ಕರ್ನಾಟಕ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಖಂಡಿಸಿ, ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಕನ್ನಡ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸುವ ಮೂಲಕ ದೇಶದ ಗಮನ ಸೆಳೆದು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತು. ಅಷ್ಟೇ ಅಲ್ಲದೇ 136 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲುವ ಮೂಲಕ ಪ್ರಧಾನಮಂತ್ರಿಗಳಿಗೂ ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಯಿತು. ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟದ ಜೊತೆಗೆ ಅಂದೇ ರಾಷ್ಟ್ರಪತಿ ಭವನಕ್ಕೆ ಛಲೋ ನಡೆಸಿ ಮನವಿ ಪತ್ರ ಸಲ್ಲಿಸಿ ಬಂದಿದ್ರೇ ಚನ್ನಾಗಿ ಇರುತ್ತಿತ್ತು. ಮತ್ತಷ್ಟು ದೆಹಲಿ ಮಂದಿ ಗಮನ ಕರ್ನಾಟಕ ಕಡೆ ತಿರುಗಿ ನೋಡಿ,
ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣ ಹೆಚ್ಚು ನೀಡಲು ಏಕೆ ಮೀನಾಮೇಷ?. ಒಂದು ವೇಳೆ ಉದಾಹರಣೆಯಾಗಿ ತೆಗೆದುಕೊಂಡರೆ ಕೇಂದ್ರಕ್ಕೆ ಪಾವತಿಯಾಗುವ 4 ಲಕ್ಷ ಕೋಟಿ ತೆರಿಗೆ ಹಣ ಕರ್ನಾಟಕ ಸರ್ಕಾರವೇ ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಿದ್ರೇ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮಗಳು ಸ್ಮಾರ್ಟ್ ವಿಲೇಜ್ (ಸ್ವಚ್ಛ ಗ್ರಾಮ) ಆಗಲಿದೆ. ಕಲ್ಯಾಣ, ಕಿತ್ತೂರು, ಮೈಸೂರು ಕರ್ನಾಟಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಅನ್ವಯ ತಲಾ 10,000 ಸಾವಿರ ಕೋಟಿ ಅನುದಾನ ಮೀಸಲು ಇಡಬಹುದು. ಈ ಎಲ್ಲ ಅಗತ್ಯತೆಗಿಂಥಾ ರಾಜ್ಯಕ್ಕೆ ತೆರಿಗೆ ಹಣ ಹೆಚ್ಚಿಸುವ ಮೂಲಕ,
ರಾಜ್ಯಕ್ಕೆ ಬರಬೇಕಾದ ಹೆಚ್ಚಿನ ತೆರಿಗೆ ಹಣ, ಪಾವತಿಗೆ ತಕ್ಕಂತೆ ನೀಡಲಿ. ವಿಳಂಬ ಮತ್ತು ಮಲತಾಯಿ ಧೋರಣೆ ಸಲ್ಲದು. ಈ ಹಣವನ್ನು ಯಾರು ಕೊಳ್ಳೆ ಹೊಡೆಯಲು ಸಾಧ್ಯವಿಲ್ಲ. ಯಾರು ತಿನ್ನಲು ಸಾಧ್ಯವಿಲ್ಲ. ಅಭಿವೃದ್ಧಿಗಾಗಿ ಬೇಕಾಗಿರುವ ತೆರಿಗೆ ಹಣ ಬೇಕು. ಈ ವಿಷ್ಯದಲ್ಲಿ ಪಕ್ಷದ ಸಂಸದರು ಅಂತ ತಿಳಿಯುವ ಬದಲು ಕರ್ನಾಟಕ ರಾಜ್ಯದ ಸಂಸದರು ಅಂತ ತಿಳಿದು, ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವುದು ರಾಜ್ಯ ಸಂಸದರ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಕೇಂದ್ರ ಆಡಳಿತ ಪಕ್ಷದ ಸಂಸದರು ವಿಫಲರಾಗಿದ್ದಾರೆ. ಈಗಾಗ್ಲೇ ಶ್ರೀಮಂತರಿಗೆ ದೇವರು ಎಲ್ಲ ರೀತಿಯ ಸಕಲ ಆಸ್ತಿ, ಸಂಪತ್ತು ನೀಡಿದ್ದು. ಶ್ರೀಮಂತರಿಗೆ ಗ್ಯಾರಂಟಿ ಅವಶ್ಯಕತೆ ಇರುವುದಿಲ್ಲ ಅನ್ನುವುದು ಸಾಮಾನ್ಯ ವ್ಯಕ್ತಿಗೆ ತಿಳಿದ ವಿಷಯ.
ಪಂಚ ಗ್ಯಾರಂಟಿ ಬಡವರಿಗೆ ತುಂಬ ಅವಶ್ಯಕತೆ ಇದೆ. ಆದ್ದರಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್ ಕುಟುಂಬಗಳಿಗೆ ಪಂಚ ಗ್ಯಾರಂಟಿ ಮೀಸಲಿಟ್ಟರೇ ಒಳ್ಳೆಯದು. ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿಗಳ ಕೈ ಗ್ಯಾರಂಟಿ ಹೇಳಿಕೆಗೆ ತಕ್ಕ ಪ್ರತ್ಯುತ್ತರ ಮೂಲಕ ರಾಜ್ಯ ಆಡಳಿತ ಪಕ್ಷದ ನಾಯಕರು ಟಾಂಗ್ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಕೇವಲ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಷ್ಟೇ ಅಲ್ಲ. ಎಲ್ಲ ಸಚಿವರು, ಎಲ್ಲ ಕಾಂಗ್ರೆಸ್ ಶಾಸಕರು, ಎಲ್ಲ ಜಿಲ್ಲಾ ಅಧ್ಯಕ್ಷರು, ಪಕ್ಷದ ವಕ್ತಾರರು ತಕ್ಕ ಪ್ರತ್ಯುತ್ತರ ಮುಖಾಂತರ ತಿರುಗೇಟು ನೀಡಬೇಕು ಅಷ್ಟೇ.
Related Tags:- State Government, Political Accountability, Karnataka Politics, Public Questions, Kannada Shorts, Javabdari Sarkara, ತಕ್ಕ ಪ್ರತ್ಯುತ್ತರ, ಆಡಳಿತ ಪಕ್ಷದ ಜವಾಬ್ದಾರಿ, ಜನಧ್ವನಿ, Sarkara Uttara Kodi,