಅಧಿಕಾರಿಗಳಿಂದ ಬರುವ ಉತ್ತರ ತಪ್ಪು ಮಾಹಿತಿ ಮತ್ತು ವಿಳಂಬ ನೀತಿ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಚೇರಿಯ ಅಧಿಕಾರಿಗಳಿಗೆ ಹೇಳುವರು ಇಲ್ಲ ಕೇಳುವರು ಇಲ್ಲ. ಹೀಗಾಗಿ ಆಡಳಿತ ಯಂತ್ರ ಚುರುಕುಗೊಳಿಸಲು ಪ್ರತಿ 20 ತಿಂಗಳಗೊಮ್ಮೆ 34 ಸಚಿವರಲ್ಲಿ ಕೇವಲ 20 ಸಚಿವರನ್ನು ಬದಲಾಯಿಸಿದರೆ, ಆಡಳಿತ ಯಂತ್ರ ಚುರುಕುಗೊಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳೆಲ್ಲ ಪರಿಹಾರವಾಗಲೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಅದಕ್ಕೆ ಪ್ರತಿ 20 ತಿಂಗಳಗೊಮ್ಮೆ ಮೂರು ಸಲ ಸಚಿವ ಸಂಪುಟ ಪುನರ್ ರಚಿಸಬೇಕಿದೆ.

Related Tags:- Cabinet Reshuffle, Karnataka Politics, Administrative Reform, Kannada Shorts, Government Decisions, Sachiva Sampuṭa, ಆಡಳಿತ ಯಂತ್ರ, ಸಚಿವ ಸಂಪುಟ ಬದಲಾವಣೆ, ರಾಜಕೀಯ ವಿಮರ್ಶೆ, Public Opinion,

"ಪ್ರಶ್ನೆಗೆ ಉತ್ತರ ಬೇಕು! ರಾಜ್ಯ ಆಡಳಿತ ಪಕ್ಷ ತಕ್ಕ ಪ್ರತ್ಯುತ್ತರ ನೀಡಬೇಕು! 🗣️"

By With No comments:











ಕರ್ನಾಟಕ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಖಂಡಿಸಿ, ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಕನ್ನಡ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸುವ ಮೂಲಕ ದೇಶದ ಗಮನ ಸೆಳೆದು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತು. ಅಷ್ಟೇ ಅಲ್ಲದೇ 136 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲುವ ಮೂಲಕ ಪ್ರಧಾನಮಂತ್ರಿಗಳಿಗೂ ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಯಿತು. ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟದ ಜೊತೆಗೆ ಅಂದೇ ರಾಷ್ಟ್ರಪತಿ ಭವನಕ್ಕೆ ಛಲೋ ನಡೆಸಿ ಮನವಿ ಪತ್ರ ಸಲ್ಲಿಸಿ ಬಂದಿದ್ರೇ ಚನ್ನಾಗಿ ಇರುತ್ತಿತ್ತು. ಮತ್ತಷ್ಟು ದೆಹಲಿ ಮಂದಿ ಗಮನ ಕರ್ನಾಟಕ ಕಡೆ ತಿರುಗಿ ನೋಡಿ,

ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣ ಹೆಚ್ಚು ನೀಡಲು ಏಕೆ ಮೀನಾಮೇಷ?. ಒಂದು ವೇಳೆ ಉದಾಹರಣೆಯಾಗಿ ತೆಗೆದುಕೊಂಡರೆ ಕೇಂದ್ರಕ್ಕೆ ಪಾವತಿಯಾಗುವ 4 ಲಕ್ಷ ಕೋಟಿ ತೆರಿಗೆ ಹಣ ಕರ್ನಾಟಕ ಸರ್ಕಾರವೇ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಿದ್ರೇ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮಗಳು ಸ್ಮಾರ್ಟ್ ವಿಲೇಜ್ (ಸ್ವಚ್ಛ ಗ್ರಾಮ) ಆಗಲಿದೆ. ಕಲ್ಯಾಣ, ಕಿತ್ತೂರು, ಮೈಸೂರು ಕರ್ನಾಟಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಅನ್ವಯ ತಲಾ 10,000 ಸಾವಿರ ಕೋಟಿ ಅನುದಾನ ಮೀಸಲು ಇಡಬಹುದು. ಈ ಎಲ್ಲ ಅಗತ್ಯತೆಗಿಂಥಾ ರಾಜ್ಯಕ್ಕೆ ತೆರಿಗೆ ಹಣ ಹೆಚ್ಚಿಸುವ ಮೂಲಕ,

ರಾಜ್ಯಕ್ಕೆ ಬರಬೇಕಾದ ಹೆಚ್ಚಿನ ತೆರಿಗೆ ಹಣ, ಪಾವತಿಗೆ ತಕ್ಕಂತೆ ನೀಡಲಿ. ವಿಳಂಬ ಮತ್ತು ಮಲತಾಯಿ ಧೋರಣೆ ಸಲ್ಲದು. ಈ ಹಣವನ್ನು ಯಾರು ಕೊಳ್ಳೆ ಹೊಡೆಯಲು ಸಾಧ್ಯವಿಲ್ಲ. ಯಾರು ತಿನ್ನಲು ಸಾಧ್ಯವಿಲ್ಲ. ಅಭಿವೃದ್ಧಿಗಾಗಿ ಬೇಕಾಗಿರುವ ತೆರಿಗೆ ಹಣ ಬೇಕು. ಈ ವಿಷ್ಯದಲ್ಲಿ ಪಕ್ಷದ ಸಂಸದರು ಅಂತ ತಿಳಿಯುವ ಬದಲು ಕರ್ನಾಟಕ ರಾಜ್ಯದ ಸಂಸದರು ಅಂತ ತಿಳಿದು, ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವುದು ರಾಜ್ಯ ಸಂಸದರ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಕೇಂದ್ರ ಆಡಳಿತ ಪಕ್ಷದ ಸಂಸದರು ವಿಫಲರಾಗಿದ್ದಾರೆ. ಈಗಾಗ್ಲೇ ಶ್ರೀಮಂತರಿಗೆ ದೇವರು ಎಲ್ಲ ರೀತಿಯ ಸಕಲ ಆಸ್ತಿ, ಸಂಪತ್ತು ನೀಡಿದ್ದು. ಶ್ರೀಮಂತರಿಗೆ ಗ್ಯಾರಂಟಿ ಅವಶ್ಯಕತೆ ಇರುವುದಿಲ್ಲ ಅನ್ನುವುದು ಸಾಮಾನ್ಯ ವ್ಯಕ್ತಿಗೆ ತಿಳಿದ ವಿಷಯ.

ಪಂಚ ಗ್ಯಾರಂಟಿ ಬಡವರಿಗೆ ತುಂಬ ಅವಶ್ಯಕತೆ ಇದೆ. ಆದ್ದರಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ ಪಂಚ ಗ್ಯಾರಂಟಿ ಮೀಸಲಿಟ್ಟರೇ ಒಳ್ಳೆಯದು. ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿಗಳ ಕೈ ಗ್ಯಾರಂಟಿ ಹೇಳಿಕೆಗೆ ತಕ್ಕ ಪ್ರತ್ಯುತ್ತರ ಮೂಲಕ ರಾಜ್ಯ ಆಡಳಿತ ಪಕ್ಷದ ನಾಯಕರು ಟಾಂಗ್ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಕೇವಲ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಷ್ಟೇ ಅಲ್ಲ. ಎಲ್ಲ ಸಚಿವರು, ಎಲ್ಲ ಕಾಂಗ್ರೆಸ್ ಶಾಸಕರು, ಎಲ್ಲ ಜಿಲ್ಲಾ ಅಧ್ಯಕ್ಷರು, ಪಕ್ಷದ ವಕ್ತಾರರು ತಕ್ಕ ಪ್ರತ್ಯುತ್ತರ ಮುಖಾಂತರ ತಿರುಗೇಟು ನೀಡಬೇಕು ಅಷ್ಟೇ.

Related Tags:- State Government, Political Accountability, Karnataka Politics, Public Questions, Kannada Shorts, Javabdari Sarkara, ತಕ್ಕ ಪ್ರತ್ಯುತ್ತರ, ಆಡಳಿತ ಪಕ್ಷದ ಜವಾಬ್ದಾರಿ, ಜನಧ್ವನಿ, Sarkara Uttara Kodi,

ಅಪಾಯ ಸಂದರ್ಭದಲ್ಲಿ ಪೋಲಿಸರ ಜತೆ ನಿಲ್ಲಿ! ಸಹಕಾರವೇ ಶಕ್ತಿ! 💪

By With No comments:











ಯಾವುದೇ ಪ್ರತಿಭಟನೆ ಮಾಡಬೇಕಾದರು ಪೋಲಿಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಅಷ್ಟೇ ಯಾಕೆ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಅನುಮತಿ ಪಡೆದು ಹೋರಾಟ ಮಾಡುತ್ತಾರೆ. ಹೋರಾಟ ಯಾವಾಗಲೂ ಶಾಂತ ರೀತಿಯಲ್ಲಿ ಇರಬೇಕು. ಪ್ರತಿಭಟನೆಗೆ ಅನುಮತಿ ಪಡೆಯಲು ಪ್ರಾಧಿಕಾರ ಮೂಲಕ 7 ದಿನ, 15 ದಿನ, 30 ದಿನ ಎಂದು ಸಮಯ ನಿಗದಿಪಡಿಸುತ್ತಾರೆ.

ಆದರೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ರು ಅಂತ ಹೇಳಿ, ಏಕಾಏಕಿ ಪೋಲಿಸ್ ಠಾಣೆ, ಪೋಲಿಸರ ಮೇಲೆ ದಾಳಿ ಮಾಡುವುದು ತಪ್ಪು. ಎಲ್ಲದಕ್ಕೂ ಕಾನೂನು ಇದೆ. ಕಾನೂನಿನ ಪ್ರಕಾರ ಪ್ರಕ್ರಿಯೆಗಳು ನಡೆಯಬೇಕು ಮತ್ತು ಪೂರ್ಣಗೊಳ್ಳಬೇಕು. ಅದಕ್ಕೆ ಸ್ವಲ್ಪ ಸಮಯ ಬೇಕು ಅಲ್ಲಿವರೆಗೂ ಕಾಯಬೇಕು.

ಯಾರೋ ಒಬ್ಬರು ಟ್ರೋಲ್ ಮಾಡಿದ್ದು ಯಾರು ನೋಡುತಾರೋ, ಬಿಡ್ತಾರೋ ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಗ್ರೂಪ್ ಗಳಿಗೆ ಫಾರ್ವರ್ಡ್ ಆಗಿ, ವೈರಲ್ ಮಾಡಿದ್ದರಿಂದ ಗೊಂದಲಕ್ಕೂ ಕಾರಣವಾಗಿರಬಹುದು. ದಿನನಿತ್ಯ ಸಾವಿರಾರೂ ಟ್ರೋಲ್‌ಗೆ ಒಬ್ಬೊಬ್ಬರು ಗುರಿಯಾಗಿದ್ದಾರೆ ಆದರೆ ಅವರು ಯಾರು ತಲೆಕೆಡಿಸಿಕೊಳ್ಳದೇ ಪಬ್ಲಿಸಿಟಿ ಜಾಸ್ತಿ ಆಗಲಿ ಬಿಡು ಅನ್ನುವರೇ ಹೆಚ್ಚು. ಹಾಗಾಗಿ ಪೋಲಿಸರಿಗೆ ತನಿಖೆ ಮಾಡಲು ಸಂಪೂರ್ಣ ಕಾಲಾವಕಾಶ ನೀಡಬೇಕು.

ತಾಳ್ಮೆ, ಸಮಾಧಾನ ಇಲ್ಲದೇ ಮತ್ತು ಕಾಲಾವಕಾಶ ನೀಡದೇ ಒಮ್ಮೆಗೆ ಆರೋಪಿಗೆ ಶಿಕ್ಷೆ ಕೊಡಿ ಅಂದ್ರೇ ಪೋಲಿಸರು ನ್ಯಾಯಾಧೀಶರ ಅಲ್ಲ ಕಾನೂನಿನ ಪ್ರಕ್ರಿಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ,

ಮುಂದೇನು ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಅಲ್ಲಿವರೆಗೆ ತಾಳ್ಮೆವಹಿಸದೇ. ಏಕಾಏಕಿ ಪೋಲಿಸ್ ಠಾಣೆ ನುಗ್ಗಿ, ದಾಳಿ ಮಾಡಿದ್ರೆ ಪೋಲಿಸರಲ್ಲಿ ಯಾರಿಗಾದರೂ ಗಂಭೀರ ಗಾಯವಾಗಿ ಅಂಗವಿಕಲರಾದರೇ, ಆಕಸ್ಮಿಕ ಜೀವಕ್ಕೆ ಕುತ್ತು ಬಂದರೇ ಯಾರು ಹೊಣೆ? ಯಾರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಾರೋ ಅವರಿಗೆ ಇರುವಷ್ಟು ಗೌರವ ಬೇರೆ ಯಾರಿಗೂ ಇರುವುದಿಲ್ಲ.

ಅದಕ್ಕೆ ತನಿಖೆ ಮಾಡಲು ಸಮಯ ನೀಡಬೇಕು, ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಕರ್ನಾಟಕ ರಾಜ್ಯ ಅತ್ಯುತ್ತಮ ಸುಂದರ ನಗರಗಳನ್ನು ಹೊಂದಿದೆ ಅಲ್ಲದೇ ಇಲ್ಲಿನ ಜನ ಧಾರ್ಮಿಕ ಮೌಲ್ಯಗಳಿಗೆ ಹೆಚ್ಚಿನ ಬೆಲೆ ಕೊಡ್ತಾರೆ. ನಮ್ಮ ರಾಜ್ಯದಲ್ಲಿರುವ ಧಾರ್ಮಿಕ ಕ್ಷೇತ್ರಗಳು ಪ್ರಸಿದ್ಧ ಪಡೆದಿವೆ. ರಾಜ್ಯದ ವಿವಿಧ ದೇವಸ್ಥಾನಗಳಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ.

ದೇವರ ದರ್ಶನ ಪಡುತ್ತಾರೆ. ಕರ್ನಾಟಕ ರಾಜ್ಯದಲ್ಲಿರುವ ಸುಂದರ ನಗರಗಳು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಮನಸೋತು ವಿದೇಶಿ, ಬೇರೆ-ಬೇರೆ ರಾಜ್ಯದ ಪ್ರವಾಸಿಗರು ಬರುತ್ತಾರೆ. ಅದಕ್ಕೆ ಎಲ್ಲರೂ ಕಾನೂನು ಪ್ರಕಾರ ನಡೆದುಕೊಳ್ಳುವ ಮೂಲಕ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳುವ ಕಲೆ ಜನರ ಮನದಲ್ಲಿ ಬರಲಿ ಎಂಬ ಆಶಯ.

Related Tags:- Support Police, Police And Public, Kannada Shorts, Public Awareness, Law And Order, ಪೋಲಿಸ್ರಿಗೆ ಸಹಕಾರ, ಸಾರ್ವಜನಿಕ ಜಾಗೃತಿ, Police Support Matters, Safety First, ನಿಮ್ಮ ಸಹಕಾರ ನಿಮ್ಮ ಸುರಕ್ಷೆ,