ಅಪಾಯ ಸಂದರ್ಭದಲ್ಲಿ ಪೋಲಿಸರ ಜತೆ ನಿಲ್ಲಿ! ಸಹಕಾರವೇ ಶಕ್ತಿ! 💪

By











ಯಾವುದೇ ಪ್ರತಿಭಟನೆ ಮಾಡಬೇಕಾದರು ಪೋಲಿಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಅಷ್ಟೇ ಯಾಕೆ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಅನುಮತಿ ಪಡೆದು ಹೋರಾಟ ಮಾಡುತ್ತಾರೆ. ಹೋರಾಟ ಯಾವಾಗಲೂ ಶಾಂತ ರೀತಿಯಲ್ಲಿ ಇರಬೇಕು. ಪ್ರತಿಭಟನೆಗೆ ಅನುಮತಿ ಪಡೆಯಲು ಪ್ರಾಧಿಕಾರ ಮೂಲಕ 7 ದಿನ, 15 ದಿನ, 30 ದಿನ ಎಂದು ಸಮಯ ನಿಗದಿಪಡಿಸುತ್ತಾರೆ.

ಆದರೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ರು ಅಂತ ಹೇಳಿ, ಏಕಾಏಕಿ ಪೋಲಿಸ್ ಠಾಣೆ, ಪೋಲಿಸರ ಮೇಲೆ ದಾಳಿ ಮಾಡುವುದು ತಪ್ಪು. ಎಲ್ಲದಕ್ಕೂ ಕಾನೂನು ಇದೆ. ಕಾನೂನಿನ ಪ್ರಕಾರ ಪ್ರಕ್ರಿಯೆಗಳು ನಡೆಯಬೇಕು ಮತ್ತು ಪೂರ್ಣಗೊಳ್ಳಬೇಕು. ಅದಕ್ಕೆ ಸ್ವಲ್ಪ ಸಮಯ ಬೇಕು ಅಲ್ಲಿವರೆಗೂ ಕಾಯಬೇಕು.

ಯಾರೋ ಒಬ್ಬರು ಟ್ರೋಲ್ ಮಾಡಿದ್ದು ಯಾರು ನೋಡುತಾರೋ, ಬಿಡ್ತಾರೋ ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಗ್ರೂಪ್ ಗಳಿಗೆ ಫಾರ್ವರ್ಡ್ ಆಗಿ, ವೈರಲ್ ಮಾಡಿದ್ದರಿಂದ ಗೊಂದಲಕ್ಕೂ ಕಾರಣವಾಗಿರಬಹುದು. ದಿನನಿತ್ಯ ಸಾವಿರಾರೂ ಟ್ರೋಲ್‌ಗೆ ಒಬ್ಬೊಬ್ಬರು ಗುರಿಯಾಗಿದ್ದಾರೆ ಆದರೆ ಅವರು ಯಾರು ತಲೆಕೆಡಿಸಿಕೊಳ್ಳದೇ ಪಬ್ಲಿಸಿಟಿ ಜಾಸ್ತಿ ಆಗಲಿ ಬಿಡು ಅನ್ನುವರೇ ಹೆಚ್ಚು. ಹಾಗಾಗಿ ಪೋಲಿಸರಿಗೆ ತನಿಖೆ ಮಾಡಲು ಸಂಪೂರ್ಣ ಕಾಲಾವಕಾಶ ನೀಡಬೇಕು.

ತಾಳ್ಮೆ, ಸಮಾಧಾನ ಇಲ್ಲದೇ ಮತ್ತು ಕಾಲಾವಕಾಶ ನೀಡದೇ ಒಮ್ಮೆಗೆ ಆರೋಪಿಗೆ ಶಿಕ್ಷೆ ಕೊಡಿ ಅಂದ್ರೇ ಪೋಲಿಸರು ನ್ಯಾಯಾಧೀಶರ ಅಲ್ಲ ಕಾನೂನಿನ ಪ್ರಕ್ರಿಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ,

ಮುಂದೇನು ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಅಲ್ಲಿವರೆಗೆ ತಾಳ್ಮೆವಹಿಸದೇ. ಏಕಾಏಕಿ ಪೋಲಿಸ್ ಠಾಣೆ ನುಗ್ಗಿ, ದಾಳಿ ಮಾಡಿದ್ರೆ ಪೋಲಿಸರಲ್ಲಿ ಯಾರಿಗಾದರೂ ಗಂಭೀರ ಗಾಯವಾಗಿ ಅಂಗವಿಕಲರಾದರೇ, ಆಕಸ್ಮಿಕ ಜೀವಕ್ಕೆ ಕುತ್ತು ಬಂದರೇ ಯಾರು ಹೊಣೆ? ಯಾರು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಾರೋ ಅವರಿಗೆ ಇರುವಷ್ಟು ಗೌರವ ಬೇರೆ ಯಾರಿಗೂ ಇರುವುದಿಲ್ಲ.

ಅದಕ್ಕೆ ತನಿಖೆ ಮಾಡಲು ಸಮಯ ನೀಡಬೇಕು, ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಕರ್ನಾಟಕ ರಾಜ್ಯ ಅತ್ಯುತ್ತಮ ಸುಂದರ ನಗರಗಳನ್ನು ಹೊಂದಿದೆ ಅಲ್ಲದೇ ಇಲ್ಲಿನ ಜನ ಧಾರ್ಮಿಕ ಮೌಲ್ಯಗಳಿಗೆ ಹೆಚ್ಚಿನ ಬೆಲೆ ಕೊಡ್ತಾರೆ. ನಮ್ಮ ರಾಜ್ಯದಲ್ಲಿರುವ ಧಾರ್ಮಿಕ ಕ್ಷೇತ್ರಗಳು ಪ್ರಸಿದ್ಧ ಪಡೆದಿವೆ. ರಾಜ್ಯದ ವಿವಿಧ ದೇವಸ್ಥಾನಗಳಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ.

ದೇವರ ದರ್ಶನ ಪಡುತ್ತಾರೆ. ಕರ್ನಾಟಕ ರಾಜ್ಯದಲ್ಲಿರುವ ಸುಂದರ ನಗರಗಳು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಮನಸೋತು ವಿದೇಶಿ, ಬೇರೆ-ಬೇರೆ ರಾಜ್ಯದ ಪ್ರವಾಸಿಗರು ಬರುತ್ತಾರೆ. ಅದಕ್ಕೆ ಎಲ್ಲರೂ ಕಾನೂನು ಪ್ರಕಾರ ನಡೆದುಕೊಳ್ಳುವ ಮೂಲಕ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳುವ ಕಲೆ ಜನರ ಮನದಲ್ಲಿ ಬರಲಿ ಎಂಬ ಆಶಯ.

Related Tags:- Support Police, Police And Public, Kannada Shorts, Public Awareness, Law And Order, ಪೋಲಿಸ್ರಿಗೆ ಸಹಕಾರ, ಸಾರ್ವಜನಿಕ ಜಾಗೃತಿ, Police Support Matters, Safety First, ನಿಮ್ಮ ಸಹಕಾರ ನಿಮ್ಮ ಸುರಕ್ಷೆ,