8 May 2025

ಇಂದಿನ ಹೊಸ ಮುಖಗಳು ಇತಿಹಾಸ ಪುಟ ಸೇರಿರುವ ಘಟನೆಗೆ ಕಾರಣರಲ್ಲ.

By
ಜಗತ್ತಿನಲ್ಲಿ ನಡೆದುಹೋದ ಘಟನೆಗಳು ಇತಿಹಾಸ ಪುಟ ಸೇರಿದರು ಕೂಡಾ ಇನ್ನು ನಮ್ಮ ದೇಶದಲ್ಲಿ ಕೆಲವರ ಸಿಟ್ಟು, ಆಕ್ರೋಶ ಹಾಗೆಯೇ ಇದೆ. ಆ ಸಿಟ್ಟು ಧರ್ಮ ಆಧಾರದ ದೇಶ ವಿಭಜನೆ ಮಾಡಿದ್ದು ಇರಬಹುದು. ಸ್ವಾತಂತ್ರ‍್ಯ ಪೂರ್ವದಲ್ಲಿ ನಿರ್ದಿಷ್ಟ ವ್ಯಕ್ತಿಯಿಂದ ಹಿಂಸೆ, ಶೋಷಣೆಯೊಳಗಾಗಿದ್ದು ಇರಬಹುದು. ವ್ಯಾಪಾರ ವಹಿವಾಟಿನಲ್ಲಿ ಪೈಪೋಟಿ ಸಲುವಾಗಿ ಇರಬಹುದು. ಲವ್ ಜಿಹಾದ್, ಅಶಾಂತಿಯ ವಾತಾವರಣ, ಕೋಮು ಗಲಭೆ, ಹಿಂಸಾಚಾರ ಸೇರಿದಂತೆ ಸಿಟ್ಟು, ಆಕ್ರೋಶಗಳಿಗೆ ಅನೇಕ ಅನೇಕ ಕಾರಣಗಳಿರಬಹುದು. ಆ ಎಲ್ಲ ಆಕ್ರೋಶ ವ್ಯಕ್ತಪಡಿಸಲು ಈ ಹಿಂದೆ ಶೋಷಣೆ ಮಾಡಿದವರು, ಶೋಷಣೆಗೆ ಒಳಗಾದ ಮೂರು-ನಾಲ್ಕನೆಯ ತಲೆಮಾರಿನ ಜನ ಈಗಿಲ್ಲ, ಸತ್ತು ಹೋಗಿದ್ದಾರೆ.


ಸತ್ತು ಹೋದವರು ನಷ್ಟ ತುಂಬಿ ಕೊಡಲು ಸಾಧ್ಯವಿಲ್ಲ. ಈಗ ಸಿಟ್ಟು ವ್ಯಕ್ತಪಡಿಸಿದರು ಪ್ರಯೋಜನವಿಲ್ಲ. ಮನುಷ್ಯನ ಸಿಟ್ಟು ಅನ್ಯಾಯಕ್ಕೆ ಒಳಗಾದ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ಇರುತ್ತದೆ. ಆ ಸಿಟ್ಟು ಪೂರ್ತಿ ಜಾತಿ, ಧರ್ಮ ಮೇಲೆ ಅಥವಾ ಜನ ಮೆಚ್ಚಿಗೆ ಪಡೆದ ನಿರ್ಜೀವ ವಸ್ತುವಿನ ಮೇಲೆ ರವಾನೆಯಾಗುತ್ತಿರುವುದು ತಪ್ಪು. ದ್ವೇಷ ಮಾಡಲು ಹಳೆ ತಲೆಮಾರಿನ ಜನ ಇಲ್ಲ. ಹಳೆ ತಲೆಮಾರಿನ ಬಹುತೇಕ ಜನರು ಸ್ವಾತಂತ್ರ‍್ಯ ಪೂರ್ವದಲ್ಲಿ ಶಿಕ್ಷಣದಿಂದ ವಂಚಿತ ಮತ್ತು ಆರ್ಥಿಕ ಸಂಕಷ್ಟದ ಹಿನ್ನಡೆಯಿಂದಾಗಿ ಶೋಷಣೆಗೂ ಒಳಗಾಗಿರಬೇಕು. ಈಗಿರುವ ಜನ ಹೊಸ ಮುಖಗಳು ಇತಿಹಾಸ ಪುಟ ಓದಿ ತಿಳಿಯಬಹುದು ಹೊರತಾಗಿ ಅವುಗಳಿಗೆ ಕಾರಣರಲ್ಲ.


ಹಾಗಾಗಿ ಹಿಂದೆಲ್ಲ ನಡೆದ ಘಟನೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ಕಾರಣಗಳಿರಬಹುದು. ಮುಗಿದ ಹೋದ ಅಧ್ಯಾಯ ಭೂತಕಾಲವನ್ನು ಪದೇ ಪದೇ ಯೋಚಿಸುವ ಬದಲು ಭವಿಷ್ಯ, ವರ್ತಮಾನ ಕಾಲದ ಬಗ್ಗೆ ಚಿತ್ತ ಹರಿಸಬೇಕು. ಪರ್ಯಾಯ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕು. ದೇಶ, ರಾಜ್ಯಕ್ಕೆ ಶಾಂತಿ ವಾತಾವರಣ ನಿರ್ಮಾಣ ಮಾಡುವತ್ತ ಇಂದಿನ ಜನ ಸಮೂಹ ದಿಟ್ಟ ಹೆಜ್ಜೆ ಇಡುವತ್ತ ದಾಪುಗಾಲು ಇಡುವಂತಾಗಲಿ ಎನ್ನುವುದು ಆಶಯ.